Asianet Suvarna News Asianet Suvarna News

ಅಬ್ಬಾ..ಪುಷ್ಪ-2ಗಾಗಿ ಇಷ್ಟೊಂದು ಸಂಭಾವನೆ ಏರಿಸಿಕೊಂಡ್ರಾ ಅಲ್ಲು ಅರ್ಜುನ್ ..

ಪುಷ್ಪ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಅಲ್ಲು ಅರ್ಜುನ್ ಪಾರ್ಟ್-2ನಲ್ಲಿ ನಟಿಸಲು ಭಾರಿ ಮೊತ್ತದ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಸಖತ್ ವೈರಲ್ ಆಗಿದೆ. ಅಲ್ಲಿ ಸಂಭಾವನೆ ತೆಲುಗು ಸಿನಿಮಾರಂಗದಲ್ಲೇ ಅತಿ ಹೆಚ್ಚು ಎಂದು ಹೇಳಲಾಗುತ್ತಿದೆ.

Allu Arjun doubles his remuneration for Pushpa: The Rule after push succes sgk
Author
Bengaluru, First Published Apr 30, 2022, 4:34 PM IST

ತೆಲುಗು ಸ್ಟಾರ್ ಅಲ್ಲು ಅರ್ಜುನ್(Allu Arjun) ಸದ್ಯ ಪುಷ್ಪ-2(Pushpa 2) ಸಿನಿಮಾ ಚಿತ್ರೀಕರಣಕ್ಕೆ ಸಿದ್ಧರಾಗುತ್ತಿದ್ದಾರೆ. ಪುಷ್ಪ ಸಿನಿಮಾದ ದೊಡ್ಡ ಮಟ್ಟದ ಹಿಟ್ ಪಾರ್ಟ್-2 ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪುಷ್ಪ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಅಲ್ಲು ಅರ್ಜುನ್ ಪಾರ್ಟ್-2ನಲ್ಲಿ ನಟಿಸಲು ಭಾರಿ ಮೊತ್ತದ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಸಖತ್ ವೈರಲ್ ಆಗಿದೆ. ಅಲ್ಲಿ ಸಂಭಾವನೆ ತೆಲುಗು ಸಿನಿಮಾರಂಗದಲ್ಲೇ ಅತಿ ಹೆಚ್ಚು ಎಂದು ಹೇಳಲಾಗುತ್ತಿದೆ.

ಪುಷ್ಪ; ದಿ ರೈಸ್ ಸಿನಿಮಾದ ಬಳಿಕ ಪುಷ್ಪ; ದಿ ರೂಲ್ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಸಜ್ಜಾಗುತ್ತಿದ್ದಾರೆ. ಸುಕುಮಾರ್ ಸಾರಥ್ಯದಲ್ಲಿ ಬಂದ ಪುಷ್ಪ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದೆ. ರಕ್ತ ಚಂದನ ದಂದೆಯ ಬಗ್ಗೆ ಇರುವ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಜೊತೆಗೆ ಡಿ ಗ್ಲಾಮ್ ಆಗಿ ಅಭಿಮಾನಿಗಳ ಮುಂದೆ ಬಂದಿದ್ದರು. ಅಲ್ಲು ಅರ್ಜುನ್ ಲುಕ್ ಮತ್ತು ಅಭಿನಯ ಅಭಿಮಾನಿಗಳ ಮನಗೆದ್ದಿತ್ತು. ಇದೀಗ ಪಾರ್ಟ್-2 ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಸಿನಿ ಪ್ರಿಯರು ಅಲ್ಲು ಅರ್ಜುನ್ ನನ್ನು ತೆರೆಮೇಲೆ ನೋಡಲು ಕಾರತರಾಗಿದ್ದಾರೆ. ಈ ನಡುವೆ ಅಲ್ಲು ಅರ್ಜುನ್ ಸಂಭಾವನೆ ಸದ್ದು ಮಾಡುತ್ತಿದ್ದಾರೆ.

KGF 2 ನೋಡಿ ಅಲ್ಲು ಅರ್ಜುನ್ ದಿಲ್ಖುಷ್! ತೆರೆ ಮೇಲೆ ಒಂದಾಗ್ತಾರ ಪುಷ್ಪ ರಾಜ್-ರಾಕಿ ಭಾಯ್.?

ಪಾರ್ಟ್-2ಗಾಗಿ ಅಲ್ಲು ಸಂಭಾವನೆಯನ್ನು ಡಬಲ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಅಲ್ಲು ಅರ್ಜುನ್ ಪುಷ್ಪ; ದಿ ರೈಸ್ ಗಾಗಿ 50 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಇದೀಗ ಪುಷ್ಪ; ದಿ ರೂಲ್ ಗಾಗಿ ಅಲ್ಲು ಅರ್ಜುನ್ ಬರೋಬ್ಬರಿ 100 ಕೋಟಿಗೆ ಏರಿಸಿಕೊಂಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಒಂದು ವೇಳೆ ಅಲ್ಲು ಅರ್ಜುನ್ ಪಡೆಯುತ್ತಿರುವ ಸಂಭಾವನೆ ಮೊತ್ತ ನಿಜವೇ ಆಗಿದ್ದರೆ ತೆಲುಗಿನ ಅತೀ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ ಆಗಿದ್ದಾರೆ. ಆದರೆ ಈ ಬಗ್ಗೆ ಸಿನಿಮಾತಂಡ ಅಥವಾ ಅಲ್ಲು ಅರ್ಜುನ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

KGF 2ಗೆ ಅಲ್ಲು ಅರ್ಜುನ್ ಫಿದಾ; ಯಶ್, ಪ್ರಶಾಂತ್ ನೀಲ್ ಬಗ್ಗೆ ಹೇಳಿದ್ದೇನು?

ಪುಷ್ಪ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಬಾಲಿವುಡ್ ನಲ್ಲಿ ಪುಷ್ಪ ಅತೀ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ದಾಖಲೆ ಮಾಡಿದೆ. ತೆಲುಗು ಜೊತೆಗೆ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿಯಲ್ಲೂ ಬಿಡುಗಡೆಯಾಗಿತ್ತು. ಇದೀಗ ಪಾರ್ಟ್-2ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಕೂಡ ಡಿ ಗ್ಲಾಮ್ ಆಗಿ ಮಿಂಚಿದ್ದಾರೆ. ಇನ್ನು ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ವಿಲನ್ ಆಗಿ ಮಿಂಚಿದ್ದಾರೆ. ಮೊದಲ ಭಾಗದ ಕೊನೆಯಲ್ಲಿ ಎಂಟ್ರಿ ಕೊಟ್ಟಿರುವ ಫಹಾದ್ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಫಹಾದ್ ಮತ್ತು ಅಲ್ಲು ಅರ್ಜುನ್ ಕಾಳಗ ನೋಡಲು ಸಿನಿ ಪ್ರೇಕ್ಷಕರು ಕಾತರರಾಗಿದ್ದಾರೆ.

Follow Us:
Download App:
  • android
  • ios