ಅಂದು ಅಮ್ಮ ಊರಲ್ಲಿ ಇರಲಿಲ್ಲ ಮತ್ತು ತಂದೆ ಬೇರೆ ಮನೆಯಲ್ಲಿದ್ದರು. ಶಾಹಿದ್ ಕಪೂರ್ ಮನೆ ಹತ್ತಿರವಿದ್ದ ಕಾರಣ ಕರೆ ಮಾಡಿದ್ದೆ ಎಂದು ಪ್ರಿಯಾಂಕಾ ಚೋಪ್ರಾ ಸ್ಪಷ್ಟಪಡಿಸಿದ್ದಾರೆ.

ಮುಂಬೈ: ಅಂದು ಅಮ್ಮ ಊರಲ್ಲಿ ಇರಲಿಲ್ಲ. ನನ್ನ ತಂದೆ ಕೆಲಸಕ್ಕೆ ಹೋಗುತ್ತಾರೆ. ಹಾಗಾಗಿ ಅವರು ಬೇರೊಂದು ಮನೆಯಲ್ಲಿದ್ದರು. ನನ್ನ ಮನೆಯ ಮೂರು ನಿಮಿಷದ ದೂರದಲ್ಲಿರುವ ಶಾಹಿದ್ ಕಪೂರ್‌ಗೆ ಕರೆ ಮಾಡಿದ್ದೆ. ಈ ಮಾತನ್ನು ಎಂದಿಗೂ ನಿರಾಕರಿಸಿಲ್ಲ. ಸುಳ್ಳು ಅಂತಾನೂ ಹೇಳಿಲ್ಲ ಎಂದು ಪ್ರಿಯಾಂಕಾ ಚೋಪ್ರಾ ಹೇಳಿಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 2011ರಲ್ಲಿ ಮುಂಬೈನ ಪ್ರಿಯಾಂಕಾ ಚೋಪ್ರಾ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಧಿಕಾರಿಗಳು ಬಂದಾಗ ಶಾಹಿದ್ ಕಪೂರ್ ಬಾಗಿಲು ತೆರೆದಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಪ್ರಿಯಾಂಕಾ ಚೋಪ್ರಾ ಸ್ಪಷ್ಟನೆ ನೀಡಿದ್ದರು. 

ಐಟಿ ಅಧಿಕಾರಿಗಳು ಬಂದಾಗ ಮನೆಯ ಬಾಗಿಲು ಯಾರು ತೆರೆದಿದ್ದರು ಎಂದು ನಿರೂಪಕ ಕೇಳುತ್ತಾರೆ. ಅದಕ್ಕೆ ನಮ್ಮ ಮನೆಯಲ್ಲಿರೋ ವರ್ಕರ್ ರಂಜಿತಾ ತೆಗೆದಿದ್ದರು. ಆಗ ನಿರೂಪಕ, ರಂಜಿತಾ ಮುಖ ಶಾಹಿದ್ ಕಪೂರ್ ರೀತಿಯಲ್ಲಿ ಕಾಣುತ್ತಾ ಎಂದು ಮರುಪ್ರಶ್ನೆ ಮಾಡಿದರು. ಇದಕ್ಕೆ ಸುತ್ತಲಿದ್ದ ಜನರು ನಗುತ್ತಾರೆ. ಇದಕ್ಕೆ ಒಂದು ಕ್ಷಣ ಕೋಪಗೊಂಡು ಪ್ರಿಯಾಂಕಾ ಚೋಪ್ರಾ, ಸ್ವಲ್ಪ ಜೋರು ಧ್ವನಿಯಲ್ಲಿಯೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ದಿನ ಏನಾಯ್ತು ಎಂದು ಹೇಳಿದರು. 

ಐಟಿ ಅಧಿಕಾರಿಗಳು ಮನೆಗೆ ಬಂದಾಗ, ಅಮ್ಮಾ ಅವರ ತಂದೆಯವರ ಕಾರ್ಯಕ್ಕಾಗಿ ಜಾರ್ಖಂಡ್‌ನ ಊರಿಗೆ ತೆರಳಿದ್ದರು. ತಂದೆ ಕೆಲಸಕ್ಕೆ ಹೋಗಬೇಕಾಗಿರುವ ಕಾರಣ ಅವರು ಬೇರೆ ಮನೆಯಲ್ಲಿದ್ದರು. ಆ ಸಮಯದಲ್ಲಿ ನಾನು ಯಾರಿಗೆ ಕರೆ ಮಾಡಿದರೂ ಮನೆಗೆ ಬರೋಕೆ ಕನಿಷ್ಠ 20-25 ನಿಮಿಷ ಬೇಕಾಗುತ್ತದೆ. ಶಾಹಿದ್ ಕಪೂರ್ ನನ್ನ ಮನೆಯಿಂದ ಮೂರು ನಿಮಿಷದ ದೂರದಲ್ಲಿರೋದು. ಫೋನ್ ಮಾಡಿ ವಿಷಯ ಹೇಳಿದಾಗ ಶಾಹಿದ್ ಕಪೂರ್ ಮನೆಗೆ ಬಂದಿದ್ದರು. ಐಟಿ ಅಧಿಕಾರಿಗಳು ಸಹ ಶಾಹಿದ್ ಕಪೂರ್ ಮನೆಯಲ್ಲಿರಲು ಅನುಮತಿ ನೀಡಿದರು. ಈ ವಿಷಯವನ್ನು ನಾನು ನೇರವಾಗಿಯೇ ಹೇಳಿದ್ದೇನೆ ಎಂದರು. 

ಇದನ್ನೂ ಓದಿ: 21.75 ಕೋಟಿಯ ಕಿವಿಯೊಲೆ, 2 ಕೋಟಿ ಉಂಗುರ; ರಾಣಿಯಂತೆ ಬದುಕುತ್ತಿರೋ ನಟಿ

ಈ ವಿಷಯವಾಗಿ ಪ್ರಕಟವಾದ ಲೇಖನಗಳ ಬಗ್ಗೆ ಮಾತನಾಡಿದ ಪ್ರಿಯಾಂಕಾ ಚೋಪ್ರಾ, ಐಟಿ ಅಧಿಕಾರಿಗಳ ಜೊತೆಯಲ್ಲಿಯೇ ಯಾರು ಬಾಗಿಲು ತೆರೆದರು ಎಂಬ ಲೇಖನ ಬರೆದವರು ಬಂದಿರಬೇಕು ಎಂದು ವ್ಯಂಗ್ಯ ಮಾಡಿದರು. ಇದು ತುಂಬಾ ಕೆಳಮಟ್ಟದ ಲೇಖನವಾಗಿತ್ತು. ಪೋಷಕರೊಂದಿಗೆ ವಾಸವಾಗುವ ಒಬ್ಬ ಯುವತಿ ಬಗ್ಗೆ ಬರೆಯುತ್ತಿದ್ದೀರಿ ಎಂಬುದನ್ನು ನೆನಪು ಮಾಡಿಕೊಳ್ಳಬೇಕಿತ್ತು ಎಂದು ತಮ್ಮ ವಿರುದ್ಧ ಪ್ರಕಟವಾದ ನೆಗೆಟಿವ್ ವರದಿಗಳ ಬಗ್ಗೆಯೂ ಪ್ರಿಯಾಂಕಾ ಚೋಪ್ರಾ ಖಾರವಾಗಿ ಪ್ರತಿಕ್ರಿಯಿಸಿದ್ದರು. ಇದೇ ವೇಳೆ ನಟಿ ಕತ್ರಿನಾ ಕೈಫ್ ನಿವಾಸದ ಮೇಲೆಯೂ ಐಟಿ ದಾಳಿ ನಡೆದಿತ್ತು.

ಪಾಪ್ ಸಿಂಗರ್ ನಿಕ್ ಜೋನಸ್ ಅವರನ್ನು ಮದುವೆಯಾಗಿರುವ ಪ್ರಿಯಾಂಕಾ ಚೋಪ್ರಾ ಸದ್ಯ ಲಾಸ್ ಏಂಜಲೀಸ್ ನಲ್ಲಿ ನೆಲೆಸಿದ್ದಾರೆ. ದಂಪತಿಗೆ ಮಾಲತಿ ಹೆಸರಿನ ಮಗಳಿದ್ದಾಳೆ. ಆಗಾಗ್ಗೆ ಭಾರತಕ್ಕೆ ಬಂದು ಪ್ರಿಯಾಂಕಾ ಚೋಪ್ರಾ ಹೋಗುತ್ತಿರುತ್ತಾರೆ.

ಇದನ್ನೂ ಓದಿ: ಬಿಕಿನಿ ಧರಿಸಲು ಹಿಂದೇಟು ಹಾಕಿ ಮಿಸ್​ ವರ್ಲ್ಡ್​ ಗೆದ್ದ ಏಕೈಕ ಬಾಲಿವುಡ್​ ನಟಿ ಈಕೆ: ಅಮ್ಮ ಹೇಳಿದ ಸ್ಟೋರಿ ಕೇಳಿ...