ನಟಿ ಕಂಗನಾ ಮುಂಬೈಗೆ ಹೊರಟು ನಿಂತಾಗ ಇತ್ತ ಬಿಎಂಸಿ ಆಕೆಯ ಮುಂಬೈ ಬಂಗಲೆಯಲ್ಲಿ ಅತಿಕ್ರಮಣ ಭಾಗ ಎಂದು ಗುರತಿಸಿ ಬುಲ್ಡೋಸರ್ ಹತ್ತಿಸಿತ್ತು. ಬಾಂಬೆ ಹೈಕೋರ್ಟ್ ಮೊರೆ ಹೋದ ನಟಿ ಸಂಜೆಯೊಳಗೆ ತಮ್ಮ ಬಂಗಲೆ ತೆರವು ತಡೆಯುವುದಕ್ಕೆ ಸಫಲರಾಗಿದ್ದಾರೆ. 

ಬುಧವಾರವಷ್ಟೇ ನಟಿ ಕಂಗನಾ ರಣಾವತ್ ಮುಂಬೈ ಕಚೇರಿಯನ್ನು ತೆರವು ಮಾಡಿದ ಬಿಎಂಸಿ(ಬೃಹತ್ ಮುಂಬೈ ಕಾರ್ಪೊರೇಷನ್) ಇದೀಗ ಮನೀಷ್ ಮಲ್ಹೋತ್ರಾ ಬಂಗಲೆ ಮೇಲೆ ಕಣ್ಣಿಟ್ಟಿದೆ.

ನಟಿ ಕಂಗನಾಳ ಮುಂಬೈ ಆಫೀಸ್ ಮೇಲೆ ಬುಲ್ಡೋಝರ್ ಹತ್ತಿಸಿದ ಮಹಾರಾಷ್ಟ್ರ ಸರ್ಕಾರ

ನನ್ನ ಬಂಗಲೆಯಲ್ಲಿ ಅಕ್ರಮ ಭಾಗವಿಲ್ಲ. ಸೆ.30ರ ತನಕ ತೆರವು ಕಾರ್ಯಾಚರಣೆ ಮಾಡೋದನ್ನು ಕೊರೋನಾ ಪ್ರೊಟೋಕಾಲ್‌ನಲ್ಲಿ ನಿಷೇಧಿಸಲಾಗಿದೆ ಎಂದು ಟ್ವೀಟ್ ಮಾಡಿದ್ದರು. ಇದೀಗ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾಗೆ ಸಂಕಟ ಎದುರಾಗಿದೆ.

ಇದೀಗ ಮನೀಷ್ ಮಲ್ಹೋತ್ರಾ ಮೇಲೆ ಬಿಎಂಸಿ ಕಣ್ಣಿಟ್ಟಿದ್ದು, ತಮ್ಮ ಖಾಸಗಿ ಮನೆಯನ್ನು ವ್ಯವಹಾರಿಕ ಜಾಗವಾಗಿ ಪರಿವರ್ತಿಸಿದ ಬಗ್ಗೆ ವಾರದೊಳಗೆ ಸ್ಪಷ್ಟನೆ ನೀಡಬೇಕೆಂದು ನೋಟಿಸ್ ಕಳುಹಿಸಿದೆ.

ಕಂಗನಾಗೆ ಗೆಲುವು: ತೆರವು ಕಾರ್ಯಾಚರಣೆಗೆ ಸ್ಟೇ ಕೊಟ್ಟ ಬಾಂಬೆ ಹೈಕೋರ್ಟ್

ಮನೀಷ್ ಮಲ್ಹೋತ್ರಾ ಮನೆಯೂ ಪಾಲಿ ಹಿಲ್ಸ್‌ನಲ್ಲಿದ್ದು, ಅಕ್ರಮವಾಗಿ ಕೆಲವು ಕಟ್ಟಡ ಕಟ್ಟಿರುವ ಬಗ್ಗೆ ಬಿಎಂಸಿ ಆಕ್ಷೇಪ ವ್ಯಕ್ತಪಡಿಸಿದೆ. ಕಂಗನಾಳ ಬಂಗಲೆ ತೆರವುಗೊಳಿಸಿದ ಬಿಎಂಸಿ ನಡೆಯನ್ನು ಬಾಲಿವುಡ್ ಸ್ಟಾರ್ಸ್‌ ತೀವ್ರವಾಗಿ ಖಂಡಿಸಿದ್ದಾರೆ.