ಹಿಂದೂ ಧರ್ಮದ ರಕ್ಷಣೆಗೆ ವೇದಗಳ ಸಂರಕ್ಷಣೆ ಅನಿವಾರ್ಯ: ಕಂಚಿ ಶ್ರೀ
ವೇದಗಳು ಸಮಾಜಕ್ಕೆ ಮಾರ್ಗದರ್ಶಿಯೂ ಆಗಿವೆ. ಭಗವಂತನ ಇಚ್ಛೆ ಧರ್ಮದ ರಕ್ಷಣೆಯಾ ಗಿದ್ದು ದುಷ್ಟರನ್ನು ಸಂಹರಿಸುವ ಮೂಲಕ ಧರ್ಮವನ್ನು ರಕ್ಷಿಸಿದ್ದಾನೆ. ಸರ್ವರ ಹಿತವನ್ನು ಬಯಸುವ ಸನಾತನ ಧರ್ಮದಲ್ಲಿ ಸಾಮಾಜಿಕ ತತ್ವಗಳಿವೆ. ಅನ್ನದಾನಕ್ಕೆ ಹೆಸರಾದ ಕರ್ನಾಟಕದ ಭೂಮಿಯನ್ನು ಹಸನಾಗಿಸಲು ಸಾವಯವ ಕೃಷಿಗೆ ಹೆಚ್ಚು ಆದ್ಯತೆಯನ್ನು ನೀಡಬೇಕಿದೆ ಎಂದು ಹೇಳಿದ ಕಂಚಿ ಶ್ರೀಗಳು
ತೀರ್ಥಹಳ್ಳಿ(ನ.26): ಸ್ವತಂತ್ರ ಭಾರತದಲ್ಲಿ ಧರ್ಮದ ರಕ್ಷಣೆಗೆ ಬಹು ಮುಖ್ಯವಾಗಿ ವೇದಗಳ ಸಂರಕ್ಷಣೆ ಆಗಬೇಕಾದ ಅನಿವಾರ್ಯತೆ ಇದೆ. ಸಮಾಜದ ಆರೋಗ್ಯ ಮತ್ತು ಸೌಹಾರ್ದತೆಯೊಂದಿಗೆ ಮನುಷ್ಯನ ನೆಮ್ಮದಿಯ ಬದುಕಿಗೂ ಧರ್ಮದ ಪಾಲನೆ ಅಗತ್ಯ ಎಂದು ಕಂಚಿ ಕಾಮಕೋಟಿಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಪಟ್ಟಣದ ರಥಬೀದಿಯಲ್ಲಿರುವ ಶ್ರೀ ರಾಮ ಚಂದ್ರಾಪುರ ಮಠದ ಶಾಖೆಯಲ್ಲಿ ಭಾನುವಾರ ಸಂಜೆ ನಡೆದ ಧರ್ಮಸಭೆಯಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು. ಶ್ರೀ ರಾಮ ಚಂದ್ರಾಪುರ ಮಠ, ಶಕಟಪುರ ಶ್ರೀ ವಿದ್ಯಾಪೀಠಾಧೀಶರು ಸೇರಿ ಜಗದ್ಗುರುತ್ರಯರು ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದರು.
ಗೋವುಗಳ ರಕ್ತ ಹರಿಯುವುದರಿಂದ ದೇಶಕ್ಕೆ ಸೂತಕವಿದ್ದಂತೆ: ರಾಘವೇಶ್ವರ ಸ್ವಾಮೀಜಿ
ವೇದಗಳು ಸಮಾಜಕ್ಕೆ ಮಾರ್ಗದರ್ಶಿಯೂ ಆಗಿವೆ. ಭಗವಂತನ ಇಚ್ಛೆ ಧರ್ಮದ ರಕ್ಷಣೆಯಾ ಗಿದ್ದು ದುಷ್ಟರನ್ನು ಸಂಹರಿಸುವ ಮೂಲಕ ಧರ್ಮವನ್ನು ರಕ್ಷಿಸಿದ್ದಾನೆ. ಸರ್ವರ ಹಿತವನ್ನು ಬಯಸುವ ಸನಾತನ ಧರ್ಮದಲ್ಲಿ ಸಾಮಾಜಿಕ ತತ್ವಗಳಿವೆ. ಅನ್ನದಾನಕ್ಕೆ ಹೆಸರಾದ ಕರ್ನಾಟಕದ ಭೂಮಿಯನ್ನು ಹಸನಾಗಿಸಲು ಸಾವಯವ ಕೃಷಿಗೆ ಹೆಚ್ಚು ಆದ್ಯತೆಯನ್ನು ನೀಡಬೇಕಿದೆ ಎಂದು ಕಂಚಿ ಶ್ರೀಗಳು ಹೇಳಿದರು.
ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಶ್ರೀಗಳು ಮಾತನಾಡಿ, ಮೂಲ ಮತ್ತು ಪ್ರಧಾನ ಮಠದಲ್ಲಿ ಸಾಕಾರಗೊಳ್ಳದ ಧರ್ಮಸಭೆ ಶಾಖಾ ಮಠದಲ್ಲಿ ಆಯೋಜನೆ ಗೊಂಡಿರುವುದುಮಠದಪಾಲಿಗೆ ಸುದಿನವಾಗಿದೆ. ಕಂಚಿ ಕಾಮಕೋಟಿ ಪೀಠಾಧೀಶರ ನೇತೃತ್ವದಲ್ಲಿ ವೇದದ ರಕ್ಷಣೆಯಾಗಿದೆ. ವೇದದ ರಕ್ಷಣೆಗೆ ಪರ ಮಾಚಾರ್ಯರ ಸಮಯದಲ್ಲಿ ಯೋಜನೆ ರೂಪು ಗೊಂಡಿದ್ದು, ಆ ಪೀಠದ ಯೋಜನೆಗಳು ಕರ್ನಾ ಟಕಕ್ಕೂ ಬರುವಂತಾಗಬೇಕು ಎಂದು ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಎಂಎ ಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಪಪಂ ಸದಸ್ಯರು ರಾಮಚಂದ್ರಾಪುರ ಮಠದ ಸದ್ಭಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು, ಶನಿವಾರ ರಾತ್ರಿ ಪಟ್ಟಣಕ್ಕೆ ಆಗಮಿಸಿದ ಕಂಚಿ ಕಾಮಕೋಟಿ ಶ್ರೀಗಳಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.
ರಾಮಚಂದ್ರಾಪುರದಲ್ಲಿ ಭಾನುವಾರ ಬೆಳಗ್ಗೆ ಚಂದ್ರಮೌಳೇಶ್ವರ ದೇವರ ಪೂಜೆ ನೆರವೇರಿಸಿದ ಕಂಚಿ ಶ್ರೀಗಳು, ಪುರಾಣಪ್ರಸಿದ್ಧವಾದ ಇಲ್ಲಿನ ರಾಮೇಶ್ವರ ದೇವರ ದರ್ಶನ ಪಡೆದರು.
ಶಂಕರಾಚಾರ್ಯ ಪೀಠದ 30 ಯತಿಗಳ ಸಮಾವೇಶ ಶೀಘ್ರ
ಶಕಟಪುರದ ಶ್ರೀ ಕೃಷ್ಣಾನಂದ ಮಹಾಸ್ವಾಮಿಗಳು ಮಾತ್ರ ನಾಡಿ, ಭಗವಂತನ ಕೃಪೆಗೆ ಭಕ್ತಿ ಒಂದೇ ಮಾನದಂಡವಾಗಿದೆ. ಮನುಷ್ಯನ ಮನದಲ್ಲಿ ಭಕ್ತಿಯ ಮಾಲೆ ಧರಿಸಿಲ್ಲವಾದರೆ ಸಜ್ಜ ನರು-ದುರ್ಜನರ ನಡುವಿನ ವ್ಯತ್ಯಾಸವೇ ತಿಳಿಯುವುದಿಲ್ಲ. ಇಂದಿಲ್ಲಿ 3 ಪೀಠಗಳ ಸಮಾ ವೇಶ ಸಾಕಾರಗೊಂಡಿದ್ದು, ಇದು 30 ಪೀಠದ ಸಮಾಗಮಕ್ಕೆ ಸಾಟಿಯಾಗಿದೆ. ಅತಿ ಶೀಘ್ರದಲ್ಲೇ ಶಂಕರಾಚಾರ್ಯ ಪೀಠದ 30 ಯತಿಗಳ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಮನೆಮನೆಗೆ ರಾಘವ ರಾಮಾಯಣ: ರಾಮಚಂದ್ರಾಪುರ ಮಠದಿಂದ ವಿಶೇಷ ಅಭಿಯಾನ
ರಾಮ ಮಂದಿರ ಭಾರತದ ಹೃದಯವಾದರೆ, ಶ್ರೀರಾಮ ಆತ್ಮವಾಗಿದ್ದಾರೆ; ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ
ಉತ್ತರಕನ್ನಡ: ನಮ್ಮ ಭಾರತ ದೇಶದಲ್ಲಿ ಅಯೋಧ್ಯೆ ಹೃದಯದ ಸ್ಥಾನದಲ್ಲಿದೆ. ಇನ್ನು ರಾಮ ಮಂದಿರ ಭಾರತದ ಹೃದಯವಾಗಿದ್ದು, ರಾಮ ಭಾರತದ ಆತ್ಮವಾಗಿದ್ದಾನೆ ಎಂದು ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದ್ದರು.
ರಾಮಮಂದಿರ ಉದ್ಘಾಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನುಷ್ಯನ ಹೃದಯ ಸರಿಯಿಲ್ಲದಿದ್ರೆ, ಆಘಾತವಾಗಿದ್ರೆ ಏನಾಗುತ್ತೋ ಅದೇ ಸ್ಥಿತಿ ಈ ದೇಶಕ್ಕಾಗಿತ್ತು. ಕಳೆದ 500 ವರ್ಷಗಳ ಕಾಲ ಭಾರತಕ್ಕೆ ಹೃದಯಾಘಾತವಾಗಿತ್ತು, ಹೃದಯ ಹೀನತೆ, ಹೃದಯ ಶೂನ್ಯತೆಯಾಗಿತ್ತು. ಆ ಹೃದಯವನ್ನು ಮತ್ತೆ ಪ್ರತಿಷ್ಠಾಪನೆ ಮಾಡುವ ಕಾರ್ಯವಾಗುತ್ತಿದೆ. ರಾಮ ಮಂದಿರದ ಪುನರ್ ಪ್ರತಿಷ್ಠಾಪನೆಯ ಮಹತ್ವ ಶರೀರದಲ್ಲಿ ಹೃದಯವನ್ನು ಮತ್ತೆ ಅಳವಡಿಸುವಷ್ಟೇ ಮಹತ್ವದ್ದಾಗಿದೆ. ನಾನು ರಾಮ ಮಂದಿರದ ಉದ್ಘಾಟನೆಗೆ ತೆರಳುತ್ತಿದ್ದೇನೆ. ಜ.22ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆಗೆ ರಸ್ತೆಯ ಮೂಲಕ ಪ್ರಯಾಣ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತೇನೆ ಎಂದು ಹೇಳಿದರು.