ಬಾಲಿವುಡ್ ಸ್ಟಾರ್ ನಟರಾದ ಅಜಯ್ ದೇವಗನ್(Ajay Devgn) ಮತ್ತು ಶಾರುಖ್ ಖಾನ್(Shah Rukh Khan) ನಡುವೆ ವೈಮನಸ್ಸಿದೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ ಎನ್ನುವ ಮಾತು ಅನೇಕ ವರ್ಷಗಳಿಂದ ಕೇಳಿಬರುತ್ತಿತ್ತು. ಈ ಮಾತನಾಡಿದ ದೇವಗನ್ ಇದನ್ನೆಲ್ಲವನ್ನು ತಳ್ಳಿ ಹಾಕಿದ್ದಾರೆ. 

ಬಾಲಿವುಡ್ ಸ್ಟಾರ್ ನಟರಾದ ಅಜಯ್ ದೇವಗನ್(Ajay Devgn) ಮತ್ತು ಶಾರುಖ್ ಖಾನ್(Shah Rukh Khan) ನಡುವೆ ವೈಮನಸ್ಸಿದೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ ಎನ್ನುವ ಮಾತು ಅನೇಕ ವರ್ಷಗಳಿಂದ ಕೇಳಿಬರುತ್ತಿತ್ತು. 90 ದಶಕದಲ್ಲಿ ಸಿನಿಮಾರಂಗ ಪದಾರ್ಪಣೆ ಮಾಡಿದ ನಟರಲ್ಲಿ ಶಾರುಖ್ ಖಾನ್, ಅಕ್ಷಯ್ ಕುಮಾರ್(Akshay Kumar), ಸಲ್ಮಾನ್ ಖಾನ್(Salman Khan), ಆಮೀರ್ ಖಾನ್(Aamir Khan) ಸೇರಿದಂತೆ ಅನೇಕ ಕಲಾವಿದರು ಇದ್ದಾರೆ. ಈ ಎಲ್ಲಾ ಕಲಾವಿದರು ಬಾಲಿವುಡ್‌ನಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದಾರೆ. ಸ್ಟಾರ್ ಕಲಾವಿದರಾಗಿ ಬೆಳೆದು ನಿಂತಿದ್ದಾರೆ. ಈ ಎಲ್ಲಾ ಸ್ಟಾರ್ ಕಲಾವಿದರ ನಡುವೆ ಅನೇಕ ವರ್ಷಗಳಿಂದ ಸ್ಟಾರ್ ವಾರ್ ನಡೆಯುತ್ತಿರುತ್ತದೆ ಎನ್ನುವ ಮಾತು ಕೇಳಿಬರುತ್ತಿರುತ್ತದೆ.

ಈ ಬಗ್ಗೆ ಅಜಯ್ ದೇವಗನ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಶಾರುಖ್ ಖಾನ್ ಜೊತೆಗಿನ ಶೀತಲ ಸಮರದ ವದಂತಿ ಬಗ್ಗೆ ಅಜಯ್ ದೇವಗನ್ ಮಾತನಾಡಿದ್ದಾರೆ. ಅಜಯ್ ದೇವಗನ್ ನಟನೆಯ ಸನ್ ಆಫ್ ಸರ್ದಾರ್ ಹಾಗೂ ಶಾರುಖ್ ಖಾನ್ ನಟನೆಯ್ ಜಬ್ ತಕ್ ಹೇ ಜಾನ್ ಸಿನಿಮಾಗಳು ಒಟ್ಟಿಗೆ ತೆರೆಗೆ ಬಂದವು. ಆ ಸಮಯದಲ್ಲಿ ಇಬ್ಬರ ನಡುವೆ ಕ್ಲ್ಯಾಶ್ ಆಗಿತ್ತು. ಇದರಿಂದ ಇಬ್ಬರೂ ಸ್ಟಾರ್ ಕಲಾವಿದರು ಸಿಟ್ಟಾಗಿದ್ದರೂ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಇದನ್ನು ಅಜಯ್ ದೇವಗನ್ ತಳ್ಳಿಹಾಕಿದ್ದಾರೆ.

ಇತ್ತೀಚಿಗಷ್ಟೆ ಅಜಯ್ ದೇವಗನ್ ವಿಮಲ್ ಪಾನ್ ಮಸಾಲಾ ಜಾಹೀರಾತಿನಲ್ಲಿ ಶಾರುಖ್ ಖಾನ್ ಸಹ ನಟಿಸಿದ್ದಾರೆ. ಇಬ್ಬರು ಒಟ್ಟಿಗೆ ತೆರೆಹಂಚಿಕೊಳ್ಳುವ ಮೂಲಕ ಯಾವುದೇ ವೈಮನಸ್ಸಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದರು. ಅಲ್ಲದೇ ಮಾಧ್ಯಮತ್ತೆ ನೀಡಿದ ಸಂದರ್ಶನದಲ್ಲಿ ಶಾರುಖ್ ಖಾನ್ ಜೊತೆಗಿನ ಸ್ನೇಹ, ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.

ಪಾರ್ಟಿಯಲ್ಲಿ Ajay Devgn ಮತ್ತು Arjun Rampal ಪುತ್ರಿಯರು ಫೋಟೋ ವೈರಲ್‌!

'ನಾವು ಫೋನ್ ನಲ್ಲಿ ಮಾತನಾಡುತ್ತೇವೆ. ನಾವೆಲ್ಲರೂ ಚೆನ್ನಾಗಿ ಇದ್ದೇವೆ. ಒಬ್ಬರಿಗೆ ಸಮಸ್ಯೆ ಎದುರಾದರೇ ಮತ್ತೊಬ್ಬರು ಪಕ್ಕದಲ್ಲಿ ನಿಲ್ಲುತ್ತಾರೆ. ನಾವು ಒಬ್ಬರಿಗೊಬ್ಬರು ನಂಬಿದ್ದೇವೆ. ಯಾರಾದರೂ ಒಬ್ಬರು ನಿಮ್ಮೊಂದಿಗೆ ನಾವು ಇದ್ದೀವಿ ಎಂದರೆ ಅವರು ಜೊತೆಯಲ್ಲಿ ಇರುತ್ತಾರೆ ಎಂದರ್ಥ. ನಾವು ಎಂದಿಗೂ ಸಮಸ್ಯೆ ಎದುರಿಸಿಲ್ಲ' ಎಂದು ಹೇಳಿದ್ದಾರೆ.

'90ರ ದಶಕದಲ್ಲಿ ನಾನು ಮತ್ತು ಶಾರುಖ್ ಖಾನ್ ಒಟ್ಟಾಗಿ ವೃತ್ತಿಜೀವನ ಆರಂಭಿಸಿದವರು. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ. ಮಾಧ್ಯಮದವರು ಬರೆಯುವ ರೀತಿಯಲ್ಲಿ ನಮ್ಮ ಮಧ್ಯೆ ಯಾವುದೇ ಜಗಳ ಆಗಿಲ್ಲ. ನಾವು ಈಗಲೂ ಫೋನ್ ನಲ್ಲಿ ಮಾತನಾಡುತ್ತೇವೆ. ನಮ್ಮ ನಡುವೆ ಯಾವತ್ತು ಮನಸ್ತಾಪ ಇಲ್ಲ' ಎಂದು ಹೇಳಿದ್ದಾರೆ.

ಅಜಯ್ ದೇವಗನ್ ಗೆ ಅಕ್ಷಯ್ ಕುಮಾರ್ ಸಾಥ್; ಗುಟ್ಕಾ ಗ್ಯಾಂಗ್ ಎಂದು ಕಾಲೆಳೆದ ನೆಟ್ಟಿಗರು

ಇಬ್ಬರ ನಡುವಿನ ಮನಸ್ತಾಪಕ್ಕೆ ಅಭಿಮಾನಿಗಳೇ ಕಾರಣ ಎಂದು ಹೇಳುವ ಮೂಲಕ ಇಬ್ಬರ ಮನಸ್ತಾಪದ ಹಿಂದಿನ ಕಾರಣವನ್ನು ಅಭಿಮಾನಿಗಳ ಮೇಲೆ ಹೊರಿಸಿದ್ದಾರೆ. 'ಅಭಿಮಾನಿ ಸಂಘಟನೆಗಳ ನಡುವೆ ಜಗಳ ಆಗುತ್ತದೆ. ಆಗ ಇಬ್ಬರೂ ಸ್ಟಾರ್ ನಟರ ನಡುವೆಯೇ ಜಗಳ ಆಗುತ್ತಿದೆ ಎಂದು ಎಲ್ಲರೂ ಭಾವಿಸುತ್ತಾರೆ' ಎಂದು ಅಜಯ್ ದೇವಗನ್ ಹೇಳಿದರು.

ಇತ್ತೀಚಿಗಷ್ಟೆ ದೇವಗನ್ ಹಿಂದಿ ರಾಷ್ಟ್ರಭಾಷೆ ಎಂದು ದೊಡ್ಡ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಕನ್ನಡದ ನಟ ಕಿಚ್ಚ ಸುದೀಪ್ ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿದ್ದ ವಿಡಿಯೋವನ್ನು ಶೇರ್ ಮಾಡಿ ಅಜಯ್ ದೇವಗನ್ ಕೌಂಟರ್ ಕೊಟ್ಟಿದ್ದರು. ಹಿಂದಿ ರಾಷ್ಟ್ರ ಭಾಷೆ, ಕನ್ನಡದ ಸಿನಿಮಾಗಳನ್ನು ಹಿಂದಿಗೆ ಯಾಕೆ ಡಬ್ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಇದು ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಅಜಯ್ ದೇವಗನ್ ಟ್ವೀಟ್‌ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿ, ವಿವಾದ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು.