Asianet Suvarna News Asianet Suvarna News

ಗುಟ್ಕಾ ಆಯ್ತು ಈಗ ಆಲ್ಕೋಹಾಲ್ ಜಾಹೀರಾತು ತಿರಸ್ಕರಿಸಿದ ಅಲ್ಲು ಅರ್ಜುನ್; ಪುಷ್ಪ ಸ್ಟಾರ್ ನಿರ್ಧಾರಕ್ಕೆ ಫ್ಯಾನ್ಸ್ ಮೆಚ್ಚುಗೆ

ಪುಷ್ಪ ಸ್ಟಾರ್ ತಂಬಾಕು ಜಾಹೀರಾತು ಬಳಿಕ ಆಲ್ಕೋಹಾಲ್ ಬ್ರಾಂಡ್‌ನ ಜಾಹೀರಾತನ್ನು ನಿರಾಕರಿಸಿದ್ದಾರೆ.  ಅಲ್ಲು ಅರ್ಜುನ್ ಅವರ ಈ ನಿರ್ಧಾರ ಅಭಿಮಾನಿಗಳ ಹೃದಯಗೆದ್ದಿದೆ. 

after gutka allu arjun rejects whisky surrogate advertising sgk
Author
Bengaluru, First Published Aug 11, 2022, 1:48 PM IST

ತೆಲುಗು ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಪಾರ್ಟ್-2ಗಾಗಿ ಸಜ್ಜಾಗುತ್ತಿದ್ದಾರೆ.  ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಹೀರೋ ಆಗಿ ಹೊರಹೊಮ್ಮಿರುವ ಅಲ್ಲು ಅರ್ಜುನ್ ಬೇಡಿಕೆ ಹಾಗೂ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ. ಉತ್ತರ ಭಾರತದಲ್ಲೂ ಅಲ್ಲು ಅರ್ಜುನ್ ಬೇಡಿಗೆ ಹೆಚ್ಚಾಗಿದೆ. ಸಿನಿಮಾ ಮಾತ್ರವಲ್ಲದೆ ಜಾಹೀರಾತು ಕಂಪನಿಗಳು ಸಹ ಅಲ್ಲು ಅರ್ಜುನ್ ಹಿಂದೆ ಬಿದ್ದಿವೆ. ಆದರೆ ಅಲ್ಲು ಅರ್ಜುನ್ ಅಳೆದು ತೂಗಿ ಜಾಹೀರಾತು ಮತ್ತು ಸಿನಿಮಾಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಇತ್ತೀಚಿಗೆ ಸಾಕಷ್ಟು ಟಿವಿ ಜಾಹೀರಾತುಗಳಿಗೆ ಅಲ್ಲು ಅರ್ಜುನ್ ಸಹಿ ಮಾಡಿದ್ದಾರೆ. ಅನೇಕ ಜಾಹೀರಾತುಗಳು ಪ್ರಸಾರವಾಗುತ್ತಿವೆ. ಆದರೆ ಇತ್ತೀಚಿಗಷ್ಟೆ ಅಲ್ಲು  ಅರ್ಜುನ್ ತಂಬಾಕು ಜಾಹೀರಾತು ರಿಜೆಕ್ಟ್ ಮಾಡಿ ಮಾದರಿಯಾಗಿದ್ದರು. ಇದೀಗ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. 

ಪುಷ್ಪ ಸ್ಟಾರ್ ತಂಬಾಕು ಜಾಹೀರಾತು ಬಳಿಕ ಆಲ್ಕೋಹಾಲ್ ಬ್ರಾಂಡ್‌ನ ಜಾಹೀರಾತನ್ನು ನಿರಾಕರಿಸಿದ್ದಾರೆ.  ಅಲ್ಲು ಅರ್ಜುನ್ ಅವರ ಈ ನಿರ್ಧಾರ ಅಭಿಮಾನಿಗಳ ಹೃದಯಗೆದ್ದಿದೆ. ಅಂದಹಾಗೆ ಆಲ್ಕೋಹಾಲ್ ಬ್ರಾಂಡ್ ಗಳನ್ನು ನೇರವಾಗಿ ಪ್ರಚಾರ ಮಾಡುವುದಿಲ್ಲ. ಆಯಾಯ ಬ್ರಾಂಡ್ ಗಳ ಹೆಸರಲ್ಲಿ ಬೇರೆ ವಸ್ತುಗಳನ್ನು ಅಂದರೆ ನೀರು, ಗ್ಲಾಸ್ ಗಳನ್ನು ಪ್ರಚಾರ ಮಾಡುವ ಮೂಲಕ ಪರೋಕ್ಷವಾಗಿ ಆಲ್ಕೋಹಾಲ್ ಬ್ರಾಂಡ್ ಪ್ರಚಾರ ಮಾಡುತ್ತಾರೆ. ಭಾರತದ ಅನೇಕ ಸ್ಟಾರ್ ಕಲಾವಿದರು ಆಲ್ಕೋಹಾಲ್ ಬ್ರಾಂಡ್ ಪ್ರಮೋಟ್ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ, ಅಲಿಯಾ ಭಟ್, ಸಮಂತಾ ಸೇರಿದಂತೆ ಅನೇಕರು ಆಲ್ಕೋಹಾಲ್ ಪ್ರಚಾರ ಮಾಡಿದ್ದಾರೆ. ಆದರೆ ಅಲ್ಲಿ ಅರ್ಜುನ್ ಅಭಿಮಾನಿಗಳನ್ನು ತಪ್ಪು ದಾರಿಗೆ ಎಳೆಯುವಂತ ಯಾವುದೇ ಜಾಹೀರಾತುಗಳನ್ನು ಮಾಡದಿರಲು ನಿರ್ಧರಿಸಿದ್ದಾರೆ. 

ಅಂದಹಾಗೆ ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಆಲ್ಕೋಹಾಲ್ ಬ್ರಾಂಡ್ ಒಂದರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಅಲ್ಲು ಅರ್ಜುನ್ ಗೆ ಬರೋಬ್ಬರಿ 10 ಕೋಟಿ ರೂಪಾಯಿ ಆಫರ್ ಮಾಡಲಾಗಿತ್ತಂತೆ. ಆದರೆ ಅಲ್ಲು ಅರ್ಜುನ್ ಮುಲಾಜಿಲ್ಲದೆ ತಿರಸ್ಕರಿಸಿದ್ದಾರೆ. 

ಹಿಂದಿ ಚಿತ್ರರಂಗ ಕಂಫರ್ಟ್ ಜೋನ್ ಅಲ್ಲ; ಬಿ ಟೌನ್ ಬಗ್ಗೆ ಹೀಗಂದಿದ್ದೇಕೆ ಅಲ್ಲು ಅರ್ಜುನ್?

ತಂಬಾಕು ಜಾಹೀರಾತು ತಿರಸ್ಕರಿಸಿದ್ದ ಅಲ್ಲು ಅರ್ಜುನ್ 

ಜಾಹೀರಾತು ಮಾಡುವಲ್ಲಿ ಅಲ್ಲು ಅರ್ಜುನ್ ತುಂಬಾ ಜಾಗರೂಕರಾಗಿ ಇರುತ್ತಾರೆ. ಆರೋಗ್ಯಕ್ಕೆ ಹಾನಿ ಮಾಡುವ, ತಪ್ಪು ಸಂದೇಶಗಳನ್ನು ನೀಡುವ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಅಲ್ಲು ಅರ್ಜುನ್ ಇಷ್ಟಪಡುವುದಿಲ್ಲ. ಹಾಗಾಗಿ ಎಷ್ಟೇ ಕೋಟಿ ಕೊಟ್ಟರು ಇಂತಹ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅಲ್ಲು ನಿರ್ಧರಿಸಿದ್ದಾರೆ. ಅಲ್ಲದೆ ಅಲ್ಲು ಅರ್ಜುನ್ ಸಹ ತಂಬಾಕು ಸೇವಿಸುವುದಿಲ್ಲ. ಹಾಗಾಗಿ ಇಂತ ಜಾಹೀರಾತುಗಳಿಂದ ಅಭಿಮಾನಿಗಳಿಗೂ ಸ್ಫೂರ್ತಿ ಪಡೆಯುವಂತೆ ಮಾಡಲು ಇಷ್ಟಪಡುವುದಿಲ್ಲ.  ಹಾಗಾಗಿ ಇಂಥ ಜಾಹೀರಾತುಗಳನ್ನು ರಿಜೆಕ್ಟ್ ಮಾಡುವ ಮೂಲಕ ಜವಾಬ್ದಾರಿಯುತ ನಟ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಅಬ್ಬಾ..ಪುಷ್ಪ-2ಗಾಗಿ ಇಷ್ಟೊಂದು ಸಂಭಾವನೆ ಏರಿಸಿಕೊಂಡ್ರಾ ಅಲ್ಲು ಅರ್ಜುನ್ ..

ಪಾನ್ ಮಸಾಲ ಜಾಹೀರಾತು ಮಾಡಲ್ಲ ಎಂದ ಯಶ್ 

ಇನ್ನು ರಾಕಿಂಗ್ ಸ್ಟಾರ್ ಯಶ್ ಕೂಡ ಪಾನ್ ಮಸಾಲ ಜಾಹೀರಾತು ತಿರಸ್ಕರಿಸಿದ್ದರು. ಯಶ್ ಅವರ ನಿರ್ಧಾರ ಕೂಡ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು.  ಕೆಜಿಎಫ್-2 ಸಿನಿಮಾ ಮೂಲಕ ದೇಶ-ವಿದೇಶದಲ್ಲಿ ಸದ್ದು ಮಾಡುತ್ತಿರುವ ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಅವರು ಕೋಟಿ ಕೋಟಿ ರೂಪಾಯಿಯ ಅತೀ ದೊಡ್ಡ ಮೊತ್ತದ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಯಶ್ ನಿರಾಕರಿಸುವ ಮೂಲಕ ಮಾದರಿಯಾಗಿದ್ದರು. ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನಿಸಬಾರದು ಎನ್ನುವ ಕಾರಣಕ್ಕೆ ಕೋಟಿ ಕೊಟ್ಟರು ಇಂಥ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಯಶ್ ನಿರಾಕರಿಸಿದ್ದರು.

Follow Us:
Download App:
  • android
  • ios