Asianet Suvarna News Asianet Suvarna News

ಅಪ್ಘನ್ ನಿರಾಶ್ರಿತನ ಫೋಟೋ ವೈರಲ್, ಬಿಗ್ ಬಿನಾ ಇದು ಅಂತ ಕೇಳ್ತಿದ್ದಾರೆ ನೆಟ್ಟಿಗರು!

ಮುಂಬೈ: ಅಫ್ಘಾನ್ ನಿರಾಶ್ರಿತರೊಬ್ಬರ ಭಾವಚಿತ್ರವೊಂದು ಇಂಟರ್‌ನೆಟ್‌ನಲ್ಲಿ ಮರಳಿ ಸುತ್ತು ಹೊಡೆಯುತ್ತಿದ್ದು, ನೆಟ್ಟಿಗರು ಇವರ ಫೋಟೋ ನೋಡಿ ಅಮಿತಾಭ್ ಬಚ್ಚನ್‌, ಫೋಟೋ ನಾ ಇದು ಅಂತ ಗೊಂದಲಕ್ಕೊಳಗಾಗುತ್ತಿದ್ದಾರೆ. ಈ ಭಾವಚಿತ್ರಕ್ಕೂ ಬಾಲಿವುಡ್‌ ಹಿರಿಯ ನಟ ಅಮಿತಾಬ್ ಬಚ್ಚನ್ (Amitabh Bachchan) ಅವರಿಗೂ ಸಾಮ್ಯತೆ ಇದೆ ಎಂಬುದು ನೆಟ್ಟಿಗರ ಅಭಿಮತವಾಗಿದೆ.

Afghan Refugee photo surfaces in Online netizens asks is this Big B akb
Author
Bangalore, First Published Jun 22, 2022, 10:41 AM IST

ಮುಂಬೈ: ಅಫ್ಘಾನ್ ನಿರಾಶ್ರಿತರೊಬ್ಬರ ಭಾವಚಿತ್ರವೊಂದು ಇಂಟರ್‌ನೆಟ್‌ನಲ್ಲಿ ಮರಳಿ ಸುತ್ತು ಹೊಡೆಯುತ್ತಿದ್ದು, ನೆಟ್ಟಿಗರು ಇವರ ಫೋಟೋ ನೋಡಿ ಅಮಿತಾಭ್ ಬಚ್ಚನ್‌, ಫೋಟೋ ನಾ ಇದು ಅಂತ ಗೊಂದಲಕ್ಕೊಳಗಾಗುತ್ತಿದ್ದಾರೆ. ಈ ಭಾವಚಿತ್ರಕ್ಕೂ ಬಾಲಿವುಡ್‌ ಹಿರಿಯ ನಟ ಅಮಿತಾಬ್ ಬಚ್ಚನ್ (Amitabh Bachchan) ಅವರಿಗೂ ಸಾಮ್ಯತೆ ಇದೆ ಎಂಬುದು ನೆಟ್ಟಿಗರ ಅಭಿಮತವಾಗಿದೆ.

ವಿಶ್ವಪ್ರಸಿದ್ಧ ಛಾಯಾಗ್ರಾಹಕ (photographe) ಸ್ಟೀವ್ ಮೆಕ್‌ಕ್ಯುರಿ (Steve McCurry) ಅವರು ಅಫ್ಘಾನ್ ನಿರಾಶ್ರಿತರ (Afghan Refugee) ಚಿತ್ರವನ್ನು ಮತ್ತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ಮತ್ತೆ ಅಂತರ್ಜಾಲದಲ್ಲಿ ,ಆ ಚಿತ್ರದಲ್ಲಿರುವ ವ್ಯಕ್ತಿ ನಟ ಅಮಿತಾಬ್ ಬಚ್ಚನ್ ಎಂಬ ಸಂಚಲನಕ್ಕೆ ಕಾರಣವಾಯಿತು. ಈ ಹಿಂದೆ 2018 ರಲ್ಲಿ ಈ ಫೋಟೋ ವೈರಲ್ ಆಗಿತ್ತು. 

 

ಒರಟಾದ ಮುಖದ, ಕುರುಚಲು ಗಡ್ಡವನ್ನು ಹೊಂದಿದ್ದ ವಯೋವೃದ್ಧನ ಫೋಟೋ ಇದಾಗಿತ್ತು. ಆಗ, ಜನರು ಈ ಫೋಟೋವನ್ನು ಅಮಿತಾಬ್ ಅವರ ಸಿನಿಮಾ 'ಥಗ್ಸ್ ಆಫ್ ಹಿಂದೂಸ್ತಾನ್‌'ನ (Thugs Of Hindostan) ಸೆಟ್‌ನಿಂದ ಬಿಡುಗಡೆಯಾದ ಬಿಗ್ ಬಿ ಅವರ ಫೋಟೋ ಎಂದು ಹೇಳಿ ಚಿತ್ರವನ್ನು ಶೇರ್ ಮಾಡಿಕೊಂಡಿದ್ದರು. ಈ ಸಿನಿಮಾದಲ್ಲಿ ಅಮೀರ್ ಖಾನ್ ಕೂಡ ನಟಿಸಿದ್ದರು. ಅಮೀರ್ ಖಾನ್ (Aamir Khan) ಮತ್ತು ಫಾತಿಮಾ ಸನಾ ಶೇಖ್ (Fatima Sana Shaikh), ಕತ್ರಿನಾ ಕೈಫ್ (Katrina Kaif)ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ಉಕ್ರೇನ್ ನಿರಾಶ್ರಿತರಿಗೆ ಸಹಾಯ ಮಾಡುತ್ತೀರಾ..'ವಿಶ್ವನಾಯಕರಿಗೆ ಪ್ರಿಯಾಂಕ ಚೋಪ್ರಾ ಮನವಿ
ಈ ಭಾವಚಿತ್ರ ಮತ್ತು ಬಾಲಿವುಡ್ ನಟ ಅಮಿತಾಬ್ ಬಚ್ಚನ್‌, ನಡುವಿನ ಸಾಮ್ಯತೆ ಎಷ್ಟು ವಿಲಕ್ಷಣವಾಗಿದೆ ಎಂದರೆ ಅದು ಮತ್ತೊಮ್ಮೆ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಪೋಸ್ಟ್‌ನ್ನು  75,000 ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಈ ಭಾವಚಿತ್ರವು ಅಮಿತಾಬ್‌ ಬಚ್ಚನ್‌ನಂತೆಯೇ ಕಾಣುತ್ತದೆ ಎಂದು ಹಲವರು ಹೇಳಿದ್ದಾರೆ. ಇತರರು ಇದು ಅವರ ಮುಂದಿನ ಚಿತ್ರಕ್ಕಾಗಿ ಬಿಗ್ ಬಿ ಅವರ ಲುಕ್ ಎಂದು ಭಾವಿಸಿದ್ದಾರೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಇದು ಅಮಿತಾಬ್ ಬಚ್ಚನ್ ಅವರೇನಾ ಎಂದು ಕಾಮೆಂಟ್ ಮಾಡಿದ್ದಾರೆ.

ಭಾರತೀಯ ಚಿತ್ರರಂಗವನ್ನು ಮತ್ತೊಂದು ಹಂತಕ್ಕೊಯ್ದ 'ಬಿಗ್‌ ಬಿ' ಅಮಿತಾಬ್ ಬಚ್ಚನ್!
ಮೊದಲ ನೋಟದಲ್ಲಿ, ಇದು  ಅಮಿತಾಭ್ ಭಚ್ಚನ್ ಎಂದು ನಾನು ಭಾವಿಸಿದೆ ಎಂದು ಒಬ್ಬ ಬಳಕೆದಾರ ಬರೆದಿದ್ದಾರೆ. ಅವರು ಮೇಕಪ್ ಹಾಕಿಕೊಂಡು ಅಮಿತಾಬ್ ಬಚ್ಚನ್ ಅವರಂತೆ ಏಕೆ ಕಾಣುತ್ತಿದ್ದಾರೆ ಎಂದು ಮತ್ತೊಬ್ಬರು ಕೇಳಿದ್ದಾರೆ. ಮೂರನೇ ಬಳಕೆದಾರರು, ಭಾರತೀಯ (ಬಾಲಿವುಡ್) ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಅವರಂತೆ ಕಾಣುತ್ತಾರೆ ಎಂದು ಪ್ರತಿಕ್ರಿಯಿಸಿದರೆ ಮಗದೊಬ್ಬರು, ಇದು ಅಮಿತಾಭ್ ಬಚ್ಚನ್ ಅವರ ಮುಂದಿನ ಚಿತ್ರಕ್ಕಾಗಿ ಅವರ ಲುಕ್ ಎಂದು ನಾನು ಭಾವಿಸಿದೆ ಎಂದರೆ, ಮತ್ತೊಬ್ಬರು ಇವರು ಅಮಿತಾಬ್ ಬಚ್ಚನ್ ಅವರೇನಾ ಎಂದು ಪ್ರಶ್ನಿಸಿದ್ದಾರೆ.

ಆದಾಗ್ಯೂ, ಈ ಚಿತ್ರದಲ್ಲಿರುವ ವ್ಯಕ್ತಿ ಅಮಿತಾಬ್ ಬಚ್ಚನ್ ಅಲ್ಲ ಮತ್ತು ಆ ಚಿತ್ರವು ಥಗ್ಸ್ ಆಫ್ ಹಿಂದೂಸ್ತಾನ್ ಅಥವಾ ಬಿಗ್ ಬಿ ಅವರ ಯಾವುದೇ ಮುಂಬರುವ ಚಲನಚಿತ್ರದ ಭಾಗವಲ್ಲ ಎಂದು ತಿಳಿದುಬಂದಿದೆ. ವಾಸ್ತವವಾಗಿ, ಅವರು ನಟರೇ ಅಲ್ಲ. ಪಾಕಿಸ್ತಾನದಲ್ಲಿ ವಾಸಿಸುತ್ತಿರುವ 68 ವರ್ಷದ ಅಫ್ಘಾನ್ ನಿರಾಶ್ರಿತನ ಭಾವಚಿತ್ರ ಇದು ಎಂದು ಮೆಕ್‌ಕರಿ ತಿಳಿಸಿದ್ದಾರೆ.

Follow Us:
Download App:
  • android
  • ios