ರಾಖಿ ಸಾವಂತ್​ ವಿರುದ್ಧ ಸ್ನೇಹಿತೆ ಶಾಕಿಂಗ್​ ಸ್ಟೇಟ್​ಮೆಂಟ್​ ಹೇಳಿದ್ದಾರೆ. ಆರನೇ ಗಂಡಿಗೆ ಬಲೆ ಬೀಸಿದ್ತಾಳೆ ರಾಖಿ, ಹಣ ಪಡೆದು ಕೊಲ್ಲೋದೇ ಪ್ಲ್ಯಾನ್ ಎಂದಿದ್ದಾರೆ. 

ಕಳೆದ ಹಲವು ದಿನಗಳಿಂದ ಡ್ರಾಮಾ ಕ್ವೀನ್​ ನಟಿ ರಾಖಿ ಸಾವಂತ್​ (Rakhi Sawant) ಬಹಳ ಸುದ್ದಿಯಲ್ಲಿರುವ ನಟಿ. ಆದಿಲ್​ ಖಾನ್​ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ಜೈಲಿಗೆ ಹೋದದ್ದು, ನಂತರ ಅವರು ಬಿಡುಗಡೆಗೊಂಡ ಬಳಿಕ ಪರಸ್ಪರ ದೋಷಾರೋಪ ಮಾಡುತ್ತಾ ಪತ್ರಿಕಾಗೋಷ್ಠಿ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷ್ಯ.

ಮೆಕ್ಕಾ-ಮದೀನಾಕ್ಕೆ ಹೋಗಿ ಉಮ್ರಾ ನೆರವೇರಿಸಿ ವಾಪಸಾಗಿರೋ ರಾಖಿ, ತಾವು ಪವಿತ್ರರಾಗಿದ್ದು, ಯಾರೂ ಪುರುಷರು ತಮ್ಮನ್ನು ಮುಟ್ಟಬಾರದು ಎಂದು ಹೇಳಿದ್ದಾರೆ. ಇವರು ಹೀಗೆ ಸುದ್ದಿಯಲ್ಲಿ ಇರುವಾಗಲೇ ಇವರ ಹಳೆಯ ವಿಡಿಯೋ ಒಂದು ಈಗ ಮತ್ತೆ ಮುನ್ನೆಲೆಗೆ ಬಂದಿತ್ತು. ಅದರಲ್ಲಿ ಅವರು, ನಟಿ ತನುಶ್ರೀ ದತ್ತಾ ತಮ್ಮ ಮೇಲೆ ಪದೇ ಪದೇ ಅತ್ಯಾಚಾರ ಮಾಡಿರುವುದಾಗಿ ಹೇಳಿಕೊಂಡಿದ್ದರು. ಆದರೆ ಇವೆಲ್ಲವುಗಳ ನಡುವೆಯೇ ರಾಖಿ ವಿರುದ್ಧವೇ ಇನ್ನೊಂದು ಶಾಕಿಂಗ್​ ವಿಷಯ ಬಯಲಾಗಿದೆ. ಆದಿಲ್​ ಖಾನ್​ ಪರವಾಗಿ ಕೆಲವರು ನಿಂತಿದ್ದರೆ, ರಾಖಿ ಪರವಾಗಿ ಇನ್ನಷ್ಟು ಮಂದಿ ಪತ್ರಿಕಾಗೋಷ್ಠಿಯನ್ನು ಇದಾಗಲೇ ಮಾಡಿದ್ದಾರೆ. ಅದರ ಮುಂದುವರೆದಿರುವ ರೂಪವಾಗಿ, ಇದೀಗ ಪುನಃ ಆದಿಲ್​ ಖಾನ್​ ಮತ್ತು ಒಂದು ಕಾಲದಲ್ಲಿ ರಾಖಿ ಸ್ನೇಹಿತೆಯಾಗಿದ್ದ ರಾಜಶ್ರೀ ಗಂಭೀರ ಆರೋಪ ಮಾಡಿದ್ದಾರೆ. 

ನಟಿ ತನುಶ್ರೀ ದತ್ತಾ ಪದೇ ಪದೇ ನನ್ನನ್ನ ರೇಪ್​ ಮಾಡಿದ್ಲು: ರಾಖಿ ಸಾವಂತ್​ ಶಾಕಿಂಗ್​ ವಿಡಿಯೋ

 ಮೀಟೋ ಆಂದೋಲನ ಶುರುವಾಗಿದ್ದ ವೇಳೆ ನಾನೂ ಇದಕ್ಕೆ ಬಲಿಯಾಗಿದ್ದ ವಿಷಯವನ್ನು ಎಲ್ಲರಿಗೂ ತಿಳಿಸಿದ್ದೆ. ಅದರ ವಿಡಿಯೋ ರಾಖಿ ಬಳಿ ಇತ್ತು. ಆಕೆ ನನ್ನನ್ನು ಬೆಂಬಲಿಸುವ ಬದಲು ದುಡ್ಡು ಪಡೆದು ಎಲ್ಲರ ಮುಂದೆ ಮಾನಹಾನಿ ಮಾಡಿದ್ದಾಳೆ. ನಾನು ಆಘಾತಕ್ಕೆ ಒಳಗಾಗಿ ಹೊರಗೆ ಬರಲು ತಿಂಗಳುಗಳೇ ಬೇಕಾಯಿತು ಎಂದು ರಾಜಶ್ರೀ ಹೇಳಿಕೊಂಡಿದ್ದಾರೆ. ರಾಖಿ ಜಗತ್ತಿನ ಬಹುದೊಡ್ಡ ಮೋಸಗಾತಿ, ಸುಳ್ಳುಗಾತಿ. ಅವಳು ಯಾವಾಗಲೂ ಹೊಸ ಸುಳ್ಳಿನ ಬಗ್ಗೆ ಯೋಚಿಸುತ್ತಲೇ ಇರುತ್ತಾಳೆ. ರಾಖಿ ಇದನ್ನು ಸಾಕಷ್ಟು ಜನರೊಂದಿಗೆ ಮಾಡಿದ್ದಾಳೆ. ಆಕೆ ತನ್ನ ಸ್ವಂತ ಲಾಭಕ್ಕಾಗಿ ಯಾವ ಕೀಳು ಮಟ್ಟಕ್ಕೂ ಹೋಗಲು ರೆಡಿ ಎಂದಿರುವ ರಾಜಶ್ರೀ, ಎಲ್ಲರನ್ನೂ ಮೋಸ ಮಾಡಿ ಹಣ ಮಾಡುವುದೇ ಅವಳ ಗುರಿ ಎಂದಿದ್ದಾರೆ.

ಆದಿಲ್​ ಖಾನ್​ ಮತ್ತಷ್ಟು ಆರೋಪ ಮಾಡಿದ್ದು, ನಾನು ಈಕೆಗೆ ಆರನೇ ಗಂಡಸಾಗಿ ಪ್ರವೇಶ ಮಾಡಿದೆ. ನನ್ನನ್ನೂ ಬಿಟ್ಟು ಏಳನೆಯವನ ಹುಡುಕಾಟದಲ್ಲಿ ಇದ್ದಾಳೆ. ಅವಳಿಗೆ ಬೇಕಿರುವುದು ಗಂಡಸರಲ್ಲ, ಬದಲಿಗೆ ಅವರ ಹಣ ಎಂದಿದ್ದಾರೆ. ಇದಕ್ಕೆ ದನಿಗೂಡಿಸಿರುವ ರಾಜಶ್ರೀ, ರಾಖಿ ತನ್ನ ವಿರುದ್ಧ ಎದುರಾದವರಿಗೆ ಸುಪಾರಿ ಕೊಟ್ಟು ಕೊಲ್ಲಿಸಲೂ ಹೇಸುವವಳಲ್ಲ. ಅವಳು ನನ್ನನ್ನೂ ಕೊಲ್ಲಲು ಬಯಸಿದ್ದಳು, ಇದರ ಪುರಾವೆ ಕೂಡ ಕೊಡಬಲ್ಲೆ. ಆಕೆಯ ಮಾಜಿ ಪತಿ ರಿತೇಶ್​ ಅವರನ್ನೂ ಕೊಲ್ಲಲು ಮಾಡಿದ್ದಳು ಎಂಬ ಶಾಕಿಂಗ್​ ಹೇಳಿಕೆ ನೀಡಿದ್ದಾರೆ.

ಬುರ್ಖಾಧಾರಿ ರಾಖಿ ಎದುರು ಶೆರ್ಲಿನ್ ತುಂಡುಡುಗೆ ಡ್ಯಾನ್ಸ್​! ನಿನ್ನೆ ವೈರಿ, ಇಂದು ಕಿಸ್ಸಿಂಗ್​?

ರಾಖಿಯ ಬಗ್ಗೆ ಇನ್ನಷ್ಟು ಹೇಳಿದ ತನುಶ್ರೀ, ಲಾಕ್​ಡೌನ್​ ಸಮಯದಲ್ಲಿ ಅವಳ ಕೈಯಲ್ಲಿ ಕಾಸು ಇರಲಿಲ್ಲ. ಆ ಸಮಯದಲ್ಲಿ ಯಾರನ್ನು ಹೇಗೆ ಲಪಟಾಯಿಸಬೇಕು ಎಂದು ಯೋಚಿಸಿದ್ದಳು. ಈಕೆಯ ಬಲೆಗೆ ಬಿದ್ದದ್ದು ರೀತೇಶ್​ ಆ ಬಳಿಕ ಆದಿಲ್​ ಖಾನ್​. ರಾಖಿಗೆ ಕೆಲವು ರೀತಿಯ ಮಾನಸಿಕ ಸಮಸ್ಯೆ ಇದೆ, ಆಕೆಗೆ ಪುರುಷರ ಬಗ್ಗೆ ಆಸಕ್ತಿಯಿಲ್ಲ ಆದರೆ ಅವರ ಹಣ" ಎಂದು ತನುಶ್ರೀ ಹೇಳಿದರು.