90ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ 80ಕ್ಕೂ ಹೆಚ್ಚು ಚಿತ್ರಗಳನ್ನು ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುವಂತೆ ಮಾಡಿದ ಒನ್ ಆ್ಯಂಡ್ ಓನ್ಲಿ  ಟಾಲಿವುಡ್‌ ಹ್ಯಾಟ್ರಿಕ್‌ ಹೀರೋ ಮೆಗಾಸ್ಟಾರ್‌ ಚಿರಂಜೀವಿ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? 

ಹೌದು!' ಯಾವ ನಟಿಯಾದರೇನು ಕಥೆ ಸೂಪರ್‌ ಆಗಿದ್ರೆ ಅಭಿನಯಿಸುವೆ...' ಎಂಬುವುದು ಚಿರಂಜೀವಿ ಹಿಟ್‌ ಸೂತ್ರ. ಹೀಗೆ ನಟನೆಗೆ ಕಾಲಿಟ್ಟ ನಾಯಕಿಯೊಬ್ಬರು ಚಿರು ಕೆನ್ನೆಗೆ 24 ಸಲ ಬಾರಿಸಿದ್ದಾರೆ. ಇದರ ಬಗ್ಗೆ ಸಂದರ್ಶನದಲ್ಲಿ ಅ ನಟಿಯೇ ಹೇಳಿಕೊಂಡಿದ್ದಾರೆ.

ರಾಧಿಕಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಚಿರಂಜೀವಿ ಚಿತ್ರದ ಮೂಲಕವೇ. ಮೊದಲ ಚಿತ್ರವಾದ ಕಾರಣ ಸಾಕಷ್ಟು ಟೇಕ್‌ ತೆಗೆದುಕೊಳ್ಳುತ್ತಿದ್ದ ರಾಧಿಕಾ, ಚಿರಂಜೀವಿ ಕೆನ್ನೆಗೆ ಹೊಡಿಯುವ ದೃಶ್ಯದಲ್ಲಿ 24 ಟೇಕ್‌ ತೆಗೆದುಕೊಂಡು 24 ಸಾರಿ ಹೊಡೆದಿದ್ದಾರೆ. ಹೊಡೆತಕ್ಕೆ ಚಿರು ಕೆನ್ನೆ ಫುಲ್‌ ಕೆಂಪಾಗಿತ್ತಂತೆ! 

ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ- ಕಲ್ಯಾಣ್ ದೇವ್‌ ಫ್ಯಾಮಿಲಿ ಫೋಟೋ!

ಚಿತ್ರೀಕರಣ ನಡೆದ ನಂತರ ಚಿರಂಜೀವಿ ಅವರ ಬಳಿ ಕ್ಷಮೆ ಸಹ ಕೇಳಿದ್ದರಂತೆ ರಾಧಿಕಾ.  ಇದನ್ನು ತಮಾಷೆಯಾಗಿ ಸ್ವೀಕರಿಸಿದ ಚಿರು 'ನೀವು ನನ್ನ ಕೆನ್ನೆಗೆ ಚೆನ್ನಾಗಿ ಹೊಡೆದಿದ್ದೀರಾ, ವೆರಿ ಗುಡ್‌..' ಎಂದು ಹೇಳಿದ್ದರಂತೆ. ಆ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಹೊಸ ನಟಿಗೆ ವಿಶ್ವಾಸ ತುಂಬುವ ಕಾರ್ಯವೆಸಗಿದ್ದಾರೆ. ಅಲ್ಲದೇ ತಾವೊಬ್ಬ ಅತ್ಯುತ್ತಮ ನಟ ಮಾತ್ರವಲ್ಲದೇ, ಪ್ರಬುದ್ಧ ಹ್ಯೂಮನ್ ಬೀಯಿಂಗ್ ಎಂಬುದನ್ನೂ ಚಿರು ತಮ್ಮ ಈ ನಡವಳಿಕೆ ಮೂಲಕ ಸಾಬೀತು ಪಡಿಸಿದ್ದಾರೆ. 

ಟಾಲಿವುಡ್‌ ಚಿತ್ರರಂಗದಲ್ಲಿ ರಾಧಿಕಾ ಮತ್ತು ಚಿರಂಜೀವಿ ಹಲವಾರು ಚಿತ್ರದಲ್ಲಿ ಅಭಿನಯಿಸಿ ಹಿಟ್‌ ಜೋಡಿ ಎಂದೆನಿಸಿಕೊಂಡಿದ್ದಾರೆ.

ಅಯ್ಯೋ ಪಾಪ...ಚಿರಂಜೀವಿಗೆ ರಶ್ಮಿಕಾ ಯಾರೂ ಅಂಥಾನೇ ಗೊತ್ತಿಲ್ಲ, ಅಂಥಾದ್ದೇನಾಯ್ತು!