ಅಮೆರಿಕದ ಪ್ಲೇಬಾಯ್ ಮ್ಯಾಗಜಿನ್ ಮುಖಪುಟದಲ್ಲಿ ಕಾಣಿಸಿಕೊಂಡ ಮೊದಲ ಬಾಲಿವುಡ್ ನಟಿ ಈಕೆ. 2007ರಿಂದ ಚಿತ್ರರಂಗದಲ್ಲಿರುವ ಈ ನಟಿ ಹಲವು ವಿವಾದಗಳಿಗೆ ಗುರಿಯಾಗಿದ್ದಾಳೆ.

ಅಮರಿಕದ ಪ್ಲೇಬಾಯ್‌ ಮ್ಯಾಗಜಿನ್‌ನ ಬಗ್ಗೆ ನೀವು ಕೇಳಿರುತ್ತೀರಿ ಅಥವಾ ಅದನ್ನು ನೋಡಿರುತ್ತೀರಿ. ಪೋರ್ನ್‌ ಸೈಟ್‌ಗಳು ತುಂಬಾ ಕಾಮನ್‌ ಆಗುವ ಮೊದಲು ಇದ್ದ ಎರೋಟಿಕ್‌ ಮ್ಯಾಗಜಿನ್‌ ಅದು. ದೇಶವಿದೇಶದ ನಟಿಯರ ಬೆತ್ತಲೆ, ಅರೆಬೆತ್ತಲೆ ದೇಹಗಳು ಫೋಟೋಗಳು ಇದರಲ್ಲಿ ರಾರಾಜಿಸುತ್ತಿದ್ದವು. ಒಂದು ಕಾಲದಲ್ಲಿ ಈ ಮ್ಯಾಗಜಿನ್‌ನ ಮುಖಪುಟದಲ್ಲಿ ತನ್ನ ಫೋಟೋ ಕಾಣಿಸಿಕೊಳ್ಳುವುದು ಅನೇಕ ನಟಿಯರಿಗೆ ಪ್ರತಿಷ್ಠೆಯ ಸಂಗತಿಯಾಗಿತ್ತು. ಹಾಗೆ ಅದರ ಕವರ್‌ ಪೇಜ್‌ನಲ್ಲಿ ಕಾಣಿಸಿಕೊಂಡ ಮೊತ್ತ ಮೊದಲ ಬಾಲಿವುಡ್‌ ನಟಿ ಈಕೆ. ಹೆಸರು ಶೆರ್ಲಿನ್‌ ಚೋಪ್ರಾ. 

ಈ ನಟಿ 2007ರಿಂದ ಹಿಂದಿ ಚಿತ್ರೋದ್ಯಮದಲ್ಲಿದ್ದಾಳೆ. ಈಕೆ ಫಿಲಂ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ದು ಕಾಮಪ್ರಚೋದಕ ಥ್ರಿಲ್ಲರ್ ಫಿಲಂ ʼರೆಡ್ ಸ್ವಸ್ತಿಕ್‌; ಮೂಲಕ. ಅದೇನೂ ವ್ಯಾಪಾರ ಮಾಡಲಿಲ್ಲ. ನಂತರ ಆಕೆ ತಮಿಳು ಮತ್ತು ತೆಲುಗು ಚಿತ್ರರಂಗದ ಭಾಗವಾದಳು. ಸಿನಿಮಾಗಳಿಗಿಂತ ವಿವಾದಗಳೇ ಆಕೆಯತ್ತ ಹೆಚ್ಚು ಗಮನ ನೀಡಿದವು. ಈಕೆ ತನ್ನ ದಿಟ್ಟ ಸಾರ್ವಜನಿಕ ನಡವಳಿಕೆಗೆ ಹೆಸರುವಾಸಿಯಾಗಿದ್ದಾಳೆ. ಅಮೆರಿಕನ್ ಪ್ಲೇಬಾಯ್ ಮ್ಯಾಗಜೀನ್‌ನಲ್ಲಿ ಆಕೆಯನ್ನು ಬಾಲಿವುಡ್ ದಂತಕಥೆ ಎಂದು ಬಣ್ಣಿಸಲಾಗಿತ್ತು.

ಈಕೆ ಹೆಚ್ಚಾಗಿ ಕಾಣಿಸಿಕೊಂಡದ್ದು ಎರೋಟಿಕ್‌ ಫಿಲಂಗಳಲ್ಲಿಯೇ. ಕಾಮಸೂತ್ರ 3D, ಮಾಯಾ, ಪೌರಾಶ್‌ಪುರ್ 2, ಪೌರಾಶ್‌ಪುರ 3, ರಕೀಬ್, ವಜಾ ತುಮ್ ಹೋ, ಜವಾನಿ ದಿವಾನಿ: ಎ ಯೂತ್‌ಫುಲ್ ಜಾಯ್‌ರೈಡ್‌ನಂತಹ ಸುಮಾರು 21 ಚಲನಚಿತ್ರಗಳಲ್ಲಿ ನಟಿಸಿದಳು. ಬಿಗ್ ಬಾಸ್ 3 ರ ಸ್ಪರ್ಧಿಯೂ ಆಗಿದ್ದಳು. ಅವಳೊಂದಿಗೆ ಇದ್ದ ಇತರ ಸ್ಪರ್ಧಿಗಳು ಪ್ರವೇಶ್ ರಾಣಾ, ಭಕ್ತಿಯಾರ್, ವಿಂದು ದಾರಾ ಸಿಂಗ್ ಮತ್ತು ಪೂನಂ ಧಿಲ್ಲೋನ್. ನಟ ವಿಂದು ದಾರಾ ಸಿಂಗ್ ವಿಜೇತರಾಗಿ ಹೊರಹೊಮ್ಮಿದರು. 

ಶೆರ್ಲಿನ್ ಚೋಪ್ರಾ 2009 ರ ದಿಲ್ ಬೋಲೆ ಹಡಿಪ್ಪಾದಲ್ಲಿ ಶಾಹಿದ್ ಕಪೂರ್ ಅವರೊಂದಿಗೆ ನಟನೆ ಮಾಡಿದ್ದಾಳೆ. ಚಿತ್ರ ಬಿಡುಗಡೆಯಾದಾಗ ಎಲ್ಲರೂ ಆಕೆಯನ್ನು, ಚಿತ್ರವನ್ನು ಟೀಕಿಸಿದರು. ಚೋಪ್ರಾಳನ್ನು ಕಾಮದ ವಸ್ತುವಾಗಿ ಬಳಸಿದ್ದಕ್ಕಾಗಿ ಫಿಲಂ ತಯಾರಕರನ್ನು ಜನ ದೂಷಿಸಿದರು.

ಇತ್ತೀಚೆಗೆ, ಶೆರ್ಲಿನ್ ಅವರ ಹಳೆಯ ಟ್ವೀಟ್ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ, ಅಲ್ಲಿ ಆಕೆ ತಾನು ಹಣಕ್ಕಾಗಿ ಪುರುಷರೊಂದಿಗೆ ಮಲಗಿದ್ದರ ಬಗ್ಗೆ ಮಾತನಾಡಿದ್ದಳು. 2012ರಲ್ಲಿ ನಟಿ ಈ ಟ್ವೀಟ್‌ ಸರಣಿ ಮಾಡಿದ್ದಳು. ಹಲವಾರು ಶ್ರೀಮಂತರು ತಮ್ಮೊಡನೆ ಮಲಗಲು ಭಾರಿ ಮೊತ್ತದ ಹಣ ಕೊಡುವುದಾಗಿ ಸಂಪರ್ಕಿಸಿದ ಬಗ್ಗೆ ಈಕೆ ಹೇಳಿಕೊಂಡಿದ್ದಳು. ಅದನ್ನು ಆಕೆಯೂ ಬಯಸಿದ್ದಳಂತೆ. ಯಾಕೆಂದರೆ ತಾನು ಕಾಪಾಡಿಕೊಂಡು ಬಂದಿರುವ ಐಷಾರಾಮಿ ಜೀವನಶೈಲಿಗೆ ಅದು ಅಗತ್ಯವಾಗಿತ್ತಂತೆ. ಟ್ವೀಟ್‌ಗಳು ಇಲ್ಲಿಗೆ ಮುಗಿಯಲಿಲ್ಲ. ತಾನು ಮಾಡಿದ ತಪ್ಪೊಪ್ಪಿಗೆ ಯಾವುದೇ ಸಹಾನುಭೂತಿ ಗಳಿಸಲಲ್ಲ. ಅಥವಾ ತನ್ನನ್ನು ತಾನು 'ಕೆಟ್ಟ ಹುಡುಗಿʼ ಎಂದು ಬಿಂಬಿಸುವುದಕ್ಕಾಗಿ ಅಲ್ಲ ಎಂದು ಬರೆದುಕೊಂಡಿದ್ದಳು. "ಹಿಂದೆ, ವಿವಿಧ ಸಂದರ್ಭಗಳಲ್ಲಿ, ನಾನು ಲೈಂಗಿಕ ಸುಖ ನೀಡಿ ಸಾಕಷ್ಟು ಹಣ ಸಂಪಾದಿಸಿದ್ದೇನೆ. ಆದರೆ ಅದರಲ್ಲಿ ಯಾವುದೂ ನನಗೆ ಅನುಭೂತಿಯಾಗಿ ಈಗ ನೆನಪಿನಲ್ಲಿ ಉಳಿದಿಲ್ಲ" ಎಂದು ಆಕೆ ಬರೆದಿದ್ದಳು. 

ಸೂಪರ್‌ಹಿಟ್‌ ಸಾಂಗ್‌ಗೆ ಎಸ್‌ಪಿಬಿಗಾಗಿ ಒಂದು ತಿಂಗಳು ಕಾಯ್ದಿದ್ದರಂತೆ ಇಳಯರಾಜಾ!

ಇಷ್ಟು ಹೇಳಿದ ನಂತರ ಶೆರ್ಲಿನ್‌ ನಾಲಿಗೆ ಕಚ್ಚಿಕೊಂಡಿದ್ದಳು. ತನ್ನ ಟ್ವೀಟ್‌ಗಳನ್ನು ತಪ್ಪಾಗಿ ಭಾವಿಸಲಾಗಿದೆ ಎಂದಳು. “ಚಿಕ್ಕ ಹುಡುಗಿಯಾಗಿದ್ದಾಗ ನಾನು ವೈದ್ಯೆ ಆಗಬೇಕೆಂದು ಬಯಸಿದ್ದೆ. ನನ್ನ ದಿವಂಗತ ತಂದೆ ವೈದ್ಯರಾಗಿದ್ದರು. ನಾನು ಮುಖ್ಯವಾಗಿ ವಿಜ್ಞಾನದ ಬಗ್ಗೆ ಆಸಕ್ತಿ ಹೊಂದಿದ್ದೆ. ನಾನು ಶೈಕ್ಷಣಿಕವಾಗಿ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ತಮ ಸಾಧನೆ ಮಾಡಿದ್ದೆ. ನಾನು ಮಿಸ್ ಆಂಧ್ರ ಪ್ರಶಸ್ತಿಯನ್ನು ಬಾಚಿಕೊಳ್ಳುವವರೆಗೂ ಎಲ್ಲವೂ ಸರಿಯಾಗಿತ್ತು. ಹತ್ತೊಂಬತ್ತು ವರ್ಷದವಳಾಗಿದ್ದಾಗ ಮತ್ತು ಸಿನಿಮಾ ಫೀಲ್ಡ್‌ನ ಗ್ಲಾಮರ್‌ನಿಂದ ಸಂಪೂರ್ಣವಾಗಿ ಮಂತ್ರಮುಗ್ಧಳಾಗಿದ್ದ ನಾನು ಈ ಹಂತದಲ್ಲಿ ವಿಭಿನ್ನ ಹಾದಿಯಲ್ಲಿ ನಡೆಯಲು ಶುರುಮಾಡಿದೆ" ಎಂದಿದ್ದಳು.

"ನನ್ನ ಮಾಡೆಲಿಂಗ್‌ನ ಆರಂಭಿಕ ದಿನಗಳಲ್ಲಿ, ನಾನು ನನ್ನ ವಯಸ್ಸಿಗಿಂತ ಹೆಚ್ಚು ವಯಸ್ಸಾದ ಪುರುಷರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದೆ. ಅವರು ದುಬಾರಿ ಉಡುಗೊರೆಗಳೊಂದಿಗೆ ನನ್ನನ್ನು ಮುದ್ದಿಸುತ್ತಿದ್ದರು. ಈ ಸಂಬಂಧಗಳಲ್ಲಿ ನಿಜವಾದ ಕಾಳಜಿ, ಗೌರವ ಮತ್ತು ಪ್ರೀತಿಯ ಕೊರತೆಯಿದೆ ಎಂದು ಅರ್ಥಮಾಡಿಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿಯಿತು. ಒಂದು ದೊಡ್ಡ ಆತ್ಮಾವಲೋಕನದ ನಂತರ, ಒಬ್ಬ ವ್ಯಕ್ತಿಯು ನನ್ನ ದೇಹವನ್ನು ಬಯಸುತ್ತಾನೆ ಎಂಬ ಕಾರಣಕ್ಕೆ ಅವನು ನನ್ನನ್ನು ಗೌರವಿಸುತ್ತಾನೆ ಎಂದು ಅರ್ಥವಲ್ಲ ಎಂದು ನಾನು ಅರಿತುಕೊಂಡೆ. ನನ್ನ "ತಪ್ಪೊಪ್ಪಿಗೆ"ಯ ಹಿಂದಿನ ಉದ್ದೇಶವೆಂದರೆ ನನ್ನ ಭೂತಕಾಲವನ್ನು ಜಗತ್ತಿಗೆ ಪರಿಚಯಿಸುವುದಾಗಿದೆ. ದುಃಖಕರವೆಂದರೆ, ಅದನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ" ಎಂದು ಹೇಳಿದ್ದಳು. 

ಮದುವೆ ಯಾವಾಗ ಅಗ್ತೀರಿ ಎಂದ ನೆಟ್ಟಿಗರ ಮೈಚಳಿ ಬಿಡಿಸಿದ ಶ್ರುತಿ ಹಾಸನ್‌!