Asianet Suvarna News Asianet Suvarna News

Aishwarya Rai Bachchan: ಐಶ್‌ ಬೇಬಿ ಮರೆಯಲಾಗದ ಐದು ಪಾತ್ರಗಳು

ಮೊನ್ನೆ ತಾನೆ ಕ್ಯಾನ್ ನ ರೆಡ್‌ ಕಾರ್ಪೆಟ್ ಮೇಲೆ ವಿಚಿತ್ರ ಉಡುಗೆಯೊಂದಿಗೆ ರ್ಯಾಂಪ್‌ ವಾಕ್ ಮಾಡಿ ವಿಶ್ವದ ಜನರ ಗಮನ ಸೆಳೆದಿದ್ದಾರೆ ಐಶ್ವರ್ಯಾ ರೈ ಬಚ್ಚನ್. ಸಿನಿಮಾವೊಂದನ್ನು ಸಕ್ಸಸ್‌ನತ್ತ ಕರೆದೊಯ್ಯುವ ಸಾಮರ್ಥ್ಯ ಇರೋ ಈಕೆ ಮರೆಯಬಾರದ ಪಾತ್ರಗಳಿವು.

Aishwarya rai bachchan top 5 roles
Author
First Published May 23, 2023, 12:10 PM IST

ತನ್ನ ಬೆಕ್ಕಿನ ಕಣ್ಣಿನ ಚಲನೆಯ ಮೂಲಕವೇ ಪಾತ್ರದ ಅಂತರಾಳವನ್ನು ಪ್ರೇಕ್ಷಕನಿಗೆ ದಾಟಿಸೋ ಅದ್ಭುತ ನಟಿ ಐಶ್ವರ್ಯಾ ರೈ. 1994ಲ್ಲಿ ಬಂದ ಮಣಿರತ್ನಂ ಅವರ 'ಇರುವರ್' ಎಂಬ ತಮಿಳು ಸಿನಿಮಾ ಮೂಲಕ ಚಿತ್ರ ಜಗತ್ತಿಗೆ ಎಂಟ್ರಿಕೊಟ್ಟ ಐಶ್ವರ್ಯಾ ಇಂದಿಗೂ ಬಹು ಬೇಡಿಕೆಯ ನಟಿ. 'ಔರ್ ಪ್ಯಾರ್ ಹೋ ಗಯಾ' ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟ ಐಶ್‌ ಬೇಬಿ ತಮಿಳಿನ ರೊಮ್ಯಾಂಟಿಕ್ ಡ್ರಾಮಾ 'ಜೀನ್ಸ್' ಮೂಲಕ ಮನೆ ಮಾತಾದರು. ಈ ಸಿನಿಮಾಕ್ಕೆ ಫಿಲಂಫೇರ್‌ನಲ್ಲಿ ಈಕೆಗೆ ಬೆಸ್ಟ್ ಆಕ್ಟ್ರೆಸ್ ಪ್ರಶಸ್ತಿಯೂ ಬಂತು. ಈಕೆಯ ಐದು ಮರೆಯಲಾಗದ ಐದು ಪಾತ್ರಗಳು ಇಲ್ಲಿವೆ.

ಹಮ್‌ ದಿಲ್‌ ದೆ ಚುಕೇ ಸನಮ್‌ನ ನಂದಿನಿ: ಸಂಜಯ್‌ ಲೀಲಾ ಬನ್ಸಾಲಿ ಅವರ ಬ್ಯೂಟಿಫುಲ್‌ ಮ್ಯೂಸಿಕಲ್‌ ಡ್ರಾಮಾ ಹಮ್‌ ದಿಲ್‌ ದೆ ಚುಕೇ ಸನಮ್‌. ಇದರಲ್ಲಿ ಪ್ರೀತಿ ಮತ್ತು ಜವಾಬ್ದಾರಿಗಳ ನಡುವೆ ತೊಳಲಾಡುವ ತರುಣಿಯಾಗಿ ಐಶ್ವರ್ಯಾ ಅದ್ಭುತ ಪರ್ಫಾಮೆನ್ಸ್ ನೀಡಿದ್ದರು. ನಂದಿನಿಯ ಪಾತ್ರದಲ್ಲಿ ಈಕೆಯ ಅಭಿನಯ ನೋಡಿದವರ್ಯಾರೂ ಈ ಪಾತ್ರವನ್ನು ಅಷ್ಟು ಬೇಗ ಮರೆಯೋದಿಲ್ಲ.

ತಾಲ್‌ ಸಿನಿಮಾದ ಮಾನ್ಸಿ: ಸುಭಾಷ್‌ ಘಾಯ್ ಅವರ ಸೂಪರ್‌ ಹಿಟ್ ಸಿನಿಮಾ 'ತಾಲ್'. ಇದರಲ್ಲಿ ಪರಿಣತ ಗಾಯಕಿಯ ಪಾತ್ರದಲ್ಲಿ ಐಶ್ವರ್ಯಾ ರೈ ನಟಿಸಿದರು. ಎನರ್ಜಿ, ಮುಗ್ಧತೆ, ಮಹತ್ವಾಕಾಂಕ್ಷೆ ಮತ್ತು ಭಾವನಾತ್ಮಕತೆ ಇರೋ ವಿಶಿಷ್ಟ ಪಾತ್ರ ಮಾನ್ಸಿಯದು. ಈ ಸಿನಿಮಾದಲ್ಲಿ ಐಶ್‌ ಬೇಬಿ ಪಾತ್ರದಷ್ಟೇ ಸರೋಜ್‌ ಖಾನ್ ಅವರ ಕೊರಿಯೋಗ್ರಫಿಯಲ್ಲಿ ಐಶ್‌ ಮಾಡಿರೋ ಡ್ಯಾನ್ಸ್‌ ಪರ್ಫಾಮೆನ್ಸ್ ಕೂಡ ಮರೆಯಲಾಗದ್ದು.

ಫ್ಯಾನ್ಸ್ ಕುತೂಹಲಕ್ಕೆ ಸಮಂತಾ ಉತ್ತರ, ಮದುವೆ ಪೋಸ್ಟ್‌ನಿಂದ ರಹಸ್ಯ ಬಯಲು!

ದೇವದಾಸ್‌ ಸಿನಿಮಾದ ಪಾರು: ಸಂಜಯ್‌ ಲೀಲಾ ಬನ್ಸಾಲಿ ಅವರ 'ದೇವದಾಸ್‌' ಸಿನಿಮಾದಲ್ಲಿ ಐಶ್ವರ್ಯಾ ರೈ ಮಾಡಿರೋ ಪಾರು ಪಾತ್ರ ಬಹಳ ಗಮನ ಸೆಳೆಯಿತು. ಘನತೆ, ಆಕರ್ಷಕ ವ್ಯಕ್ತಿತ್ವ, ಅದ್ಭುತ ಸೌಂದರ್ಯದ ಪಾರುವಾಗಿ ಐಶ್ವರ್ಯಾ ರೈ ಮಿಂಚಿದರು. ದೇವದಾಸನ ಪಾತ್ರದಲ್ಲಿ ಶಾರೂಖ್‌ ಖಾನ್ ನಟಿಸಿದ್ದರು. ಜಿಯೋ ಸಿನಿಮಾದಲ್ಲಿ ಈಗಲೂ ಈ ಸಿನಿಮಾ ವೀಕ್ಷಿಸಬಹುದು.

ಜೋಧಾ ಅಕ್ಬರ್‌ನ ಜೋಧಾ: ರಜಪೂತ ರಾಜಕುಮಾರಿ ಜೋಧಾ ಪಾತ್ರವನ್ನು ಐಶ್ವರ್ಯಾ ನಿರ್ವಹಿಸಿದ ರೀತಿಗೆ ಮಾಸ್ ಆಡಿಯನ್ಸ್(Mass audience) ಮಾತ್ರವಲ್ಲ, ಸಿನಿಮಾ ವಿಮರ್ಶಕರೂ ಶಹಭಾಸ್ ಅಂದರು. ಹೃತಿಕ್ ರೋಷನ್ ಅಕ್ಬರ್‌ ಪಾತ್ರದಲ್ಲಿ ನಟಿಸಿದ್ದರು. ಧೀರತನ, ಧೈರ್ಯ, ಸ್ವಾಭಿಮಾನಿ ಹೆಣ್ಣಾಗಿ ಎಲ್ಲೂ ತನ್ನತನ ಬಿಟ್ಟುಕೊಡದ ಸ್ವತಂತ್ರ ಮನೋಭಾವದ ಯುವತಿ ಪಾತ್ರದಲ್ಲಿ ಐಶ್‌ ಬೇಬಿ ತೋರಿದ ಪರ್ಫಾಮೆನ್ಸ್ ಗೆ (performance)ಔಟ್‌ ಆಫ್‌ ಔಟ್ ಮಾರ್ಕ್ಸ್ ಕೊಡಲೇ ಬೇಕು.

ಗುಜಾರಿಶ್‌ನ ಸೋಫಿಯಾ: ಐಶ್‌ ಅವರ ಗಮನ ಸೆಳೆದ ಮತ್ತೊಂದು ಪಾತ್ರ ಗುಜಾರಿಶ್‌ ಸಿನಿಮಾದ ಸೋಫಿಯಾ. ಪಾರ್ಶ್ವವಾಯುವಿಗೆ ತುತ್ತಾದ ಜಾದೂಗಾರನ ಸೇವೆ ಮಾಡುವ ನರ್ಸ್(nurse) ಪಾತ್ರದಲ್ಲಿ ಐಶ್ವರ್ಯಾ ನಟಿಸಿದ್ದರು. ಆಕೆ ದೌರ್ಬಲ್ಯ, ಎಮೋಶನ್‌, ನೋವು, ಸಹನುಭೂತಿಯನ್ನು ಬಹಳ ಸೊಗಸಾಗಿ ಅಭಿವ್ಯಕ್ತಿಸಿದ್ದರು.

ಮಿಸ್ಟರಿ ಮ್ಯಾನ್ ಬಗ್ಗೆ ನಾನೆ ಹೇಳ್ತೀನಿ; ಕೊನೆಗೂ ಮೌನ ಮುರಿದ ನಟಿ ಕೀರ್ತಿ ಸುರೇಶ್

ಇದಲ್ಲದೇ ಅನೇಕ ಆಫ್‌ಬೀಟ್ ಸಿನಿಮಾಗಳಲ್ಲೂ ಐಶ್ವರ್ಯಾ ಅವರದು ಅದ್ಭುತ ಅನಿಸುವ ಪರ್ಫಾಮೆನ್ಸ್. 'ರೇನ್‌ಕೋಟ್' ಸಿನಿಮಾದ ನೀರಜಾ ಪಾತ್ರದಲ್ಲಿ ಅವರ ತಣ್ಣನೆಯ ಪಾತ್ರ ನಿರ್ವಹಣೆಗೆ ಮಾರು ಹೋಗದವರಿಲ್ಲ. ಒಳಗೆ ಜ್ವಾಲಾಮುಖಿಯನ್ನಿಟ್ಟು ಹೊರಗೆ ನಗುತ್ತಿರುವ, ತನ್ನ ಪ್ರಿಯತಮನ ಎದುರು ತನ್ನ ಕಷ್ಟ ಬಯಲಾಗದಂತೆ ರಹಸ್ಯವಾಗಿ ಬದುಕುವ ಹೆಣ್ಣಿನ ಸ್ಟ್ರಾಂಗ್ ಪಾತ್ರವದು. ಅದೇ ರೀತಿ ಚೋಕರ್ ಬಾಲಿ ಸಿನಿಮಾದ ಬಿನೋದಿನಿ ಪಾತ್ರವನ್ನು ಚಿತ್ರ ಪ್ರಿಯರು ಎಂದೂ ಮರೆಯೋದಿಲ್ಲ. ಬಹಳ ಸಂಕೀರ್ಣತೆ ಇರುವ ಈ ಪಾತ್ರವನ್ನು ಐಶ್‌ ಬೇಬಿ ಲೀಲಾಜಾಲವಾಗಿ ನಟಿಸಿ ತಾನೆಂಥಾ ಪ್ರತಿಭಾವಂತ ನಟಿ ಅನ್ನೋದನ್ನು ಜಗತ್ತಿಗೆ ತೋರಿಸಿದ್ದರು.

Follow Us:
Download App:
  • android
  • ios