15 ಮಂದಿ ಸತತ 1 ತಿಂಗಳು ಅತ್ಯಾಚಾರವೆಸಗಿದ್ರೆ ಪುರಾವೆ ನೀಡುವುದು ಹೇಗೆ? ಎಂದು ದಿ ಕೇರಳ ಸ್ಟೋರಿ ನಟಿ ಅದಾ ಶರ್ಮಾ ಹೇಳಿದ್ದಾರೆ. 

ದಿ ಕೇರಳ ಸ್ಟೋರಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಚಿತ್ರಮಂದಿರಗಳಲ್ಲಿ ದಿ ಕೇರಳ ಸ್ಟೋರಿ ಭರ್ಜರಿ ಕಲೆಕ್ಷನ್ ಮಾಡಿದೆ. ಮೇ 5ರಂದು ತೆರೆಗೆ ಬಂದ ದಿ ಕೇರಳ ಸ್ಟೋರಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 165ಕ ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ 200 ಕೋಟಿಯತ್ತ ಮುನ್ನುಗ್ಗುತ್ತಿದೆ. ಪ್ರಾರಂಭದಲ್ಲಿ ನಿಧಾನಗತಿಯಲ್ಲಿದ್ದ ಕಲೆಕ್ಷನ್ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಸಾಕಷ್ಟು ವಿರೋಧ ಮತ್ತು ಬ್ಯಾನ್‌ಗಳ ನಡುವೆಯೂ ಕೇರಳ ಸ್ಟೋರಿ ಸಿನಿಮಾ ಗೆದ್ದು ಬೀಗಿದೆ. ಸಿನಿಮಾ ಸಕ್ಸಸ್ ಬಳಿಕ ನಟಿ ಅದಾ ಶರ್ಮಾ ಸಾಕಷ್ಟು ಸಂದರ್ಶಗಳನ್ನು ನೀಡುತ್ತಿದ್ದಾರೆ. ಸಿನಿಮಾದಲ್ಲಿ ಶಾಲಿನಿ ಉನ್ನಿಕೃಷ್ಣನ್/ ಫಾತಿಮಾ ಬಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅದಾ ಶರ್ಮಾ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. 

Add Asianetnews Kannada as a Preferred SourcegooglePreferred

ಇತ್ತೀಚೆಗಷ್ಟೆ ಈವೆಂಟ್‌ನಲ್ಲಿ ಭಾಗಿಯಾಗಿದ್ದ ನಟಿ ಅದಾ ಶರ್ಮಾ, ಲೈಂಗಿಕ ಶೋಷಣೆಗೆ ಒಳಗಾದ ಹುಡುಗಿಯರ ಸಂಖ್ಯೆ ಬಗ್ಗೆ ಪುರಾವೆ ಕೇಳುವ ಜನರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. '15 ಮಂದಿ ಸತತವಾಗಿ ಒಂದು ತಿಂಗಳ ಕಾಲ ಅತ್ಯಾಚಾರವೆಸಗಿದ್ದರೆ ಅದಕ್ಕೆ ಪುರಾವೆ ನೀಡುವುದು ಹೇಗೆ?, ಶಾಲಿನಿ (ಅದಾ ಶರ್ಮಾ ಪಾತ್ರ) ಪ್ರೀತಿಯಲ್ಲಿ ದ್ರೋಹ ಬಗೆದಿದ್ದು, ಈ ಪ್ರಕರಣವನ್ನು ದಾಖಲಿಸುವುದು ಹೇಗೆ? ಅತ್ಯಾಚಾರವನ್ನು ಲೆಕ್ಕಿಸುವುದು ಹೇಗೆ?' ಎಂದು ಹೇಳಿದ್ದಾರೆ. ಅದಾ ಮಾತುಗಳು ಹುಬ್ಬೇರಿಸುವಂತೆ ಮಾಡಿದೆ. 

ಮಮತಾ ಬ್ಯಾನರ್ಜಿಗೆ ತೀವ್ರ ಹಿನ್ನಡೆ, ಕೇರಳ ಸ್ಟೋರಿ ಪ್ರದರ್ಶನಕ್ಕೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್!

'16 ಗಂಟೆಗಳ ಕಾಲ ರಸ್ತೆಯಲ್ಲೇ ಇದ್ದಾರು, ವಾಶ್‌ರೂಮ್‌ಗೂ ಹೋಗಲು ಸಾಧ್ಯವಾಗಿಲ್ಲ. ಊಟ ಇಲ್ಲ, ಉಸಿರಾಡಲು ಆಮ್ಲಜನಕವಿಲ್ಲ ಅಂತ ಟ್ಯಾಂಕರ್‌ನಲ್ಲಿ ಹೋಗುವ ಹುಡುಗಿಯರು. ಅವರ ಬಗ್ಗೆ ಯಾವುದೇ ಲಿಖಿತ ದಾಖಲೆಗಳಿಲ್ಲ' ಎಂದು ಅದಾ ಶರ್ಮಾ ದಾಖಲೆ ಕೇಳಿದವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

'ದಿ ಕೇರಳ ಸ್ಟೋರಿ'ಯಲ್ಲಿ ಶಿವನನ್ನು ಗೇಲಿ ಮಾಡಿದ ಮಹಿಳೆ; ಸದ್ಗುರುವಿನ ಹಳೆಯ ಉತ್ತರ ವೈರಲ್

ಸಿನಿಮಾ ಅಲ್ಲ, ಇದೊಂದು ಚಳುವಳಿ 

ಸಿನಿಮಾ ಬಗ್ಗೆ ಮಾತನಾಡಿದ ಅದಾ, 'ಕಳೆದ ಒಂದು ವಾರದಲ್ಲಿ, ನಾನು ನಾಲ್ಕು ವಿಮಾನಗಳಲ್ಲಿ ಓಡಾಡಿದೆ. ಮೊದಲು ವಿಮಾನ ನಿಲ್ದಾಣಗಳಲ್ಲಿ ಅಭಿಮಾನಿಗಳು ಬಂದು ನನ್ನೊಂದಿಗೆ 1920 ಮತ್ತು ಕಮಾಂಡೋ ಬಗ್ಗೆ ಮಾತನಾಡುತ್ತಿದ್ದರು. ಅವರ ಕಣ್ಣುಗಳಲ್ಲಿ ಕಣ್ಣೀರು. ಅವರ ಕಣ್ಣುಗಳನ್ನು ತೆರೆದಿದ್ದಕ್ಕಾಗಿ ನನಗೆ ಧನ್ಯವಾದಗಳು. ನಾನು ಈಗಾಗಲೇ ನಾಲ್ಕೈದು ಬಾರಿ ಚಲನಚಿತ್ರವನ್ನು ನೋಡಿದ ಮತ್ತು ನಿರ್ದಿಷ್ಟ ದೃಶ್ಯಗಳನ್ನು ವಿವರಿಸುವ ಚಿಕ್ಕ ಹುಡುಗರನ್ನು ಭೇಟಿಯಾಗಿದ್ದೇನೆ. ಕೇರಳದ ಸ್ಟೋರಿ ಇನ್ನು ಮುಂದೆ ಕೇವಲ ಚಿತ್ರವಲ್ಲ, ಇದು ಒಂದು ಚಳುವಳಿಯಾಗಿ ಮಾರ್ಪಟ್ಟಿದೆ' ಎಂದು ಹೇಳಿದ್ದಾರೆ.