ಮಾಜಿ ನೀಲಿತಾರೆಗೆ ಹರಿದು ಬಂದಿತ್ತು ಜೀವನ ಬೆದರಿಕೆ ಮೇಲ್ ಮತ್ತು ಕರೆಗಳು. 20ರ ವಯಸ್ಸಿನಲ್ಲಿ ಎದುರಿಸಿದ ಘಟನೆ ಬಗ್ಗೆ ಹಂಚಿಕೊಂಡ ಸನ್ನಿ...

ಬಾಲಿವುಡ್ ಚಿತ್ರರಂಗದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಸಾಕಷ್ಟು ಹೆಸರು ಮತ್ತು ಹಣ ಸಂದಾಪನೆ ಮಾಡಿದ ಮಾಜಿ ನೀಲಿತಾರೆ ಸನ್ನಿ ಲಿಯೋನ್‌ಗೆ ಜೀವ ಬೆದರಿಕೆ ಕರೆ ಮತ್ತು ಮೇಲ್‌ಗಳು ಬರುತ್ತಿತ್ತಂತೆ. 20ರ ವಯಸ್ಸಿನಲ್ಲಿದ್ದಾಗ ನನಗೆ ಏನೂ ಗೊತ್ತಾಗುತ್ತಿರಲಿಲ್ಲ ನಾನು ಒಳ್ಳೆ ಹುಡುಗಿ ಎಂದು ಹೇಳಿಕೊಂಡಿದ್ದಾರೆ. ಬಾಲಿವುಡ್‌ಗೆ ಮಾತ್ರ ತಮ್ಮ ಪ್ರತಿಭೆಯನ್ನು ಸೀಮಿತ ಮಾಡಿಕೊಳ್ಳದೆ ಸನ್ನಿ ಹೇಗೆ ತಮ್ಮ ಮೇಲಿರುವ ಕೆಟ್ಟ ಅಭಿಪ್ರಾಯವನ್ನು ಬದಲಾಯಿಸಿಕೊಂಡರು ಎಂದು ಹೇಳಿಕೊಂಡಿದ್ದಾರೆ. 

'ನನ್ನ ಕರಿಯರ್‌ ಆರಂಭದಲ್ಲಿ ನನಗೆ ಬೆದರಿಕೆ ಮೇಲ್‌ಗಳು ಬರುತ್ತಿದ್ದವು. ಸಾಯಿಸಿಬಿಡ್ತೀವಿ ಎಂದು ಕೆಲವರು ಮೆಸೇಜ್ ಕಳುಹಿಸುತ್ತಿದ್ದರು. ಇದನ್ನು ನೋಡಿ ಭಾರತದ ಜನ ನನ್ನ ಮೇಲೆ ಬಹಳ ಕೋಪ ಇದೆ ಎಂದುಕಕೊಂಡಿದ್ದೆ. ಆಗ ಬಂದ ಬೆದರಿಕೆಗಳು ನನ್ನ ಮೇಲೆ ತುಂಬಾನೇ ಪ್ರಭಾವ ಬೀರಿದ್ದವು. ಆಗ ನನ್ನ ವಯಸ್ಸು 20 ವರ್ಷ. ನನಗೆ ಯಾವುದು ಸರಿ ಯಾವುದು ತಪ್ಪು ಎಂದು ಹೇಳುವವರು ಇರಲಿಲ್ಲ. ಅಂತಹ ಬೆದರಿಕೆಗಳು ಈಗ ಬಂದರೆ ನನಗೇನು ಅನ್ನಿಸುವುದಿಲ್ಲ. ಯಾಕಂದರೆ ಈಗ ನಾನು ಮಾನಸಿಕವಾಗಿ ಬಹಳ ಗಟ್ಟಿಯಾಗಿದ್ದೇನೆ' ಎಂದು ಆ ದಿನಗಳ ಬಗ್ಗೆ ನೆನಪಿಸಿಕೊಂಡ ಸನ್ನಿ ಭಾವುಕರಾಗಿದ್ದಾರೆ. 

19ನೇ ವಯಸ್ಸಿಗೆ ಅಡಲ್ಟ್‌ ಸಿನಿಮಾ ಕೆಲಸಕ್ಕೆ ಸೇರಿಕೊಂಡ ಸನ್ನಿ 'ನಾನು ಈ ಕೆಲಸ ಆರಂಭಿಸಿದ್ದಾಗ ಜನರು ನನ್ನ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ ಅಲ್ಲದೆ ಇರೋ ಬರೋ ಕೋಪನೆಲ್ಲಾ ನನ್ನ ಮೇಲೆ ತೋರಿಸಿದ್ದರು' ಎಂದು ಸನ್ನಿ ಹೇಳಿದ್ದಾರೆ. 

ಸನ್ನಿ ವಿರುದ್ಧ ಕ್ರಿಮಿನಲ್ ಕೇಸ್:

ನಟಿ ಸನ್ನಿ ಲಿಯೋನ್‌ ಅಥವಾ ಕರಣ್‌ಜೀತ್‌ ಕೌರ್‌ ವೋಹ್ರಾ ವಿರುದ್ಧದ ಕ್ರಿಮಿನಲ್‌ ಮೊಕದ್ದಮೆಗೆ ಕೇರಳ ಹೈಕೋರ್ಟ್‌ ತಡೆ ನೀಡಿದೆ.ಸನ್ನಿ ಲಿಯೋನ್‌, ಆಕೆಯ ಪತಿ ಡೇನಿಯಲ್‌ ವೆಬೆರ್‌ ಹಾಗೂ ಅವರ ಸಿಬ್ಬಂದಿ ವಿರುದ್ಧ ಮೋಸ ಪ್ರಕರಣ ದಾಖಲಾಗಿತ್ತು. ಈ ಕುರಿತಾಗಿ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಅರ್ಜಿದಾರರು ಕೋರಿದ್ದರು. ಇನ್ನೊಂದೆಡೆ ಸನ್ನಿ ಲಿಯೋನ್‌ ತಮ್ಮ ವಿರುದ್ಧ ದಾಖಲಾಗಿರುವ ಕೇಸ್‌ ಅನ್ನು ವಜಾ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿಯಾದ್‌ ರೆಹಮಾನ್‌, ಆಕೆಯ ವಿರುದ್ಧದ ಕ್ರಿಮಿನಲ್‌ ಮೊಕದ್ದಮೆಗೆ ತಡೆ ನೀಡಿದ್ದಾರೆ. ಅರ್ಜಿಯ ಮುಂದಿನ ವಿಚಾರಣೆಯ ದಿನಾಂಕದವರೆಗೆ ನ್ಯಾಯಾಲಯವು ಕ್ರಿಮಿನಲ್ ಪ್ರಕ್ರಿಯೆಗಳಿಗೆ ತಡೆ ನೀಡಿದೆ. ಕೇರಳ ಮೂಲದ ಈವೆಂಟ್ ಮ್ಯಾನೇಜರ್ ನೀಡಿದ ದೂರಿನ ಆಧಾರದ ಮೇಲೆ ದಾಖಲಾದ ಅಪರಾಧದಲ್ಲಿ ಲಿಯೋನ್, ಅವರ ಪತಿ ಮತ್ತು ಅವರ ಉದ್ಯೋಗಿ ಆರೋಪಿಗಳಾಗಿದ್ದಾರೆ. ಈವೆಂಟ್‌ಗಳಲ್ಲಿ ಭಾಗವಹಿಸಲು ಹಾಗೂ ನೃತ್ಯ ಪ್ರದರ್ಶನ ನೀಡಲು ಸನ್ನಿ ಲಿಯೋನ್‌ಗೆ ಲಕ್ಷಾಂತರ ಹಣ ಪಾವತಿ ಮಾಡಲಾಗಿತ್ತು. ಹಾಗಿದ್ದರೂ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ ಎಂದು ದೂರುದಾರರು ಆರೋಪ ಮಾಡಿದ್ದರು.

ಮಂಡ್ಯ ಜನರ ಅಭಿಮಾನಕ್ಕೆ‌ ಮನಸೋತ ಹಾಟ್‌ ನಟಿ ಸನ್ನಿ ಲಿಯೋನ್..!

ಸನ್ನಿ ಕನ್ನಡ ಸಿನಿಮಾ:

ಜೋಗಿ ಪ್ರೇಮ್ ನಿರ್ದೇಶನ ಮಾಡಿರುವ ಡಿಕೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಸನ್ನಿ ಲಿಯೋನ್ ಎಂಟ್ರಿ ಕೊಟ್ಟರು. ಇದಾದ ಮೇಲೆ ಲವ್ ಯು ಆಲಿಯಾ , ಚಾಂಪಿಯನ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಮತ್ತೊಂದು ವಿಶೇಷತೆ ಏನೆಂದರೆ ಸನ್ನಿ ಲಿಯೋನ್‌ಗೆ ಮಂಡ್ಯದಲ್ಲಿ ದೊಡ್ಡ ಅಭಿಮಾನಿಗಳ ಸಂಘವಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ ಫೋಟೋ ವೈರಲ್ ಸನ್ನಿ ತಲುಪಿದೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಸನ್ನಿ ನಿಮ್ಮ ಪ್ರೀತಿಗೆ ಆಭಾರಿ ಆದಷ್ಟು ಬೇಗ ನಿಮ್ಮ ಊರಿಗೆ ಬರುವೆ ಎಂದಿದ್ದಾರೆ.