ಶೆರ್ಲಿನ್ ಚೋಪ್ರಾ ವಿಡಿಯೋ ವೈರಲ್: ಥೂ... ಅದಕ್ಕೂ ಪ್ಲಾಸ್ಟಿಕ್ ಸರ್ಜರಿನಾ ಅಂದ ಫ್ಯಾನ್ಸ್!
ನಟಿ ಶೆರ್ಲಿನ್ ಚೋಪ್ರಾ ಅವರ ವಿಡಿಯೋ ಒಂದು ವೈರಲ್ ಆಗಿದ್ದು, ಅದು ಸಕತ್ ಟ್ರೋಲ್ ಆಗುತ್ತಿದೆ. ವಿಡಿಯೋ ನೋಡಿ ಕಮೆಂಟಿಗರು ಹೇಳಿದ್ದೇನು?
ದೇಹ ಪ್ರದರ್ಶನದಿಂದಲೇ ಫೇಮಸ್ ಆಗಿರುವ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಇತ್ತೀಚೆಗೆ ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು, ಪತ್ರಿಕಾಗೋಷ್ಠಿ ಕರೆದಿದ್ದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದರು. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನಟಿ ದೂರಿನಲ್ಲಿ ತಿಳಿಸಿದ್ದರು. ಮೊದಲಿಗೆ ತಮ್ಮನ್ನು ಹೊಗಳಿದ್ದ ಉದ್ಯಮಿ ಆಮೇಲೆ ಹಣ ನೀಡುವ ನೆಪದಲ್ಲಿ ತಾವು ಉಳಿದುಕೊಂಡಿದ್ದ ಲಾಡ್ಜ್ಗೆ ಬಂದು ಊಟ ಮಾಡಿದರು. ಊಟದ ಬಳಿಕ ಮಂಚದ ಮೇಲೆ ಕುಳಿತು ಎದೆ ಭಾಗವನ್ನು ಮುಟ್ಟಿದರು. ನೀವು ತುಂಬಾ ಹಾಟ್ ಆಗಿದ್ದೀರಿ ನನಗೆ ಕಂಟ್ರೋಲ್ ಮಾಡಲು ಆಗುತ್ತಿಲ್ಲ ಎಂದು ಹೇಳಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದಿದ್ದರು. ಈ ವಿಷಯ ಅಲ್ಲಿಗೇ ತಣ್ಣಗಾಯಿತು. ಇದೊಂದೇ ಅಲ್ಲ, ಇದಕ್ಕೂ ಮೊದಲೂ ಶೆರ್ಲಿನ್ ಇದೇ ರೀತಿಯ ವಿಚಾರದಲ್ಲಿ ಸುದ್ದಿಯಲ್ಲಿದ್ದರು. ಶೆರ್ಲಿನ್ ಚೋಪ್ರಾ ಅವರ ಖಾಸಗಿ ವಿಡಿಯೋಗಳನ್ನು ನಟಿ ರಾಖಿ ಸಾವಂತ್ ಬಿಡುಗಡೆ ಮಾಡಿದ್ದರು. ಇದು ಭಾರಿ ಕೋಲಾಹಲವನ್ನೇ ಸೃಷ್ಟಿಸಿತ್ತು.
ಇಂತಿಪ್ಪ ಶೆರ್ಲಿನ್ ಚೋಪ್ರಾ ಇದೀಗ ಹೊಸದೊಂದು ವಿಡಿಯೋ ಶೇರ್ ಮಾಡಿಕೊಂಡಿದ್ದು, ಅದು ಸಕತ್ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಸಹಸ್ರಾರು ಕಮೆಂಟ್ಗಳು ಬಂದಿದ್ದು, ನಟಿಯ ವೇಷವನ್ನು ಅಸಹ್ಯದ ಪರಮಾವಧಿ ಎಂದು ಹಲವರು ಹೇಳುತ್ತಿದ್ದಾರೆ. ಈ ವಿಡಿಯೋದಲ್ಲಿ ನಟಿ ಹಸಿರು ಸೀರೆಯನ್ನು ತೊಟ್ಟು ಕಾರಿನಿಂದ ಇಳಿದಿದ್ದಾರೆ. ಅದರಲ್ಲಿ ಶೆರ್ಲಿನ್ ಧಾರಾಳವಾಗಿ ದೇಹ ಪ್ರದರ್ಶನ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ದೇಹ ಪ್ರದರ್ಶನ ಮಾಮೂಲಾಗಿಬಿಟ್ಟಿದೆ. ಎದೆಯ ಪ್ರದರ್ಶನ ಮಾಡಿದರಷ್ಟೇ ಸಿನಿಮಾದಲ್ಲಿ ತಮಗೆ ಉಳಿಗಾಲ ಎಂದು ಹೆಚ್ಚಿನ ನಟಿಯರು ಅಂದುಕೊಂಡಂತಿದೆ. ಇದಕ್ಕಾಗಿಯೇ ತೆಳ್ಳಗೆ, ಬೆಳ್ಳಗೆ ಇರಲು ಸಾಕಷ್ಟು ಡಯಟ್ ಪಾಲನೆ, ಯೋಗ, ಜಿಮ್, ವ್ಯಾಯಾಮಗಳ ಮೊರೆ ಹೋಗುವ ನಟಿಯರು ಎದೆ ಭಾಗವನ್ನು ದೊಡ್ಡದಾಗಿ ತೋರಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದು ಮಾಮೂಲಾಗಿದೆ. ಈ ಬಗ್ಗೆ ಹಿಂದೊಮ್ಮೆ ನಟಿ ಪ್ರಿಯಾಂಕಾ ಚೋಪ್ರಾ ಕೂಡ ತಿಳಿಸಿದ್ದರು. ತಮ್ಮ ಬಾಡಿಯನ್ನು ನೋಡಿ ಹೇಗೆ ಬಾಡಿ ಷೇಮಿಂಗ್ (Body Shaming) ಮಾಡಲಾಗಿತ್ತು ಎಂದು ಅವರು ತಿಳಿಸಿದ್ದರು.
Sherlyn Chopra: ಎದೆ ಮುಟ್ಟಿದ, ಕಂಟ್ರೋಲ್ ಆಗ್ತಿಲ್ಲ ಎಂದ... ಉದ್ಯಮಿ ವಿರುದ್ಧ ನಟಿ ದೂರು
ಇದೀಗ ಶೆರ್ಲಿನ್ ಚೋಪ್ರಾ ವಿಡಿಯೋದಲ್ಲಿಯೂ ಅದೇ ಆಗಿದೆ. ಜೈಲರ್ ಚಿತ್ರದ ಕಾವಾಲಾ ಹಾಡನ್ನು ಹಿನ್ನೆಲೆಯಲ್ಲಿ ನೀಡಲಾಗಿದೆ. ಈಕೆ ತೊಟ್ಟಿರುವುದು ಸೀರೆಯಾದರೂ, ಎದೆ ಭಾಗವನ್ನು ಪ್ರದರ್ಶಿಸಿದ್ದು, ಇದು ಸಕತ್ ಟ್ರೋಲ್ ಆಗುತ್ತಿದೆ. ಅದು ಕಾಣಿಸಲೆಂದೇ ಆಕೆ ವಿವಿಧ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಹಲವರು ಇದನ್ನು ನೋಡಿ ಸೋ ಹಾಟ್ (So Hot) ಎಂದು ಜೊಲ್ಲು ಸುರಿಸಿದ್ದರೆ, ಹಲವರು ಈಕೆಗೆ ಸ್ವಲ್ಪ ನಾಚಿಕೆ ಇಲ್ಲವೆ ಎಂದು ಪ್ರಶ್ನಿಸಿದ್ದಾರೆ. ಆ ಭಾಗಕ್ಕೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವುದು ಸರಿಯಾಗಿ ಗೊತ್ತಾಗುತ್ತದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದರೆ, ಥೂ... ಇದು ಅಸಹ್ಯದ ಪರಮಾವಧಿ ಎಂದಿದ್ದಾರೆ ಇನ್ನು ಕೆಲವರು. ಹೀಗೆ ವೇಷ ಮಾಡಿಕೊಂಡು ಬಂದರೂ ಬ್ಲೌಸ್ ಅನ್ನು ಆಗಾಗ್ಗೆ ಸರಿ ಮಾಡಿಕೊಳ್ಳುತ್ತಿರುವ ನಟಿಯನ್ನು ಕೆಲವು ನೆಟ್ಟಿಗರು ಕೆಣಕಿದ್ದಾರೆ. ಬೇಡ ಬೇಡ ಎಂದರೂ ಎಲ್ಲರಿಗೂ ಅದರ ಮೇಲೆಯೇ ಗಮನ ಹೋಗುತ್ತದೆ, ಸುಖಾ ಸುಮ್ಮನೆ ಮುಟ್ಟಿ ಮುಟ್ಟಿ ತೋರಿಸುವುದು ಬೇಡ ಎಂದು ಕಾಲೆಳೆದಿದ್ದಾರೆ. ಬಟ್ಟೆ ಧರಿಸುವ ಇಷ್ಟವಿಲ್ಲದೇ ಹೋದರೆ ಹಾಗೆಯೇ ಬನ್ನಿ, ಹೀಗೆ ಅರ್ಧಂಬರ್ಧ ಧರಿಸುವುದು ಏಕೆ ಎಂದು ಇನ್ನು ಕೆಲವರು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಶೆರ್ಲಿನ್ ಚೋಪ್ರಾರ ಈ ಹೊಸ ಅವತಾರ ಸಾಕಷ್ಟು ಟ್ರೋಲ್ಗೆ ಒಳಗಾಗುತ್ತಿದೆ. ಈ ಹಿಂದೆ, ರಾಖಿ ಸಾವಂತ್ ಶೆರ್ಲಿನ್ ಅವರ ಖಾಸಗಿ ವಿಡಿಯೋ ವೈರಲ್ ಮಾಡಿದ್ದ ಆರೋಪ ಎದುರಿಸುತ್ತಿದ್ದರು. ಇದು ಹೈಕೋರ್ಟ್ವರೆಗೂ ಹೋಗಿತ್ತು. ಬಾಂಬೆ ಹೈಕೋರ್ಟ್ ಸಾರ್ವಜನಿಕರ ಬಳಿ ಲಭ್ಯವಿರುವ ಶೆರ್ಲಿನ್ (Sherlyn Chopra) ಅವರ ಎಲ್ಲಾ ಆಕ್ಷೇಪಾರ್ಹ ವೀಡಿಯೊಗಳನ್ನು ಅಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿತ್ತು. ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು, ರಾಖಿ ಅವರ ವಕೀಲರನ್ನು ಉದ್ದೇಶಿಸಿ ಈ ವಿಡಿಯೋಗಳನ್ನು ಮಾಧ್ಯಮಗಳಿಗೆ ತೋರಿಸಿದ್ದು ಸರಿಯಲ್ಲ ಎಂದಿದ್ದರು!
ನಟಿ ಶೆರ್ಲಿನ್ ಚೋಪ್ರಾ ವಿಡಿಯೋ ಲೀಕ್ ಮಾಡಿದ ರಾಖಿ ಸಾವಂತ್: ಹೈಕೋರ್ಟ್ ಹೇಳಿದ್ದೇನು?