Asianet Suvarna News Asianet Suvarna News

ವೇದಿಕೆ ಮೇಲೆ ಕಣ್ಣೀರಿಟ್ಟು ನೋವು ತೋಡಿಕೊಂಡ ನಟಿ ಶ್ರೀಲೀಲಾ; ಬಾಲಯ್ಯ ಎದುರು ಏನಾಯ್ತು?

ಅದ್ಧೂರಿಯಾಗಿ ನಡೆಯಿತ್ತು ಭಗವಂತ್ ಕೇಸರಿ ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮ. ವೇದಿಕೆ ಮೇಲೆ ನಟಿ ಶ್ರೀಲೀಲಾ ಭಾವುಕರಾಗಿದ್ದು ಯಾಕೆ? 

Actress Sreeleela breakdown infront Nandamuri Balakrishna during Bhagavanth Kesari trailer vcs
Author
First Published Oct 9, 2023, 11:49 AM IST

ಟಾಲಿವುಡ್‌ ಬಹು ನಿರೀಕ್ಷೆಯ ಸಿನಿಮಾ ಭವಂತ್ ಕೇಸರಿ ಅಕ್ಟೋಬರ್ 19ರಂದು ವಿಶ್ವಾದಾದ್ಯಂತ ಬಿಡುಗಡೆಯಾಗುತ್ತಿದೆ. ಹೀಗಾಗಿ ಇತ್ತೀಚಿಗೆ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು. ವೇದಿಕೆ ಮೇಲೆ ಇಡೀ ಸಿನಿಮಾ ತಂಡ ನಿಂತು ಜನರ ಜೊತೆ ಮಾತನಾಡಿದ್ದಾರೆ. ಆದರೆ ನಟಿ ಶ್ರೀಲೀಲಾ ಕೊಂಚ ಭಾವುಕರಾಗಿದ್ದಾರೆ.

'ಈ ಚಿತ್ರದಲ್ಲಿ ನಾನು ವರಂಗಲ್ ಹುಡುಗಿಯಾಗಿ ನಟಿಸಿದ್ದೇನೆ. ನಾನು ಅಸೇ ರೀತಿ ಇಲ್ಲಿಗೆ ಬಂದೆ. ಅನಿಲ್ ರಾವಿಪುಡಿ ನನಗೆ ಅಂತಹ ಸೋಲ್ ಕನೆಕ್ಟ್ ಆಗುವ ಪಾತ್ರ ಕೊಟ್ಟಿದ್ದಾರೆ. ತುಂಬಾ ಧನ್ಯವಾದಗಳು. ನಾನು ಅನೇಕ  ಸಿನಿಮಾ ಕಥೆಗಳಲ್ಲಿ ನಟಿಸುತ್ತಿದ್ದೇನೆ ಆದರೆ ಈ ಪಾತ್ರ ನನಗೆ ಹೆಚ್ಚಾಗಿ ಕನೆಕ್ಟ್ ಆಗಿದೆ. ದಿನಗಳು ಕಳೆದಂತೆ ನಾನು ಆ ಪಾತ್ರವಾಗಿ ಬದಲಾದೆ. ತುಂಬಾ ಸುಂದರವಾಗಿ ಚಿತ್ರೀಕರಿಸಿದ್ದಾರೆ' ಎಂದು ಶ್ರೀಲೀಲಾ  ವೇದಿಕೆ ಮೇಲೆ ಮಾತನಾಡಿದ್ದಾರೆ.

ಶೋಲ್ಡರ್ ಲೆಸ್ ಫೋಟೋ ಹಾಕಿದ ಶ್ರೀಲೀಲಾಗೆ ಗಾಂಚಾಲಿ ಬಿಡು, ಕನ್ನಡ ಮಾತಾಡು ಎನ್ನೋದಾ ನೆಟ್ಟಿಗರು?

'ಬಾಲಕೃಷ್ಣ ಅವರೊಟ್ಟಿಗೆ ನನಗೆ ಭಾವನಾತ್ಮಕ ಸನ್ನಿವೇಶಗಳಿವೆ. ಅವರೊಟ್ಟಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವ. ಈ ಚಿತ್ರದಲ್ಲಿ ಕೆಲವು ದೃಶ್ಯಗಳಲ್ಲಿ ನಟಿಸುವಾಗ ಕಟ್ ಹೇಳಿದರೂ ಅದೇ ಮೂಡ್‌ನಲ್ಲಿ ಇರುತ್ತಿದ್ದೆ. ತಕ್ಷಣವೇ ಹೊರಗೆ ಬರಲು ಆಗುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಅವರು ನನ್ನನ್ನು ನಗುವಂತೆ ಮಾಡಿ ನನ್ನನ್ನು ಸಹಜ ಸ್ಥಿತಿ ತರುತ್ತಿದ್ದರು. ಬಾಲಕೃಷ್ಣ ಅವರ ಬೆಂಬಲ ಮರೆಯುವುದಿಲ್ಲ' ಎಂದು ಶ್ರೀಲೀಲಾ ಹೇಳಿದ್ದಾರೆ.

10 ಕೋಟಿ ಆಫರ್​ ರಿಜೆಕ್ಟ್​ ಮಾಡಿದ ಕನ್ನಡತಿ ಶ್ರೀಲೀಲಾ: ಕಾರಣ ಏನ್​ ಗೊತ್ತಾ?

' ಭಗವಂತ್ ಕೇಸರಿ ಸಿನಮಾದಲ್ಲಿ ದಾಕಷ್ಟು ಒಳ್ಳೆಯ ದೃಶ್ಯಗಳಿದೆ. ನನ್ನ ನಿಜ ಜೀವನದಲ್ಲಿ ಅನುಭವಿಸಿದ ಆ ಅನುಭವಗಳನ್ನು ಬಾಲಕೃಷ್ಣ ಅವರ ಈ ಚಿತ್ರದಲ್ಲಿ ಒದಗಿಸಿದ್ದರು' ಎಂದಿದ್ದಾರೆ ಲೀಲಾ. ತಮ್ಮ ನಿಜ ಜೀವನದಲ್ಲಿ ನಡೆಯುತ್ತಿರುವ ಘಟನೆ ಹಾಗೂ ತಂದೆಯ ಅನುಪಸ್ಥಿತಿಯ್ನು ನೆನಪಿಸಿಕೊಂಡು ವೇದಿಕೆ ಮೇಲೆ ಲೀಲಾ ಭಾವುಕರಾಗಿದ್ದಾರೆ ಎಂದು ಟಾಲಿವುಡ್‌ನಲ್ಲಿ ಚರ್ಚೆ ನಡೆಯುತ್ತಿದೆ. 

Follow Us:
Download App:
  • android
  • ios