ಬಚ್ಚನ್ ಕುಟುಂಬದ ಕುಡಿ ಆರಾಧ್ಯ ಬಚ್ಚನ್ ಮಹಿಳಾ ಸುರಕ್ಷತೆ ಬಗ್ಗೆ ಧ್ವನಿ ಎತ್ತಿದ್ದಾಳೆ. ಶಾಲಾ ವಾರ್ಷಿಕೋತ್ಸವದಲ್ಲಿ ಹೆಣ್ಣುಮಕ್ಕಳ ಬಗ್ಗೆ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಸೋಷಿಯಲ್ ಮೀಡಿಯಾ ಫೇವರೇಟ್ ಕಿಡ್. ಆಗಾಗ ಏನದರೂ ಮಾಡುತ್ತಾ ಗಮನ ಸೆಳೆಯುತ್ತಾಳೆ. ಇದೀಗ ಈ ಪುಟಾಣಿಯ ವಿಡಿಯೊವೊಂದು ಟ್ರೆಂಡ್ ಆಗುತ್ತಿದೆ.
ಗುಡ್ ಬೈ 2019: ಟ್ವಿಟರ್‌ನಲ್ಲಿ ಭಾರೀ ಸದ್ದು ಮಾಡಿದ 'ಗಲ್ಲಿಬಾಯ್'
ಆರಾಧ್ಯ ಶಾಲಾ ವಾರ್ಷಿಕೋತ್ಸವದಲ್ಲಿ ಸೀರೆಯುಟ್ಟು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ್ದಾಳೆ. ಹೆಣ್ಣು ಮಕ್ಕಳನ್ನು ಗೌರವಿಸಲ್ಪಡುವ, ಸುರಕ್ಷಿತವಾಗಿರುವ ಜಗತ್ತು ನಿರ್ಮಾಣವಾಗಬೇಕು ಎಂದು ಹೇಳಿದ್ದಾಳೆ. 'ನಾನು ಹೆಣ್ಣು. ನಾನು ಸುರಕ್ಷಿತವಾಗಿರುವ ಜಗತ್ತಿನ ಬಗ್ಗೆ ಜಾಗೃತಳಾಗಿರುತ್ತೇನೆ. ಆ ಜಗತ್ತಿನಲ್ಲಿ ನಾನು ಸೇಫ್ ಆಗಿರಬೇಕು. ಗೌರವಿಸಲ್ಪಡಬೇಕು. ನನ್ನ ಧ್ವನಿ ಸೈಲೆಂಟ್ ಆಗಿರದೇ ಬೇರಯವರಿಗೆ ಅರ್ಥವಾಗುವಂತಿರಬೇಕು. ಮಾನವೀಯತೆ ತುಂಬಿರಬೇಕು' ಎಂದು ಹೇಳಿದ್ದಾರೆ. ಆರಾಧ್ಯಳ ಮಾತಿನಲ್ಲಿರುವ ಆತ್ಮವಿಶ್ವಾಸ, ದಿಟ್ಟತನ ನೋಡಿದರೆ ಶಹಬ್ಬಾಸ್ ಎನಿಸುತ್ತದೆ.
ಈ ಕಾರ್ಯಕ್ರಮದಲ್ಲಿ ಐಶ್ವರ್ಯ, ಅಭಿಷೇಕ್ ಜೊತೆ ಶಾರೂಕ್ ಖಾನ್, ಹೃತಿಕ್ ರೋಷನ್, ರವೀನಾ ಟಂಡನ್ ಭಾಗಿಯಾಗಿದ್ದರು. ಆರಾಧ್ಯ ಮಾತನ್ನು ಕೇಳಿ ಅಲ್ಲಿದ್ದವರು ಕರತಾಡನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
RCB ಗರ್ಲ್ ಹಿಂದಿಕ್ಕಿ ಹುಡುಗರ ನಿದ್ದೆ ಕದ್ದ ಸನ್ ರೈಸರ್ಸ್ ಸುಂದರಿ, ಯಾರೀಕೆ?
ಐಶ್ವರ್ಯಾ ರೈ ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವಾನ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
