ಮತ್ತೊಮ್ಮೆ ತಾಯಿಯಾಗಿ ಬಡ್ತಿ ಪಡೆದಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 'ನಮ್ಮ ಜೀವನದಲ್ಲಿ ಮತ್ತೊಂದು ಪವಾಡ ಸಂಭವಿಸಿದೆ. ನಮಗೆ ಮತ್ತೊಮ್ಮೆ ದೇವರ ಆಶೀರ್ವಾದ ಸಿಕ್ಕಿದೆ. ಈ ಸ್ಟೋರಿ ನೋಡಿ..
ಮದುವೆ ದಿನದಂದೇ ತಾಯಿಯಾದ ನಟಿ!
ಟಾಲಿವುಡ್‌ನ ಪ್ರಸಿದ್ದ ನಟಿಯೊಬ್ಬರಿಂದ ಒಳ್ಳೆಯ ಸುದ್ದಿ ಹೊರಬಂದಿದೆ. ಅವರು ಮತ್ತೊಮ್ಮೆ ತಾಯಿಯಾಗಿ ಬಡ್ತಿ ಪಡೆದಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 'ನಮ್ಮ ಜೀವನದಲ್ಲಿ ಮತ್ತೊಂದು ಪವಾಡ ಸಂಭವಿಸಿದೆ. ನಮಗೆ ಮತ್ತೊಮ್ಮೆ ದೇವರ ಆಶೀರ್ವಾದ ಸಿಕ್ಕಿದೆ. ಮತ್ತೊಂದು ಮಗು ಮಹಾಲಕ್ಷ್ಮಿನಮ್ಮ ಕುಟುಂಬವನ್ನು ಪ್ರವೇಶಿಸಿದೆ'ಎಂದಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿ ನಟಿ ಬರೆದುಕೊಂಡಿದ್ದು, 'ನಾವು ಮದುವೆಯಾಗಿ ಇದೀಗ ಒಂಬತ್ತು ವರ್ಷಗಳಾಗಿವೆ. ಅವರು ನನಗೆ ಅತ್ಯುತ್ತಮ ಪತಿ ಮಾತ್ರವಲ್ಲ, ಉತ್ತಮ ತಂದೆಯೂ ಹೌದು! ನಾವೀಗ ನಮ್ಮ ಕುಟುಂಬದಲ್ಲಿ ನಾಲ್ಕು ಜನರು. ಅಚ್ಚರಿ ಎಂಬಂತೆ, ನಮ್ಮ ಮದುವೆಯ ದಿನದಂದೇ ನಮ್ಮ ಕುಟುಂಬ ಪೂರ್ಣಗೊಂಡಿದೆ..' ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಹಲವರು ಇದನ್ನು ಲೈಕ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಅಭಿನಂದನೆಗಳ ಮಹಾಪೂರ
ಹೀಗೆ ತಮ್ಮ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವನ್ನೇ ಪಡೆದುಕೊಂಡ ನಟಿ, ಟಾಲಿವುಡ್ ಸ್ಟಾರ್ ಕನ್ನಡತಿ ಚೈತ್ರಾ ರೈ. ಅನೇಕರಿಗೆ ಈ ಹೆಸರು ನೆನಪಿಲ್ಲದಿರಬಹುದು, ಆದರೆ ನೆನಪಿಸಿದರೆ ನೆನಪಾಗೋದು ಖಂಡಿತ. ಅವರು ಎನ್‌ಸಿಆರ್ ದಿಯೋರಾ (NCR Deora) ಚಿತ್ರದಲ್ಲಿ ಖಳನಾಯಕ ಸೈಫ್ ಅಲಿ ಖಾನ್ ಅವರ ಪತ್ನಿಯಾಗಿ ಕಾಣಿಸಿಕೊಂಡ ನಟಿ. ಕನ್ನಡದ ಚೈತ್ರಾ ರೈ (Chaithra Rai) ಅವರು ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ನಟಿಸಿ ಅಲ್ಲಿನ ಪ್ರೇಕ್ಷಕರಿಗೆ ಚಿರಪರಿಚಿತರು. ಸಿನಿಮಾ ಪ್ರೇಕ್ಷಕರಿಗಿಂತ ಹೆಚ್ಚಾಗಿ ಈ ನಟಿ ಸೀರಿಯಲ್ ಪ್ರಿಯರಿಗೆ ಹೆಚ್ಚು ಅಚ್ಚುಮೆಚ್ಚು. ಕಾರಣ, ಅವರು ಧಾರಾವಾಹಿಗಳಲ್ಲಿ ನಟಿಸಿದ್ದೇ ಹೆಚ್ಚು.
ದೇವತೆ ಪಾತ್ರಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ
'ಅಷ್ಟಚಮ್ಮ' ಧಾರಾವಾಹಿ ನಟನೆಯೊಂದಿಗೆ ನಟಿ ಚೈತ್ರಾ ರೈ ಅವರು ಹೆಚ್ಚು ಪ್ರಚಾರ ಪಡೆದರು. ಬಳಿಕ ಅವರು ದಟ್ ಈಸ್ ಮಹಾಲಕ್ಷ್ಮಿ, ಒಕಾರಿಕಿ ಒಡಾರ್, ಅತ್ತೋ ಅತ್ತಮ್ಮ ಕೂತುರೋ, ಮನಸುನ ಮನಸ್ಯೆ, ಅತ್ತರಿಂಟೊ ಅಕ್ಕಚೆಲ್ಲೆಲ್ಲು ಮುಂತಾದ ಅನೇಕ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿದರು. ತಮ್ಮ ನಟನೆಯಿಂದ ಚೈತ್ರಾ ರೈ ಅವರು ತೆಲುಗು ದೂರದರ್ಶನ ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿದ್ದಾರೆ. ಧಾರಾವಾಹಿಗಳ ಜೊತೆಗೆ, ಚೈತ್ರಾ ದೇವತೆ ಪಾತ್ರಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ.
ಇನ್ನು, ವೈಯಕ್ತಿಕ ವಿಷಯಕ್ಕೆ ಬಂದರೆ, ನಟಿ ಚೈತ್ರಾ ರೈ ಅವರು 2016 ರಲ್ಲಿ ಎಂಜಿನಿಯರ್ ಪ್ರಸನ್ನ ಶೆಟ್ಟಿ ಅವರನ್ನು ವಿವಾಹವಾದರು. ಈ ದಂಪತಿಗೆ 2021ರಲ್ಲಿ ಮಗಳು ಜನಿಸಿದ್ದಾಳೆ. ಇದೀಗ ಮತ್ತೊಂದು ಹೆಣ್ಣುಮಗುವನ್ನು ಈ ದಂಪತಿ ಪಡೆದಿದ್ದಾರೆ. ಈ ಬಗೆಗಿನ ಪೋಸ್ಟ್ ಇದೀಗ ವೈರಲ್ ಆಗಿದ್ದು, ಈ ಮೂಲಕ ತೆಲುಗು ನೆಲದಲ್ಲಿ ಮಿಂಚುತ್ತಿರುವ ಕನ್ನಡತಿ ನಟಿ ಚೈತ್ರಾ ರೈ ಅವರು ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾರೆ.


