ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ನಟಿ ವಿದ್ಯುಲೇಖಾ ಮತ್ತು ಉದ್ಯಮಿ ಸಂಜಯ್.
ಜೀವಾ ಹಾಗೂ ನೀತಾನೆ ಎನ್ ಪೊನ್ವಸಂತಮ್ ಚಿತ್ರಗಳ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ವಿದ್ಯುಲೇಖಾ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಶುಭ ಸಮಾರಂಭದಲ್ಲಿ ಆಪ್ತರು ಮಾತ್ರ ಭಾಗಿಯಾಗಿದ್ದು, ಪ್ರೀ ವೆಡ್ಡಿಂಗ್ ಫೋಟೋಗಳು ವೈರಲ್ ಆಗುತ್ತಿವೆ.

ವಿದ್ಯುಲೇಖಾ ಸಹೋದರಿ ಗೀತಾಂಜಲಿ ಸೋಷಿಯಲ್ ಮೀಡಿಯಾದಲ್ಲಿ ಸಹೋದರಿ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಖಾಸಗಿ ಸಂದರ್ಶನವೊಂದರಲ್ಲಿ ಸಂಜಯ್ ಭೇಟಿಯಾದ ಕ್ಷಣದ ಬಗ್ಗೆ ವಿದ್ಯುಲೇಖಾ ಹೇಳಿದ್ದಾರೆ. 'ನನಗೆ ಡೇಟಿಂಗ್ ಆ್ಯಪ್ ಅಂದ್ರೆ ಇಷ್ಟ ಇಲ್ಲ. ಅದಕ್ಕೂ ಹೆಚ್ಚಾಗಿ ಆ ಆ್ಯಪ್‌ಗಳಲ್ಲಿ ಫೋಟೋ ಹಾಕುವುದು ಎಂದೆ ನನಗೆ ಆಗಲ್ಲ. ನನ್ನ ಸ್ನೇಹಿತೆ ಒತ್ತಾಯ ಮಾಡಿದ್ದಕ್ಕೆ ನಾನೂ ಸೇರಿಕೊಂಡೆ. ಅಲ್ಲಿ ನಾನು ಸಂಜಯ್ ಅವರನ್ನು ಭೇಟಿ ಮಾಡಿದೆ. ಅವರ ಪ್ರೊಫೈಲ್‌ನ ರೈಟ್ ಸ್ವೈಪ್ ಮಾಡಿದ್ದೀನಿ. ಅವರೊಂದಿಗೆ ಮಾತನಾಡಲು ಶುರು ಮಾಡಿದ ನಂತರ ಅವರು ನನಗೆ ಹಲವು ವರ್ಷಗಳಿಂದ ಪರಿಚಯವಿದೆ ಅನಿಸುತ್ತಿತ್ತು,' ಎಂದು ಹೇಳಿದ್ದಾರೆ.
ಲಾಕ್‌ಡೌನ್‌ನಲ್ಲಿ ಫ್ಯಾಟ್‌ನಿಂದ ಫಿಟ್ ಅಂಡ್ ಸ್ಲಿಮ್ ಆಗಿ ಬದಲಾದ ತಮಿಳು ನಟಿ
![]()
ಆಗಸ್ಟ್ 26ರಂದು ನಿಶ್ಚಿತಾರ್ಥ ಮಾಡಿಕೊಂಡ ವಿದ್ಯುಲೇಖಾ ಭಾವಿ ಪತಿ ಜೊತೆ ಕಡಲ ತೀರದಲ್ಲಿ ಮದುವೆಯಾಗಿದ್ದರು. ಮೇಹಂದಿ ಕಾರ್ಯಕ್ರಮ ಮನೆಯಲ್ಲಿಯೇ ನಡೆದಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ. 'ಬ್ಯಾಚುಲರ್ ಪಾರ್ಟಿಯಲ್ಲಿ ನನಗೆ ದಿವಾ ಫೀಲಿಂಗ್ ಬಂತು. ಅಷ್ಟು ಸ್ಪಾರ್ಕಲ್ ಆಗಿತ್ತು ನನ್ನ ಉಡುಪು,' ಎಂದಿದ್ದಾರೆ. ಸ್ನೇಹಿತರಿಂದ ಎರಡು ಸಲ ಬ್ಯಾಚುಲರ್ ಪಾರ್ಟಿ ಮಾಡಿಕೊಂಡಿದ್ದರು.
