ರಣಬೀರ್ ಕಪೂರ್ ತಾತ ರಾಜ್ ಕಪೂರ್ ಆರ್‌ಕೆ ಸ್ಟುಡಿಯೋದ ದೀಪಾವಳಿ ಸೆಲೆಬ್ರೆಷನ್
ಬಾಲಿವುಡ್‌ನಲ್ಲಿ ಹೋಳಿ, ದೀಪಾವಳಿ ಮುಂತಾದ ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಹಬ್ಬಗಳನ್ನು ವಿಶೇಷವಾಗಿ ಮತ್ತು ಬಹಳ ಸಂಭ್ರಮದಿಂದ ಆಚರಿಸುವ ಪದ್ದತಿ ಹಿಂದಿನಿಂದ ನಡೆದು ಬಂದಿದೆ. ವಾಸ್ತವವಾಗಿ, ಮುಂಬೈನ ಅನೇಕ ದೊಡ್ಡ ಸ್ಟುಡಿಯೋಗಳಲ್ಲಿ ಹಬ್ಬಗಳನ್ನು ಆಚರಿಸುವ ಪ್ರವೃತ್ತಿ ಇದೆ. ಇದರಲ್ಲಿ ರಣಬೀರ್ ಕಪೂರ್ (Ranbir Kapoor) ಅವರ ತಾತ ರಾಜ್ ಕಪೂರ್ (Raj Kapoor) ಅವರ ಆರ್ ಕೆ ಸ್ಟುಡಿಯೋ (RK STUDIO) ಕೂಡ ಸೇರಿದೆ.
ಮುಂಬೈನ ಆರ್ ಕೆ ಸ್ಟುಡಿಯೋದಲ್ಲಿ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದ ಕಾಲವೊಂದಿತ್ತು. ದೀಪಾವಳಿ ಆಚರಣೆಗೆ ದೊಡ್ಡ ಸೆಲೆಬ್ರಿಟಿಗಳು ಆರ್‌ಕೆ ಸ್ಟುಡಿಯೋಸ್‌ಗೆ ಆಗಮಿಸುತ್ತಿದ್ದರು.
ಭಾರತೀಯ ಚಲನಚಿತ್ರೋದ್ಯಮದ ದೊಡ್ಡ ಶೋಮ್ಯಾನ್ ಆಗಿದ್ದ ರಾಜ್ ಕಪೂರ್ ಅವರ ಹೋಳಿ ಮಾತ್ರವಲ್ಲ, ದೀಪಾವಳಿಯೂ ಅತ್ಯಂತ ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡುತ್ತಿದ್ದರು. ದೀಪಾವಳಿಯಂದು, ರಾಜ್ ಕಪೂರ್ ತನ್ನ ಇಡೀ ತಂಡ ಮತ್ತು ಸ್ನೇಹಿತರಿಗೆ ದೊಡ್ಡ ಉಡುಗೊರೆಗಳನ್ನು ನೀಡುತ್ತಿದ್ದರು.
ಈ ಪಟ್ಟಿಯಲ್ಲಿ ನರ್ಗೀಸ್, ಸಂಗೀತ ಸಂಯೋಜಕ ಶಂಕರ್ ಜೈಕಿಶನ್, ಗೀತರಚನೆಕಾರರಾದ ಶೈಲೇಂದ್ರ ಮತ್ತು ಹಸರತ್ ಜೈಪುರಿ, ಗಾಯಕರಾದ ಲತಾ ಮಂಗೇಶ್ಕರ್, ಮುಖೇಶ್ ಮತ್ತು ಮನ್ನಾ ಡೇ ಸೇರಿದ್ದಾರೆ.
ರಾಜ್ ಕಪೂರ್ ಈ ಸೂಪರ್‌ಹಿಟ್ ತಂಡದೊಂದಿಗೆ ಅನೇಕ ಸೂಪರ್‌ಹಿಟ್ ಚಲನಚಿತ್ರಗಳನ್ನು ನೀಡಿದರು. ಅದೇ ಸಮಯದಲ್ಲಿ, ಅವರ ಇಡೀ ಕುಟುಂಬವು ಸೂಪರ್ಸ್ಟಾರ್‌ಗಳಿಂದ ತುಂಬಿತ್ತು.
'ದಿ ಕಪೂರ್ಸ್: ದಿ ಫಸ್ಟ್ ಫ್ಯಾಮಿಲಿ ಆಫ್ ಇಂಡಿಯನ್ ಸಿನಿಮಾ' ಬರೆದಿರುವ ಪತ್ರಕರ್ತ ಮಧು ಜೈನ್, ಮಹಾನ್ ಶೋಮ್ಯಾನ್ ರಾಜ್ ಕಪೂರ್ ಮತ್ತು ಅವರ ಆರ್‌ಕೆ ಸ್ಟುಡಿಯೋ ಬಗ್ಗೆ ಬರೆದಿದ್ದಾರೆ.
'ರಾಜ್ ಕಪೂರ್ ಅವರ ಹೋಳಿ-ದೀಪಾವಳಿ ಸಂದರ್ಭದಲ್ಲಿ ಪಾರ್ಟಿಗಳಿಗೆ ಈ ಸ್ಟುಡಿಯೋ ಸಾಕ್ಷಿಯಾಗಿದೆ. ರಾಜ್ ಕಪೂರ್ ತಮ್ಮ ಹೆಚ್ಚಿನ ಸಮಯವನ್ನು ಇಲ್ಲಿ ಕಳೆಯುತ್ತಿದ್ದ'ರಾಜ್ ಕಪೂರ್ರು.
, 'ರಾಜ್ ಕಪೂರ್ ಅವರು ತಮ್ಮ ಹುಟ್ಟುಹಬ್ಬ ಮತ್ತು ದೀಪಾವಳಿ ಹಾಗೂ ಹೋಳಿ ಹಬ್ಬವನ್ನು ಆರ್ ಕೆ ಸ್ಟುಡಿಯೋದಲ್ಲಿಯೇ ಆಚರಿಸುತ್ತಿದ್ದರು.