ಹೊಸ ಆಸೆಯೊಂದನ್ನು ತೆರೆದಿಟ್ಟಾರೆ ಸ್ಯಾಂಡಲ್ವುಡ್ ತಾರೆ ಶ್ರುತಿ ಹರಿಹರನ್
ಮೀ ಟೂನಂಥ ಬೃಹತ್ ಚಳವಳಿಯನ್ನು ಆರಂಭಿಸಿ ಸದ್ಯ ತೆರೆಮರೆಗೆ ಸರಿದಿರುವ ನಟಿ ಶ್ರುತಿ ಹರಿಹರನ್ ಈಗ ಹೊಸದೊಂದು ಕನಸನ್ನು ಜನತೆಯ ಮುಂದಿಟ್ಟಿದ್ದಾರೆ. ಏನದು?

ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಬಹುಭಾಷಾ ನಟಿ ಶ್ರುತಿ ಹರಿಹರನ್ ಎಂದಾಕ್ಷಣ ಮೀ ಟೂ ಚಳವಳಿ (Me too). 2018ರಲ್ಲಿ ಚಿತ್ರರಂಗ ಮಾತ್ರವಲ್ಲದೇ ಹಲವಾರು ಕ್ಷೇತ್ರಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿ ಬೃಹತ್ ಚಳವಳಿಯನ್ನೇ ಶುರು ಮಾಡಿದವರು ಇವರು. ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯದ (sexual herrasement) ಕುರಿತು ಒಬ್ಬೊಬ್ಬರೇ ನಟಿಯರು ಮಾತ್ರವಲ್ಲದೇ ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರು ಹೇಳಿಕೊಳ್ಳಲು ಮುಂದೆ ಬಂದು ಮೀ ಟೂ ಅಭಿಯಾನವನ್ನು ಶುರು ಮಾಡಲು ಆರಂಭಿಸಿದ್ದೇ ಈ ನಟಿಯಿಂದ. ಕೊನೆಗೆ ಮದುವೆ, ಮಗು ಎಂಬುದಕ್ಕೆ ಸೀಮಿತವಾದ ಶ್ರುತಿ ಮಗುವಾದ ಮೇಲೆ ಹಾಗೂ ಈ ಮೀ ಟೂ ಗಲಾಟೆಯ ನಂತರ ಸಿನಿಮಾದಲ್ಲಿ ಹೆಚ್ಚು ಅವಕಾಶಗಳು ಸಿಗದೇ ದೂರವೇ ಉಳಿದರು.
ಡ್ಯಾನ್ಸರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಇವರು. ನಂತರ ಶ್ರುತಿಗೆ (Sruthi Hariharan) ನಾಯಕಿಯಾಗಿ ನಟಿಸುವ ಅವಕಾಶ ದೊರೆಯಿತು. 2012 ರಲ್ಲಿ ತೆರೆ ಕಂಡ ಮಲಯಾಳಂನ 'ಸಿನಿಮಾ ಕಂಪೆನಿ' ಎಂಬ ಸಿನಿಮಾ ಮೂಲಕ ಶ್ರುತಿ ನಾಯಕಿಯಾದರು. ಕನ್ನಡ ಚಿತ್ರರಂಗದಲ್ಲಿ ಇವರ ಮೊದಲ ಚಿತ್ರ ಲೂಸಿಯಾ (Lusia). ಇವರು ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಕಾರಣ, ನಟನೆ ಇವರಿಗೆ ಸಲೀಸಾಗಿ ಒಲಿಯಿತು. ಇವರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೇ ಎರಡು ಫಿಲಂ ಫೇರ್ ಅವಾರ್ಡ್ (fimlfare award) ಸೌತ್ ಪ್ರಶಸ್ತಿ, ಸೈಮಾ ಪ್ರಶಸ್ತಿ ಮತ್ತು ನಾತಿಚರಾಮಿ ಚಿತ್ರದ ಅಭಿನಯಕ್ಕಾಗಿ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದಿದ್ದಾರೆ. ಕಳೆದ ವರ್ಷ ತೆರೆ ಕಂಡಿದ್ದ ಹೆಡ್ ಬುಷ್ ಚಿತ್ರದಲ್ಲಿ ಕೂಡಾ ಶ್ರುತಿ ನಟಿಸಿದ್ದರು.
Box Office Queen: 'ಬಾಕ್ಸ್ ಆಫೀಸ್ ಕ್ವೀನ್' ಪಟ್ಟ ಉಲ್ಟಾ ಪಲ್ಟಾ ಆಗೋಯ್ತಲ್ಲಾ!
ಸದ್ಯಕ್ಕೆ ಶ್ರುತಿ 'ಸ್ಟ್ರಾಬೆರಿ' ಹಾಗೂ 'ಸಾರಾಂಶ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಲೂಸಿಯಾ ಸಿನಿಮಾದ ನಂತರ ಕನ್ನಡದಲ್ಲಿ ಇವರು ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಉರ್ವಿ, ನಾತಿಚರಾಮಿ, ಬ್ಯೂಟಿಫುಲ್ ಮನಸುಗಳು ಚಿತ್ರಗಳಲ್ಲಿನ ನಟನೆಗೆ ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಸಾರ್ವಜನಿಕ ಮನ್ನಣೆಯನ್ನು ಪಡೆದಿದ್ದಾರೆ. 2016ರಲ್ಲಿ ಇವರು ನಿರ್ಮಾಣ ಸಂಸ್ಥೆ 'ಕಲಾತ್ಮಕ'ವನ್ನು ಸ್ಥಾಪಿಸಿ ಅದರಲ್ಲಿಯೂ ಸೈ ಎನಿಸಿಕೊಂಡವರು. ಸದ್ಯ ಎರಡು ಚಿತ್ರಗಳಲ್ಲಿ ಬಿಜಿಯಾಗಿರುವ ನಟಿ ಈಗ ಹೊಸದೊಂದು ಕನಸನ್ನು ಎಲ್ಲರ ಮುಂದಿಟ್ಟಿದ್ದಾರೆ.
ಅದೇನೆಂದರೆ, ಇವರು ಸಿನಿಮಾ ನಿರ್ದೇಶನ (direction) ಮಾಡಬೇಕಂತೆ. ಇದು ತಮ್ಮ ಬಹು ದಿನಗಳ ಕನಸು ಎಂದಿದ್ದಾರೆ. ಸಾಮಾನ್ಯವಾಗಿ ಚಿತ್ರರಂಗಕ್ಕೆ ನಟನಾ ವೃತ್ತಿಗೆ ಕಾಲಿಟ್ಟವರು ಇಂಥದ್ದೊಂದು ನಿರ್ದೇಶನದ ಕನಸು ಕಾಣುವುದು ಸಹಜ. ಇದಾಗಲೇ ಹಲವಾರು ನಟ-ನಟಿಯರು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಶ್ರುತಿ ಅವರಿಗೂ ಸಿನಿಮಾ ನಿರ್ದೇಶನ ಮಾಡುವ ಆಸೆ ಉಂಟಾಗಿದೆ. ಇದೀಗ ಅವರ ಅಭಿಮಾನಿಗಳು ಯಾವ ರೀತಿಯ ಚಿತ್ರವನ್ನು ಶ್ರುತಿ ನಿರ್ದೇಶನ ಮಾಡಬಹುದು ಎಂದು ನೋಡಲು ಕಾತರರಾಗಿದ್ದಾರೆ. ಸೂಕ್ಷ್ಮ ಕಥೆ ಮತ್ತು ವಿಭಿನ್ನ ಪಾತ್ರಗಳ ಮೂಲಕ ಶ್ರುತಿ ಅವರು ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಇವರ ನಿರ್ದೇಶನದ ಚಿತ್ರವೂ ಇದೇ ಆಗಲಿದೆಯೇ ಎಂದು ಫ್ಯಾನ್ಸ್ ಅಂದುಕೊಳ್ಳುತ್ತಿದ್ದಾರೆ.
Rakhi Sawant: ನಾನು ಫ್ರಿಡ್ಜ್ ಒಳಗೆ ಹೋಗಲ್ಲ ಅಂತ ಗೋಳೋ ಎಂದ ರಾಖಿ ಸಾವಂತ್ಗೆ ಆಗಿದ್ದಾದ್ರೂ ಏನು?
ಅಷ್ಟಕ್ಕೂ ಹೇಳುವುದಾದರೆ ಸಿನಿ ಕ್ಷೇತ್ರದಲ್ಲಿ ಅದರಲ್ಲಿಯೂ ಸ್ಯಾಂಡಲ್ವುಡ್ನಲ್ಲಿ (Sandlewood) ಮಹಿಳಾ ನಿರ್ದೇಶಕಿಯರು ತುಂಬಾ ಕಡಿಮೆ. ಆದ್ದರಿಂದ ಇಂಥದ್ದೊಂದು ಸಾಹಸಕ್ಕೆ ಕೈ ಹಾಕಲು ಶ್ರುತಿ ಮುಂದಾಗಿದ್ದಾರೆ. ಅಂದಹಾಗೆ ಶ್ರುತಿ ಮೂಲತ: ತಮಿಳು ಕುಟುಂಬಕ್ಕೆ ಸೇರಿದವರು. ಇವರು ಹುಟ್ಟಿದ್ದು ಕೇರಳದಲ್ಲಿ. ನಂತರದ ದಿನಗಳಲ್ಲಿ ಇವರ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತು. ಬೆಂಗಳೂರಿನಲ್ಲೇ ವಿದ್ಯಾಭ್ಯಾಸ ಮಾಡಿದ ಶ್ರುತಿ ಡ್ಯಾನ್ಸ್‌ನಲ್ಲೂ ಎತ್ತಿದ ಕೈ. ಕನ್ನಡದಲ್ಲಿ ಇವರು ನಟಿಸಿದ ಮೊದಲ ಚಿತ್ರ 'ಲೂಸಿಯಾ'. ಚಿತ್ರದಲ್ಲಿ ನೀನಾಸಂ ಸತೀಶ್‌ಗೆ ಶ್ರುತಿ ನಾಯಕಿಯಾಗಿದ್ದರು.
2017ರಲ್ಲಿ ಶ್ರುತಿ ಹರಿಹರನ್ ತಾವು ಪ್ರೀತಿಸುತ್ತಿದ್ದ ರಾಮ್ ಕುಮಾರ್ ಎಂಬುವರನ್ನು ಮದುವೆಯಾದರು. ಆದರೆ ಶ್ರುತಿ ತಾವು ಮದುವೆಯಾಗಿರುವ ವಿಚಾರನ್ನು ಸೀಕ್ರೇಟ್ ಆಗಿ ಇಟ್ಟಿದ್ದರು. ಮಿ ಟೂ ವಿವಾದದ ಸಮಯದಲ್ಲಿ ಈ ವಿಚಾರ ರಿವೀಲ್ ಆಗಿತ್ತು. ಶ್ರುತಿ ಹರಿಹರನ್ ಹಾಗೂ ರಾಮ್ ಕುಮಾರ್ ದಂಪತಿಗೆ ಜಾನಕಿ ಎಂಬ ಮಗುವಿದೆ. ತಮ್ಮ ಪತಿ ಹಾಗೂ ಮಗಳ ಫೋಟೋಗಳನ್ನು ಶ್ರುತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.