ಬುರ್ಖಾಧಾರಿ ರಾಖಿ ಎದುರು ಶೆರ್ಲಿನ್ ತುಂಡುಡುಗೆ ಡ್ಯಾನ್ಸ್! ನಿನ್ನೆ ವೈರಿ, ಇಂದು ಕಿಸ್ಸಿಂಗ್?
ಕೆಲ ದಿನಗಳಿಂದ ಹಾವು ಮುಂಗುಸಿ ರೀತಿಯಲ್ಲಿ ವರ್ತಿಸುತ್ತಿರೋ ನಟಿಯರಾದ ರಾಖಿ ಸಾವಂತ್ ಮತ್ತು ಶೆರ್ಲಿನ್ ಚೋಪ್ರಾ ಮತ್ತೆ ಒಂದಾದ್ರಾ? ಡ್ರಾಮಾ ಕ್ವೀನ್ಸ್ ಅಪ್ಡೇಟ್ ಏನು?
ಕಳೆದ ಕೆಲವು ದಿನಗಳಿಂದ ರಾಖಿ ಸಾವಂತ್ ಬಹಳ ಸುದ್ದಿಯಲ್ಲಿರುವ ನಟಿ. ಈಕೆಯ ಪಬ್ಲಿಸಿಟಿ ಹೆಚ್ಚಾಗುತ್ತಿದ್ದಂತೆಯೇ ಮಧ್ಯೆ ಪ್ರವೇಶಿಸಿದವರು ಶೆರ್ಲಿನ್ ಚೋಪ್ರಾ. ಅಷ್ಟಕ್ಕೂ ರಾಖಿ ಸಾವಂತ್ ಮತ್ತು ಶೆರ್ಲಿನ್ ಚೋಪ್ರಾ ನಡುವೆ ಬಹಳ ಹಿಂದೆಯೇ ವಿವಾದವಿತ್ತು. ಶೆರ್ಲಿನ್ ಅವರ ಖಾಸಗಿ ವಿಡಿಯೋಗಳನ್ನು ರಾಖಿ ಲೀಕ್ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಅವರು ರಾಖಿ ವಿರುದ್ಧ ಮಾಡಿದ್ದರು. ವಿಷಯ ಪೊಲೀಸರನ್ನೂ ತಲುಪಿತು ಆದರೆ ರಾಖಿ ಮತ್ತು ಶೆರ್ಲಿನ್ ಮತ್ತೆ ಸ್ನೇಹಿತರಾದರು. ಇಬ್ಬರೂ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ರಾಖಿ ಸಾವಂತ್ ಪತಿ, ಆದಿಲ್ ದುರಾನಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ, ಶೆರ್ಲಿನ್ ರಾಖಿ ವಿರುದ್ಧ ತಿರುಗಿ ಬಿದ್ದಿದ್ದರು. ಮತ್ತೊಮ್ಮೆ ರಾಖಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಖಿ ಮತ್ತು ಅವರ ವಕೀಲರಾದ ಫಲ್ಗುಣಿ ಬ್ರಹ್ಮಭಟ್ ಅವರು ತಮ್ಮ ಖಾಸಗಿ ಫೋಟೋಗಳನ್ನು ಮಾಧ್ಯಮಗಳ ಮುಂದೆ ತೋರಿಸಿ ಮುಜುಗರಕ್ಕೊಳಗಾಗಿದ್ದಾರೆ ಎಂದು ಶೆರ್ಲಿನ್ ಚೋಪ್ರಾ (Sherlyn Chopra) ಆರೋಪಿಸಿದ್ದರು. ಸಾಲದು ಎನ್ನುವುದಕ್ಕೆ ರಾಖಿ ಸಾವಂತ್ ಸೌದಿ ಅರೇಬಿಯಾದ ಮೆಕ್ಕಾದಿಂದ (Mecca) ಉಮ್ರಾ ಮುಗಿಸಿ ಬರುತ್ತಿದ್ದಂತೆಯೇ ಆಕೆಯ ವಿರುದ್ಧ 200 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಶೆರ್ಲಿನ್ ಹೇಳಿಕೊಂಡಿದ್ದರು.
ರಾಖಿ ಮತ್ತು ಆದಿಲ್ ಖಾನ್ ನಡುವೆ ಜಟಾಪಟಿ ನಡೆಯುತ್ತಿರುವ ಮಧ್ಯೆಯೇ, ರಾಖಿ ಸಾವಂತ್ ಸ್ನೇಹಿತೆ ರಾಜಶ್ರೀ (Rajashree) ಎಂಬುವವರು ಆದಿಲ್ ಖಾನ್ ಪರ ಬ್ಯಾಟಿಂಗ್ ಮಾಡಿದ್ದು, ರಾಖಿ ಸಾವಂತ್ದ್ದೇ ತಪ್ಪಿದೆ ಎಂದು ಬಿಂಬಿಸಿದ್ದರು. ಪತ್ರಿಕಾಗೋಷ್ಠಿ ಕರೆದಿದ್ದ ಅವರು, ರಾಖಿ ನನಗೆ ಬ್ಲ್ಯಾಕ್ಮೇಲ್ ಮಾಡಿದ್ದಾಳೆ, ಬೆದರಿಕೆ ಹಾಕಿದ್ದಾಳೆ. ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದ್ದೇನೆ ಎಂದಿದ್ದರು. ಇದೇ ಪತ್ರಿಕಾಗೋಷ್ಠಿಯಲ್ಲಿ ನಟಿ ಶೆರ್ಲಿನ್ ಚೋಪ್ರಾ ಕೂಡ ಆದಿಲ್ ಖಾನ್ ಪರ ವಹಿಸಿಕೊಂಡಿದ್ದರು. ರಾಖಿ ಸಾವಂತ್ ಸಾಮಾನ್ಯವಾಗಿ ಮಾಡುವ ಡ್ರಾಮಾದಂತೆ ಆ್ಯಕ್ಟಿಂಗ್ ಮಾಡಿದ್ದ ಶೆರ್ಲಿನ್, ನೋಡಿ ರಾಖಿಗಿಂತಲೂ ನಾನೇ ಚೆನ್ನಾಗಿ ಡ್ರಾಮಾ ಮಾಡುತ್ತೇನೆ ಎಂದಿದ್ದರು. ನೋಡು ರಾಖಿ ಇನ್ನು ಮುಂದೆ ಆ್ಯಕ್ಟಿಂಗ್ ಮಾಡುವಾಗ ನಿನಗಿಂತಲೂ ನಾನೇ ಚೆನ್ನಾಗಿ ಮಾಡುತ್ತೇನೆ ಎನ್ನುವುದು ಗಮನದಲ್ಲಿ ಇರಲಿ ಎಂದಿದ್ದರು.
ನಿಜವಾದ ಮುಸಲ್ಮಾನರು ಸುಳ್ಳು ಹೇಳಲ್ಲ, ಡ್ರಾಮಾ ಮಾಡಲ್ಲ: ನಟಿ ಶೆರ್ಲಿನ್ ಚೋಪ್ರಾ ಹೇಳಿದ್ದೇನು?
ಇದಾದ ಬಳಿಕ ನಿನ್ನೆಯಷ್ಟೇ ರಾಖಿ ಫರ್ಜಿ ಮುಸ್ಲಿಂ (Farzi Muslim ಅಂದರೆ ನಕಲಿ ಮುಸ್ಲಿಂ) ಎಂದು ಆರೋಪಿಸಿದ್ದರು. ಉಮ್ರಾಗೆ ಹೋಗುವವರು ನಿಜವಾದ ಮುಸಲ್ಮಾನರು. ಅವರು ಯಾವಾಗಲೂ ಡ್ರಾಮಾ ಮಾಡುವುದಿಲ್ಲ. ಅಲ್ಹಾನನನ್ನು ನಿಜವಾಗಿಯೂ, ಸತ್ಯವಾದ ಹೃದಯದಿಂದ ನಂಬುತ್ತಾರೆ. ಆದರೆ ರಾಖಿ ಹಾಗಲ್ಲ, ಈಕೆ ನಕಲಿ ಮುಸಲ್ಮಾನ್ ಎಂದು ಆರೋಪಿಸಿದ್ದಾರೆ. ನಿಜವಾದ ಮುಸಲ್ಮಾನರು ಸುಳ್ಳು ಹೇಳುವುದಿಲ್ಲ, ಆದರೆ ರಾಖಿ ಮೋಸಗಾತಿ, ಅಲ್ಲಾ ಹ್ ನಂಬದಾಕೆ ಎಂದು ಶೆರ್ಲಿನ್ ಹೇಳಿದ್ದರು. ಆದರೆ ಇಂದು ಸೀನೇ ಬೇರೆಯಾಗಿದೆ. ಒಂದೆಡೆ ಇಸ್ಲಾಮ್ಗೆ ಮತಾಂತರಗೊಂಡಿರುವುದಾಗಿ ಹೇಳುತ್ತಿರುವ ರಾಖಿ ಮೆಕ್ಕಾದಿಂದ ಬಂದು ಪವಿತ್ರಳಾಗಿದ್ದೇನೆ ಎಂದು ಹೇಳಿಕೆ ನೀಡಿ ಬುರ್ಖಾಧಾರಿಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರೆ, ಶೆರ್ಲಿನ್ ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದು, ರಾಖಿ ಎದುರು ಡ್ಯಾನ್ಸ್ ಮಾಡಿದ್ದಾರೆ.
ಇದರ ವಿಡಿಯೋ ವೈರಲ್ ಆಗುತ್ತಿದೆ. ರಾಖಿಯನ್ನು (Rakhi Sawant) ಅಪ್ಪಿಕೊಂಡು ಶೆರ್ಲಿನ್ ಕರೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇವರಿಬ್ಬರೂ ಪುನಃ ಸ್ನೇಹಿತರಾಗಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆಯಾದರೂ, ಇವರಿಬ್ಬರೂ ಡ್ರಾಮಾ ಕ್ವೀನ್ಗಳಾಗಿರುವ ಹಿನ್ನೆಲೆಯಲ್ಲಿ ಪಬ್ಲಿಸಿಟಿ ಸ್ಟಂಟ್ ಎಂದೇ ಎಲ್ಲರೂ ಹೇಳುತ್ತಿದ್ದಾರೆ. ಬುರ್ಖಾಧಾರಿಯಾಗಿರುವ ರಾಖಿ ಎದುರು ತುಂಡುಡುಗೆಯಲ್ಲಿ ಶೆರ್ಲಿನ್ ಡ್ಯಾನ್ಸ್ ಮಾಡುತ್ತಿದ್ದರೂ ರಾಖಿ ಮಾತ್ರ ಯಾವುದೇ ರೆಸ್ಪಾನ್ಸ್ ತೋರದೇ ಸುಮ್ಮನಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅದಾದ ಬಳಿಕ ಶೆರ್ಲಿನ್ ರಾಖಿಯ ಹೆಗಲಮೇಲೆ ಕೈಹಾಕಿ ಕರೆದುಕೊಂಡು ಹೋಗಿದ್ದಾರೆ.
ಮೆಕ್ಕಾದಿಂದ ವಾಪಸಾದ ರಾಖಿ ಸಾವಂತ್ಗೆ ಇದೆಂಥ ಶಾಕ್! 200 ಕೋಟಿ ಮಾನಹಾನಿ ಮೊಕದ್ದಮೆ?