ವೈರಲ್ ಫೋಟೋದಲ್ಲಿರುವ ವ್ಯಕ್ತಿ ಯಾರೆಂದು ರಿವೀಲ್ ಮಾಡಿದ ನಟಿ ರಮ್ಯಾ

ರಮ್ಯಾ ಯುವಕನ ಜೊತೆ ಆಪ್ತವಾಗಿರುವ ಫೋಟೋವನ್ನು ಶೇರ್ ಮಾಡಿದ್ದರು. ಈ ಫೋಟೋ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ರಮ್ಯಾ ಜೊತೆ ಸೆಲ್ಫಿಗೆ ಪೋಸ್ ನೀಡಿದ ಯುವಕ ಯಾರೆಂದು ತಲೆಕೆಡಿಸಿಕೊಂಡಿದ್ದರು. ಇದೀಗ ಜೊತೆಗಿರುವ ವ್ಯಕ್ತಿ ಯಾರೆಂದು ಬಹಿರಂಗ ಪಡಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

actress Ramya reveals who is the person of selfie with her sgk

ಸ್ಯಾಂಡಲ್ ವುಡ್ ನ (Sandalwood) ಮೋಹಕ ತಾರೆ, ಪ್ರತಿಭಾವಂತ ನಟಿ, ಓನ್ ಅಂಡ್ ಓನ್ಲಿ ಬ್ಯೂಟಿ ಕ್ವೀನ್ ರಮ್ಯಾ (Ramya). ವಜ್ರೇಶ್ವರಿ ಕಂಬೈನ್ಸ್ (Sri Vajreshwari Combines) ಮೂಲಕ ಸಿನಿ ಜರ್ನಿ ಅರಂಭಿಸಿದ ದಿವ್ಯಾ ಸ್ಪಂದನ (Divya Spandana) ಆನ್‌ ಸ್ಕ್ರೀನ್ ಹೆಸರನ್ನು ರಮ್ಯಾ ಎಂದು ಬಲಾಯಿಸಿಕೊಂಡರು. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಿರ್ದೇಶಕರು, ನಿರ್ಮಾಪಕರು ಮತ್ತು ನಟರ ಜೊತೆ ಕೆಲಸ ಮಾಡಿದ ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಸಿನಿಮಾರಂಗದಿಂದ ದೂರ ಸರಿದರು. ಕೆಲವು ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದ (Congress) ರಮ್ಯಾ ಬಳಿಕ ರಾಜಕೀಯ ಕ್ಷೇತ್ರಕ್ಕೂ ಗುಡ್ ಬೈ ಹೇಳಿದರು.

ರಮ್ಯಾ ಕೆಲವು ತಿಂಗಳು ನಿಗೂಢವಾಗಿ ವಾಸಿಸುತ್ತಿದ್ದರು. ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ, ಹೇಗಿದ್ದಾರೆ ಎನ್ನುವ ಬಗ್ಗೆ ಸುಳಿವು ಕೂಡ ನೀಡಿರಲಿಲ್ಲ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ರಮ್ಯಾ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು. ಇದೀಗ ಸ್ಯಾಂಡಲ್ ವುಡ್ ಮಂದಿಯ ಜೊತೆ ಮತ್ತೆ ಸಂಪರ್ಕಕ್ಕೆ ಬಂದಿರುವ ರಮ್ಯಾ ಮತ್ತೆ ಸಕ್ರೀಯರಾಗಿದ್ದಾರೆ. ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಸಂತಸ ಹೆಚ್ಚಿಸುತ್ತಿರುತ್ತಾರೆ.

ಅಪ್ಪು ನಿಧನದ ಬಳಿಕ ಬೆಂಗಳೂರಿಗೆ ಬಂದಿದ್ದ ರಮ್ಯಾ ಬಳಿಕ ಹೆಚ್ಚಾಗಿ ಕರ್ನಾಟಕದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಸ್ಯಾಂಡಲ್ ವುಡ್ ನ ಅನೇಕ ಸಿನಿಮಾಗಳಿಗೆ ಸಾಥ್ ನೀಡುತ್ತಿದ್ದಾರೆ. ರಮ್ಯಾ ಮತ್ತೆ ಬಣ್ಣದ ಲೋಕಕ್ಕೆ ಹಿಂದಿರುಗುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ರಮ್ಯಾ ಯಾವಾಗ ತೆರೆಮೇಲೆ ಬರ್ತಾರೆ ಎಂದು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ಅನ್ನು ಮತ್ತೆ ದೊಡ್ಡ ಪರದೆ ಮೇಲೆ ನೋಡಿ ಆನಂದಿಸಲು ಕಾಯುತ್ತಿದ್ದ ಅಭಿಮಾನಿಗಳಿಗೆ ರಮ್ಯಾ ಇತ್ತೀಚಿಗಷ್ಟೆ ಶೇರ್ ಮಾಡಿದ್ದ ಫೋಟೋ ಅಚ್ಚರಿ ಮೂಡಿಸಿತ್ತು.

ವೈರಲ್ ಆಗ್ತಿದೆ ಹುಡುಗನ ಜೊತೆ ಇರೋ ರಮ್ಯ ಫೋಟೊ; ಯಾರು ಆ ಹುಡುಗ..?

ರಮ್ಯಾ ಯುವಕನ ಜೊತೆ ಆಪ್ತವಾಗಿರುವ ಫೋಟೋವನ್ನು ಶೇರ್ ಮಾಡಿದ್ದರು. ಈ ಫೋಟೋ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ರಮ್ಯಾ ಜೊತೆ ಸೆಲ್ಫಿಗೆ ಪೋಸ್ ನೀಡಿದ ಯುವಕ ಯಾರೆಂದು ತಲೆಕೆಡಿಸಿಕೊಂಡಿದ್ದರು. ರಮ್ಯಾ ಜೊತೆ ಇರುವ ಯುವಕನ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗಿರುವ ವ್ಯಕ್ತಿ ಯಾರೆಂದು ಬಹಿರಂಗ ಪಡಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಅಂದಹಾಗೆ ರಮ್ಯಾ ಜೊತೆ ಸೆಲ್ಫಿಗೆ ಪೋಸ್ ಕೊಟ್ಟಿದ್ದು ಮತ್ಯಾರು ಅಲ್ಲ ಸ್ಟೈಲಿಸ್ಟ್ ವಿಹಾನ್. ಈ ಬಗ್ಗೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ. ಇವರು ವಿಹಾನ್. ನನ್ನ ಸ್ಟೈಲಿಸ್ಟ್. ಆದರೂ ನಾನು ಕುತೂಹಲವನ್ನು ತುಂಬಾ ಇಷ್ಟಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಸುವರ್ಣ ನ್ಯೂಸ್ ವಾಹಿನಿಯ ಪೋಸ್ಟರ್ ಶೇರ್ ಮಾಡಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.


ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಮನೆಯಲ್ಲಿ ಕನ್ನಡದ ಕ್ಯೂಟ್ ಹೀರೋಯಿನ್ಸ್ ಪಾರ್ಟಿ!

 

ಇನ್ನು ರಮ್ಯಾ ಸೈಲೆಂಟ್ ಆಗಿ ಬಣ್ಣ ಹಚ್ಚಿದ್ದಾರೆ. ಸದ್ಯದಲ್ಲೇ ತೆರೆಮೇಲೆ ಬರ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ರಮ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದಷ್ಟು ಬೇಗ ಸಿನಿಮಾ ಮಾಡಲಿ ಎನ್ನುವುದೇ ಅಭಿಮಾನಿಗಳ ಆಶಯ. ಸದ್ಯ ಮತ್ತೆ ಆಕ್ಟೀವ್ ಆಗಿರುವ ರಮ್ಯಾ ನೋಡಿದ್ರೆ ಮತ್ತೆ ಸಿನಿಮಾದಲ್ಲಿ ಮಿಂಚುವ ಎಲ್ಲಾ ಸೂಚನೆ ಕಾಣುತ್ತಿದೆ.

 

Latest Videos
Follow Us:
Download App:
  • android
  • ios