RK ಸ್ಟುಡಿಯೋಸ್ ಬಳಿಕ ಗೋದ್ರೇಜ್ ಪ್ರಾಪರ್ಟೀಸ್ ಪಾಲಾದ ರಾಜ್ ಕಪೂರ್ ಐಕಾನಿಕ್ ಬಂಗಲೆ
ಬಾಲಿವುಡ್ ಶೋ ಮ್ಯಾನ್ ಎಂದೇ ಖ್ಯಾತಿಗಳಿಸಿದ್ದ ರಾಜ್ ಕಪೂರ್ ಅವರ ಐಕಾನಿಕ್ ಬಂಗಲೆಯನ್ನು ಗೋದ್ರೇಜ್ ಪ್ರಾಪರ್ಟೀಸ್ ಖರೀದಿ ಮಾಡಿದೆ.
ಬಾಲಿವುಡ್ ಶೋ ಮ್ಯಾನ್ ಎಂದೇ ಖ್ಯಾತಿಗಳಿಸಿದ್ದ ರಾಜ್ ಕಪೂರ್ ಅವರ ಐಕಾನಿಕ್ ಬಂಗಲೆಯನ್ನು ಗೋದ್ರೇಜ್ ಪ್ರಾಪರ್ಟೀಸ್ ಖರೀದಿ ಮಾಡಿದೆ. ಖ್ಯಾತ ನಟ ಮತ್ತು ನಿರ್ದೇಶಕ ರಾಜ್ ಕಪೂರ್ ತನ್ನ ಕೊನೆಯ ದಿನಗಳವರೆಗೂ ಅದೇ ಬಂಗಲೆಯಲ್ಲಿದ್ದರು. 1988ರಲ್ಲಿ ರಾಜ್ ಕಪೂರ್ ಕೊನೆಯುಸಿರೆಳೆದರು. ಈ ಮೊದಲು ಅಂದರೆ ನಾಲ್ಕು ವರ್ಷಗಳ ಹಿಂದೆ ರಾಜ್ ಕಪೂರ್ ಅವರ ಪ್ರಸಿದ್ಧ ಆರ್ ಕೆ ಸ್ಟೂಡಿಯೋ ಅನ್ನು ಗೋದ್ರೇಜ್ ಪ್ರಾಪರ್ಟೀಸ್ ಖರೀದಿ ಮಾಡಿತ್ತು.
ರಾಜ್ ಕಪೂರ್ ಬಂಗಲೆಯನ್ನು ಬರೋಬ್ಬರಿ 500 ಕೋಟಿ ರೂಪಾಯಿಗೆ ಖರೀದಿ ಮಾಡಿದೆ ಎನ್ನುವ ಮಾತು ಕೇಳಿಬಂದಿದೆ. ಈ ಬಗ್ಗೆ ಗೋದ್ರೇಜ್ ಯಾವುದೆ ಮಾಹಿತಿ ರಿವೀಲ್ ಮಾಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೋದ್ರೇಜ್ ಪ್ರಾಪರ್ಟೀಸ್‌ನ ಎಂಡಿ ಮತ್ತು ಸಿಇಒ ಗೌರವ್ ಪಾಂಡೆ, 'ಈ ಐಕಾನಿಕ್ ಪ್ರಾಜೆಕ್ಟ್ ನಮ್ಮನ್ನು ಸೇರಿರುವುದು ತುಂಬಾ ಸಂತೋಷವಾಗಿದೆ. ಈ ಅವಕಾಶವನ್ನು ನಮಗೆ ವಹಿಸಿಕೊಟ್ಟಿದ್ದಕ್ಕಾಗಿ ಕಪೂರ್ ಕುಟುಂಬಕ್ಕೆ ಕೃತಜ್ಞರಾಗಿರುತ್ತೇವೆ. ಈ ಯೋಜನೆಯು ಚೆಂಬೂರಿನಲ್ಲಿ ನಮ್ಮ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲು ನಮಗೆ ಅನುಮತಿಸುತ್ತದೆ' ಎಂದು ಹೇಳಿದ್ದಾರೆ.
ಈ ಬಗ್ಗೆ ರಾಜ್ ಕಪೂರ್ ಅವರ ಪುತ್ರ ಮತ್ತು ನಟ ರಣಧೀರ್ ಕಪೂರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 'ಚೆಂಬೂರಿನಲ್ಲಿರುವ ಈ ವಸತಿ ಆಸ್ತಿಯು ನಮ್ಮ ಕುಟುಂಬಕ್ಕೆ ಹೆಚ್ಚಿನ ಭಾವನಾತ್ಮಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ಸ್ಥಳದ ಮುಂದಿನ ಹಂತದ ಅಭಿವೃದ್ಧಿಗಾಗಿ ಈ ಶ್ರೀಮಂತ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲು ಗೋದ್ರೇಜ್ ಪ್ರಾಪರ್ಟೀಸ್‌ನೊಂದಿಗೆ ಮತ್ತೊಮ್ಮೆ ಸಹಯೋಗಿಸಲು ನಾವು ಸಂತೋಷಪಡುತ್ತೇವೆ' ಎಂದು ಹೇಳಿದ್ದಾರೆ. ರಣಧೀರ್ ಕಪೂರ್ ದಿವಂಗತ ನಟ ರಾಜ್ ಕಪೂರ್ ಮತ್ತು ಅವರ ಪತ್ನಿ ಕೃಷ್ಣಾ ಕಪೂರ್ ಪುತ್ರ. ರಾಜ್ ಕುಮಾರ್ ಮಕ್ಕಳಲ್ಲಿ ಉಳಿದಿರುವುದು ಈಗ ರಣಧೀರ್ ಮಾತ್ರ.
ರಣಬೀರ್ ಕಪೂರ್ ತಾತ ರಾಜ್ ಕಪೂರ್ ಆರ್‌ಕೆ ಸ್ಟುಡಿಯೋದ ದೀಪಾವಳಿ ಸೆಲೆಬ್ರೆಷನ್
ರಣಧೀರ್ ಕಪೂರ್ ಅವರ ಕಿರಿಯ ಸಹೋದರರಾದ ರಿಷಿ ಕಪೂರ್ ಮತ್ತು ರಾಜೀವ್ ಕಪೂರ್ 2020 ಮತ್ತು 2021 ರಲ್ಲಿ ನಿಧನರಾದರು. ಹಿಂದಿ ಚಿತ್ರರಂಗದ ಶೋಮ್ಯಾನ್ ಎಂದೇ ಕರೆಸಿಕೊಳ್ಳುತ್ತಿದ್ದ ರಾಜ್ ಕಪೂರ್ ಅನೇಕ ಕ್ಲಾಸಿಕ್ ಸಿನಿಮಾಗಳನ್ನು ನೀಡಿದ್ದಾರೆ. ಅವಾರ, ಶ್ರೀ 420, ಜಾಗತೇ ರಹೋ ಸೇರಿದಂತೆ ಅನೇಕ ಪ್ರಸಿದ್ಧ ಚಲನಚಿತ್ರಗಳನ್ನು ಮಾಡಿದ್ದಾರೆ.
Nargis ಅವರ ಪ್ರೀತಿ ಕಳೆದುಕೊಂಡ ನೋವು ಮರೆಯಲು ಸಿಗರೇಟಿನಿಂದ ಸುಟ್ಟುಕೊಳ್ಳುತ್ತಿದ್ದರು Raj Kapoor
ಚೆಂಬೂರಿನಲ್ಲಿರುವ ಬಂಗಲೆಯನ್ನು 1946 ರಲ್ಲಿ ರಾಜ್ ಕಪೂರ್ ಖರೀದಿಸಿದರು. ಈ ಬಂಗಲೆಯನ್ನು ಖರೀದಿಸಲು ರಹೇಜಸ್ ಮತ್ತು ಕುಕ್ರೇಜಸ್ ಸೇರಿದಂತೆ ಅನೇಕ ಬಿಲ್ಡರ್‌ಗಳು ಮುಂದೆಬಂದಿದ್ದರು. ಆದರೆ ರಾಜ್ ಕಪೂರ್ ಪುತ್ರಿ ರಿತು ನಂದಾ ಮತ್ತು ಪತ್ನಿ ಕೃಷ್ಣಾ ಕಪೂರ್ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದರು. 2018 ರಲ್ಲಿ ಕೃಷ್ಣ ಮತ್ತು 2020 ರಲ್ಲಿ ರಿತು ಮತ್ತು ಮತ್ತೊಬ್ಬ ಪುತ್ರಿ ರೀಮಾ ಜೈನ್ ಅವರ ಮರಣದ ನಂತರ ಮಾರಾಟಕ್ಕೆ ಮುಂದಾಗಿದ್ದು ಇದೀಗ ಮಾರಾಟ ಕೂಡ ಆಗಿದೆ.