Asianet Suvarna News Asianet Suvarna News

ಮಿಸ್ಟರಿ ಮ್ಯಾನ್ ಬಗ್ಗೆ ನಾನೆ ಹೇಳ್ತೀನಿ; ಕೊನೆಗೂ ಮೌನ ಮುರಿದ ನಟಿ ಕೀರ್ತಿ ಸುರೇಶ್

ಮಿಸ್ಟರಿ ಮ್ಯಾನ್ ಬಗ್ಗೆ ನಾನೆ ಹೇಳ್ತೀನಿ ಎಂದು ನಟಿ ಕೀರ್ತಿ ಸುರೇಶ್ ಕೊನೆಗೂ ಮೌನ ಮುರಿದ್ದಾರೆ.

Keerthy Suresh breaks silence on relationship rumours sgk
Author
First Published May 22, 2023, 5:46 PM IST

ಸೌತ್ ಸಿನಿಮಾರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಮದುವೆ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಕೀರ್ತಿ ಸುರೇಶ್ ಮದ್ವೆ ಫಿಕ್ಸ್ ಆಗಿದೆ, ಉದ್ಯಮಿ ಜೊತೆ ಹಸಮಣೆ ಏರುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ. ಆದರೆ ಕೀರ್ತಿ ಸುರೇಶ್ ಇದ್ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡದೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಕೀರ್ತಿ ದಸರಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಾನಿ ಜೊತೆ ಕೀರ್ತಿ ನಟಿಸಿದ್ದರು. ಈ ನಡುವೆ ಕೀರ್ತಿ ಶೇರ್ ಮಾಡಿದ್ದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಿಗೂಢ ವ್ಯಕ್ತಿ ಜೊತೆ ಕೀರ್ತಿ ಶೇರ್ ಮಾಡಿದ್ದ ಫೋಟೋಗೆ ಅಭಿಮಾನಿಗಳು ಸ್ನೇಹಾನಾ ಪ್ರೀತಿನಾ ಎಂದು ಪ್ರಶ್ನೆ ಮಾಡಿದ್ದರು. 

ಇತ್ತೀಚೆಗಷ್ಟೆ ಕೀರ್ತಿ ಸುರೇಶ್ ಶೇರ್ ಮಾಡಿದ್ದ ಫೋಟೋ ಚರ್ಚೆಗೆ ಕಾರಣವಾಗಿತ್ತು. ಯಾರೀತ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಇಬ್ಬರೂ ಒಂದೇ ರೀತಿಯ ಬಟ್ಟೆ ಧರಿಸಿ ಕ್ಯಾಮರಾಗೆ ಪೋಸ್ ನೀಡಿದ್ದರು.  ಇಬ್ಬರನ್ನು ನೋಡಿ ಸ್ನೇಹಕ್ಕಿಂತ ಮಿಗಿಲಾದ ಬಂಧವಿದೆ ಎಂದು ಅಭಿಮಾನಿಗಳು ಹೇಳಿದ್ದರು. ಈ ಫೋಟೋ ಕೀರ್ತಿ ಶೇರ್ ಮಾಡುತ್ತಿದ್ದಂತೆ ಮದುವೆ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು. ಆದರೆ ಎಲ್ಲಾ ವದಂತಿಗೆ ಸ್ವತಃ ಕೀರ್ತಿ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಹೇಳುವವರೆಗೂ ಸುಮ್ಮನಿರಿ ಎಂದು ಹೇಳಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿರುವ ಕೀರ್ತಿ, 'ಇಂಥ ವಿಚಾರಕ್ಕೆ ನನ್ನ ಆತ್ಮೀಯ ಸ್ನೇಹಿತರನ್ನು ಎಳೆದು ತರಬೇಡಿ. ನಿಜವಾದ ಮಿಸ್ಟರಿ ಮ್ಯಾನ್ ಅನ್ನು ನಾನೆ ಬಹಿರಂಗ ಪಡಿಸುತ್ತೇನೆ. ಅಲ್ಲಿವರೆಗೂ ದಯವಿಟ್ಟು ಕಾಯಿರಿ' ಎಂದು ಹೇಳಿದ್ದಾರೆ. ಅಂದ್ಮೇಲೆ ಕೀರ್ತಿ ಇನ್ನೂ ಸಿಂಗಲ್ ಎನ್ನುತ್ತಿದ್ದಾರೆಯೇ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 

ಅಯ್ಯೋ ಕೀರ್ತಿ ಸುರೇಶ್‌ಗೆ ಏನಾಯ್ತು? ಫೋಟೋ ಹಂಚಿಕೊಂಡು ಭಾವುಕರಾದ ಸ್ಟಾರ್ ನಟಿ

ಅಂದಹಾಗೆ ಇತ್ತೀಚೆಗೆ ಫರ್ಹಾನ್ ಬಿನ್ ಲೈತ್ ಅವರ ಜೊತೆಗಿನ ಫೋಟೋವನ್ನು ಕೀರ್ತಿ ಶೇರ್ ಮಾಡಿದ್ದರು. ಆತ ರಿಯಲ್ ಎಸ್ಟೇಟ್ ಉದ್ಯಮಿ. ಫರ್ಹಾನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೀರ್ತಿ ಭಾಗಿಯಾಗಿದ್ದರು. ಇಬ್ಬರೂ ಬೆಸ್ಟ್ ಫ್ರೆಂಡ್ಸ್. ಒಂದೇ ರೀತಿಯ ಬಟ್ಟೆ ಧರಿಸಿ ಫೋಟೋಗೆ ಪೋಸ್ ನೀಡಿದ್ದರು. ಇಬ್ಬರೂ ಆಪ್ತವಾಗಿರುವ ಫೋಟೋ ಅಭಿಮಾನಿಗಳ ಅನುಮಾನಕ್ಕೆ ಕಾರಣವಾಗಿತ್ತು. ಬಳಿಕ ಕೀರ್ತಿ ಆಪ್ತ ಮೂಲಗಳು ಇಬ್ಬರೂ ಸ್ನೇಹಿತರು ಎಂದು ಬಹಿರಂಗ ಪಡಿಸಿ ವದಂತಿಗೆ ಬ್ರೇಕ್ ಹಾಕಿದ್ದರು.

ಇದು ಸ್ನೇಹನಾ ಪ್ರೀತಿನಾ? ನಿಗೂಢ ವ್ಯಕ್ತಿ ಜೊತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್‌ಗೆ ಫ್ಯಾನ್ಸ್ ಪ್ರಶ್ನೆ

ಕೀರ್ತಿ ಸಿನಿಮಾ ವಿಚಾರಕ್ಕೆ ಬರುವುದಾದರೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಮಹಾನಟಿ ಕೈಯಲ್ಲಿ 5 ಸಿನಿಮಾಗಳಿವೆ.  ತೆಲುಗಿನ 'ಭೋಲಾ ಶಂಕರ್' ಚಿತ್ರದಲ್ಲಿ ಚಿರಂಜೀವಿ ಸಹೋದರಿಯಾಗಿ ನಟಿಸುತ್ತಿದ್ದಾರೆ. ತಮಿಳಿನ 'ಮಾಮನನ್', 'ಸಿರೇನ್', 'ರಘು ತಾತ' ಹಾಗೂ 'ರಿವಾಲ್ವರ್ ರೀಟಾ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ರಘು ತಾತ' ಮಹಿಳಾ ಪ್ರಧಾನ ಸಿನಿಮಾ ಆಗಿದ್ದು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡ್ತಿದೆ. ಈ ಸಿನಿಮಾ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. 

Follow Us:
Download App:
  • android
  • ios