Asianet Suvarna News Asianet Suvarna News

Shweta Tiwari: 10 ಕೆಜಿ ತೂಕ ಇಳಿಸಿಕೊಂಡ 41 ವರ್ಷದ ನಟಿ ಶ್ವೇತಾ: ಈ ಡಯಟ್‌ ನಿಮ್ಗೆ ಆಗುತ್ತಾ?

 ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಶ್ವೇತಾ ತಿವಾರಿ ಫಿಟ್ನೆಸ್‌ ಗುಟ್ಟು. 10 ಕೆಜಿ ಇಳಿಸಿಕೊಳ್ಳುವುದು ಸುಲಭವಲ್ಲ ಎಂದ ನಟಿ...

Actress Shweta Tiwari lost over 10 kgs of weight and looks stunning transformation vcs
Author
First Published Nov 5, 2022, 12:51 PM IST

ಹಿಂದಿ ಕಿರುತೆರೆ ಜನಪ್ರಿಯ ನಟಿ ಶ್ವೇತಾ ತಿವಾರಿ ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. Khatron Ke Khiladi 11 ಟಿವಿ ಶೋವೊಂದರಲ್ಲಿ ಕಾಣಿಸಿಕೊಂಡ ನಂತರ 2019ರಲ್ಲಿ ಫಿಟ್ನೆಸ್ ಜರ್ನಿ ಆರಂಭಿಸಿದ್ದಾರೆ. ಡುಮ್ಮಿ ಡುಮ್ಮಿ ಎಂದು ಕಾಮೆಂಟ್ ಮಾಡುತ್ತಿದ್ದವರೆಲ್ಲಾ ಹಾಟ್ ಆಂಡ್ ಗ್ಲಾಮರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಟ್ರಾನ್ಸ್‌ಫಾರ್ಮೆಷನ್‌ಗೆ ಕಾರಣ ಏನು? ಈ ಜರ್ನಿ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ.

ಎರಡನೇ ಮಗುವಿಗೆ ಜನ್ಮ ನೀಡಿದ ನಂತರ ಶ್ವೇತಾ ಇದ್ದಕ್ಕಿದ್ದಂತೆ ದಪ್ಪಗಾದ್ದರು ಇದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿತ್ತು ಹಾಗೂ ಆಫರ್‌ಗಳು ಕಡಿಮೆ ಆದವು. 'ಮಗು ಆದ ಬಳಿಕ ನಾನು 73 ಕೆಜಿ ತೂಕವಿದ್ದೆ ಆಗ ಅನಿವಾರ್ಯ ಕಾರಣಗಳಿಗೆ ತೂಕ ಇಳಿಸಿಕೊಳ್ಳಬೇಕಿತ್ತು. ಹಮ್ ತುಮ್ ಆಂಡ್ ತೆಮ್‌ನಲ್ಲಿ ನನ್ನ ಪಾತ್ರ ಡಿಮ್ಯಾಂಡ್ ಮಾಡುತ್ತಿತ್ತು' ಎಂದು ಶ್ವೇತಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಬ್ಯುಸಿ ಶೆಡ್ಯೂಲ್ ಇದ್ದ ಕಾರಣ ಶ್ವೇತಾ ವರ್ಕೌಟ್ ಮಾಡಲು ಸಮಯ ಸಿಗುತ್ತಿರಲಿಲ್ಲ ಅಲ್ಲದೆ ತಮ್ಮ ನ್ಯೂಟ್ರಿಷನಿಸ್ಟ್‌ ಸಲಹೆ ಪ್ರಕಾರ 10 ಕೆಜಿ ಇಳಿಸ ಬೇಕಿತ್ತಂತೆ.

Actress Shweta Tiwari lost over 10 kgs of weight and looks stunning transformation vcs

'ತೂಕ ಇಳಿಸಿಕೊಳ್ಳುವುದು ಸುಲಭವಲ್ಲ ತುಂಬಾನೇ ಕಷ್ಟ. ಹೆಚ್ಚಿಗೆ ಶ್ರಮ ಹಾಕಬೇಕು ಹಾಗೂ ಸೆಲ್ಫ್‌ ಕಂಟ್ರೋಲ್ ಮತ್ತು ಪವರ್ ಇರಬೇಕು. ಹಾಗಂತ ಮಾಡಲು ಆಗೋದೇ ಇಲ್ಲ ಅಂತಲ್ಲ ಆಗುತ್ತೆ ಆದರೆ ಮಾಡಬೇಕು. ನನ್ನ ಟ್ರೈನರ್‌ ಸಹಾಯದಿಂದ ಕಷ್ಟವಾದ ಪ್ರಾಸೆಸ್‌ ಕೂಡ ಸುಲಭವಾಗಿತ್ತು. ಸಮಯಕ್ಕೆ ತಕ್ಕಂತೆ ನನ್ನ ದೇಹಕ್ಕೆ ಏನು ಬೇಕು ಏನು ಬೇಡ ಎಂದು ಪ್ಲ್ಯಾನ್ ಮಾಡುತ್ತಿದ್ದರು. ಬೆಳಗ್ಗಿನಿಂದ ಸಂಜೆವರೆಗೂ ಅದೇ ಫಾಲೋ ಮಾಡುತ್ತಿದ್ದೆ. ಆಕೆಗೆ ನಾನು ಕ್ಲೈಂಟ್ ಅಲ್ಲ mission' ಎಂದು ಶ್ವೇತಾ ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಪಬ್ಲಿಕ್‌ನಲ್ಲಿ ಎದೆಹಾಲುಣಿಸುವ ಬಗ್ಗೆ ಶ್ವೇತಾ ತಿವಾರಿ ಹೇಳಿದ್ದಿಷ್ಟು

'ನನ್ನ ಫಿಟ್ನೆಸ್‌  ಇಷ್ಟೊಂದು ದೊಡ್ಡ ವಿಚಾರ ಆಗುತ್ತೆ ಎಂದು ಗೊತ್ತಿರಲಿಲ್ಲ. ಆರೋಗ್ಯದ ವಿಚಾರವಾಗಿ ನಾನು ಫಿಟ್ನೆಸ್‌ ಕೇರ್ ಶುರು ಮಾಡಿದ್ದು. ಬದಲಾವಣೆ ಕಾಣಿಸಿದ್ದಕ್ಕೆ ಜನರು ನನ್ನ ಫಿಟ್ನೆಸ್‌ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಖುಷಿಯಾಗುತ್ತಿದೆ. ಭುಜದ ನೋವು ಹೆಚ್ಚಿಗೆ ಬರುತ್ತಿದ್ದ ಕಾರಣ ಫಿಟ್ ಆಗಬೇಕು ಅನ್ನೋ ಮನಸ್ಸು ಮಾಡಿದ್ದೆ. ನೋವು ಕಡಿಮೆ ಆಗಿಲ್ಲ ಆದರೆ ಆರೋಗ್ಯವಾಗಿರುವೆ' ಎಂದು  ಶ್ವೇತಾ ಹೇಳಿದ್ದಾರೆ.

ಡಯಟ್ ಮಾಡುವ ಸಮಯದಲ್ಲಿ ಶ್ವೇತಾ ಹೆಚ್ಚಾಗಿ ಕಾರ್ಬಸ್‌, ಪ್ರೋಟಿನ್ ಮತ್ತು ಫ್ಯಾಟ್ ಸೇವಿಸಿದ್ದಾರೆ. ದೇಹ ಡೀ-ಹೈಡ್ರೇಟ್ ಆಗಬಾರದು ಎಂದು ನೀರು 3-4 ಲೀಟರ್ ಕುಡಿಯುತ್ತಿದ್ದರಂತೆ. ಒಂದು ಸೀಕ್ರೆಟ್ ರಿವೀಲ್ ಮಾಡಿದ್ದಾರೆ, ಏನೆಂದರೆ ಊಟಕ್ಕೆ ತಪ್ಪದೆ ತುಪ್ಪ ಬಳಸುವುದು. ತುಪ್ಪು ತಿನ್ನುವುದರಿಂದ ದೇಹ ದಪ್ಪ ಆಗುವುದಿಲ್ಲ ಆದರೆ ಹೈ ಫೈಬಬರ್ ಸಿಗುತ್ತದೆ ಎಂದಿದ್ದಾರೆ.

ಒಳ ಉಡುಪು-ದೇವರ ಬಗ್ಗೆ ಉಡಾಫೆ ಮಾತು; ಕ್ಷಮೆ ಕೇಳಿದ ನಟಿ ಶ್ವೇತಾ!

ಮದುವೆ ಬಗ್ಗೆ ನಂಬಿಕೆ ಇಲ್ಲ:

'ನನ್ನ ಮೊದಲ ಮದುವೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿರುವೆ ಏಕೆಂದರೆ ನಾನು ಸಮಾಜದಲ್ಲಿ ಬೆಳೆದಿರುವ ರೀತಿ ಇದು. ಆದರೆ ಎರಡನೇ ಮದುವೆಯಲ್ಲಿ ಸಮಯ ವ್ಯರ್ಥ ಮಾಡುವುದಕ್ಕೆ ಇಷ್ಟವಿರಲಿಲ್ಲ. ಸಂಬಂಧ ಹಾಳಾಗಬೇಕು ಅಂದ್ರೆ ಹಾಳಾಗುತ್ತದೆ ಏನೂ ಮಾಡುವುದಕ್ಕೂ ಆಗುವುದಿಲ್ಲ . ಒಂದು ಹಂತ ತಲುಪಿದ ನಂತರ ಸಂಬಂಧ ನಿಲ್ಲಿಸಬೇಕು ಅನಿಸಿತ್ತು. ಒಂದು ಕ್ಷಣವೂ ಜನರು ಏನೆಂದು ಹೇಳುತ್ತಾರೆ ಅಂತ ನಾನು ಯೋಚನೆ ಮಾಡಿರಲಿಲ್ಲ. Bread & Butter ನಾನು ನೋಡಿಕೊಳ್ಳುತ್ತಿರುವಾಗ ಯಾರ ಬಗ್ಗೆನೂ ಕೇರ್ ಮಾಡುವುದಿಲ್ಲ. ನನ್ನ ಪರ್ಸನಲ್ ಮತ್ತು ಪ್ರೋಫೆಷನಲ್ ಲೈಫ್‌ ನೋಡಿಕೊಂಡು ನೆಟ್ಟಿಗರು ಮಜಾ ತೆಗೆದುಕೊಳ್ಳಬಹುದು. ನೀವು ಬೇರೆ ಅವರ ಬಗ್ಗೆ ಕೇರ್ ಮಾಡುವುದನ್ನು ನಿಲ್ಲಿಸಿದಾಗ ಅವರ ಮಾತುಗಳು ಟೀಕೆಗಳು ಮ್ಯಾಟರ್ ಆಗುವುದಿಲ್ಲ' ಎಂದು ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ನನ್ನ ಮದುವೆ ನನ್ನ ಸಂಗಾತಿ ಬಿಟ್ಟಾಗ ನನ್ನನ್ನು ನಾನು ದೂರಿಕೊಳ್ಳುವುದಿಲ್ಲ. ಎಲ್ಲಿ ಜೀವನ ಹಾಳು ಮಾಡಿಕೊಂಡೆ ಎಂದು ನನಗೆ ಗೊತ್ತಿಲ್ಲ ಆದರೆ ಮಾಡಿರುವ ತಪ್ಪುಗಳು ನನಗೆ ಗೊತ್ತಿದೆ. ಸಂಬಂಧದಲ್ಲಿ ರೆಡ್‌ ಫ್ಲ್ಯಾಗ್ ಕಂಡರೂ ಮುಂದುವರೆದೂ ತಪ್ಪು ಮಾಡಿದೆ. ಪದೇ ಪದೇ ಮಾಡಿರುವ ತಪ್ಪುಗಳನ್ನು ಯೋಚನೆ ಮಾಡಿಕೊಂಡು ದೇವರನ್ನು ದೂರುವೆ ಏಕೆ ಈ ರೀತಿ ಮಾಡಿರುವೆ ಎಂದು. ಜೀವನದಲ್ಲಿ ಏನೂ ಪರ್ಮನೆಂಟ್ ಅಲ್ಲ ಅನ್ನೋದು ತಿಳಿದುಕೊಂಡಿರುವೆ. ಒಳ್ಳೆ ದಿನಗಳು ಕೆಟ್ಟ ದಿನಗಳು ಎಲ್ಲಾ ಬೆಳಗ್ಗೆ ರಾತ್ರಿ ಇದ್ದ ಹಾಗೆ. ಸಮಯ ಚೆನ್ನಾಗಿದೆ ಅಂತ ಅದೇ ಜೀವನ ಅಂದುಕೊಂಡು ತಲೆಗೆ ತೆಗೆದುಕೊಳ್ಳಬೇಡಿ. ನನ್ನ ಮಗಳು ಗುಡ್ ಆಂಡ್ ಬ್ಯಾಡ್‌ ಎರಡಕ್ಕೂ ರೆಡಿಯಾಗಿದ್ದಾಳೆ.

Follow Us:
Download App:
  • android
  • ios