ಅದ್ನಾನ್ ಟ್ವೀಟ್'ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ 'ನಿಮಗಾಗಿರುವ ಅಪಮಾನವನ್ನು ತಿಳಿಸಿರುವುದಕ್ಕೆ ವಂದನೆಗಳು. ನಾವು ನಿಮ್ಮನ್ನು ಸಂಪರ್ಕಿಸಿ ಹೆಚ್ಚಿನ ವಿವರವನ್ನು ನೀಡುತ್ತೇವೆ ಎಂದು' ಉತ್ತರ ನೀಡಿದ್ದಾರೆ. ಅದ್ನಾನ್ ಸಮಿ ಮತ್ತು ತಂಡ ಕಾರ್ಯಕ್ರಮ ನೀಡುವ ಸಲುವಾಗಿ ಕುವೈತ್'ಗೆ ತೆರಳಿದ್ದರು.
ನವದೆಹಲಿ(ಮೇ.07): ಬಾಲಿವುಡ್ ಗಾಯಕ ಅದ್ನಾನ್ ಸಮಿ ತಂಡಕ್ಕೆ ಕುವೈತ್ ವಿಮಾನ ನಿಲ್ದಾಣದಲ್ಲಿ ಭಾರತೀಯ ನಾಯಿಗಳೆಂದು ಅಪಮಾನ ಮಾಡುವುದರ ಜೊತೆ ಕೀಳಾಗಿ ನಡೆಸಿಕೊಳ್ಳಲಾಗಿದೆ.
ತಮ್ಮ ತಂಡಕ್ಕೆ ಅಪಮಾನವಾಗಿರುವ ಬಗ್ಗೆ ಭಾರತೀಯ ರಾಯಭಾರಿ ಕಚೇರಿಗೆ ಅದ್ನಾನ್ ಸಮಿ ಟ್ವೀಟ್ ಮಾಡಿದ್ದಾರೆ. ಪ್ರೀತಿಯಿಂದ ನಾವು ನಿಮ್ಮ ಪಟ್ಟಣಕ್ಕೆ ಆಗಮಿಸಿರುವುದು. ಆದರೆ ನೀವು ನಮಗೆ ಬೆಂಬಲ ನೀಡಲಿಲ್ಲ. ಕುವೈತ್ ನಿಲ್ದಾಣದ ವಲಸಿಗ ಅಧಿಕಾರಿಗಳು ಯಾವುದೇ ಕಾರಣವಿಲ್ಲದೆ ನಮ್ಮನ್ನು ಭಾರತೀಯ ನಾಯಿಗಳೆಂದು ಜರಿದಿದ್ದಾರೆ. ನಮ್ಮನು ಈ ರೀತಿ ಅಪಮಾನಿಸಲು ಕುವೈತಿಗಳಿಗೆ ಎಷ್ಟು ಧೈರ್ಯ ? ಎಂದು ತಮ್ಮ ಟ್ವೀಟ್'ನಲ್ಲಿ ತಿಳಿಸಿದ್ದಾರೆ.
ಅದ್ನಾನ್ ಟ್ವೀಟ್'ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ 'ನಿಮಗಾಗಿರುವ ಅಪಮಾನವನ್ನು ತಿಳಿಸಿರುವುದಕ್ಕೆ ವಂದನೆಗಳು. ನಾವು ನಿಮ್ಮನ್ನು ಸಂಪರ್ಕಿಸಿ ಹೆಚ್ಚಿನ ವಿವರವನ್ನು ನೀಡುತ್ತೇವೆ ಎಂದು' ಉತ್ತರ ನೀಡಿದ್ದಾರೆ. ಅದ್ನಾನ್ ಸಮಿ ಮತ್ತು ತಂಡ ಕಾರ್ಯಕ್ರಮ ನೀಡುವ ಸಲುವಾಗಿ ಕುವೈತ್'ಗೆ ತೆರಳಿದ್ದರು. ಪಾಕಿಸ್ತಾನದ ನಾಗರಿಕರಾಗಿದ್ದ ಅದ್ನಾನ್ ಪ್ರಸ್ತುತ ಭಾರತೀಯ ಪೌರತ್ವ ಪಡೆದುಕೊಂಡಿದ್ದಾರೆ.
