ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ ಸಿಕ್ಕಾಪಟ್ಟೆ ಟ್ರೋಲ್, ತೂಕ ಹೆಚ್ಚಳ, ಮುಖಕ್ಕೆ ಸರ್ಜರಿ!
ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಪ್ಯಾರಿಸ್ ಫ್ಯಾಶನ್ ವೀಕ್ 2023 ನಲ್ಲಿ ಮಿಂಚಿದ್ದು, ಅದೇ ವಿಚಾರವಾಗಿ ಈಗ ಟ್ರೋಲ್ ಆಗಿದ್ದಾರೆ. ಪ್ಯಾರಿಸ್‌ನ ಐಫೆಲ್ ಟವರ್‌ನಲ್ಲಿ ನಡೆದ L'Oréal Paris' ಫ್ಯಾಷನ್ ಶೋನಲ್ಲಿ ಅವರು ಉದ್ದನೆಯ ಕೇಪ್‌ನೊಂದಿಗೆ ಗೋಲ್ಡನ್-ಕಪ್ಪು ಮಿನುಗುವ ಗೌನ್ ಮಿಂಚಿದ್ದರು.
ಆಕೆಯ ರ‍್ಯಾಂಪ್ ವಾಕ್ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದರು. ಆದರೆ ಐಶ್ವರ್ಯಾ ರೈ ಬಚ್ಚನ್ ಅವರು ಪ್ಯಾರಿಸ್ ಫ್ಯಾಶನ್ ವೀಕ್ 2023 ನಲ್ಲಿ ರ‍್ಯಾಂಪ್ ವಾಕ್ ಮಾಡಿದ ನಂತರ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದ್ದಾರೆ.
ನೆಟಿಜನ್‌ಗಳು ಆಕೆಯ ಮುಖದ ಸರ್ಜರಿಯನ್ನು ಅನ್ನು ಇಷ್ಟಟ್ಟಿಲ್ಲ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಇದಕ್ಕಾಗಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಐಶ್ವರ್ಯ ರೈ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆ.
ಅಭಿಮಾನಿಯೊಬ್ಬರು ಟ್ವಿಟ್ಟರ್‌ನಲ್ಲಿ ನಾನು ಆಕೆಯನ್ನು ತುಂಬಾ ಪ್ರೀತಿಸುತ್ತೇನೆ. ಅವಳು ಇನ್ನೂ ಕೂಡ ಬಹುಕಾಂತೀಯಳಾಗಿದ್ದಾಳೆ ಆದರೆ ಇತರ ರೂಪದರ್ಶಿಯರ ಗುಂಪಿನೊಂದಿಗೆ ಅವಳ ಮುಖವು ತುಂಬಾ ಕೆಟ್ಟದಾಗಿ ಕಾಣುತ್ತಿದೆ ಎಂದಿದ್ದಾರೆ.
ಅವಳ ಮುಖ ತುಂಬಿದಂತೆ ಕಾಣುತ್ತದೆ. ಆಕೆಯ ದೇಹ ಪ್ರಕಾರಕ್ಕೆ ಉಡುಗೆ ಸಂಪೂರ್ಣವಾಗಿ ತಪ್ಪಾಗಿದೆ ಈ ರೀತಿ ಮಾಡಿದ ಇಡೀ ತಂಡವನ್ನು ಆಕೆ ವಜಾಗೊಳಿಸಬೇಕಾಗಿದೆ. ಆ ಮುಖವನ್ನೇಕೆ ಆ ರೀತಿ ವಿರೂಪಗೊಳಿಸಿರುವುದು ಎಂದು ಕಮೆಂಟ್ ಮಾಡಿದ್ದಾರೆ.
ರ‍್ಯಾಂಪ್ ವಾಕ್‌ಗಾಗಿ, ಐಶ್ವರ್ಯಾ ಪಳ ಪಳ ಮಿನುಗುವ ಗೋಲ್ಡನ್-ಕಪ್ಪು ಹೊಳೆಯುವ ಕೇಪ್ ಗೌನ್ ಧರಿಸಿದ್ದರು. ಹಿಂಭಾಗಕ್ಕೆ ಪಾರದರ್ಶಕ ಕೇಪ್ ಅನ್ನು ಜೋಡಿಸಲಾಗಿತ್ತು. ಇದರ ಜೊತೆಗೆ, ರೈ ಅವರು ವಜ್ರದ ಉಂಗುರಗಳು, ಕಿವಿಯೋಲೆಗಳು ಮತ್ತು ಗೋಲ್ಡನ್ ಹೈ ಹೀಲ್ಸ್ ಅನ್ನು ಧರಿಸಿದ್ದರು.
ಅಂತರಾಷ್ಟ್ರೀಯ ಸ್ಟಾರ್ ಗಳ ಜೊತೆಗೆ ಪ್ಯಾರಿಸ್ ಫ್ಯಾಶನ್ ವೀಕ್ 2023 ರಲ್ಲಿ ಐಶ್ವರ್ಯಾ ಲೋರಿಯಲ್ ಪ್ಯಾರಿಸ್ ಅನ್ನು ಪ್ರತಿನಿಧಿಸಿದರು. ಅವರು 2003 ರಿಂದ ಲೋರಿಯಲ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಡಿಸೈನರ್ ಜೋಡಿಯಾದ ಫಲ್ಗುಣಿ ಶೇನ್ ಪೀಕಾಕ್ ಕಸ್ಟಮ್ ಅವರಿಂದ ನಿರ್ಮಿತವಾದ ಬಟ್ಟೆಯನ್ನು ಐಶ್ವರ್ಯ ಧರಿಸಿದ್ದರು. ಗುಲಾಬಿ ಬಣ್ಣದ ಲಿಪ್‌ಸ್ಟಿಕ್ ಧರಿಸಿದ್ದರು.
ನಿಸ್ಸಂದೇಹವಾಗಿ, ಐಶ್ವರ್ಯಾ ರೈ ತನ್ನ ಶೈಲಿ,ಗ್ರೇಸ್ ಮತ್ತು ಆತ್ಮವಿಶ್ವಾಸದಿಂದ ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿದರು.
ಐಶ್ವರ್ಯಾ ರೈ ಬಚ್ಚನ್ ಜೊತೆಗೆ ಕೆಂಡಾಲ್ ಜೆನ್ನರ್, ಇವಾ ಲಾಂಗೋರಿಯಾ, ಆಂಡಿ ಮ್ಯಾಕ್‌ಡೊವೆಲ್, ಹೆಲೆನ್ ಮಿರೆನ್, ಅಜಾ ನವೋಮಿ ಕಿಂಗ್, ವಿಯೋಲಾ ಡೇವಿಸ್ ಮತ್ತು ಹಲವು ಜಾಗತಿಕ ತಾರೆಯರು ಈ ಫ್ಯಾಷನ್ ವೀಕ್ ನಲ್ಲಿ ಭಾಗವಹಿಸಿದ್ದರು.
'ವಾಕ್ ಯುವರ್ ವರ್ತ್' ಎಂಬುದು L'Oréal Paris ನ ಈ ವರ್ಷದ ಘೋಷವಾಕ್ಯವಾಗಿದೆ. ಇದು ಲೋರಿಯಲ್‌ನ 15ನೇ ಆವೃತ್ತಿಯಾಗಿದ್ದು, ಎಲ್ಲಾ ಮಹಿಳೆಯರನ್ನು ನಿಷ್ಪಕ್ಷಪಾತವಾಗಿ ಜಗತ್ತಿನಲ್ಲಿ ತೋರಿಸಲು ಮತ್ತು ಆತ್ಮವಿಶ್ವಾಸದಿಂದ ತಮ್ಮ ಅದೃಷ್ಟದ ಕಡೆಗೆ ನಡೆಯಲು ಪ್ರೇರೇಪಿಸಿತು.
ಐಶ್ವರ್ಯ ರೈ 1994ರ ವಿಶ್ವ ಸುಂದರಿ, ನಟಿ, ರೂಪದರ್ಶಿ, ಹಲವಾರು ಜಾಗತಿಕ ಬ್ರ್ಯಾಂಡ್‌ಗಳಿಗೆ ಬ್ರಾಂಡ್ ಅಂಬಾಸಿಡರ್. ವಿಶ್ವ ಸುಂದರಿ ಪ್ರಶಸ್ತಿ ಗೆದ್ದು ಸುಮಾರು 30 ವರ್ಷಗಳಾದರೂ ಅವರು ತಮ್ಮ ಸೌಂದರ್ಯಕ್ಕಾಗಿಯೇ ಬೆಕ್ಕಿನ ಕಣ್ಣಿಮ ಚೆಲುವೆ ಜಾಗತಿಕವಾಗಿ ಪ್ರಸಿದ್ಧಿಯಾಗಿದ್ದಾರೆ.
49 ವರ್ಷದ ಐಶ್ವರ್ಯಾ ಜೊತೆಗೆ ಅವರ ಮಗಳು ಆರಾಧ್ಯ ಕೂಡ ಹೋಗಿದ್ದು ಏರ್ ಪೋರ್ಟ್ ನ ಫೋಟೋ, ವಿಡಿಯೊಗಳು ಸಾಕಷ್ಟು ಹರಿದಾಡುತ್ತಿವೆ. ಫ್ಯಾಶನ್ ಶೋಗೆ ಸಿದ್ದವಾಗುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಅವರ ಇತ್ತೀಚಿನ ಸಿನೆಮಾ ಮಣಿರತ್ನಂ ಅವರ ತಮಿಳು ಮಹಾಕಾವ್ಯ ನಾಟಕ 'ಪೊನ್ನಿಯಿನ್ ಸೆಲ್ವನ್' . ಇದರಲ್ಲಿನ ಪಾತ್ರಕ್ಕಾಗಿ ಐಶ್ವರ್ಯಾ ರೈ ಬಚ್ಚನ್ ಪ್ರಶಂಸೆ ಗಿಟ್ಟಿಸಿಕೊಂಡಿದ್ದರು.
ಇತ್ತೀಚೆಗೆ ತಾತ ಅಮಿತಾಭ್ ಬಚ್ಚನ್ ಅವರೊಂದಿಗೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ವೇತಾ ಬಚ್ಚನ್ ಅವರ ಪುತ್ರಿ ನವ್ಯಾ ನವೇಲಿ ಈ ಬಾರಿ ಪ್ಯಾರಿಸ್ ಫ್ಯಾಶನ್ ವೀಕ್‌ಗೆ ಪದಾರ್ಪಣೆ ಮಾಡಿದರು. ಅತ್ತೆ ಐಶ್ವರ್ಯ ಚಿನ್ನದ ಬಣ್ಣದಲ್ಲಿ ಮಿಂಚಿದರೆ. ನವ್ಯಾ ಕೆಂಪು ಬಣ್ಣದ ಮಿನಿ ಡ್ರೆಸ್‌ನಲ್ಲಿ ರ್ಯಾಂಪ್ ವಾಕ್ ಮಾಡಿದರು.