ಬಿಗ್‌ಬಾಸ್ 14ರ ಮನೆಯಿಂದ ಹೊರಬಂದ ಗಾಯಕ ಜಾನ್ ಕುಮಾರ್ ತಂದೆ ಕುಮಾರ್ ಸಾನು ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಜಾನ್ ಕುಮಾರ್ ಬೆಳೆಸಿದ ರೀತಿ ಬಗ್ಗೆ ಮಾತನಾಡಿದ ವಿಡಿಯೋ ಬಗ್ಗೆಯೂ ಜಾನ್ ಮಾತನಾಡಿದ್ದಾರೆ.

ನಾವು ಮೂವರು ಸಹೋದರರು. ನನ್ನನ್ನು ತಾಯಿ ರಿತಾ ಭಟ್ಟಾಚಾರ್ಯ ಅವರೇ ಬೆಳೆಸಿದರು. ತಂದೆ ಎಲ್ಲಿಯೂ ನನ್ನ ಬದುಕಿನ ಭಾಗವಾಗಲಿಲ್ಲ. ನಾನೊಬ್ಬ ಗಾಯಕ ಎಂಬಲ್ಲಿ ನನ್ನ ತಂದೆ ಒಮ್ಮೆಯೂ ಬೆಂಬಲಿಸಲಿಲ್ಲ.

ದುಬೈನಲ್ಲಿ ಸಿಂಗರ್ ಕಪಲ್ ಹನಿಮೂನ್: ಲಿಪ್‌ಲಾಕ್ ವೈರಲ್

ಬಹಳಷ್ಟಿ ಸೆಲೆಬ್ರಿಟಿಗಳು ವಿಚ್ಛೇದಿತರಾಗಿ ಮರು ವಿವಾಹವಾಗಿದ್ದಾರೆ. ಅವರೆಲ್ಲ ತಮ್ಮ ಮೊದಲ ಪತ್ನಿಯ ಮಕ್ಕಳೊಂದಿಗೆ ಚೆನ್ನಾಗಿದ್ದಾರೆ. ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಆದರೆ ನನ್ನ ವಿಚಾರದಲ್ಲಿ ಹಾಗಾಗಿಲ್ಲ ಎಂದಿದ್ದಾರೆ.

ನನ್ನ ತಂದೆ ನಾನು ಮರಾಠಿ ಭಾಷೆ ಬಗ್ಗೆ ಮಾಡಿದ ಹೇಳಿಕೆಗೆ ಕ್ಷಮೆ ಕೇಳಿದ್ದು ತಿಳಿಯಿತು. ಅವರಿಗೆ ನನ್ನ ಬಗ್ಗೆ ಮಿಶ್ರ ಭಾವನೆ ಇದೆ. ಈ ಬಗ್ಗೆ ಕೇಳಲು ಯಾರಿಗೂ ಅಧಿಕಾರ ಇಲ್ಲ ಎಂದಿದ್ದಾರೆ.

ಅಪಘಾತದಲ್ಲಿ ಅರ್ಧ ದೇಹವೇ ಹೋಯ್ತು, ಬದುಕುವ ಛಲ ಬಿಡಲಿಲ್ಲ, ಗರ್ಲ್‌ಫ್ರೆಂಡ್ ಕೈಬಿಡಲಿಲ್ಲ..!

ನಿಮ್ಮ ಸಂಗಾತಿ ಜೊತೆ ಭಿನ್ನಾಭಿಪ್ರಾಯವಿರಬಹುದು. ಅದನ್ನು ಮಕ್ಕಳ ಮೇಲೆ ತೋರಿಸಬಾರದು ಎಂದಿದ್ದಾರೆ ಜಾನ್. ನಾನು ನೆಪೊಟಿಸಂ ಪ್ರಾಡಕ್ಸ್ ಅಲ್ಲ. ನಾನು ನನ್ನ ಬದುಕನ್ನು ನಿರ್ಮಿಸಿಕೊಂಡಿದ್ದೇನೆ, ಇನ್ನೂ ಹೀಗೆಯೇ ಮುಂದುವರಿಯುತ್ತದೆ ಎಂದಿದ್ದಾರೆ