Asianet Suvarna News Asianet Suvarna News

ನಟಿ ಸ್ವರಾ ಭಾಸ್ಕರ್​ಗೆ ಹೆಣ್ಣು ಮಗು: ತಾಕತ್ತಿದ್ರೆ ಹಿಂದೂ ಹೆಸ್ರು ಇಡಿ ಅಂತ ಚಾಲೆಂಜ್​ ಹಾಕ್ದೋರು ಶಾಕ್​​!

ನಟಿ ಸ್ವರಾ ಭಾಸ್ಕರ್​ ಹಾಗೂ ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ ಹೆಣ್ಣುಮಗುವಿನ ಪಾಲಕರಾಗಿದ್ದು, ಮಗುವಿನ ಹೆಸರು ಕೇಳಿ ಟ್ರೋಲಿಗರು ಟ್ರೋಲ್​ ಮಾಡುತ್ತಿದ್ದಾರೆ. 
 

Actress Swara Bhaskar became baby girl mother name revealed suc
Author
First Published Sep 25, 2023, 9:38 PM IST

ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ ಅವರು  ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ (Fahad Zirar Ahmad) ಅವರೊಂದಿಗೆ  ಕಳೆದ ಜನವರಿ 6 ರಂದು ಮದುವೆಯಾಗಿದ್ದು, ಇದೀಗ ಹೆಣ್ಣುಮಗುವಿನ ಪೋಷಕರಾಗಿದ್ದಾರೆ. ಮೊನ್ನೆ ಅಂದರೆ ಸೆಪ್ಟೆಂಬರ್​ 23ರಂದು ಮಗುವಿಗೆ ಜನ್ಮ ನೀಡಿರುವ ಸ್ವರಾ ಅವರು ಈ ಖುಷಿಯ ವಿಷಯವನ್ನು ಮೂರು ದಿನಗಳ ಬಳಿಕ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ಜೋಡಿ ಈ ಹಿಂದೆ ದಿಢೀರ್​ ಆಗಿ ಈ ಬಗ್ಗೆ ಘೋಷಿಸಿತ್ತು.  ತಾವು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು (Special Marriage Act) ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡಿರುವುದಾಗಿ  (Registered)  ತಿಳಿಸಿದ್ದರು. ಸ್ವರಾ ತಮ್ಮ  ಪೋಷಕರೊಂದಿಗೆ ಹಾಜರಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಾಯಿಸಿದ್ದ ಫೋಟೋ ಶೇರ್​ ಮಾಡಿದ್ದರು.  ಕೆಲವೊಮ್ಮೆ ಹತ್ತಿರವೇ ಇರುವವರನ್ನು ದೂರೆಲ್ಲೋ ಹುಡುಕುತ್ತೇವೆ. ಆದರೆ ಫಹಾದ್​ ಅವರು ಹತ್ತಿರದಲ್ಲಿಯೇ ಇದ್ದಾಗ ಅವರೇ ನನ್ನ ಪ್ರೀತಿ ಎನ್ನುವುದು ತಿಳಿಯಲು ಹೆಚ್ಚುಹೊತ್ತು ಬೇಕಾಗಲಿಲ್ಲ ಎಂದು ಸ್ವರಾ ಹೇಳಿದ್ದರು. ನಂತರ ಫೆಬ್ರುವರಿ ತಿಂಗಳಿನಲ್ಲಿ ಇವರ ಮದುವೆ ಮುಸ್ಲಿಂ ಸಂಪ್ರದಾಯದಂತೆ ನಡೆದಿತ್ತು.  

 ಸ್ವರಾ ಮತ್ತು ಫಹಾದ್ ಇಬ್ಬರೂ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಫೋಟೋ ಶೂಟ್​ ಮಾಡಿಸಿಕೊಂಡಿದ್ದರು.  ಅದರ ಚಿತ್ರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ತಮ್ಮ ಪ್ರೀತಿಯ ಬಗ್ಗೆ ವಿಶೇಷವಾದ ವಾಕ್ಯಗಳನ್ನು ಬರೆದುಕೊಂಡಿದ್ದರು. ಅದನ್ನು ನೋಡಿದ್ದ ಟ್ರೋಲಿಗರು, ನಿಮ್ಮ ಪ್ರೀತಿ ನಿಜವಾಗಿದ್ದರೆ, ಧೈರ್ಯವಿದ್ದರೆ ಮಗುವಿಗೆ ಹಿಂದೂ ಹೆಸರು ಇಡಿ ನೋಡೋಣ ಎಂದಿದ್ದರು. ಅಷ್ಟಕ್ಕೂ ಸ್ವರಾ ಭಾಸ್ಕರ್​ ಮದುವೆಯಾದ ಹೊಸತರದಲ್ಲಿ ಇವರ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು.  ಮುಸ್ಲಿಂ ಯುವಕನ ಜೊತೆ ಮದುವೆಯಾಗಿರುವುದಕ್ಕೆ ಈ ಟೀಕೆಗಳು ಎದ್ದಿದ್ದವು.  ಸ್ವರಾ  ವಿರುದ್ಧ ಸಾಧ್ವಿ ಪ್ರಾಚೀ ಸಿಂಗ್ ವಾಗ್ದಾಳಿ ನಡೆಸಿದ್ದರು.  ದೆಹಲಿಯಲ್ಲಿ ನಡೆದಿದ್ದ  ಶ್ರದ್ಧಾ ವಾಕರ್ ಹತ್ಯೆಯಂತೆಯೇ ಸ್ವರಾ ಭಾಸ್ಕರ್ ಕೂಡ ಹತ್ಯೆಯಾಗಬಹುದು ಎಂದು ಹೇಳಿದ್ದರು. 

5 ವರ್ಷ ಸಂಬಂಧ ಲೇಖಕನೊಂದಿಗೆ, ಮದ್ವೆ ಮುಸ್ಲಿಂ ರಾಜಕಾರಣಿಯೊಂದಿಗೆ! ಸ್ವರಾ ಭಾಸ್ಕರ್​ ಇತಿಹಾಸ ವೈರಲ್​

ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವರಾ ಫ್ರಿಡ್ಜ್ ನೋಡಬೇಕಿತ್ತು ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದರು.  ಆದರೆ ಸ್ವರಾ (Swara Bhaskar) ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಮದುವೆಯಾದ ಆರು ತಿಂಗಳಿಗೆ ತಾವು ಗರ್ಭಿಣಿ ಎನ್ನುವ ಫೋಟೋ ಶೇರ್​ ಮಾಡಿಕೊಂಡಿದ್ದರು. ಆಗ ಮಗುವಿನ ಹೆಸರು ಹಿಂದೂ ಇಟ್ಟರೆ ನೀವು ಹೇಳಿದಂತೆ ಕೇಳುತ್ತೇವೆ ಎಂದಿದ್ದರು. ಆದರೆ ಇದೀಗ ಹೆಸರು ಕೂಡ ರಿವೀಲ್​ ಆಗಿದೆ. ಮಗಳಿಗೆ ರಬಿಯಾ ಎಂದು ಹೆಸರು ಇಡಲಾಗಿದೆ. ರಬಿಯಾ ಉರ್ದು ಹೆಸರಾಗಿದೆ. ಉರ್ದುವಿನಲ್ಲಿ ಇದರ ಅರ್ಥ ಹುಡುಕಿದರೆ ಲೌಕಿಕ ಆಸ್ತಿಯನ್ನು ತ್ಯಜಿಸುವ ಸನ್ಯಾಸಿಗಳು ಅಥವಾ  ತಪಸ್ವಿ ಎಂದಾಗಿದೆ. ಒಟ್ಟಿನಲ್ಲಿ ಮುಸ್ಲಿಮರ ಹೆಸರೇ ಇಟ್ಟು ನಿಮ್ಮ ಪ್ರೀತಿ ತೋರಿಸಿದಿರಲ್ಲ ಎಂದು ಟ್ರೋಲಿಗರು ಕಾಲೆಳೆಯುತ್ತಿದ್ದಾರೆ. 
 
ಇದಾಗಲೇ ಹಿಂದೂ ಯುವತಿಯರನ್ನು ವಿವಾಹವಾಗಿರುವ ಮುಸ್ಲಿಂ ನಟರನ್ನು ಈ ಕೇಸ್​ನಲ್ಲಿಯೂ ಎಳೆದುತಂದಿರುವ ಟ್ರೋಲಿಗರು, ಹೇಗೆ ತಮ್ಮ ಮಕ್ಕಳನ್ನು ಖಾನ್​ ಮಾಡಿದರೋ ಹಾಗೆಯೇ ನೀವೂ ಮಾಡಿದಿರಿ ಬಿಡಿ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ, ನಟಿ ಅಮ್ಮನಾದ ಖುಷಿಯಲ್ಲಿದ್ದರೂ ಟ್ರೋಲಿಗರು ಸುಮ್ಮನಿರಲು ಬಿಡುತ್ತಿಲ್ಲ. ಆದರೆ ಇದ್ಯಾವ ಟ್ರೋಲಿಗೂ ನಟಿ ಸ್ವರಾ ಭಾಸ್ಕರ್​ ಕೇರ್​ ಮಾಡದೇ ಫೋಟೋ ಶೂಟ್​ ಮಾಡಿಸಿಕೊಳ್ಳುತ್ತಲೇ ಇದ್ದಾರೆ. 

ಸ್ವರಾ ಭಾಸ್ಕರ್​ ಬೇಬಿ ಬಂಪ್ ಷೋ: ಧೈರ್ಯವಿದ್ರೆ ಮಗುವಿಗೆ ಹಿಂದೂ ಹೆಸರಿಡಿ ಎಂದ ಫ್ಯಾನ್ಸ್​!
 

Follow Us:
Download App:
  • android
  • ios