ದಪ್ಪಗಾಗ್ತೇನೆ ಎಂದು ಉಪವಾಸ ಇಟ್ಟರು! ಕರಾಳ ದಿನ ನೆನೆದ ನಟಿ Sameera Reddy
ಬಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ಸಮೀರಾ ರೆಡ್ಡಿ, ಇದೀಗ ತಾವು ಅನುಭವಿಸಿದ ನೋವಿನ ದಿನಗಳ ಕುರಿತು ಮಾಹಿತಿ ನೀಡಿದ್ದಾರೆ. ಅವರು ಏನು ಹೇಳಿದ್ದಾರೆ?
2013 ರಿಂದ ಬೆಳ್ಳಿತೆರೆಯಿಂದ ದೂರ ಉಳಿದು ಇದೀಗ ಮತ್ತೆ ಮರಳಲು ಸಿದ್ಧರಾಗಿರುವ ನಟಿ ಸಮೀರಾ ರೆಡ್ಡಿ, (Sameera Reddy)ಇದಾಗಲೇ ಬಾಲಿವುಡ್‌ನ ಕರಾಳ ಮುಖವನ್ನು ತೆರೆದಿಟ್ಟಿದ್ದರು. ನಟಿಯರು ಎಂದರೆ ಹೀಗೆಯೇ ಇರಬೇಕು ಎನ್ನುವ ಸಾಮಾನ್ಯ ಕಲ್ಪನೆ ಇದೆ. ಆದರೆ ಎಲ್ಲಕ್ಕಿಂತಲೂ ಹೆಚ್ಚಾಗಿ ಅವರ ದೇಹದ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ ಎಂಬ ಸಾಮಾನ್ಯ ಕಲ್ಪನೆ ಇದೆ. ಆದರೆ ಎಲ್ಲಕ್ಕಿಂತಲೂ ಹೆಚ್ಚಾಗಿ ಅವರ ದೇಹದ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ. ಸ್ತನದ ಗಾತ್ರ ದೊಡ್ಡದಾಗಿ ಕಾಣಿಸುವಂತೆ ಮಾಡಲು ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವ ಅನಿವಾರ್ಯತೆಯೂ ಇಲ್ಲಿದೆ ಎಂಬ ಕರಾಳತೆಯನ್ನು ನಟಿ ಹೇಳಿದ್ದಾರೆ. 'ನನ್ನ ಎದೆಯ ಮೇಲೂ ನಿರ್ದೇಶಕರ ಕಣ್ಣು ನೆಟ್ಟಿತ್ತು. ಅದು ಸುಂದರವಾಗಿ ಕಾಣಿಸಬೇಕು ಎಂದರೆ ಶಸ್ತ್ರಚಿಕಿತ್ಸೆ (Operation) ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಅದಕ್ಕೆ ನಾನು ರೆಡಿ ಇರಲಿಲ್ಲ. ಇದೇ ಕಾರಣಕ್ಕೆ ಆ ಭಾಗ ದೊಡ್ಡದಾಗಿ ಕಾಣಲು ಸದಾ ನಾನು ಎದೆಯನ್ನು ಪ್ಯಾಡ್ ಮಾಡಬೇಕಾಗಿತ್ತು ಎಂದು ಹೇಳಿದ್ದರು.
ಇದೀಗ ನಟಿ, ತಮಗಾಗಿರುವ ಇನ್ನೊಂದು ಅನುಭವದ ಕುರಿತು ಬಿಚ್ಚಿಟ್ಟಿದ್ದಾರೆ. ಈ ಹಿಂದೆ ಅವರು ತಾವು ದಪ್ಪಗಿದ್ದ ವಿಷಯವನ್ನು ತಿಳಿಸಿದ್ದರು. ನಾನು 19 ರ ವಯಸ್ಸಿನವರೆಗೆ ಕನ್ನಡಕ ಧರಿಸಿದ ಧಡೂತಿ ಹುಡುಗಿಯಾಗಿದ್ದೆ. ಕುಟುಂಬದಲ್ಲಿ ಕುರೂಪಿ ಮಗು ನಾನು ಎಂದು ತಮ್ಮನ್ನು ತಾವು ಹೇಳಿಕೊಂಡಿದ್ದ ಸಮೀರಾ ಅವರು ಕೊನೆಗೆ ಸಾಕಷ್ಟು ಶ್ರಮಪಟ್ಟು, ವರ್ಕ್ಔಟ್ (workout) ಮಾಡಿ ಚಿತ್ರರಂಗಕ್ಕೆ ಸೈ ಎನಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿರುವ ಬಗ್ಗೆ ಹೇಳಿದ್ದರು. ಇದೀಗ ಹಾಡೊಂದರ ಚಿತ್ರೀಕರಣಕ್ಕಾಗಿ ತಮ್ಮನ್ನು ಹೇಗೆ ಹಸಿವಿನಿಂದ (Hungry) ಇಡಲಾಯಿತು ಎಂಬ ಬಗ್ಗೆ ಹೇಳಿಕೊಂಡಿದ್ದಾರೆ.
ಎದೆ ಭಾಗಕ್ಕೆ ಸರ್ಜರಿ- ಬಾಲಿವುಡ್‌ನ ಕರಾಳ ಮುಖ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ
ಮಿಡ್-ಡೇಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಸಮೀರಾ ರೆಡ್ಡಿ ತಮ್ಮ ವೃತ್ತಿಜೀವನ ಮತ್ತು ಚಿತ್ರರಂಗದ ಬಗ್ಗೆ ಮಾತನಾಡಿ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. 'ಹಾಡಿನ ಚಿತ್ರೀಕರಣದ ಮೊದಲು ನನಗೆ ಊಟ ಹಾಕುತ್ತಿರಲಿಲ್ಲ. ದಿನಕ್ಕೆ ಒಂದು ಇಡ್ಲಿ ಮಾತ್ರ ತಿನ್ನಬೇಕಿತ್ತು. ಬ್ಲ್ಯಾಕ್ ಕಾಫಿ (Black Coffee) ಕೊಡುತ್ತಿದ್ದರು. ಇವಿಷ್ಟೇ ಸೇವಿಸಿ ದಿನಪೂರ್ತಿ ಇರಬೇಕಿತ್ತು. ಇದರಿಂದಾಗಿ ಸಿಕ್ಕಾಪಟ್ಟೆ ಹಸಿವಿನಿಂದ ಬಳಲುತ್ತಿದ್ದೆ' ಎಂದು ಸಮೀರಾ ಹೇಳಿದ್ದಾರೆ. ನಾನು ಈ ಬಗ್ಗೆ ಕೇಳಿದಾಗ ಸದ್ಯ ಇದು ಇಂದಿನ ಅಗತ್ಯವಾಗಿದೆ. ಚಿತ್ರೀಕರಣ ಮುಗಿಯುವವರೆಗೆ ನೀವು ಇಷ್ಟೇ ತಿಂದುಕೊಂಡೇ ಇರಬೇಕು ಎಂದು ಅವರು ಹೇಳಿದರು. ಇದು ಕೇವಲ ಒಂದು ಹಾಡಿನ ಚಿತ್ರೀಕರಣಕ್ಕಾಗಿತ್ತು. ಇದು ನನಗೆ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ತುಂಬಾ ಕಷ್ಟಕರವಾಗಿತ್ತು. ನಾನು ತುಂಬಾ ನೋವಿನಿಂದ ಬಳಲುತ್ತಿದ್ದೆ' ಎಂದಿದ್ದಾರೆ.
ಅಷ್ಟಕ್ಕೂ ಈ ರೀತಿ ಮಾಡಲು ಹೇಳಿದ ಕಾರಣ ಏನೆಂದರೆ ಇದಾಗಲೇ ಇವರು ದಪ್ಪಗಿದ್ದರು ಎನ್ನುವ ಕಾರಣಕ್ಕೆ. ಹಾಡಿನ ಚಿತ್ರೀಕರಣ ಮುಗಿಯುವವರೆಗೆ ತೂಕ ಹೆಚ್ಚಾಗಬಾರದು ಎನ್ನುವ ಕಾರಣದಿಂದ ಹೀಗೆ ಮಾಡಲಾಗಿತ್ತು ಎಂದಿದ್ದಾರೆ. ತಮ್ಮ ಕೂದಲಿನ ಬಗ್ಗೆಯೂ ಮಾತನಾಡಿರುವ ಸಮೀರಾ ರೆಡ್ಡಿ, 'ನಾನು 19 ವರ್ಷದವಳು ಇರುವಾಗಲೇ ಕೂದಲು ಬಿಳಿ ಬಣ್ಣಕ್ಕೆ (Grey hair) ತಿರುಗಲು ಪ್ರಾರಂಭಿಸಿತು, ಆದರೆ ಇದು ಗೊತ್ತಾದರೆ ಚಿತ್ರರಂಗ ನನಗೆ ದೂರವೇ ಇಡುತ್ತಿತ್ತು. ಈ ಹಿನ್ನೆಲೆಯಲ್ಲಿ, ಅದನ್ನು ಯಾರಿಗೂ ನೋಡಲು ಬಿಡಲಿಲ್ಲ. ಅದು ಕಾಣಿಸದಂತೆ ಬಹಳಷ್ಟು ಒತ್ತಡದಲ್ಲಿ ಕೆಲಸ ಮಾಡಿದೆ' ಎಂದಿದ್ದಾರೆ.
ಅಂದಹಾಗೆ, ಸಮೀರಾ ಅವರು, 2002 ರ ಮೈನೆ ದಿಲ್ ತುಜ್ಕೋ ದಿಯಾ (Dil Tujhko Diya) ಚಿತ್ರದ ಮೂಲಕ ಚಲನಚಿತ್ರ ಪ್ರಯಾಣವನ್ನು ಪ್ರಾರಂಭಿಸಿದರು. ಈ ಚಿತ್ರದಲ್ಲಿ ಸೋಹೈಲ್ ಖಾನ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿದ್ದರು. ಇದರ ನಂತರ ಅವರು ಪ್ಲಾನ್, ಮುಸಾಫಿರಸ್ ರೇಸ್, ದೇ ದನಾ ದಾನ್, ಡರ್ನಾ ಮನ ಹೈ, ಆಕ್ರೋಶ್, ತೇಜ್ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದರು. ಸಮೀರಾ ರೆಡ್ಡಿ ಅವರ ವೃತ್ತಿಜೀವನವು ವಿಶೇಷವಾದದ್ದೇನಲ್ಲ. ಸ್ವಂತವಾಗಿ ಒಂದೇ ಒಂದು ಹಿಟ್ ಚಿತ್ರ ಕೊಟ್ಟಿಲ್ಲ. ಅವರು 2014 ರಲ್ಲಿ ಫ್ಲಾಪ್ ಹೋತಾ ದೇಖ್ ಚಿತ್ರವನ್ನು ನೋಡಿದ ನಂತರ ಉದ್ಯಮಿ ಅಕ್ಷಯ್ ವರ್ದೆ (Akshay Varde) ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
Tamannaah Bhatia ಸನ್ಯಾಸ ಸ್ವೀಕರಿಸಿದ್ರಾ? ಮಿಲ್ಕಿ ಬ್ಯೂಟಿಯ ಹೊಸ ಅವತಾರಕ್ಕೆ ಫ್ಯಾನ್ಸ್ ಶಾಕ್!