Asianet Suvarna News Asianet Suvarna News

ನರೇಶ್‌ಗೆ ಅಶ್ಲೀಲ ಚಿತ್ರ ನೋಡೋ ಚಟವಿದೆ: ಮೂರನೇ ಪತ್ನಿ ರಮ್ಯಾ

ಸೂಪರ್ ಸ್ಟಾರ್ ಕೃಷ್ಣ ಜೊತೆ ಸಂಬಂಧ ಇಟ್ಕೊಂಡಿದಿಯಾ ಎಂದು ಆರೋಪ ಮಾಡಿದ್ದರು ಎಂದು ಪತಿ ನರೇಶ್ ವಿರುದ್ಧ ರಮ್ಯಾ ಕಿಡಿ ಕಾರಿದ್ದಾರೆ. 

Naresh alleged I had an affair with Super star Krishna says Ramya Raghupathi sgk
Author
First Published Jan 6, 2023, 12:43 PM IST

ಕನ್ನಡದ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಇಬ್ಬರೂ ಲಿಪ್ ಕಿಸ್ ವಿಡಿಯೋ ಮೂಲಕ ಮದುವೆ ಸುದ್ದಿ ಬಹಿರಂಗ ಪಡಿಸುವ ಮೂಲಕ ಅಚ್ಚರಿ ಮೂಡಿಸಿದರು. ನಾವು ಸ್ನೇಹಿತರಷ್ಟೆ ಎನ್ನುತ್ತಿದ್ದ ಈ ಲವ್ ಬರ್ಡ್ಸ್ ಇದೀಗ ವಿಚಾರ ಬಹಿರಂಗ ಪಡಿಸುತ್ತಿದ್ದೆ ನರೇಶ್ ಪತ್ನಿ ರಮ್ಯಾ ರಘುಪತಿ ಕಿಡಿದೆದಿದ್ದಾರೆ.  ಯಾವುದೇ ಕಾರಣಕ್ಕೂ ಇಬ್ಬರಿಗೂ ಮದುವೆಯಾಗಲು ಬಿಡಲ್ಲ ಎಂದು ಹೇಳಿದ್ದಾರೆ. ತೆಲುಗು ಯೂಟ್ಯೂಬ್ ಮಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಮ್ಯಾ, ಯಾವುದೇ ಕಾರಣಕ್ಕೂ ನರೇಶ್‌ಗೆ ವಿಚ್ಛೇದನ ನೀಡಿಲ್ಲ, ಅವರಿಬ್ಬರನ್ನೂ ಮದುವೆಯಾಗಲು ಬಿಡಲ್ಲ ಎಂದು ಹೇಳಿದ್ದಾರೆ. ಈಗಾಗಲೇ ನರೇಶ್ ಮೂರು ಮದುವೆಯಾಗಿದ್ದಾರೆ. ಅವರೆಲ್ಲರಿಗೂ ಮಕ್ಕಲಾಗಿದ್ದಾರೆ. ಈಗಾಗಲೇ ತುಂಬಾ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ರಮ್ಯಾ ಆಕ್ರೋಶ ಹೊರಹಾಕಿದರು. 

ಸೂಪರ್ ಸ್ಟಾರ್ ಕೃಷ್ಣ ಜೊತೆ ಆಫೇರ್ ಇದೆ ಎಂದಿದ್ದರು,

ತನ್ನ ಮಗನಿಗೆ ಅಪ್ಪನ ಅವಶ್ಯಕತೆ ಇದೆ. ಹಾಗಾಗಿ ಗಂಡನನ್ನು ಬೇರೆಯವರ ಜೊತೆ ಮತ್ತೆ ಮದುವೆಯಾಗಲು ಬಿಡಲ್ಲ ಎಂದು ರಮ್ಯಾ ಹೇಳಿದ್ದಾರೆ. ಜೊತೆಗೆ ನರೇಶ್ ಬಾಬು ಬಗ್ಗೆ ಕೆಲವು ಅಚ್ಚರಿಕರ ವಿಚಾರಗಳನ್ನು ರಮ್ಯಾ ಬಿಚ್ಚಿಟ್ಟರು. ಸೂಪರ್ ಸ್ಟಾರ್, ನರೇಶ್ ಬಾಬು ತಂದೆ ಕೃಷ್ಣ ಅವರೊಂದಿಗೆ ಸಂಬಂಧ ಇದೆ ಎಂದು ನನ್ನ ಮೇಲೆ ಆರೋಪ ಮಾಡಿದ್ದರು ಎಂದು ನರೇಶ್ ವಿರುದ್ಧ ರಮ್ಯಾ ಗಂಭೀರ ಆರೋಪ ಮಾಡಿದ್ದಾರೆ. ಕೃಷ್ಣ ನಕಲಿ ಸಹಿ ಇರುವ ಪತ್ರ ನರೇಶ್ ಬಳಿ ಇದೆ ಎಂದು ಹೇಳಿದ್ದಾರೆ. 

ಲಿಪ್ ಕಿಸ್ ವಿಡಿಯೋ ಮೂಲಕ ಮದುವೆ ಸುದ್ದಿ ಬಹಿರಂಗ ಪಡಿಸಿದ ಪವಿತ್ರಾ ಲೋಕೇಶ್-ನರೇಶ್

ನರೇಶ್ ಪಾರ್ಟ್ ವಿಡಿಯೋ ನೋಡುತ್ತಾರೆ 

ನರೇಶ್ ಯಾವಾಗಲು ಪಾರ್ನ್ ವಿಡಿಯೋಗಳನ್ನು ನೋಡುತ್ತಾರೆ. ಮಗನ ಬಳಿಯೇ ತಗಲಾಕೊಂಡಿದ್ದಾರೆ ಎಂದು ರಮ್ಯಾ ಹೇಳಿದ್ದಾರೆ. 'ನನ್ನ ಮಗ ರಣ್ವೀರ್ ಒಮ್ಮೆ ಅವರ ಕೆಟ್ಟ ವಿಡಿಯೋ ವಿಡಿಯೋ ನೋಡುತ್ತಿರುವುದನ್ನು ನೋಡಿದ್ದ. ನನ್ನ ಬಳಿ ಬಂದು ಅಪ್ಪ ಮಹಿಳೆಯ ಬೆತ್ತಲೇ ವಿಡಿಯೋ ನೋಡುತ್ತಿದ್ದಾರೆ ಎಂದು ಹೇಳಿದ' ಎಂದು ರಮ್ಯಾ ಗಂಭೀರ ಆರೋಪ ಮಾಡಿದ್ದಾರೆ. 

ನರೇಶ್ ಜೊತೆ ಮದುವೆ ವಿವಾದ ಬೆನ್ನಲ್ಲೇ ದೊಡ್ಡ ಸಿನಿಮಾಗಳಿಂದ ಪವಿತ್ರಾ ಲೋಕೇಶ್ ಔಟ್?

ನರೇಶ್-ಪವಿತ್ರಾ ಲೋಕೇಶ್ ವಿಡಿಯೋ ವೈರಲ್ 

ಈ ವರ್ಷವೇ ಪವಿತ್ರಾ ಲೋಕೇಶ್ ಮತ್ತು ನರೇಶ್ ಹಸೆಮಣೆ ಏರುತ್ತಿದ್ದಾರೆ. ಈ ಮೂಲಕ ಇಬ್ಬರ ನಡುವಿನ ಸಂಬಂಧವನ್ನು ಅಧಿಕೃತಗೊಳಿಸುತ್ತಿದ್ದಾರೆ. ಅಂದಹಾಗೆ ಮದುವೆ ಬಗ್ಗೆ ಸ್ವತಃ ನರೇಶ್ ಅವರೇ ಬಹಿರಂಗ ಪಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ರೊಮ್ಯಾಂಟಿಕ್ ವಿಡಿಯೋ ಶೇರ್ ಮಾಡಿದ್ದಾರೆ. ನರೇಶ್ ಶೇರ್ ಮಾಡಿರುವ ವಿಡಿಯೋದಲ್ಲಿ ತನ್ನ ಪ್ರಪಂಚಕ್ಕೆ ಪವಿತ್ರಾ ಲೋಕೇಶ್‌ ಅವರಿಗೆ ಸ್ವಾಗತ ಕೋರಿದ್ದಾರೆ. ಕೇಕ್ ಕತ್ತರಿ ಇಬ್ಬರೂ ಒಬ್ಬರಿಗೊಬ್ಬರು ತಿನಿಸಿ ಲಿಪ್ ಕಿಸ್ ಮಾಡಿದ್ದಾರೆ. ವಿಡಿಯೋ ಕೊನೆಯಲ್ಲಿ ಸದ್ಯದಲ್ಲಿ ಇಬ್ಬರೂ ಮದುವೆಯಾಗುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಪವಿತ್ರಾನರೇಶ್ (#PavitraNaresh) ಎಂದು ಹ್ಯಾಟ್ ಕೂಡ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. 

 

Follow Us:
Download App:
  • android
  • ios