ಬಚ್ಚನ್ ಪಾಂಡೆ 2ನೇ ದಿನದ ಕಲೆಕ್ಷನ್; ಅಕ್ಷಯ್ ಸಿನಿಮಾ ಗಳಿಸಿದೆಷ್ಟು?
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಬಚ್ಚನ್ ಪಾಂಡೆ ಬಿಡುಗಡೆಯಾಗಿ ಎರಡು ದಿನಗಳಲ್ಲಿ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನ 13 ಕೋಟಿ ಬಾಚಿಕೊಂಡಿತ್ತು
ಬಾಲಿವುಡ್ ನಟ ಅಕ್ಷಯ್ ಕುಮಾರ್(Akshay Kumars) ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಮೆರೆಯುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅಕ್ಷಯ್ ಕುಮಾರ್ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ದಾಖಲೆ ನಿರ್ಮಿಸುತ್ತಿವೆ. ಇತ್ತೀಚಿಗಷ್ಟೆ ಅಕ್ಷಯ್ ಕುಮಾರ್ ಬಚ್ಚನ್ ಪಾಂಡೆ(Bachchhan Paandey) ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಮಾರ್ಚ್ 18ರಂದು ಸಿನಿಮಾ ಬಿಡುಗಡೆಯಾಗಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಗಳಿಕೆ ಮಾಡಿದೆ. ಎರಡನೇ ದಿನ ಅಕ್ಷಯ್ ಕುಮಾರ್ ನಟನೆಯ ಬಚ್ಚನ್ ಪಾಂಡೆ 25.25 ಕೋಟಿ ರೂಪಾಯಿ ಕಮಾಯಿ ಮಾಡಿದೆ(Bachchhan Paandey box office collection).
ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟನೆ ಪ್ರೇಕ್ಷಕರ ಮೆಚ್ಚುಗೆಗಳಿಸಿದೆ. ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಅಕ್ಷಯ್ ಕುಮಾರ್ ನನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇದೊಂದು ಕಾಮಿಡಿ ಆಕ್ಷನ್ ಸಿನಿಮಾವಾಗಿದ್ದು ಚಿತ್ರಕ್ಕೆ ಫರ್ಹಾದ್ ಸಾಮ್ಜಿ ಆಕ್ಷನ್ ಕಟ್ ಹೇಳಿದ್ದಾರೆ. ಅಕ್ಷಯ್ ಕುಮಾರ್ ಜೊತೆ ಖ್ಯಾತ ನಟಿಯರಾದ ಕೃತಿ ಸನೂನ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್(Jacqueline Fernandez and Kriti Sanon) ಕಾಣಿಸಿಕೊಂಡಿದ್ದಾರೆ.
ಕಪಿಲ್ ಶರ್ಮಾ ಜೊತೆ ಟಿಪ್ ಬರ್ಸಾ ಪಾನಿ ಹಾಡಿಗೆ ಹೆಜ್ಜೆ ಹಾಕಿದ ರವೀನಾ ಟಂಡನ್!
ಪೋಸ್ಟರ್ ಮತ್ತು ಟ್ರೈಲರ್ ಮೂಲಕ ಅಭಿಮಾನಿಗಳ ಗಮನ ಸೆಳೆಸಿದ್ದ ಬಚ್ಚನ್ ಪಾಂಡೆ ಮೊದಲ ದಿನ 13.25 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಮಾರ್ಚ್ 19ರಂದು ಅಂದರೆ ಎರಡನೇ ದಿನ ಬಚ್ಚನ್ ಪಾಂಡೆ 12 ಕೋಟಿ ಗಳಿಸಿದೆ. ಈ ಮೂಲಕ ಕಲೆಕ್ಷನ್ ನಲ್ಲಿ ಯತಾಸ್ಥಿತಿ ಮುಂದುವರೆದಿದೆ. ಅಂದಹಾಗೆ ಈ ಸಿನಿಮಾ ವಿಶ್ವದಾದ್ಯಂತ 3850 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸುಮಾರು 130 ಕೋಟಿ ರೂ. ಬಜೆಟ್ ನಲ್ಲಿ ತಯಾರಾಗಿರುವ ಈ ಸಿನಿಮಾ ಎರಡು ದಿನಗಳಲ್ಲಿ 25 ಕೋಟಿಯನ್ನು(earns Rs 25 crore) ಮಾತ್ರ ಗಳಿಸಿ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಬಚ್ಚನ್ ಪಾಂಡೆ ಸಿನಿಮಾ ಜೊತೆ ನಿರ್ದೇಶಕ ಅಗ್ನಿಹೋತ್ರಿ ಅವರ ದಿ ಕಾಶ್ಮೀರ್ ಫೈಲ್ಸ್(the Kashmir Files) ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ.
ಬಚ್ಚನ್ ಪಾಂಡೆ ಸಿನಿಮಾವನ್ನು ಸಾಜಿದ್ ನಾದಿಯಾವಾಲ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಅಕ್ಷಯ್, ಕೃತಿ ಮತ್ತು ಜಾಕ್ವೆಲಿನ್ ಜೊತೆ ಅರ್ಷದ್ ವಾರ್ಸಿ, ಪಂಕಜ್ ತ್ರಿಪಾಠಿ, ಪ್ರತೀಕ್ ಬಬ್ಬರ್, ಅಭಿಮನ್ಯು ಸಿಂಗ್ ಸಹರ್ಷ್ ಕುಮಾರ್ ಶುಕ್ಲಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 26 ಕೋಟಿ ರೂ. ಗಳಿಕೆ ಮಾಡಿತ್ತು. ಹಾಗಾಗಿ ಬಚ್ಚನ್ ಪಾಂಡೆ ಸಿನಿಮಾ ಕಲೆಕ್ಷನ್ ಮೇಲು ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಕಳೆದ ಸಿನಿಮಾಗೆ ಹೋಲಿಸಿದರೆ ಈ ಸಿನಿಮಾದ ಗಳಿಕೆ ಭಾರಿ ನಿರಾಸೆ ಮೂಡಿಸಿದೆ. ಇಂದು ಭಾನುವಾರ ರಜೆ ಇರುವ ಕಾರಣ ಬಚ್ಚನ್ ಪಾಂಡೆ ಕಲೆಕ್ಷನ್ ನಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ.
ಅಕ್ಷಯ್ ಬೇಡ ಅಂದರೂ ವಿಡಿಯೋ ವೈರಲ್ ಮಾಡಿದ ಕಪಿಲ್ ಶರ್ಮಾ ವಿರುದ್ಧ ಗರಂ!
ಅಂದಹಾಗೆ ಬಚ್ಚನ್ ಪಾಂಡೆ ತಮಿಳು ಸಿನಿಮಾದ ರಿಮೇಕ್ ಆಗಿದೆ. 2014ರಲ್ಲಿ ಬಂದ ಜಿಗರ್ ಥಂಡ ಸಿನಿಮಾವನ್ನು ಬಚ್ಚನ್ ಪಾಂಡೆ ಆಗಿ ಬಾಲಿವುಡ್ ನಲ್ಲಿ ಮಾಡಿದ್ದಾರೆ ಅಕ್ಷಯ್ ಮತ್ತು ತಂಡ. ತಮಿಳು ಚಿತ್ರದಲ್ಲಿ ನಟ ಸಿದ್ಧಾರ್ಥ್ ನಾಯಕನಾಗಿ ಮಿಂಚಿದ್ದರು. ಅದೇ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಮೂಲ ಚಿತ್ರಕ್ಕಿಂತ ಕೆಲವು ಬದಲಾವಣೆಯನ್ನು ಬಚ್ಚನ್ ಪಾಂಡೆಯಲ್ಲಿ ಮಾಡಿಕೊಳ್ಳಲಾಗಿದೆ.