ಭಾರತದ ಖ್ಯಾತ ಗಾಯಕ ಅದ್ನಾನ್ ಸಾಮಿ (Adnan Sami) ಸದ್ಯ ಕುಟುಂಬದ ಜೊತೆ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ (Maldives Vacation). ಪ್ರವಾಸ ಮಜಾ ಮಾಡುತ್ತಿರುವ ಖ್ಯಾತ ಗಾಯಕ ಒಂದಿಷ್ಟು ಪೋಟೋವನ್ನು ಹಂಚಿಕೊಂಡಿದ್ದಾರೆ. ಅದ್ನಾನಿ ಸಾಮಿ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಭಾರತದ ಖ್ಯಾತ ಗಾಯಕ ಅದ್ನಾನ್ ಸಾಮಿ (Adnan Sami) ಸದ್ಯ ಕುಟುಂಬದ ಜೊತೆ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ (Maldives Vacation). ಪ್ರವಾಸ ಮಜಾ ಮಾಡುತ್ತಿರುವ ಖ್ಯಾತ ಗಾಯಕ ಒಂದಿಷ್ಟು ಪೋಟೋವನ್ನು ಹಂಚಿಕೊಂಡಿದ್ದಾರೆ. ಅದ್ನಾನಿ ಸಾಮಿ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದು ನಿಜಕ್ಕೂ ಅದ್ನಾನಿ ಸಾಮಿನಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಅಚ್ಚರಿ ಮೂಡಿಸಿದೆ ಅದ್ನಾನ್ ಫೋಟೋ. ಇದಕ್ಕೆ ಕಾರಣ ಅದ್ನಾನ್ ಸಾಮಿ ಬದಲಾವಣೆ. ಹೌದು ದಡೂತಿಯಾಗಿದ್ದ ಅದ್ನಾನ್ ಸಿಕ್ಕಾಪಟ್ಟೆ ತೆಳ್ಳಗೆ ಆಗಿದ್ದಾರೆ. ಸಿಕ್ಕಾಪಟ್ಟೆ ಹ್ಯಾಂಡ್‌ಸಮ್ ಆಗಿರುವ ಅದ್ನಾನ್ ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. 

Add Asianetnews Kannada as a Preferred SourcegooglePreferred

ಅದ್ನಾನಿ ಸಾಮಿ ಪ್ರಾರಂಭದಲ್ಲಿ ಸಿಕ್ಕಾಪಟ್ಟೆ ದಪ್ಪಗೆ ಇದ್ದರು. ಗುಂಡುಗುಂಡಾಗಿ ಇದ್ದ ಅದ್ನಾನ್ ಸಿಕ್ಕಾಪಟ್ಟೆ ತೂಕ ಇಳಿಸಿಕೊಂಡಿದ್ದರು. 230 KG ಇದ್ದವರು ಬರೋಬ್ಬರಿ 155 ಕೆಜಿ ತೂಕ ಇಳಿಸಿಕೊಳ್ಳುವ (Adnan Sami 155kg Weight loss) ಮೂಲಕ ಅದ್ನಾನ್ ಅಚ್ಚರಿ ಮೂಡಿಸಿದ್ದರು. ಬಳಿಕ 75 ಕೆಜಿ ಆಗಿದ್ದರು. ಅದ್ನಾನ್ ತೂಕ ಇಳಿಸಿಕೊಳ್ಳಲು ಲಿಪೊಸಕ್ಷನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದ್ದು. ಆದರೆ ಈ ಸುದ್ದಿಯನ್ನು ಅದ್ನಾನ್ ತಳ್ಳಿ ಹಾಕಿದ್ದರು. ತೂಕ ಇಳಿಸಿಕೊಳ್ಳಲು ಅದ್ನಾನ್ ನ್ಯೂಟ್ರಿಶಿಯನ್ ತಜ್ಞರ ಮೊರೆ ಹೋಗಿದ್ದರು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅದ್ನಾನ್ ಎಲ್ಲಿಯೂ ರಿವೀಲ್ ಮಾಡಿಲ್ಲ. ತೂಕ ಇಳಿಸಿಕೊಂಡ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಅದ್ನಾನ್ ಸಾಮಿ ನೋಡಿ ಅಭಿಮಾನಿಗಳು ದಂಗಾಗಿದ್ದರು. ಭಾರತದಲ್ಲಿ ಮಾತ್ರವಲ್ಲದೇ ವಿದೇಶಿಗರು ಸಹ ಅಚ್ಚರಿ ಪಟ್ಟಿದ್ದರು. ಅದ್ನಾನ್ ತೂಕ ಇಳಿಸಿಕೊಂಡ ಪಯಣ ಬೇರೆಯವರಿಗೂ ಪ್ರೇರಣೆಯಾಗಿತ್ತು. 

ಇದೀಗ ಮತ್ತೊಮ್ಮೆ ಅದ್ನಾನ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಮಾಲ್ಡೀವ್ಸ್ ನಿಂದ ಫೋಟೋ ಶೇರ್ ಮಾಡಿರುವ ಅದ್ನಾನ್ ನೋಡಿ ಮತ್ತೆ ಅಚ್ಚರಿ ಪಡುತ್ತಿದ್ದಾರೆ. ಮತ್ತಷ್ಟು ಹ್ಯಾಂಡ್‌ಸಮ್ ಆಗಿರುವ ಅದ್ನಾನ್ ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಇದು ಅದ್ನಾನ್ ಅವರೇ ಎಂದು ನಂಬಲು ಸಾದ್ಯವಾಗುತ್ತಿಲ್ಲ. ಇದು ನಿಜಕ್ಕೂ ನೀವೇನಾ? ಅದ್ಭುತ, ಸ್ಪೂರ್ತಿದಾಯಕವಾಗಿದೆ ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾರೆ. ಇದನ್ನು ನಂಬಲು ಸಾದ್ಯವಾಗುತ್ತಿಲ್ಲ, ನಿಮ್ಮ ದಪ್ಪವಾದ ದೇಹ ಎಲ್ಲಿಗೆ ಹೋಯಿತು? ಎಂದು ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿ, ನೀವು ಅದ್ನಾನ್ ಸಾಮಿಯನ್ನು ಕಿಡ್ನಾಪ್ ಮಾಡಿ ನೀವಿ ಅದ್ನಾನ್ ಸಾಮಿ ಎಂದು ಬಿಂಬಿಸುತ್ತಿದ್ದೀರಾ? ಎಂದು ಹೇಳಿದ್ದಾರೆ.

Scroll to load tweet…

ಖ್ಯಾತ ಗಾಯಕ ಅದ್ನಾನ್ ಸಾಮಿ ಅಪರೂಕ್ಕೆ ಒಮ್ಮೆ ಹಳೆಯ ಫೋಟೋವನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಅದ್ನಾನ್ ಸಾಮಿ ಬಾಲಿವುಡ್ ಸ್ಟಾರ್ ನಟಿಯರಾದ ಮಾಧುರಿ ದೀಕ್ಷಿತ್ ಮತ್ತು ಅಮೀಶಾ ಪಾಟೀಲ್ ಜೊತೆ ಇರುವ ಸುಂದರ ಫೋಟೋ ಶೇರ್ ಮಾಡಿದ್ದರು. ಹಳೆಯ ನೆನಪನ್ನು ಮೆಲುಕು ಹಾಕಿದ್ದರು. ಅದ್ನಾನ್ ಶೇರ್ ಮಾಡಿದ್ದ ಆ ಫೋಟೋ ಸಹ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ನಾನು ಹೆಮ್ಮೆಯ ಭಾರತೀಯ, ತಂದೆಯ ಕೆಲಸಕ್ಕೆ ಪುತ್ರ ಜವಾಬ್ದಾರನಲ್ಲ: ಟೀಕಿಸಿದವರಿಗೆ ಸಮಿ ತಿರುಗೇಟು

ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಸಕ್ರೀಯರಾಗಿದ್ದ ಅದ್ನಾನ್ ಸಾಮಿ 2005-06ರ ಸಮಯದಲ್ಲಿ ದಿಢೀರ್ ನಾಪತ್ತೆಯಾಗಿದ್ದರು. 2013ರ ಅಷ್ಟೊತ್ತಿಗೆ ತೆಳ್ಳಗಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು. ಬಳಿಕ ತೂಕ ಇಳಿಸಿಕೊಂಡ ಬಗ್ಗೆ ಮತಾನಾಡಿದ್ದ ಅದ್ನಾನ್ ಸಾಮಿ, 'ನಾನು 155 ಕೆಜಿ ತೂಕ ಇಳಿಸಿಕೊಂಡಿದ್ದೀನಿ. ನನ್ನ ದೇಹದಿಂದ ಇಬ್ಬರನ್ನು ಹೊರ ಹಾಕಿದ ಹಾಗಾಗಿದೆ. ಜನ ನನ್ನನ್ನು ಈಗ ಗುರುತು ಹಿಡಿಯುತ್ತಿಲ್ಲ. ಆದರೆ ನನಗೆ ತುಂಬಾ ಖುಷಿ ಇದೆ. ನನಗೆ ಶಕ್ತಿ ಇನ್ನಷ್ಟು ಹೆಚ್ಚಾಗಿದೆ. ನನ್ನ ತೂಕ ಇಳಿಕೆಯ ಸಂಪೂರ್ಣ ಪಯಣದ ಬಳಿಕ ನಾನು ಅಭಿಮಾನಿಗಳ ಮುಂದೆ ಬಂದಿದ್ದೀನಿ' ಎಂದು ಹೇಳಿದ್ದರು. 

ಭಾರತೀಯ ನಾಯಿಗಳು : ಕುವೈತ್'ನಲ್ಲಿ ಅದ್ನಾನ್ ತಂಡಕ್ಕೆ ಅವಮಾನ

ತೂಕ ಇಳಿಸಿಕೊಂಡಿದ್ದು ಹೇಗೆ?

ದಿನ ಬೆಳಗ್ಗೆ ಸಕ್ಕರೆ ಇಲ್ಲದ ಟೀ ಕುಡುಯುವ ಮೂಲಕ ದಿನ ಪ್ರಾರಂಭ ಮಾಡುತ್ತಿದ್ದರು. ಮಧ್ಯಾಹ್ನನದ ಊಟಕ್ಕೆ ವೆಜಿಟೇಬಲ್ ಸಲಾಡ್, ಫಿಶ್ ಮಾತ್ರ ಸೇವಿಸುತ್ತಿದ್ದರು. ಡಿನ್ನರ್‌ಗೆ ಖಾಲಿ ಬೇಯಿಸಿದ ದಾಲ್ ಮತ್ತು ಚಿಕನ್ ಸೇವಿಸುತ್ತಿದ್ದರು. ತಕ್ಷರ ಸಲಹೆ ಮೇರಿಗೆ ತುಂಬಾ ಕಟ್ಟುನಿಟ್ಟಾಗಿ ಡಯಟ್ ಫಾಲೋ ಮಾಡುತ್ತಿದ್ದರು. 40 ಕೆಜಿ ತೂಕ ಕಡಿಮೆಯಾದ ಬಳಿಕ ಅದ್ನಾನ್ ಜಿಮ‌್ ಗೆ ಸೇರಿದರು. ಹಾರ್ಡ್ ವರ್ಕೌಟ್ ಮತ್ತು ಡಯಟ್‌ನಿಂದ ತೂಕ ಇಳಿಸಿಕೊಂಡು ತೆಳ್ಳಗಾದರು. ಇದೀಗ ಅದ್ನಾನ್ ಸಾಮಿ ಮತ್ತಷ್ಟು ಸುಂದರವಾಗಿ ಕಾಣಿಸುತ್ತಿದ್ದಾರೆ.