Asianet Suvarna News Asianet Suvarna News

ಬಚ್ಚನ್‌ ಕುಟಂಬದಲ್ಲಿ ಏನೋ ಸರಿಯಿಲ್ಲ, ಗ್ರೂಪ್‌ ಫೋಟೋ ಕ್ರಾಫ್‌ ಮಾಡಿ ಮಾವನಿಗೆ ಐಶ್ವರ್ಯಾ ರೈ ಬರ್ತಡೇ ವಿಶ್‌

ಬಾಲಿವುಡ್‌ ನಟ ಅಮಿತಾಭ್ ಬಚ್ಚನ್  ತಮ್ಮ 81 ನೇ ಹುಟ್ಟುಹಬ್ಬದ ಮರುದಿನ ಮಾವನಿಗೆ ಐಶ್ವರ್ಯಾ ರೈ ಬಚ್ಚನ್  ಇನ್ಸ್ಟಾಗ್ರಾಮ್‌ನಲ್ಲಿ ವಿಶ್ ಮಾಡಿದ್ದಾರೆ. ಆದರೆ ಈ ಫೋಟೋವೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

 Aishwarya Rai crops Jaya Bachchan Navya Naveli out of photo while wishing Amitabh Bachchan on birthday gow
Author
First Published Oct 12, 2023, 5:04 PM IST

ಅಕ್ಟೋಬರ್ 11 ರ ಬುಧವಾರದಂದು ಬಾಲಿವುಡ್‌ ನಟ ಅಮಿತಾಭ್ ಬಚ್ಚನ್  ತಮ್ಮ 81 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹುಟ್ಟುಹಬ್ಬ ಆಚರಣೆಯ ಮರುದಿನ ಅಂದರೆ ಗುರುವಾರ ಮಾವನಿಗೆ ಐಶ್ವರ್ಯಾ ರೈ ಬಚ್ಚನ್  ಇನ್ಸ್ಟಾಗ್ರಾಮ್‌ನಲ್ಲಿ ವಿಶ್ ಮಾಡಿದ್ದಾರೆ. ಬಿಗ್‌ಬಿ ಜೊತೆಗೆ ತಮ್ಮ ಮಗಳು ಆರಾಧ್ಯ ಬಚ್ಚನ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಈ ಫೋಟೋಗೆ ಯಾವಾಗಲೂ ದೇವರು ಆಶೀರ್ವದಿಸುತ್ತಾನೆ ಎಂದು ಎಮೋಜಿಗಳ ಜೊತೆಗೆ ಅಡಿಬರಹ ಬರೆದಿದ್ದಾರೆ. 

ಐಶ್ವರ್ಯ ಅವರು ಬಿಗ್‌ಬಿ  ಮತ್ತು  ಮಗಳು ಆರಾಧ್ಯ ಅವರ ಚಿತ್ರವನ್ನು ಜೂಮ್ ಮಾಡಿ ಎಡಿಟ್‌ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ಪೋಟೋದಲ್ಲಿದ್ದ ಅತ್ತೆ ಜಯಾ ಬಚ್ಚನ್ ಮತ್ತು ಮಗಳು ಶ್ವೇತಾ ನಂದ ಮಕ್ಕಳು ಅಂದರೆ ಬಿಗ್‌ಬಿ ಮೊಮ್ಮಕ್ಕಳಾದ ನವ್ಯಾ ನವೇಲಿ ನಂದಾ ಮತ್ತು ಅಗಸ್ತ್ಯ ನಂದಾ ಅವರನ್ನು ಕ್ರಾಪ್ ಮಾಡಿ ತಮ್ಮ ಮಗಳು ಮತ್ತು ಮಾವನ ಫೋಟೋವನ್ನಷ್ಟೇ ಹಾಕಿದ್ದಾರೆ.  ಈ ವಿಚಾರವೀಗ ವ್ಯಾಪಕ ಟೀಕೆಗೆ ಮತ್ತು ಚರ್ಚೆಗೆ ಗುರಿಯಾಗಿದೆ.

ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ ಸಿಕ್ಕಾಪಟ್ಟೆ ಟ್ರೋಲ್‌, ತೂಕ ಹೆಚ್ಚಳ, ಮುಖಕ್ಕೆ ಸರ್ಜರಿ!

ಮೊದಲಿನಿಂದಲೂ ಬಚ್ಚನ್‌ ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಕೇಳಿಬರುತ್ತಲೇ ಇದೆ.  ಬಿಗ್‌ಬಿ ಮಗಳು ಶ್ವೇತಾ ನಂದ ಮತ್ತು ಐಶ್ವರ್ಯ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಬಹಿರಂಗವಾಗಿರುವ ಸತ್ಯ. ಇದಕ್ಕೆ ಪುಷ್ಟಿ ನೀಡುವಂತೆ ಫ್ಯಾರೀಸ್‌ ಫ್ಯಾಷನ್‌ ವೀಕ್‌ ನಲ್ಲಿ ಚೊಚ್ಚಲ ಬಾರಿ ಭಾಗವಹಿಸಿದ ತನ್ನ ಸೊಸೆ ನವ್ಯಾ ನವೇಲಿ ಅವರನ್ನು ಐಶ್ವರ್ಯಾ ಅವರು ಅಭಿನಂದಿಸಿರಲಿಲ್ಲ. ಅತ್ತೆ ಸೊಸೆ ಇಬ್ಬರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಾತ್ರವಲ್ಲ ನವ್ಯಾ ತನ್ನ ವಿಡಿಯೋವನ್ನು ತಾಯಿ, ತಂದೆ, ಅಜ್ಜ, ಅಜ್ಜಿ ಸೇರಿದಂತೆ ಹಲವರಿಗೆ ಟ್ಯಾಗ್​ ಮಾಡಿದ್ದಾರೆ, ಆದರೆ ನಟಿ ಐಶ್ವರ್ಯ ರೈ ಅವರನ್ನು ಮಾತ್ರ ಬಿಟ್ಟಿದ್ದರು.  ಹೀಗಾಗಿ ಐಶ್ವರ್ಯ ವಿಚಾರದಲ್ಲಿ ತಾಯಿ ದಾರಿಯನ್ನೇ ಮಗಳೂ ಹಿಡಿದಿದ್ದಾಳೆ ಎಂದು ಸುದ್ದಿಯಾಗಿತ್ತು..

ನವ್ಯಾ ಅವರ ಶೋ ದಿನ ಅಜ್ಜಿ ಜಯಾ ಬಚ್ಚನ್‌ ಮತ್ತು ತಾಯಿ ಶ್ವೇತಾ ಜೊತೆಗಿದ್ದು, ಸಾಥ್ ನೀಡಿದರು. ಐಶ್ವರ್ಯಾ ಅವರು ಮಗಳು ಆರಾಧ್ಯ ಜೊತೆಗೆ ತೆರಳಿದ್ದರು.

ಐಶ್ವರ್ಯಾ ರೈ ಪೇರೆಂಟಿಂಗ್ ರೀತಿಗೆ ಮಾವ ಅಮಿತಾಬ್ ಫಿದಾ, ಬ್ಯಾಲೆನ್ಸ್ ಮಾಡೋದು ಹೇಗೆ?

ಐಶ್ವರ್ಯಾ ಕ್ರಾಪ್ ಮಾಡಿ ಹಾಕಿರುವ ಫೋಟೋಗೆ ತರಹೇವಾರಿ ಕಮೆಂಟ್‌ಗಳು ಬಂದಿದೆ.  ಮಕ್ಕಳನ್ನು ಕ್ರಾಪ್ ಮಾಡುವುದು ಒಂದು ವಿಷಯ, ಆದರೆ ನಿಮ್ಮ ಸ್ವಂತ ಅತ್ತೆಯನ್ನು   ಕ್ರಾಪ್ ಮಾಡುವುದು ಇನ್ನೊಂದು, ಈ ಬಚ್ಚನ್ ಕುಟುಂಬವು ಬಹಳಷ್ಟು ನಾಟಕಗಳನ್ನು ಹೊಂದಿದೆ ಎಂದ ಒಬ್ಬರು ಕಮೆಂಟ್‌ ಮಾಡಿದ್ದಾರೆ.

ಇದು ತಮಾಷೆ ಎಂದು ನಾನು ಭಾವಿಸಿದೆ, ಆದರೆ ಐಶ್ವರ್ಯಾ ಅಕ್ಷರಶಃ ಫೋಟೋವನ್ನು ಕತ್ತರಿಸಿದ್ದಾಳೆ ಎಂದು ಮತ್ತೊಬ್ಬ ಫಾಲೋವರ್‌ ಕಮೆಂಟ್‌ ಹಾಕಿದ್ದಾರೆ.

ಶ್ವೇತಾ ಮತ್ತು ಐಶ್ವರ್ಯ ಮುನಿಸಿಗೆ ಕಾರಣ:
ಅಮಿತಾಭ್​ ಬಚ್ಚನ್​ ಅವರ ಪುತ್ರಿ ಶ್ವೇತಾ ಅವರಿಗೆ ಐಶ್ವರ್ಯ ರೈ ಕಂಡರೆ ಹೊಟ್ಟೆ ಉರಿ ಎನ್ನುವುದು ಬಹಳ ಹಿಂದಿನಿಂದಲೂ ಇರುವ ಸುದ್ದಿ. ಅವರಿಬ್ಬರ ನಡುವೆ ಏನೋ ಸರಿಯಾಗಿಲ್ಲ ಎನ್ನುವ ಚರ್ಚೆ ಮೊದಲಿನಿಂದಲೂ ಇದೆ.  ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾರನ್ನು ಮದುವೆಯಾಗುವುದನ್ನು ಶ್ವೇತಾ ಬಯಸಿರಲಿಲ್ಲವಂತೆ.  ಅಭಿಷೇಕ್ ಅವರು ತಮ್ಮ  ಮಾಜಿ ಗೆಳತಿ ಕರಿಷ್ಮಾ ಕಪೂರ್ ಅವರನ್ನು ಮದುವೆಯಾಗಬೇಕು ಎನ್ನುವುದು ಶ್ವೇತಾ ಆಸೆಯಾಗಿತ್ತು.

 
 
 
 
 
 
 
 
 
 
 
 
 
 
 

A post shared by S (@shwetabachchan)

Follow Us:
Download App:
  • android
  • ios