ದಕ್ಷಿಣ ಭಾರತದ ಸುಂದರ ಚೆಲುವೆ, ನಟಿ ಸಾಯಿ ಪಲ್ಲವಿ ನಗು ಮುಖದಿಂದ ದಿನ ಪ್ರಾರಂಭಿಸುವುದಕ್ಕೆ ಕಾರಣವೇನೆಂಬುದನ್ನು ರಿವೀಲ್‌ ಮಾಡಿದ್ದಾರೆ.... 

ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ಅಭಿಮಾನಿಗಳು ಆಕೆಯ ನಟನೆ ಮತ್ತು ಡ್ಯಾನ್ಸ್‌ ಮಾತ್ರವಲ್ಲದೇ ಆಕೆಯ ವ್ಯಕ್ತಿತ್ವವನ್ನೂ ಮೆಚ್ಚಿಕೊಂಡಿದ್ದಾರೆ. ಇದಕ್ಕೆ ಉದಾಹರಣೆಗಳು ಹಲವು. ಪರ್ಸನಲ್‌ ಲೈಫ್‌ ಅನ್ನು ತುಂಬಾನೇ ಪ್ರೈವೇಟ್‌ ಆಗಿಟ್ಟಿರುವ ಸಾಯಿ ಪಲ್ಲವಿ ಬಗ್ಗೆ ತಿಳಿದುಕೊಳ್ಳಲು ಅನೇಕರಿಗೆ ಕುತೂಹಲ ಹೆಚ್ಚು. ಕೆಲವು ದಿನಗಳ ಹಿಂದೆ ಪಲ್ಲವಿ ತಮ್ಮ ಸಂತೋಷಕ್ಕೆ ಕಾರಣ ಏನು ಎಂದು ಬಹಿರಂಗಗೊಳಿಸಿದ್ದಾರೆ.

ಇನ್‌ಸ್ಟಾಗ್ರಾಂ:
ಸೋಷಿಯಲ್ ಮೀಡಿಯಾದಲ್ಲಿ ಸಾಯಿ ಪಲ್ಲವಿ ಹೆಸರಿನ ತುಂಬಾ ಖಾತೆಗಳು ಇವೆ, ಆದರೆ ಆಕೆಯ ನಿಖರವಾದ ಅಕೌಂಟ್‌ ಮಾತ್ರವೇ ವೆರಿಫೈಡ್ ಆಗಿರುವುದು. ಅದರಲ್ಲಿ ಒಂದು ಅದ್ಭುತವಾದ ವಿಡಿಯೋ ಶೇರ್ ಮಾಡಿದ್ದಾರೆ.

ಸಂದರ್ಶನದಲ್ಲಿ ಹೀಗಾ ಗರಂ ಆಗೋದು, ಸಾಯಿ ಪಲ್ಲವಿಗೆ ಮಾತಿಗೆ ಸುಸ್ತಾದ ನಿರೂಪಕ..! 

'ನಾನು ನಗು ಮುಖದಲ್ಲಿ ದಿನ ಪ್ರಾರಂಭಿಸುವುದಕ್ಕೆ ಇದೇ ಕಾರಣ. ಪ್ರಕೃತಿ ಮಾತೆ ಕೊಟ್ಟ ಬ್ಯೂಟಿಫುಲ್ ಸರ್ಪ್ರೈಸ್‌' ಎಂದು ಸೂರ್ಯೋದಯ ಮತ್ತು ಕಾಮನಬಿಲ್ಲು ಎರಡೂ ತಮ್ಮ ಎಡ-ಬಲಕ್ಕಿರುವ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

View post on Instagram

ಲಾಕ್‌ಡೌನ್‌ನಲ್ಲಿ ಡೈರಿಸ್;
ಲಾಕ್‌ಡೌನ್‌ ದಿನಗಳನ್ನು ಫ್ಯಾಮಿಲಿ ಜೊತೆ ಕಳೆಯುತ್ತಿರುವ ಸಾಯಿ ಪಲ್ಲವಿ, ಕೆಲವು ದಿನಗಳ ಹಿಂದೆ ತಮ್ಮ ಮನೆಗೆ ಭೇಟಿ ಕೊಟ್ಟ ಮೊಲಗಳ ಫೋಟೋ ಶೇರ್ ಮಾಡಿದ್ದರು. ಅಷ್ಟೇ ಅಲ್ಲದೇ ಮದರ್‌ ನೇಚರ್‌ ಜೊತೆ ಸಮಯ ಕಳೆದಿರುವ ಫೋಟೋವನ್ನೇ ಹೆಚ್ಚಾಗಿ ಶೇರ್ ಮಾಡಿದ್ದಾರೆ.

ಮೂಲ ತಮಿಳುನಾಡಿನವರಾದರೂ ಮಲಯಾಳಂ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಸಾಯಿ, ಅಕಸ್ಮಾತ್ ಸಿನಿಮಾ ರಂಗಕ್ಕೆ ಬಂದವರು. ಪ್ರೇಮಂ ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಈ ನಟಿ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ವೈದ್ಯ ಪದವೀಧರೆಯಾದರೂ ಚಿತ್ರರಂಗವನ್ನು ವೃತ್ತಿಯಾಗಿ ಆರಿಸಿಕೊಂಡಿದ್ದು, ಬಟ್ಟೆ ಅಥವಾ ಮೇಕಪ್ ವಿಷಯದಲ್ಲಿ ಯಾವುದೇ ರೀತಿಯ ಕಾಂಪ್ರೋಮೈಸ್ ಸಹ ಮಾಡಿಕೊಳ್ಳುವುದಿಲ್ಲ ಈ ನಟಿ. ಮುಖದಲ್ಲಿ ಮೊಡವೆ ಇದ್ದರೂ ತಲೆ ಕೆಡಿಸಿಕೊಳ್ಳದ ಸಾಯಿ, ಕೋಟಿ ಕೊಡುತ್ತೇನೆಂದರೂ ಯಾವುದೇ ಫೇರ್‌ನೆಸ್ ಕ್ರೀಂ ಜಾಹೀರಾತಿನಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. 

View post on Instagram

ಪಕ್ಕದ್ಮನೆ ಹುಡುಗಿ ಲುಕ್‌ನಿಂದಲೇ ಅಪಾರ ಅಭಿಮಾನಿಗಳನ್ನು ಪಡೆದಿರುವ ಈ ನಟಿ, ತುಂಡುಡುಗೆ ತೊಡುವುದಿರಲಿ, ಚಿತ್ರಗಳಲ್ಲಿ ಪಾಫ್ ಸ್ಲೀವ್ಸ್ ಬಟ್ಟೆ ಹಾಕಲೂ ಒಪ್ಪುವುದಿಲ್ಲ. ಆದರೂ, ಇವರಿಗೆ ಆಫರ್ಸ್ ಯಾವತ್ತೂ ಕಡಿಮೆಯಾಗಿಲ್ಲ. ರಿಯಾಲಿಟಿ ಶೋ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿ, ತಮ್ಮ ಸ್ಟ್ರಾಂಗ್ ವ್ಯಕ್ತಿತ್ವದಿಂದಲೇ ಮತ್ತಷ್ಟು ಜನರಿಗೆ ಹತ್ತಿರವಾಗುತ್ತಾರೆ. ಅಲ್ಲದೇ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ನಿರ್ದೇಶಕರು, ನಿರ್ಮಾಪಕರೊಂದಿಗೆ ಹಾಸಿಗೆ ಹಂಚಿಕೊಳ್ಳುವುದು ಅನಿವಾರ್ಯ ಎಂದು ಹೇಳುವ ಅನೇಕ ನಟಿಯರಿಗೆ ಪ್ರತಿಭೆಯೊಂದಿದ್ದರೆ ಸಾಕು, ಯಾವುದಕ್ಕೂ ಕಾಂಪ್ರೋಮೈಸ್ ಆಗೋ ಅಗತ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟವರು ಸಾಯಿ ಪಲ್ಲವಿ.

ಅವಕಾಶಕ್ಕೆ ಏನು ಬೇಕಾದರೂ ಮಾಡುವ ನಟಿಯರಿಗೆ ಮಾದರಿಯಾಗಲಿ ಸಾಯಿ ಪಲ್ಲವಿ!

ಒಟ್ಟಿನಲ್ಲಿ ಗಟ್ಟಿಯಾದ ವ್ಯಕ್ತಿತ್ವವಿದ್ದರೆ, ಮನುಷ್ಯ ತನ್ನ ಪ್ರತಿಭೆಯಿಂದ ಏನು ಬೇಕಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟ ಸಾಯಿ ಪಲ್ಲಿವಿ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಮಾದರಿಯಾಗುತ್ತಾಳೆ.