Asianet Suvarna News Asianet Suvarna News

ಹಿಂದಿ ಚಿತ್ರರಂಗ ಕಂಫರ್ಟ್ ಜೋನ್ ಅಲ್ಲ; ಬಿ ಟೌನ್ ಬಗ್ಗೆ ಹೀಗಂದಿದ್ದೇಕೆ ಅಲ್ಲು ಅರ್ಜುನ್?

ಉತ್ತರ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಪುಷ್ಪ ನಟ ಅಲ್ಲು ಅರ್ಜುನ್ ಹಿಂದಿ ಸಿನಿಮಾಗಳಲ್ಲಿ ನಟಿಸಲು ಎರಡು ಮೂರು ಸಲ ಯೋಚಿಸುತ್ತಿರುವುದು ಯಾಕೆ? 

Hindi films out of my comfort zone says telugu actor Allu Arjun vcs
Author
Bangalore, First Published Jul 19, 2022, 12:08 PM IST

ಟಾಲಿವುಡ್ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್‌ ಪುಷ್ಪ ಸಿನಿಮಾ ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿರುವ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಉತ್ತರ ಭಾರತದಲ್ಲೂ ಪುಷ್ಪ ಡೈಲಾಗ್, ಪುಷ್ಪವಲ್ಲಿ ಹಾಡು ದೊಡ್ಡ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಅಲ್ಲು ಅರ್ಜುನ್ ಯಾರದು ಎಂದು ಪ್ರಶ್ನೆ ಮಾಡುತ್ತಿದ್ದ ನಿರ್ಮಾಪಕರು ಮತ್ತು ನಿರ್ದೇಶಕರು ಕಾಲ್‌ಶೀಟ್‌ನಲ್ಲಿ ಡೇಟ್‌ ಪಡೆಯಲು ಕಾಯುತ್ತಿದ್ದಾರೆ. ತೆಲುಗು ನನ್ನ ಮಾತೃಭಾಷೆ ನನ್ನ ಮೊದಲ ಆಯ್ಕೆ ಎನ್ನುವ ಅಲ್ಲು ಹಿಂದಿ ಸಿನಿಮಾ ಒಪ್ಪಿಕೊಳ್ಳುತ್ತಾರಾ?

'ಹಿಂದಿ ಸಿನಿಮಾಗಳಲ್ಲಿ ನಟಿಸುವುದು ನನ್ನ ಕಂಫರ್ಟ್‌ ಝೋನ್‌ನಿಂದ ಕೊಂಚ ದೂರವೇ. ಆದರೆ ಸಿನಿಮಾಗೆ ನನ್ನ ಅಗತ್ಯವಿದ್ದರೆ ಖಂಡಿತ ನಾನು ಮಾಡುವೆ' ಎಂದು ಇತ್ತೀಚಿಗೆ ನಡೆದ ಮ್ಯಾಗಜಿನ್‌ ಕವರ್‌ ಸ್ಟೋರಿಯಲ್ಲಿ ಹೇಳಿದ್ದಾರೆ. 'ನನಗೆ ಅನೇಕ ಆಫರ್‌ಗಳು ಬರುತ್ತಿದೆ ಆದರೆ ಯಾವುದೂ ಅಷ್ಟು ಚೆನ್ನಾಗಿಲ್ಲ ಮತ್ತು ನನಗೆ ಎಕ್ಸೈಟಿಂಗ್ ಆಗಿಲ್ಲ. ಶೀಘ್ರದಲ್ಲಿ ಆಗಬಹುದು ಎನ್ನುವ ನಿರೀಕ್ಷೆ ಇದೆ. ಮತ್ತೊಂದು ಚಿತ್ರರಂಗದಲ್ಲಿ ಕೆಲಸ ಮಾಡುವುದಕ್ಕೆ ಧೈರ್ಯ ಬೇಕಿದೆ' ಎಂದಿದ್ದಾರೆ. 

Hindi films out of my comfort zone says telugu actor Allu Arjun vcs

ಸೆಕೆಂಡ್‌ ರೋಲ್ ಬೇಡ:

'ಇಷ್ಟು ವರ್ಷ ನಾವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ನಮಗೆ ಬರುವ ಪಾತ್ರಗಳು ಕೂಡ ಪ್ರಮುಖವಾಗಿರುತ್ತದೆ. ಹೀಗಾಗಿ ಬೇರೆ ಪಾತ್ರಗಳು ನನಗೆ ಅಷ್ಟು ಇಂಟ್ರೆಸ್ಟ್‌ ಕೊಡುವುದಿಲ್ಲ. ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಈಗಾಗಲೆ ಅರ್ಥವಾಗಿರುತ್ತದೆ. ಜ್ಞಾನವಿರುವ ವ್ಯಕ್ತಿ ಎರಡನೇ ನಾಯಕನ ಪಾತ್ರ ಮಾಡಿ ಕಥೆ ಹೀಗಿದೆ ಹಾಗಿದೆ ಎಂದು ಬಂದು ಕೇಳುವುದಿಲ್ಲ ಇದು ಅವರ ವೃತ್ತಿ ಜೀವನವನ್ನು ಡ್ಯಾಮೇಜ್ ಮಾಡುತ್ತದೆ. ಯಾರೇ ಆದರೂ ಪ್ರಮುಖ ಪಾತ್ರ ನಿರ್ವಹಿಸಲು ಇಷ್ಟ ಪಡುತ್ತಾರೆ' ಎಂದು ಅಲ್ಲು ಹೇಳಿದ್ದಾರೆ. 

ಪುಷ್ಪ ಚಿತ್ರಕ್ಕೆ 350 ಕೋಟಿ ಕೊಡಲು ಡಿಮ್ಯಾಂಡ್ ಇಟ್ಟ ಅಲ್ಲು ಅರ್ಜುನ್?

'ಪುಷ್ಪ-2' ಸಿನಿಮಾದ ಸ್ಕ್ರಿಪ್ಟ್ ಸಂಪೂರ್ಣ ಬದಲಾವಣೆ?

ಪುಷ್ಪ ಸಕ್ಸಸ ಬಳಿಕ ಪುಷ್ಪ-2 ಮೇಲೆ ಒತ್ತಡ ಹೆಚ್ಚಾಗಿದೆ. ಹಾಗಾಗಿ ಅದ್ಭುತವಾಗಿ ಸಿನಿಮಾವನ್ನು ಕಟ್ಟಿಕೊಡುವ ಉದ್ದೇಶದಿಂದ ಸ್ಕ್ರಿಪ್ಟ್‌ನಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಲು ಸಿನಿಮಾತಂಡ ನಿರ್ಧರಿಸಿದಿಯಂತೆ. ಕೆಜಿಎಫ್-2 ಸಿನಿಮಾದ ದೊಡ್ಡ ಮಟ್ಟದ ಯಶಸ್ಸು ಅನೇಕ ನಿರ್ದೇಶಕರ ನಿದ್ದೆ ಗೆಡಿಸಿದೆ. ಅದರಲ್ಲಿ ಸುಕುಮಾರ್ ಕೂಡ ಒಬ್ಬರು. ಹಾಗಾಗಿ ಪುಷ್ಪ-2 ಸಿನಿಮಾ ಕಥೆಯನ್ನು ಮತ್ತಷ್ಟು ಆಸಕ್ತಿದಾಯಕವಾಗಿ ಮತ್ತು ತೀವ್ರವಾಗಿ ಕಟ್ಟಿಕೊಡಲು ನಿರ್ಧರಿಸಿದ್ದಾರೆ. ಹಾಗಾಗಿ ಕಥೆಯಲ್ಲಿ ಸಂಪೂರ್ಣ ಬದಲಾವಣೆ ಮಾಡಲು ಸುಕುಮಾರ್ ನಿರ್ಧರಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಹೊಸ ಲುಕ್‌ಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್ ಹಿಗ್ಗಾಮುಗ್ಗಾ ಟ್ರೋಲ್: ವಡಾ ಪಾವ್ ಎಂದು ಕಾಲೆಳೆದ ನೆಟ್ಟಿಗರು

ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಮೊದಲ ಬಾರಿಗೆ ರಶ್ಮಿಕಾ ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದರು. ಈ ಸಿನಿಮಾದಲ್ಲಿ ರಶ್ಮಿಕಾ ಡಿ ಗ್ಲಾಮ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇನ್ನು ವಿಶೇಷ ಎಂದರೆ ಸಿನಿಮಾದಲ್ಲಿ ಮಲಯಾಳಂ ಖ್ಯಾತ ನಟ ಫಹಾದ್ ಫಾಸಿಲ್ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದ ಕೊನೆಯಲ್ಲಿ ಎಂಟ್ರಿ ಕೊಟ್ಟಿದ್ದ ಫಹಾದ್ 2ನೇ ಭಾಗದಲ್ಲಿ ಸಂಪೂರ್ಣವಾಗಿ ಇರಲಿದ್ದಾರೆ. ಹಾಗಾಗಿ ಪುಷ್ಪ-2 ಮತ್ತಷ್ಟು ಕುತೂಹಲ ಹಚ್ಚಿಸಿದೆ.

Follow Us:
Download App:
  • android
  • ios