ಸಲ್ಮಾನ್-ಐಶ್ವರ್ಯಾ ಪ್ರೇಮ ಸಂಬಂಧ ಚರ್ಚಿತ ವಿಚಾರ. 'ಹಮ್ ದಿಲ್ ಚುಕೆ ಸನಮ್' ಚಿತ್ರೀಕರಣದ ವೇಳೆ ಹತ್ತಿರವಾದ ಇವರು ೨೦೦೧ರಲ್ಲಿ ಬೇರ್ಪಟ್ಟರು. ಐಶ್ವರ್ಯಾ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಳ್ಳದಿರುವುದು, ವಿವೇಕ್ ಒಬೆರಾಯ್ ಜೊತೆಗಿನ ಸಂಬಂಧ ಕಾರಣ ಎಂದು ಸಲ್ಮಾನ್ ಸಹೋದರ ಸೊಹೈಲ್ ಖಾನ್ ಹೇಳಿದ್ದಾರೆ. ಈಗ ಐಶ್ವರ್ಯಾ ಬಚ್ಚನ್ ಕುಟುಂಬದ ಸೊಸೆ.
ಸಲ್ಮಾನ್ ಖಾನ್ ಜೊತೆಗೆ ನಟಿ ಐಶ್ವರ್ಯ ರೈ ಅವರ ಕುಚ್ ಕುಚ್ ಬಾಲಿವುಡ್‌ನಲ್ಲಿ ಹೊಸ ವಿಷಯವೇನಲ್ಲ. ಇವರ ಲವ್ ಸ್ಟೋರಿ ಒಂದು ಹಂತ ಮುಂದಕ್ಕೆ ಹೋಗಿತ್ತು. ಐಶ್ವರ್ಯ ಅವರು, ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಸಲ್ಮಾನ್ ಖಾನ್ ಜೊತೆ ಡೇಟಿಂಗ್‌ನಲ್ಲಿ ಇದ್ದರು. ಇವರಿಬ್ಬರ ಮದುವೆ ನಡೆಯುತ್ತದೆ ಎಂದು ಭಾರಿ ಸುದ್ದಿಯಾಗಿತ್ತು. 90ರ ದಶಕದಲ್ಲಿ ಸಲ್ಮಾನ್ ಖಾನ್ (Salman Khan) ಮತ್ತು ಐಶ್ವರ್ಯಾ ರೈ (Aishwarya Rai) ಅವರ ಸಂಬಂಧ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ಅವರ ರೊಮ್ಯಾನ್ಸ್‌ಗಿಂತ ಬ್ರೇಕಪ್ ಹೆಚ್ಚು ಚರ್ಚೆಯಾಗಿತ್ತು. ವಾಸ್ತವವಾಗಿ, 1999 ರಲ್ಲಿ ಬಿಡುಗಡೆಯಾದ 'ಹಮ್ ದಿಲ್ ಚುಕೆ ಸನಮ್' ಚಿತ್ರದ ಸೆಟ್‌ಗಳಲ್ಲಿ ಐಶ್ವರ್ಯಾ ಮತ್ತು ಸಲ್ಮಾನ್ ಪರಸ್ಪರ ಹತ್ತಿರವಾಗಿದ್ದರು. 2001 ರಲ್ಲಿ ಇಬ್ಬರೂ ಬೇರ್ಪಟ್ಟರು. ಇವರಿಬ್ಬರು ಬೇರ್ಪಟ್ಟಿರುವುದದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆಯಾದರೂ, ಐಶ್ವರ್ಯ ತಮಗೆ ಕೈಕೊಟ್ಟಿದ್ದಾರೆ ಎಂದು ಮೊನ್ನೆಮೊನ್ನೆಯವರೆಗೂ ಸಲ್ಮಾನ್ ಖಾನ್ ಪರೋಕ್ಷವಾಗಿ ಹೇಳುತ್ತಲೇ ಬಂದಿದ್ದಾರೆ. ಇದೀಗ ಸಲ್ಲು ಭಾಯಿ ಅವಿವಾಹಿತರಾಗಿಯೇ ಉಳಿದಿದ್ದರೆ, ಐಶ್ವರ್ಯ ರೈ, ಬಚ್ಚನ್ ಕುಟುಂಬದ ಸೊಸೆಯಾಗಿ ಒಬ್ಬಳು ಮುದ್ದಾದ ಮಗಳು ಆರಾಧ್ಯಳ ಅಮ್ಮ ಕೂಡ ಆಗಿದ್ದಾರೆ.
ಅದೇ ಇನ್ನೊಂದೆಡೆ, ಈ ಪ್ರೇಮಕಥೆಯ ಜೊತೆಗೆ ಐಶ್ವರ್ಯ ಹೆಸರು ವಿವೇಕ್ ಒಬೆರಾಯ್ ಅವರ ಜೊತೆಯೂ ಸೇರಿಕೊಂಡಿದೆ. ಐಶ್ವರ್ಯಾ-ಸಲ್ಮಾನ್ ಪ್ರೇಮ ಸಂಬಂಧದಂತೆಯೇ ಕುತೂಹಲ ಕೆರಳಿಸಿದ್ದು, ಐಶ್ವರ್ಯಾ-ವಿವೇಕ್ ಒಬೆರಾಯ್ ಪ್ರೇಮ ಸಲ್ಲಾಪ. ಇದು ಅಲ್ಪ ಕಾಲದ್ದಾಗಿದ್ದರೂ ಆ ಕಾಲದಲ್ಲಿ ಬಾಲಿವುಡ್‌ನಲ್ಲಿ ಭಾರಿ ಸದ್ದು ಮಾಡಿತ್ತು. ಐಶ್ವರ್ಯಾ ಮತ್ತು ವಿವೇಕ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ವಿವೇಕ್ ಜತೆಗಿನ ಸಂಬಂಧದ ಬಗ್ಗೆ ಐಶ್ವರ್ಯಾ ಎಂದಿಗೂ ಬಾಯಿಬಿಟ್ಟಿಲ್ಲ. ಜತೆಗೆ ಬ್ರೇಕ್‌ಅಪ್‌ಗೂ ಕಾರಣ ತಿಳಿಸಿಲ್ಲ. ಇವರಿಬ್ಬರ ಸಂಬಂಧ 'ಕ್ಯೂನ್ ಹೋ ಗಯಾ ನಾ' ಚಿತ್ರದೊಂದಿಗೆ ಶುರುವಾಗಿತ್ತು. ಆ ಸಮಯದಲ್ಲಿ ಅವರ ಪ್ರೇಮಕಥೆಯೇ ದೊಡ್ಡ ಗಾಸಿಪ್ ಆಗಿತ್ತು. ಸಲ್ಮಾನ್ ಖಾನ್ ಜೊತೆ ಐಶ್ವರ್ಯಾ ಬ್ರೇಕಪ್ ಆದಾಗ ಇಬ್ಬರೂ ಪರಸ್ಪರ ಡೇಟಿಂಗ್ ಆರಂಭಿಸಿದರು. ಆದಾಗ್ಯೂ, ಅವರ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಅವರು 2005 ರಲ್ಲಿ ಬೇರ್ಪಟ್ಟರು.
ಲವ್ ಸಲ್ಮಾನ್ ಮೇಲೆ, ಮದ್ವೆಯಾದದ್ದು ಅಭಿಷೇಕ್ಗೆ? ಐಶ್ವರ್ಯ ರೈ ಈ ವಿಡಿಯೋದಿಂದ ರಟ್ಟಾಗೋಯ್ತು ಗುಟ್ಟು...
ಇದೀಗ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಅವರು, ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಸಂಬಂಧ ಹಳಸಿರುವ ಬಗ್ಗೆ ಮಾತನಾಡಿರುವ ಹಳೆಯ ವಿಡಿಯೋ ಪುನಃ ವೈರಲ್ ಆಗುತ್ತಿದೆ. ಐಶ್ವರ್ಯಾ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ಹಿಂಜರಿಯುವುದರಿಂದ ಸಲ್ಮಾನ್‌ಗೆ ಅಭದ್ರತೆಯ ಭಾವನೆ ಉಂಟಾಗಿತ್ತು. ಖಾನ್ ಕುಟುಂಬದೊಂದಿಗೆ ಆಕೆ ಆಗಾಗ್ಗೆ ಭೇಟಿಯಾಗುತ್ತಿದ್ದರೂ, ನಿಕಟ ಸಂಬಂಧದ ಹೊರತಾಗಿಯೂ, ಐಶ್ವರ್ಯಾ ಎಂದಿಗೂ ತಮ್ಮ ಸಂಬಂಧವನ್ನು ಬಹಿರಂಗವಾಗಿ ದೃಢಪಡಿಸಲಿಲ್ಲ, ಇದು ಸಲ್ಮಾನ್‌ಗೆ ಅವರ ಬದ್ಧತೆಯ ಬಗ್ಗೆ ಅನಿಶ್ಚಿತತೆಯನ್ನುಂಟುಮಾಡಿತ್ತು. ಇದೇ ಕಾರಣಕ್ಕೆ ಸಲ್ಮಾನ್ ಖಾನ್ ದೂರ ಆಗಲು ಕಾರಣವಾಯಿತು ಎಂದಿದ್ದಾರೆ.
ಅಷ್ಟೇ ಅಲ್ಲದೇ ಸಲ್ಮಾನ್ ಖಾನ್ ಜೊತೆ ಸಂಪರ್ಕದಲ್ಲಿ ಇರುವಾಗಲೇ ಐಶ್ವರ್ಯ ರೈ, ನಟ ವಿವೇಕ್ ಒಬೆರಾಯ್ ಅವರೊಂದಿಗೆ ಸಂಬಂಧ ಬೆಳೆಸಿದ್ದರು. ಇತ್ತ ಸಲ್ಮಾನ್ ಜೊತೆಯೂ ಸಂಪರ್ಕವನ್ನು ಉಳಿಸಿಕೊಂಡಿದ್ದರು ಎಂದು ಸೊಹೈಲ್ ಆರೋಪಿಸಿದ್ದಾರೆ. ಇದು ಇಬ್ಬರ ನಡುವೆ ಉದ್ವಿಗ್ನತೆಯನ್ನು ಉಂಟುಮಾಡಿತು ಎಂದಿದ್ದಾರೆ.
ನನ್ನದು ಬಚ್ಚನ್ ಫ್ಯಾಮಿಲಿ, ಖಾನ್ ಫ್ಯಾಮಿಲಿಯಲ್ಲ! ಕರಣ್ ಜೋಹರ್ ವಿರುದ್ಧ ಐಶ್ವರ್ಯ ಗರಂ ಆಗಿದ್ಯಾಕೆ?


