Asianet Suvarna News Asianet Suvarna News

69ರ ನಟಿಯ ಹಾಟ್ ಫೋಟೋ ಶೂಟ್ : ಹೀಗಿತ್ತು ನೆಟ್ಟಿಗರ ರಿಯಾಕ್ಷನ್

69ರ ವಯಸ್ಸಿನಲ್ಲಿ ಹಾಟ್ ಫೋಟೋಶೂಟ್ | ಮಾಡರ್ನ್‌ ಲುಕ್‌ನಲ್ಲಿ ಮಿಂಚಿದ ಹಳೆಯ ನಟಿ | ಹೀಗಿತ್ತು ನೆಟ್ಟಿಗರ ರಿಯಾಕ್ಷನ್

Actress Rajini Chandy 69 Trolled For Sexy Photoshoot dpl
Author
Bangalore, First Published Jan 15, 2021, 3:47 PM IST

ನಟಿ ಮಾಜಿ ಬಿಗ್‌ಬಾಸ್ ಸ್ಪರ್ಧಿ ರಜಿನಿ ಚಂಡಿ ಹಾಟ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹಿರಿಯ ಮಾಲಿವುಡ್ ನಟಿಯ ಹಾಟ್ ಫೋಟೋ ಶೂಟ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

69 ವಯಸ್ಸಿನ ರಜನಿ ಕಳೆದ ವಾರ ಫೇಸ್‌ಬುಕ್‌ನಲ್ಲಿ ಒಂದಷ್ಟು ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಕೇರಳ ಮೂಲದ ಫೋಟೋಗ್ರಫರ್ ಆದಿರಾ ಜಾಯ್ ಕ್ಲಿಕ್ಕಿಸಿದ ಫೋಟೋಗಳು ಸದ್ಯ ವೈರಲ್ ಆಗಿವೆ.

ಈ ಚೆಲುವೆಯನ್ನು ಬಲಿ ತೆಗೆದುಕೊಂಡ ರೋಗ ನಿಮಗೆ ಗೊತ್ತಾ?

ಟೂ ಸೆಕ್ಸಿ ಎಂದು ಟ್ರೋಲ್ ಮಾಡಿದ್ದಾರೆ ನೆಟ್ಟಿಗರು. ಸಾಧಾರಣವಾಗಿ ಸೀರೆಯಲ್ಲೇ ಕಾಣಿಸಿಕೊಳ್ಳೋ ಹಿರಿಯ ನಟಿ ಡೆನಿಮ್ ಧರಿಸಿ, ಫ್ಲೋರಲ್ ಮ್ಯಾಕ್ಸಿ ಲುಕ್‌ನಲ್ಲಿ ಮಾದಕ ಫೋಸ್ ಕೊಟ್ಟಿದ್ದಾರೆ.

ಕೆಲವೊಂದರಲ್ಲಿ ಬಿಳಿ ಹೂಗಳ ಕಿರೀಟವನ್ನು ತಲೆಗಿಟ್ಟುಕೊಂಡಿದ್ದಾರೆ. ನಟಿಯ ಹೊಸ ಲುಕ್‌ಗೆ ಸ್ವಲ್ಪ ಜನರು ಪ್ರಶಂಸೆ ವ್ಯಕ್ತಪಡಿಸಿದ್ದರೆ ಇನ್ನೊಂದಷ್ಟು ಜನ ಫೋಟೋಗ್ರಫರನ್ನು ಟ್ರೋಲ್ ಮಾಡಿದ್ದಾರೆ.

ನಿನಗೆ ವಯಸ್ಸಾಗಿದೆ ಎಂದ ನೆಟ್ಟಿಗರಿಗೆ ಮಹಿಳೆ ಕೊಟ್ಟ ಗುದ್ದಿದು

ಕೆಲವರು ನನ್ನನ್ನು ಸೂಳೆ ಎಂದು ಕರೆದರು. ಇನ್ನೂ ಕೆಲವರು 'ನೀವು ಇನ್ನೂ ಸಾಯಲಿಲ್ಲವೇ?' ಎಂದರೆ ಇನ್ನೂ ಕೆಲವರು ನಾನು ಮನೆಯಲ್ಲಿ ಕುಳಿತು ಬೈಬಲ್ ಓದಬೇಕೆಂದು ಕಮೆಂಟ್ ಮಾಡಿದ್ದಾರೆ ಎಂದಿದ್ದಾರೆ ರಜನಿ.

My New Makeover Shoot with Athiras Photography Hope You all will support ... Click :- athirasphotography Model:-...

Posted by Rajini Chandy on Thursday, January 7, 2021

ಇದು ಪ್ರಾರ್ಥನೆ ಮಾಡುವ ವಯಸ್ಸು. ನಿಮ್ಮ ದೇಹವನ್ನು ಪ್ರದರ್ಶಿಸಬೇಡಿ ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬ ವ್ಯಕ್ತಿಯು ನನ್ನನ್ನು ಹಳೆಯ ಆಟೋ ರಿಕ್ಷಾ ಎಂದು ಹೇಳಿದ ಮತ್ತು ನನಗೆ ಹೊಸ ಕೋಟ್ ಪೇಂಟ್ ಸಿಕ್ಕರೂ ನಾನು ಹಳೆಯದೇ ಎಂದು ಟ್ರೋಲ್ ಮಾಡಿದ್ದಾಗಿ ರಜನಿ ಹೇಳಿದ್ದಾರೆ.

Follow Us:
Download App:
  • android
  • ios