ಈ ಚೆಲುವೆಯನ್ನು ಬಲಿ ತೆಗೆದುಕೊಂಡ ರೋಗ ನಿಮಗೆ ಗೊತ್ತಾ?
ತಾನ್ಯಾ ರಾಬರ್ಟ್ಸ್ ಎಂಬ ಚೆಲುವೆ ಹಾಲಿವುಡ್ ನಟಿಯೊಬ್ಬಳನ್ನು ಸೆಪ್ಸಿಸ್ ಕಾಯಿಲೆ ಬಲಿ ತೆಗೆದುಕೊಂಡಿದೆ. ಆ ಸೋಂಕಿನ ಬಗ್ಗೆ ತಿಳಿಯೋಣ ಬನ್ನಿ.
ಇತ್ತೀಚೆಗೆ ತಾನ್ಯಾ ರಾಬರ್ಟ್ಸ್ ಎಂಬ ಚೆಲುವೆ ನಟಿ ಸೆಪ್ಸಿಸ್ ಎಂಬ ರೋಗಕ್ಕೆ ಬಲಿಯಾದಳು.
ಈಕೆ ಯಾರು ಎಂಬುದು ಗೊತ್ತಿಲ್ಲದವರಿಗೆ ಒಂದು ಪರಿಚಯ: ಇವಳು ಹಾಲಿವುಡ್ ನಟಿ. ಜೇಮ್ಸ್ ಬಾಂಡ್ ಫಿಲಂಗಳಲ್ಲಿ ನಟಿಸಿ ಹೆಸರು ಮಾಡಿದ್ದಳು. 1948ರಲ್ಲಿ ಬಂಧ ಜೇಮ್ಸ್ ಬಾಂಡ್ ಫಿಲಂ 'ಎ ವ್ಯೂ ಟು ಕಿಲ್' ಫಿಲಂನಲ್ಲಿ ಹೀರೋಯಿನ್ ಕಂ ಖಳನಟಿಯಾಗಿ ನಟಿಸಿದ್ದವಳು. ಈಕೆ ಮೊನ್ನೆ ಮೊನ್ನೆ ಯುರಿನರಿ ಟ್ರಾಕ್ಟ್ ಸೋಂಕಿಗೆ ತುತ್ತಾಗಿ, ಮುಂದೆ ಅದೇ ಸೆಪ್ಸಿಸ್ ಆಗಿ ತೀರಿಕೊಂಡಳು. ಆಗ ಆಕೆಗೆ 65 ವರ್ಷ.
ಯುರಿನರಿ ಟ್ರಾಕ್ಟ್ (ಮೂತ್ರಾಂಗವ್ಯೂಹ) ಸೋಂಕುಗಳು ಮೊದಲು ಮೂತ್ರಕೋಶದ ಸೋಂಕುಗಳಾಗಿ ಆರಂಭವಾಗುತ್ತವೆ. ಸಾಮಾನ್ಯವಾಗಿ, ಬೇಗನೆ ಗೊತ್ತಾದರೆ ಆಂಟಿಬಯಾಟಿಕ್ಸ್ ಸೇವಿಸಿದರೆ ಗುಣವಾಗುತ್ತದೆ. ಆದರೆ ಈ ಸೋಂಕು ಕಿಡ್ನಿಗಳಿಗೆ ಹಬ್ಬಿದರೆ ಮಾತ್ರ ಮಾರಣಾಂತಿಕವಾಗುತ್ತದೆ. ತಾನ್ಯಾ ವಿಷಯದಲ್ಲಿ ಹೀಗಾಯಿತು. ಕಿಡ್ನಿಯಿಂದ ಅದು ಇತರ ಅಂಗಗಳಿಗೂ ಹಬ್ಬಲು ಆರಂಭಿಸುತ್ತದೆ. ಅಂದರೆ ಕ್ಯಾನ್ಸರ್ ಥರವೇ ಬೆಳೆಯುವ ಬೇಡದ ಕೋಶಗಳ ಸೋಂಕು ಇದು. ಸೆಪ್ಸಿಸ್ ಉಂಟಾಗುವುದು ಕೊನೆಯ ಹಂತದಲ್ಲಿ. ಆ ಹಂತದಲ್ಲಿ ದೇಹದ ಪ್ರತಿರೋಧ ಶಕ್ತಿ ಕೈ ಕೊಡಲು ಆರಂಭಿಸುತ್ತದೆ. ದೇಹದ ರಕ್ತನಾಳಗಳಲ್ಲಿ ಹಬ್ಬಲು ಆರಂಭಿಸಿದ ಸೋಂಕನ್ನು ಹೊರಹಾಕಲು ದೇಹದ ಪ್ರತಿರೋಧ ಶಕ್ತಿ ಪ್ರಯತ್ನಿಸಿದಾಗ, ಅದು ಕೈಕೊಡಲು ಶುರು ಮಾಡುತ್ತದೆ. ಇತರ ಅಂಗಗಳು ವಿಫಲಗೊಳ್ಳಲು ಆರಂಭಿಸುತ್ತದೆ.
ನಿತ್ಯ ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡಿದರೆ, ಸೆಕ್ಸ್ ಡ್ರೈವ್ ಮೇಲೆ ಬೀರುತ್ತೆ ಪರಿಣಾಮ ...
ಶೇ.31 ರಷ್ಟು ಸೆಪ್ಸಿಸ್ ಕೇಸುಗಳು ಮೊದಲು ಯುರಿನರಿ ಟ್ರಾಕ್ಟ್ ಸೋಂಕಾಗಿಯೇ ಆರಂಭವಾಗುತ್ತವೆ. ಯುರಿನಟಿ ಟ್ರಾಕ್ಟ್ ಸೋಂಕು, ಸೆಪ್ಸಿಸ್ ಆಗಿ ಪರಿವರ್ತನೆಗೊಂಡಿದೆಯೇ ಇಲ್ಲವೇ ಎಂಬುದನ್ನು ಹೇಳುವ ಯಾವುದೇ ಸೂಚನೆಗಳನ್ನು ನಮ್ಮ ದೇಹ ನಮಗೆ ನೀಡುವುದೇ ಇಲ್ಲ. ಅದು ಗಂಭೀರ ಹಂತವನ್ನು ತಲುಪಿದ ಮೇಲೇ ತಿಳಿಯುತ್ತದೆ. ಸೆಪ್ಸಿಸ್‌ಗೆ ತಿರುಗಿದ ಕೇಸುಗಳು ಬದುಕಿ ಉಳಿಯುವುದು ಅನುಮಾನ. ಯುರಿನರಿ ಟ್ರಾಕ್ಟ್ ಸೋಂಕು ಪಡೆದವರಲ್ಲಿ ಆರು ಮಂದಿಯಲ್ಲಿ ಒಬ್ಬರಿಗೆ ಈ ಸೆಪ್ಸಿಸ್ ಉಂಟಾಗುತ್ತದೆ. ಸೆಪ್ಸಿಸ್ ಎಂದರೆ ಮತ್ತೇನೂ ಅಲ್ಲ, ಗಾಯಕೊಳೆತ. ಇದರ ಲಕ್ಷಣಗಳು ಹೀಗಿರಬಹುದು: ಅತೀ ಜ್ವರ, ತೀವ್ರ ಅಸ್ವಸ್ಥತೆಯ ಭಾವನೆ, ನಿದ್ರಾವಸ್ಥೆ, ಜಾಡ್ಯ, ಕಡಿಮೆ ರಕ್ತಡೊತ್ತಡ, ಉಸಿರಾಟದಲ್ಲಿ ತೊಂದರೆ ಇತ್ಯಾದಿ. ಆದರೆ ಇದೆಲ್ಲವೂ ಸೆಪ್ಸಿಸ್‌ನ ಲಕ್ಷಣಗಳೇ ಎದೂ ಹೇಳಬರುವದಿಲ್ಲ. ಇತರ ಹಲವು ಕಾಯಿಲೆಗಳಲ್ಲೂ ಈ ಲಕ್ಷಣಗಳು ಕಂಡುಬರುವುದರಿಂದ ಇದನ್ನು ಪ್ರತ್ಯೇಕಿಸಿ ನೋಡುವುದು ಕಷ್ಟಸಾಧ್ಯ.
ಪದೇ ಪದೆ ಮೂತ್ರ ವಿಸರ್ಜನೆ ಆಗುತ್ತಿದೆಯೇ? ಜೋಪಾನ ...
ಯುರಿನರಿ ಟ್ರಾಕ್ಟ್ ಸೋಂಕು ಅಥವಾ ಮೂತ್ರಾಂಗ ಸೋಂಕು ಉಂಟಾಗುವುದು ಸಾಮಾನ್ಯವಾಗಿ ಮಹಿಳೆಯರಲ್ಲಿ ಮತ್ತು 55ಕ್ಕೂ ಅಧಿಕ ಪ್ರಾಯ ಆಗಿರುವವರಲ್ಲಿ. ಇವರಲ್ಲೇ ಯಾಕೆ ಹೆಚ್ಚು? ವಯಸ್ಸಾದವರಲ್ಲಿ ಸಹಜವಾಗಿ ದೇಹದ ಪ್ರತಿರೋಧ ಶಕ್ತಿ ಕುಗ್ಗಿರುತ್ತದೆ. ಇನ್ನು ಮಹಿಳೆಯರಲ್ಲಿ, ಅವರ ಮೂತ್ರದ್ವಾರಕ್ಕೂ ಮೂತ್ರಾಂಗಗಳಿಗೂ ಇರುವ ದೂರ ಬಹಳ ಕಡಿಮೆ. ಗಂಡಸರಲ್ಲಿ ಇದು ಹೆಚ್ಚು. ಹೀಗಾಗಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳು ಮಹಿಳೆಯರಲ್ಲಿ ಬೇಗನೆ ಮೂತ್ರದ್ವಾರದಿಂದ ಮೂತ್ರಾಂಗಗಳಿಗೆ ದಾಟಿಕೊಂಡುಬಿಡುತ್ತವೆ. ಇದರಿಂದಾಗಿಯೇ ಇವರಲ್ಲಿ ಮೂತ್ರನಾಳ, ಮೂತ್ರಕೋಶ, ಮೂತ್ರಾಂಗವ್ಯೂಹದ ಸೋಂಕು ಹೆಚ್ಚು.
ಎಚ್ಚರಿಕೆ ವಹಿಸಬೇಕಾದ್ದು ಹೇಗೆ?
- ಯೋನಿ ಅಥವಾ ಮೂತ್ರದ್ವಾರದ ಸ್ವಚ್ಛತೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಣ್ಣ ಸೋಂಕು ಕಂಡುಬಂದರೂ ಕಡೆಗಣಿಸದೆ ಚಿಕಿತ್ಸೆ ಪಡೆಯಬೇಕು.
- ಲೈಂಗಿಕ ಕ್ರಿಯೆಯ ಬಳಿಕ ಮತ್ತು ವಿಸರ್ಜನೆಯ ಬಳಿಕ ಆ ಭಾಗವನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
- ಮೂತ್ರ ಮಾಡುವಲ್ಲಿ ತೊಂದರೆ, ಪದೇ ಪದೆ ಮೂತ್ರಕ್ಕೆ ಹೋಗುವಂತಾದರೆ ಅದನ್ನು ಡಾಕ್ಟರ್ ಗಮನಕ್ಕೆ ತರಬೇಕು.
- ಹೆಚ್ಚಿನ ಪ್ರಮಾಣದಲ್ಲಿ ನೀರು, ದ್ರವಾಹಾರ ಸೇವಿಸಬೇಕು.
- ಆರೋಗ್ಯಕರ ಆಹಾರ ಹಾಗೂ ವಿಶ್ರಾಂತಿ, ನಿದ್ರೆ ಅವಶ್ಯಕ.
ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಆಹಾರಕ್ಕೆ ನೋ ಎನ್ನಿ ...