ನಟಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಬಾಬು ಮದುವೆ ಬಳಿಕ ಹನಿಮೂನ್ ಹೋಗಿದ್ದಾರೆ. ಇಬ್ಬರೂ ದುಬೈನಲ್ಲಿ ಮಸ್ತ್ ಎಂಜಾಯ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. 

ಬಹುಭಾಷಾ ನಟಿ ಪವತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಬಾಬು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗಷ್ಟೆ ಇಬ್ಬರೂ ಹಸೆಮಣೆ ಏರಿದ್ದು ಮದುವೆ ವಿಡಿಯೋ ವೈರಲ್ ಆಗಿದೆ. ಇಬ್ಬರ ಮದುವೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಇದೀಗ ಇಬ್ಬರ ಹನಿಮೂನ್ ವಿಡಿಯೋ ಮತ್ತು ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ. ನರೇಶ್ ಮತ್ತು ಪವಿತ್ರಾ ಇಬ್ಬರೂ ಮದುವೆಯಾಗಿ ಕೆಲವೇ ದಿನಕ್ಕೆ ಹನಿಮೂನ್‌ಗೆ ಹೋಗಿದ್ದಾರೆ. ಅಂದಹಾಗೆ ಇಬ್ಬರೂ ದುಬೈಗೆ ಹಾರಿದ್ದು ದುಬೈ ಬೀದಿ ಬೀದಿಯಲ್ಲಿ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. 

ಪವಿತ್ರಾ ಲೋಕೇಶ್ ಮತ್ತು ನರೇಶ್ ಇಬ್ಬರೂ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿ ಪ್ರೇಮದ ವಿಚಾರ ಕಳೆದ ವರ್ಷ ಬಹಿರಂಗವಾಗಿತ್ತು. ಪವಿತ್ರಾ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ನರೇಶ್ ಬಾಬು ಪತ್ನಿ ರಮ್ಯಾ ಸಿಡಿದೆದಿದ್ದರು. ದೊಡ್ಡ ರಂಪ ಮಾಡಿದ್ದರು. ಇಬ್ಬರನ್ನೂ ಮದುವೆಯಾಗಲೂ ತಾನು ಬಿಡಲ್ಲ ಎಂದು ಹೇಳಿದ್ದರು. ಪತ್ನಿ ರಮ್ಯಾ ವಿರೋಧದ ನಡುವೆಯೂ ಪವಿತ್ರಾ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿರುವ ನರೇಶ್ ಇದೀಗ ಪತ್ನಿ ಜೊತೆ ಹನಿಮೂನ್ ಕೂಡ ಎಂಜಾಯ್ ಮಾಡುತ್ತಿದ್ದಾರೆ. 

ದುಬೈನ ಮರುಭೂಮಿಯಲ್ಲಿ, ಬೀದಿ ಬೀದಿಗಳಲ್ಲಿ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಇಬ್ಬರ ಸಾಕಷ್ಟು ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಬ್ಬರ ಫೋಟೋ ಮತ್ತು ವಿಡಿಯೋಗಳಿಗೆ ತರಹೇವಾರಿ ಕಾಮೆಂಟ್ ಹರಿದುಬರುತ್ತಿವೆ. ಎಷ್ಟೇ ಟ್ರೋಲ್ ಮಾಡಿದರೂ, ಕಾಲೆಳೆದರು ತಲೆಕೆಡಿಸಿಕೊಳ್ಳದ ಈ ಜೋಡಿ ಮದುವೆಯಾಗಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

Scroll to load tweet…

ಅಕ್ರಮವನ್ನು ಸಕ್ರಮವಾಗಿಸಿದ ಪವಿತ್ರ-ನರೇಶ್‌: ಸಂಬಂಧಕ್ಕೆ ಮದುವೆಯ ಮುದ್ರೆ ಒತ್ತಿದ್ರಾ?

ಎರಡು ಮನಸ್ಸು, ಮೂರು ಗಂಟು, ಹೊಸ ಬಂಧ 

ಮದುವೆ ವಿಡಿಯೋ ಶೇರ್ ಮಾಡುವ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ವಿಚಾರ ಅಧಿಕೃತಗೊಳಿಸಿದರು. ವಿಡಿಯೋ ಶೇರ್ ಮಾಡಿ ಅಭಿಮಾನಿಗಳಿಂದ ಆಶೀರ್ವಾದ ಕೇಳಿದ್ದರು. 'ಎರಡು ಮನಸ್ಸು, ಮೂರು ಗಂಟು, ಏಳು ಹೆಜ್ಜೆ ಹೊಸ ಬಂಧ' ಎಂದು ಬರೆದುಕೊಂಡಿದ್ದರು. ವಿಡಿಯೋ ಜೊತೆಗೆ ನರೇಶ್ ತಮಗಿಬ್ಬರಿಗೆ ಎಲ್ಲರ ಆಶೀರ್ವಾದ ಬೇಕು ಎಂದು ಕೋರಿದ್ದರು.

ನರೇಶ್‌ಗೆ ಅಶ್ಲೀಲ ಚಿತ್ರ ನೋಡೋ ಚಟವಿದೆ: ಮೂರನೇ ಪತ್ನಿ ರಮ್ಯಾ

ಹೊಸ ವರ್ಷಕ್ಕೆ ಮದುವೆ ಸುದ್ದಿ ಬಹಿರಂಗ 

ನರೇಶ್ ಮತ್ತು ಪವಿತ್ರಾ ಇಬ್ಬರೂ ಹೊಸ ವರ್ಷಕ್ಕೆ ವಿಡಿಯೋ ಶೇರ್ ಮಾಡಿ ಮದುವೆ ಸುದ್ದಿ ಬಹಿರಂಗ ಪಡಿಸಿದ್ದರು. ಇಬ್ಬರೂ ರೊಮ್ಯಾಂಟಿಕ್ ವಿಡಿಯೋ ಮೂಲಕ ದಾಂಪತ್ಯಕ್ಕೆ ಕಾಲಿಟುವ ವಿಚಾರ ಅಧಿಕೃತಗೊಳಿಸಿದ್ದರು. ವಿಡಿಯೋದಲ್ಲಿ ತನ್ನ ಪ್ರಪಂಚಕ್ಕೆ ಸ್ವಾಗತ ಎಂದು ಪವಿತ್ರಾ ಲೋಕೇಶ್‌‌ಗೆ ಹೇಳಿದ್ದರು. ಬಳಿಕ ಕೇಕ್ ಕತ್ತರಿ ಇಬ್ಬರೂ ಒಬ್ಬರಿಗೊಬ್ಬರು ತಿನಿಸಿ ಲಿಪ್ ಕಿಸ್ ಮಾಡಿದ್ದರು. ಈ ಮೂಲಕ ಈ ವರ್ಷವೇ ಇಬ್ಬರೂ ದಾಂಪತ್ಯಕ್ಕೆ ಕಾಲಿಡುತ್ತಿರುವುದಾಗಿ ಹೇಳಿದ್ದರು.