ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡು ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ. ಪಾಂಡವರು, ಕೌರವರನ್ನು ಹುಡುಕುತ್ತಿರುವ ಆರ್‌ಜಿವಿ....

ಟಾಲಿವುಡ್ ಕಾಂಟ್ರವರ್ಸಿ ಕ್ರಿಯೇಟರ್‌ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ (Ram gopal Varma) ಸಣ್ಣ ಪುಟ್ಟ ವಿಚಾರಗಳಿಗೆ ಟಾಂಗ್ ಕೊಟ್ಟು ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಾರೆ. ಸಿನಿಮಾ ವಿಚಾರವಾಗಿ ಆರ್‌ಜಿವಿ ಏನೇ ಹೇಳಿದ್ದರೂ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ಅವಹೇಳಕಾರಿ ಟ್ವೀಟ್ ಮಾಡಿರುವುದಕ್ಕೆ ಬಿಜೆಪಿ ಲೀಡರ್‌ಗಳು ದೂರು ದಾಖಲಿಸಿದ್ದಾರೆ. 

ಆರ್‌ಜಿವಿ ಟ್ವೀಟ್: 

'ದ್ರೌಪತಿ ರಾಷ್ಟ್ರಪತಿಯಾದರೆ ಪಾಂಡವರು ಯಾರು? ಅದಕ್ಕೂ ಮುಖ್ಯವಾಗಿ ಕೌರವರು ಯಾರು?' ಎಂದು ಆರ್‌ಜಿವಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ರಾಷ್ಟ್ರಪತಿ ಅಭ್ಯಾರ್ಥಿ ಬಗ್ಗೆ ಈ ರೀತಿ ಕಾಮೆಂಟ್ ಮಾಡುವುದಕ್ಕೆ ಆರ್‌ಜಿವಿ ಯೋಗ್ಯತೆ ಇದ್ಯಾ ಇಲ್ವಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. 

ಜುಲೈ ತಿಂಗಳಿನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಬಿಜೆಪಿ ಮೈತ್ರಿಕೂಟಗಳ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮ ವಿರುದ್ಧ ಆರ್‌ಜಿವಿ ಕಾಮೆಂಟ್ ಮಾಡಿರುವುದಕ್ಕೆ ಬಿಜೆಪಿ ಮುಖಂಡರು ಖಂಡಿಸಿದ್ದಾರೆ. ತೆಲಂಗಾಣದ ಜಿ ನಾರಾಯಣ ರೆಡ್ಡಿ ಅವರು ಅಬಿಡ್ಸ್ ಪೊಲೀಸ್ ಠಾಣೆ ದೂರು ದಾಖಲಿಸಿದ್ದಾರೆ. 'ನಾವು ದೂರು ಸ್ವೀಕರಿಸಿ ಅದನ್ನು ಲೀಗಲ್ ತಂಡಕ್ಕೆ ಕಳುಹಿಸಲಾಗಿದೆ. ಲೀಗಲ್‌ ತಂಡದಿಂದ ಪ್ರತಿಕ್ರಿಯೆ ಬಂದ ನಂತರವೇ ನಾವು ಮುಂದುವರೆಯಲು ಸಾಧ್ಯವಾಗುತ್ತದೆ. ಆನಂತರ Scheduled Castes and Scheduled Tribes (Prevention of Atrocities) Act ಅಡಿಯಲ್ಲಿ ವರ್ಮಾ ವಿರುದ್ಧ ದೂರು ದಾಖಲಿಸಬಹುದು' ಎಂದು ಪೊಲೀಸರು ತಿಳಿಸಿದ್ದಾರೆ.

Scroll to load tweet…

ಟ್ವೀಟ್ ವೈರಲ್ ಆಗುತ್ತಿದ್ದಂತೆ ದೂರು ನೀಡಿರುವ ವಿಚಾರ ಕವಿಗೆ ಬೀಳುತ್ತಿದ್ದಂತೆ ಆರ್‌ಜಿವಿ ಟ್ವೀಟ್‌ ಬಗ್ಗೆ ಸ್ವಷ್ಟನೆ ಕೊಟ್ಟಿದ್ದಾರೆ. 'ಇದನ್ನು ಕೇವಲ ವ್ಯಂಗ್ಯವಾಗಿ ಹೇಳಲಾಗಿದೆ ಮತ್ತು ಬೇರೆ ಯಾವುದೇ ರೀತಿಯಲ್ಲಿ ಉದ್ದೇಶಿಸಿಲ್ಲ. ಮಹಾಭಾರತದಲ್ಲಿ ದ್ರೌಪದಿ ನನ್ನ ನೆಚ್ಚಿನ ಪಾತ್ರ ಅಲ್ಲದೆ ದ್ರೌಪದಿ ಎಂದು ಹೆಸರು ಇಟ್ಟುಕೊಳ್ಳುವವರ ಸಂಖ್ಯೆ ಬಹಳ ಕಡಿಮೆ. ಈಗ ದ್ರೌಪದಿ ಅಂತ ಹೆಸರು ಕೇಳಿದ ತಕ್ಷಣ ನಾನು ಮಹಾಭಾರತದ ಪಾತ್ರವನ್ನು ನೆನಪಿಸಿಕೊಂಡೆ. ಇದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ ಯಾರ ಭಾವನೆಗಳಿಗೂ ದಕ್ಕೆ ತರಲು ನಾನು ಈ ರೀತಿ ಹೇಳಿಕೆ ಟ್ವೀಟ್ ಮಾಡಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

56 ಲಕ್ಷ ರೂ. ವಂಚನೆ ಆರೋಪ; ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ದೂರು ದಾಖಲು

ಗೋಶಾಮಹಲ್‌ನ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ' ವರ್ಮಾ ಪ್ರತಿ ಸಲವೂ ವಿವಾದಾತ್ಮಕ ಹೇಳಿಕೆ ಕೊಟ್ಟು ಕಾಂಟ್ರವರ್ಸಿ ಕ್ರಿಯೇಟ್ ಮಾಡುತ್ತಾರೆ ಕಾಮೆಂಟ್ ಮಾಡುತ್ತಾರೆ' ಎಂದು ಹೇಳಿದ್ದಾರೆ.

Scroll to load tweet…

ದ್ರೌಪದಿ ಮುರ್ಮು ಯಾರು?

ಮುಂದಿನ ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ನೇತೃತ್ವದ ಎನ್‌ಡಿಎ, ಜಾರ್ಖಂಡ್‌ ನ ಮಾಜಿ ರಾಜ್ಯಪಾಲೆ, ಒಡಿಶಾ ಮೂಲದ ಆದಿವಾಸಿ ಮಹಿಳೆ ದೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದೆ. ದ್ರೌಪದಿ ಅವರು ಪ್ರಸಿದ್ಧ ಬುಡಕಟ್ಟು ನಾಯಕಿ ಮಾತ್ರವಲ್ಲದೆ ಸಮರ್ಥ ಆಡಳಿತಗಾರರೂ ಆಗಿದ್ದಾರೆ, ಇದನ್ನು ಅವರು ಜಾರ್ಖಂಡ್‌ನ ರಾಜ್ಯಪಾಲರಾಗಿ ಅಧಿಕಾರಾವಧಿಯಲ್ಲಿ ಸಾಬೀತುಪಡಿಸಿದ್ದಾರೆ. ಜಾರ್ಖಂಡ್ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲೆ ಎನಿಸಿಕೊಂಡಿದ್ದರು. ದ್ರೌಪದಿ ಮುರ್ಮು ಜನಿಸಿದ್ದು 1958ರ ಜೂನ್ 20 ರಂದು. 64 ವರ್ಷದ ಮುರ್ಮು ಅವರು ಜಾರ್ಖಂಡ್ ರಾಜ್ಯದ 9ನೇ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದರು. ದ್ರೌಪದಿ ಮುರ್ಮು (ಜನನ 20 ಜೂನ್ 1958) ಜಾರ್ಖಂಡ್‌ನ ಒಂಬತ್ತನೇ ಗವರ್ನರ್ ಆಗಿದ್ದ ಭಾರತೀಯ ರಾಜಕಾರಣಿ. ಅವರು ಭಾರತೀಯ ಜನತಾ ಪಕ್ಷದ ಸದಸ್ಯೆ.