Asianet Suvarna News Asianet Suvarna News

The Kerala Story: 32 ಸಾವಿರ ಹುಡುಗಿಯರ ನಾಪತ್ತೆ: ಬೆಚ್ಚಿ ಬೀಳಿಸಿದ ಟ್ರೇಲರ್​!

ಕೇರಳದ ಸುಮಾರು 36 ಸಾವಿರ ಹುಡುಗಿಯರ ನಾಪತ್ತೆ ಹಿಂದಿರುವ ಭಯಾನಕ ಚಿತ್ರಗಳನ್ನು ತೆರೆದಿಡುವ ದಿ ಕೇರಳ ಸ್ಟೋರಿ ಹಿಂದಿನ ಕಥೆಯಿದು...
 

The Kerala Story Shows Thought Provoking and Hard Hitting Stories Behind The Of  Women Going Missing
Author
First Published Apr 27, 2023, 10:40 AM IST | Last Updated Apr 27, 2023, 10:40 AM IST

32 ಸಾವಿರ  ಕಾಣೆಯಾದ ಹುಡುಗಿಯರ ಕಥೆ ಇದು!  ಬೆಚ್ಚಿಬೀಳಿಸುವ ಭಯಾನಕ ಕಥೆಯಿದು! ಹೌದು. ಕೇರಳದಲ್ಲಿ ಸುಮಾರು 32 ಸಾವಿರ ಹುಡುಗಿಯರು  ನಾಪತ್ತೆಯಾಗಿರುವ ವಿಷಯವನ್ನು ಆಧರಿಸಿದ ದಿ ಕೇರಳ ಸ್ಟೋರಿ ಕಥೆ (The Kerala Story) ಹೆಣೆಯಲಾಗಿದೆ. ಇದರ ಟ್ರೇಲರ್​ ಬಿಡುಗಡೆಯಾಗಿದ್ದು, ಅದು ಬೆಚ್ಚಿಬೀಳಿಸುವಂತಿದೆ.  ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ (Vipul Amruthlal Shah) ಅವರ ಈ ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ. ಇದರಲ್ಲಿ ಬಾಲಿವುಡ್‌ನ ಪ್ರತಿಭಾವಂತ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  ಈ ಸಿನಿಮಾದಲ್ಲಿ ಹುಡುಗಿಯರನ್ನು ವಿದೇಶದ ಆಮಿಷವೊಡ್ಡಿ, ಮತಾಂತರಿಸಿ, ಬಲವಂತವಾಗಿ ಐಸಿಸ್ (ISIS) ಉಗ್ರಗಾಮಿಗಳಾಗಿಸುವ ಕಥೆ ಇದೆ.  ಈ ಚಿತ್ರವು ನೈಜ ಕಥೆಯನ್ನು ಆಧರಿಸಿದೆ ಎಂದು ಚಿತ್ರ ನಿರ್ಮಾಪಕರು ಹೇಳಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಈ ಸಿನಿಮಾದ ಟೀಸರ್ (Teaser) ರಿವೀಲ್ ಆದಾಗ ಚಿತ್ರದ ಕಥೆಯ ಬಗ್ಗೆ ಗಲಾಟೆ ನಡೆದಿತ್ತು. ಅದೇ ಸಮಯದಲ್ಲಿ, ಟೀಸರ್ ರಿಲೀಸ್ ಆಗುತ್ತಿದ್ದಂತೆ ಚಿತ್ರದ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.  ಈ ಸಿನಿಮಾ ಬ್ಯಾನ್ ಮಾಡುವಂತೆ ಒತ್ತಾಯ ಇಂದಿಗೂ ಮುಂದುವರೆದಿದೆ. ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್‌ಗೆ ಅನುಮತಿ ಕೊಡಬಾರದು ಎಂದು ಕೇರಳ ಮುಖ್ಯಮಂತ್ರಿಗೆ  ಪತ್ರ ಕೂಡ ಬರೆಯಲಾಗಿತ್ತು.  ಅದರ ಟ್ರೇಲರ್ ಹೊರಬಂದಾಗ, ಪ್ರೇಕ್ಷಕರ ಉತ್ಸಾಹ ಹೆಚ್ಚಾಗಿದೆ. ಅಂದಹಾಗೆ ದಿ ಕೇರಳ ಸ್ಟೋರಿ ಸಿನಿಮಾಗೆ ಸುದೇಪ್ತೊ ಸೇನ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ವಿಪುಲ್ ಅಮೃತ್‌ಲಾಲ್ ಷಾ ಬಂಡವಾಳ ಹೂಡಿದ್ದಾರೆ. ವಿವಾದ ದೊಡ್ಡದಾಗುತ್ತಿದ್ದಂತೆ ಸಿನಿಮಾದ ನಿರ್ಮಾಪಕ ವಿಪುಲ್ ಪ್ರತಿಕ್ರಿಯೆ ಮಾಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ನಾವು ಈ ಆರೋಪವನ್ನು ಸರಿಯಾದ ಸಮಯಕ್ಕೆ ಪರಿಹರಿಸುತ್ತೇವೆ. ಪುರಾವೆ ಇಲ್ಲದೆ ಯಾವುದನ್ನು ಹೇಳಿಲ್ಲ. ನಾವು ಸತ್ಯ ಮತ್ತು ಅಂಕಿ ಅಂಶಗಳನ್ನು ಪ್ರಸ್ತುತಪಡಿಸಿದಾಗ ಜನರಿಗೆ ಉತ್ತರ ಸಿಗುತ್ತದೆ. ಬಳಿಕ ಅವರು ಅದನ್ನು ಒಪ್ಪಿಕೊಳ್ಳಬೇಕೊ ಅಥವಾ ಬೇಡವೊ ಎಂಬುದು ಅವರ ಆಯ್ಕೆಯಾಗಿದೆ. ನಿರ್ದೇಶಕ ಸುದೀಪ್ತೋ ಸೇನ್ ಸಿನಿಮಾ ಆರಂಭಿಸುವ ಮುನ್ನ ನಾಲ್ಕು ವರ್ಷಗಳ ಕಾಲ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ' ಎಂದು ಹೇಳಿದರು. 

ಬಂಜೆ ಎಂಬ ಹೀಯಾಳಿಕೆಯಿಂದ ಡಿವೋರ್ಸ್​: ವಿಚ್ಛೇದನದ ಬಳಿಕ ಮಗುವಿನ ಅಮ್ಮ!

 ಇದು ಕೇರಳದ ಯುವತಿ ಶಾಲಿನಿ ಉನ್ನಿಕೃಷ್ಣ (ಅದಾ ಶರ್ಮಾ- Ada Sharma) ಅವರ ಪ್ರಶ್ನೆಯೊಂದಿಗೆ ಪ್ರಾರಂಭವಾಗುತ್ತದೆ. ಒಬ್ಬ ತನಿಖಾ ಅಧಿಕಾರಿ ಈಕೆಯನ್ನು  ವಿಚಾರಿಸುವುದನ್ನು ನೋಡಬಹುದು. ಅವರು ಶಾಲಿನಿ (Shalini Unnikrishna) ಯಾವಾಗ ಭಯೋತ್ಪಾದಕ ಗುಂಪಿಗೆ ಸೇರಿದಳು ಎಂದು ಕೇಳುತ್ತಾರೆ.  ಅದಕ್ಕೆ ಶಾಲಿನಿ ತಾನು ಯಾವಾಗ ISIS ಗೆ ಸೇರಿದೆ ಎಂದು ತಿಳಿಯುವ ಮೊದಲು, ತಾನು ಏಕೆ ಸೇರಿಕೊಂಡೆ,  ಹೇಗೆ ಸೇರಿಕೊಂಡೆ  ಎಂಬ ಕಥೆ ಹೇಳುತ್ತಾಳೆ.  ಈ ಟ್ರೇಲರ್ ನೋಡಿದಾಗ ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರು ಹೇಗೆ ವ್ಯವಸ್ಥಿತವಾಗಿ ಮತಾಂತರಗೊಳ್ಳುತ್ತಾರೆ ಎಂಬು ಕಹಿ ಸತ್ಯದ ಅರಿವಾಗುತ್ತದೆ.  ಹೀಗೆ ಅಪಹರಿಸಿ ಮತಾಂತರಗೊಳಿಸುವ ಹುಡುಗಿಯರನ್ನು ಮಕ್ಕಳನ್ನು ಹೆರುವ ಕಾರ್ಖಾನೆಗಳಾಗಿ ಪರಿವರ್ತಿಸಲಾಗಿದೆ. ಮತಾಂತರಗೊಂಡ ಹುಡುಗಿಯರನ್ನು ಐಸಿಸ್ ಭಯೋತ್ಪಾದಕರಾಗಲು ಸಿರಿಯಾ ಮತ್ತು ಇತರ ದೇಶಗಳಲ್ಲಿ ಎಸೆಯುವ ಭಯಾನಕ ಸತ್ಯ ಘಟನೆ ಇದರಲ್ಲಿ ಇದೆ.   

ಕೇರಳ ಸ್ಟೋರಿ ಚಿತ್ರದ ಟ್ರೇಲರ್ (Trailer) ಪ್ರೇಕ್ಷಕರನ್ನು ವಿಭಜಿಸುವಂತೆ ಮಾಡಿದೆ. 2 ನಿಮಿಷ 45 ಸೆಕೆಂಡ್‌ಗಳ ಈ ಟ್ರೇಲರ್‌ನಿಂದ ವೀಕ್ಷಕರಿಗೆ ಒಂದು ಕ್ಷಣವೂ ಕಣ್ಣು ತೆಗೆಯಲು ಸಾಧ್ಯವಾಗುತ್ತಿಲ್ಲ. 'ನಾವು ದೊಡ್ಡ ದುರಂತದ ಮೇಲೆ ಚಿತ್ರ ಮಾಡುತ್ತಿದ್ದೇವೆ. ಒಬ್ಬ ಸಿನಿಮಾ ನಿರ್ಮಾಪಕನಾಗಿ ನಾನು ಈ ಕಥೆಯನ್ನು ಹೇಳಲು ಬಯಸುತ್ತೇನೆ ಎಂದು ನಾನು ಭಾವಿಸಿದರೆ, ನಾನು ಪರ ಇದ್ದೀನೋ ಅಥವಾ ಇಲ್ಲವೋ ಎಂಬ ಚರ್ಚೆಯು ವ್ಯಕ್ತಿಯ ದೃಷ್ಟಿಕೋನವನ್ನು ಮಾತ್ರ ಪ್ರತಿಬಿಂಬಿಸುತ್ತದೆ. ಒಬ್ಬ ಚಲನಚಿತ್ರ ನಿರ್ಮಾಪಕನಾಗಿ ನಾನು ನನ್ನ ಹೃದಯ ಸ್ಪರ್ಶಿಸುವ ಕಥೆಯ ಬಗ್ಗೆ ಮಾತ್ರ ಯೋಚಿಸುತ್ತೇನೆ' ಎಂದಿದ್ದಾರೆ  ನಿರ್ದೇಶಕ ಸುದೀಪ್ತೋ ಸೇನ್.

Aishwarya Rai: ಹಿಟ್‌ ಫಿಲ್ಮ್ಸ್‌ ಕೊಡುತ್ತಿದ್ರೂ ಐದು ಚಿತ್ರಗಳಿಂದ ಐಶ್ವರ್ಯ ರೈ ಅವ್ರನ್ನ ಹೊರದಬ್ಬಿದ್ದೇಕೆ?

Latest Videos
Follow Us:
Download App:
  • android
  • ios