ಬಂಧಿತ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಹಾಗೂ ಶಾ ಫೋಟೋ, ಹಳೇ ಫೋಟೋ ಹಂಚಿಕೊಂಡು ಟೀಕಿಸಿದ್ದ ಬಾಲಿವುಡ್ ನಿರ್ದೇಶಕ, ಅಧಿಕಾರಿ ಫೋಟೋ ಎಡಿಟ್ ಮಾಡಿದ್ದ ಅವಿನಾಶ್ ದಾಸ್ 

ಮುಂಬೈ(ಜು.19): ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಂಧಿತ ಐಎಎಸ್ ಅಧಿಕಾರಿ ಪೂಜಾ ಸಂಘಾಲ್ ಫೋಟೋ ಹಂಚಿಕೊಂಡು ಭಾರಿ ವಿವಾದ ಸೃಷ್ಟಿಸಿದ್ದ ಬಾಲಿವುಡ್ ಚಿತ್ರ ನಿರ್ದೇಶಕ ಅವಿನಾಶ್ ದಾಸ್ ಅರೆಸ್ಟ್ ಆಗಿದ್ದಾರೆ. ಅಹಮ್ಮದಾಬಾದ್ ಕ್ರೈಮ್ ಬ್ರ್ಯಾಂಚ್ ಪೊಲೀಸರು ಮುಂಬೈನಲ್ಲಿ ಅವಿನಾಶ್ ದಾಸ್ ಬಂಧಿಸಿದ್ದಾರೆ. ಅವಿನಾಶ್ ದಾಸ್ ವಿರುದ್ಧ ಮೇ 13 ರಂದು ಅಹಮ್ಮದಾಬಾದ್ ಡಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಅವಿನಾಶ್ ಬಂಧನವಾಗಿದೆ. ಅಮಿತ್ ಶಾ ಟೀಕಿಸಲು ನಿರ್ದೇಶಕ ಸಾಮಾಜಿಕ ಜಾಲತಾಣ ಖಾತೆ ಮೂಲಕ ವಿವಾದ ಸೃಷ್ಟಿಸಿದ್ದರು. ಇಲ್ಲಿ ಅಮಿತ್ ಶಾ ಟೀಕಿಸಿದ ಕಾರಣಕ್ಕೆ ಅವಿನಾಶ್ ಬಂಧನವಾಗಿಲ್ಲ. ಬದಲಾಗಿ ಅವಿನಾಶ್ ದಾಸ್ ಇತರ ಹಲವು ನಿಯಮ ಉಲ್ಲಂಘಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಬಂಧಿತ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಚಿತ್ರವನ್ನು ಮಾರ್ಪ್ ಮಾಡಿದ್ದಾರೆ. ಬಳಿಕ ರಾಷ್ಟ್ರಧ್ವಜ ಇರುವ ಉಡುಪು ಧರಿಸಿರುವಂತೆ ಮಾಡಿದ್ದಾರೆ. ಇದರಿಂದ ಅವಿನಾಶ್ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಪೂಜಾ ಸಿಂಘಾಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪೂಜಾ ಮನೆ ಮೇಲಿನ ದಾಳಿಯಲ್ಲಿ ಕಂತೆ ಕಂತೆ ಹಣ ಸೇರಿದಂತೆ ಚಿನ್ನಾಭರಣಗಳು ಪತ್ತೆಯಾಗಿತ್ತು. ಈ ವಿಡಿಯೋ ವೈರಲ್ ಆಗಿತ್ತು. ಈ ಘಟನೆಯನ್ನು ಮೂಲವಾಗಿಟ್ಟುಕೊಂಡು ಅಮಿತ್ ಶಾ ಹಾಗೂ ಬಿಜೆಪಿ ಟೀಕಿಸಲು ಅವಿನಾಶ್ ದಾಸ್ ಇಬ್ಬರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಟೀಕಿಸಿದ್ದಾರೆ. ಅಮಿತ್ ಶಾ ಹಾಗೂ ಪೂಜಾ ಸಿಂಘಾಲ್ ಚಿತ್ರವನ್ನು ಎಡಿಟ್ ಮಾಡಿದ್ದಾರೆ. ಪೂಜಾ ಸಿಂಘಾಲ್ ಭಾರತದ ರಾಷ್ಟ್ರಧ್ವಜ ತೊಟ್ಟ ಉಡುಪಾಗಿ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ. ಇಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಹಾಗೂ ಮಹಿಳೆಯ ಮಾರ್ಪಡ್ ಚಿತ್ರ ಬಳಕೆ ಮಾಡಿದ ಕಾರಣಕ್ಕೆ ಸೆಕ್ಷನ್ 469 ಹಾಗೂ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಾಗಿತ್ತು.

ದ್ರೌಪದಿ ರಾಷ್ಟ್ರಪತಿಯಾದರೆ ಪಾಂಡವರು ಯಾರು? ಮುಖ್ಯವಾಗಿ ಕೌರವರು ಯಾರು: RGV ವಿರುದ್ಧ ದೂರು

ಬಂಧನ ಸಾಧ್ಯತೆ ಅರಿತಿದ್ದ ಅವಿನಾಶ್ ದಾಸ್ ಇತ್ತೀಚೆಗೆ ಬಾಂಬೆ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ದಾಸ್ , ಭಾರತದಲ್ಲಿ ಸರ್ಕಾರವನ್ನು ಹಾಗೂ ಸಚಿವರನ್ನು ಟೀಕಿಸುವ ಹಕ್ಕು ಎಲ್ಲರಿಗಿದೆ ಎಂದು ವಾದಿಸಿದ್ದರು. ಉತ್ತಮ ಕೆಲಸ ಮಾಡಿದರೆ ಹೊಗಳುವ ಹಾಗೂ ತಪ್ಪು ದಾರಿಯಲ್ಲಿ ನಡೆದರೆ ಟೀಕಿಸುವ ಹಾಗೂ ಎಚ್ಚರಿಸುವ ಹಕ್ಕು ಭಾರತದ ಪ್ರತಿಯೊಬ್ಬರಿಗಿದೆ ಎಂದು ವಾದಿಸಿದ್ದರು. ಆದರೆ ಇಲ್ಲಿ ಅಮಿತ್ ಶಾ ಟೀಕಿಸಿದ ಕಾರಣಕ್ಕೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ರಾಷ್ಟ್ರಧ್ವಜಕ್ಕೆ ಅವಮಾನ, ಮಹಿಳೆಯ ಚಿತ್ರವನ್ನು ಎಡಿಟ್ ಮಾಡಿ ಬಳಸಿದ ಕಾರಣಕ್ಕೆ ದೂರು ದಾಖಲಾಗಿತ್ತು. ಇಷ್ಟೇ ಅಲ್ಲ ಫೋಟೋ ಜೊತೆಗೆ ಕ್ಯಾಪ್ಶನ್ ನೀಡಿದ್ದು, ಇದು ಜನರನ್ನು ದಾರಿತಪ್ಪಿಸುವ ಹಾಗೂ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರು ದಾಖಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕುರಿತು ಸಂಪೂರ್ಣ ಮಾಹಿತಿ ಪಡೆದ ಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಅವಿನಾಶ್ ದಾಸ್ ಮುಂಬೈ ನಿವಾಸದಿಂದ ಕಚೇರಿಗೆ ತೆರಳುತ್ತಿದ್ದ ವೇಳೆ ಅಹಮ್ಮದಾಬಾದ್ ಕ್ರೈಮ್ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ. 

ಪ್ರಶಾಂತ್‌ ನೀಲ್‌ ಚಿತ್ರರಂಗದ ವೀರಪ್ಪನ್, 100 ಕೋಟಿ ನಷ್ಟವಾಗಿದೆ: ನಿರ್ದೆಶಕ RGV ಗರಂ