Asianet Suvarna News Asianet Suvarna News

ದೀಪಿಕಾ ಬೆತ್ತಲಾದರೂ ಓಡಲಿಲ್ಲವೇಕೆ 'ಫೈಟರ್'​ ಚಿತ್ರ? ನಿರ್ದೇಶಕ ಕೊಟ್ಟ ಉತ್ತರ ಕೇಳಿ...

ಫೈಟರ್​ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಬಹುತೇಕ ಬೆತ್ತಲಾದರೂ ವೀಕ್ಷಕರು ಈ ಚಿತ್ರವನ್ನು ಯಶಸ್ವಿ ಮಾಡಿಲ್ಲವೇಕೆ ಎಂದು ನಿರ್ದೇಶಕ ಹೇಳಿದ್ದೇನು? 
 

Fighter Director Siddharth Anand Details Why Viewers Disconnected With Film suc
Author
First Published Feb 2, 2024, 4:21 PM IST

 ಅನಿಮಲ್​ ಚಿತ್ರದಲ್ಲಿ ರಶ್ಮಿಕಾ ಮಂದಣ್ಣನವರ ಅರೆ ಬೆತ್ತಲೆ, ನಟಿ ತೃಪ್ತಿ ಡಿಮ್ರಿಯ ಪೂರ್ಣ ಬೆತ್ತಲೆಯ ವಿಷಯ ಇನ್ನು ಚರ್ಚೆಗೆ ಗ್ರಾಸವಾಗುತ್ತಿರುವ ನಡುವೆಯೇ, ದೀಪಿಕಾ ಪಡುಕೋಣೆ ಮತ್ತು ಹೃತಿಕ್​ ರೋಷನ್​ ಅಭಿನಯದ ಫೈಟರ್​ ಚಿತ್ರವೂ ಕಳೆದ ಜನವರಿ 25ರಂದು  ರಿಲೀಸ್​ ಆಗಿದೆ.  ನಟಿಯರು ಬೆತ್ತಲಾದರೆ ಮಾತ್ರ ಚಿತ್ರ ಓಡುತ್ತದೆ ಎನ್ನುವಂತೆ,  ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಪಠಾಣ್​ಗಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಹೃತಿಕ್ ರೋಷನ್​ ಮತ್ತು ದೀಪಿಕಾ ಪಡುಕೋಣೆ ಇಬ್ಬರೂ ಏರ್‌ಫೋರ್ಸ್ ಆಫೀಸರ್‌ ಪಾತ್ರಗಳಲ್ಲಿ ನಟಿಸಿದ್ದಾರೆ. ಏರ್​ಫೋರ್ಸ್​ ಆಫೀಸರ್​ ಆಗಿರುವ ದೀಪಿಕಾಳ ಬಹುತೇಕ ಬೆತ್ತಲೆ ವೇಷಕ್ಕೆ ಹಲವರು ಛೀಮಾರಿ ಹಾಕುತ್ತಿದ್ದಾರೆ.   ಹೇಳಿ ಕೇಳಿ ಫೈಟರ್​ ದೇಶಭಕ್ತಿ ಮೆರೆಯುವ ಚಿತ್ರ. ಇದರಲ್ಲಿಯೂ ಈ ರೀತಿ ಮುಕ್ಕಾಲಂಶ ದೇಹ ಪ್ರದರ್ಶನ ಮಾಡುವುದು ಬೇಕಾ ಎಂದು ಸಕತ್​ ಟೀಕೆಗೆ ಒಳಗಾಗುತ್ತಿದೆ. ಇನ್ನೊಂದಿಷ್ಟು ಮಂದಿ ಇದೇ ವೇಳೆ ಬಾಯಿ ಚಪ್ಪರಿಸಿಕೊಂಡು ಬೆತ್ತಲಾದರೆ ಏನು ಎಂದೂ ಕೇಳುತ್ತಿದ್ದಾರೆ. 

ಹೀಗೆ ಬೆತ್ತಲಾಗಿ ಬಿಟ್ಟರೆ ಚಿತ್ರ ಸಕ್ಸಸ್​ ಆಗಬಹುದು ಎಂದುಕೊಂಡ ನಿರ್ದೇಶಕರಿಗೆ ಭಾರಿ ನಿರಾಸೆಯಾಗಿದೆ. ಪಠಾಣ್​ ಚಿತ್ರದಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ನಿರ್ದೇಶಕ ಸಿದ್ಧಾರ್ಥ್ ಆನಂದ್‌ (Siddharth Anand) ಈಗ ತಾವು ಅಂದುಕೊಂಡ ರೀತಿಯಲ್ಲಿ ಫೈಟರ್​ ಯಶಸ್ಸು ಕಾಣದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅನಿಮಲ್​ ಚಿತ್ರದಲ್ಲಿನ ಬೆತ್ತಲೆ ದೃಶ್ಯ ನೋಡಿ ಅದನ್ನು ಜನರು ಬ್ಲಾಕ್​ಬಸ್ಟರ್ ಮಾಡಿದಂತೆ ತಮ್ಮ ಚಿತ್ರವೂ ಆಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಸಿದ್ಧಾರ್ಥ್​ ಆನಂದ್​ ಅವರಿಗೆ ಈಗ ನಿರಾಸೆ ಕಾಡಿದೆ. ಇಷ್ಟೆಲ್ಲಾ ಮಾಡಿದ ಮೇಲೂ ಯಾಕೆ ತಮ್ಮ ಚಿತ್ರ ಅಷ್ಟೊಂದು ಯಶಸ್ವಿಯಾಗಿಲ್ಲ ಎನ್ನುವುದಕ್ಕೆ ಇದೀಗ ತಮ್ಮದೇ ಆದ ಕಾರಣಗಳನ್ನು ನಿರ್ದೇಶಕರು ನೀಡಿದ್ದಾರೆ. ಭಾರತದಲ್ಲಿ ಚಿತ್ರದ ಕಲೆಕ್ಷನ್​ ಆಗುತ್ತಿಲ್ಲ.  ವಿದೇಶಗಳಲ್ಲಿ ತಕ್ಕ ಮಟ್ಟಿಗೆ ಚಿತ್ರ ಕಲೆಕ್ಷನ್​  ಮಾಡುತ್ತಿದೆ. 

ಬೆತ್ತಲಾಗಲು ಪೈಪೋಟಿಗೆ ಬಿದ್ದ ನಟಿ ದೀಪಿಕಾಗೆ 'ಫೈಟರ್'​ ಶಾಕ್- ದೇಶಭಕ್ತಿ ಚಿತ್ರಕ್ಕೆ UA ಪ್ರಮಾಣಪತ್ರ!

ಅಷ್ಟಕ್ಕೂ ಕೆಲವೊಂದು ಸಿನಿಮಾಗಳ ಹೋಲಿಕೆ ಮಾಡಿದ ಸಿದ್ಧಾರ್ಥ್​ ಆನಂದ್​, ತಮ್ಮ ಫೈಟರ್​ ಚಿತ್ರ ನಿರೀಕ್ಷಿತ ಮಟ್ಟದಲ್ಲಿಲ ಗೆಲ್ಲದೇ ಇರುವುದಕ್ಕೆ ಏನು ಕಾರಣ ಎಂದು ಹೇಳಿದ್ದಾರೆ. ಕೆಲವು ಚಿತ್ರಗಳ ಉದಾಹರಣೆ ಕೊಟ್ಟು, ಅವು ಏಕೆ ಸಕ್ಸಸ್​ ಕಂಡವು ಎಂದು ಹೇಳಿದ್ದಾರೆ. ಅವರು ಹೇಳಿದ್ದೇನೆಂದರೆ, ಏಕ್ ಥಾ ಟೈಗರ್ ಚಿತ್ರ ಹಿಟ್ ಯಾಕೆ ಆಯಿತೆಂದರೆ ಭಾರತದಲ್ಲಿ ಶೇಕಡಾ 90 ರಷ್ಟು ಜನ  RAW ಏಜೆಂಟ್ಸ್ ಇದ್ದಾರೆ. ಹಾಗಾಗಿಯೇ ಈ ಸಿನಿಮಾ ಚೆನ್ನಾಗಿ ಕಲೆಕ್ಷನ್​ ಮಾಡಿತು. ಜುರಾಸಿಕ್ ಪಾರ್ಕ್ ಚಿತ್ರ ಗೆಲ್ಲಲು ಕಾರಣ,  ಡೈನೋಸಾರ್‌ಗಳ ಬಗ್ಗೆ ಜನರಿಗೆ ಕುತೂಹಲ ಇದೆ. ಹಾಗಾಗಿಯೇ ಈ ಚಿತ್ರ ಓಡಿದೆ. ಅವತಾರ್ ಚಿತ್ರ ಜನಕ್ಕೆ ಒಪ್ಪಿಗೆ ಆಗಿದ್ದು ಏಕೆಂದ್ರೆ,  ಈ ಚಿತ್ರದ ಆ ನೀಲಿ ಬಣ್ಣ ಜನರ ಗಮನ ಸೆಳೆದಿದೆ ಎಂದೆಲ್ಲಾ ತಮ್ಮದೇ  ಆದ ರೀತಿಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ ನಿರ್ದೇಶಕರು.

ಇದೇ ವೇಳೆ ಫೈಟರ್​ ಚಿತ್ರ ಸಕ್ಸಸ್​ ಆಗದೇ ಇರುವುದಕ್ಕೆ ಅವರು ಹೇಳಿದ್ದೇನೆಂದರೆ, ನಮ್ಮ ಅದೆಷ್ಟೋ ಜನ ವಿಮಾನದಲ್ಲಿಯೇ ಪ್ರಯಾಣ ಮಾಡಿಲ್ಲ. ವಿಮಾನ ನಿಲ್ದಾಣವನ್ನೂ ಕಂಡಿಲ್ಲ. ಹಾಗಾಗಿಯೇ ನಮ್ಮ ಫೈಟರ್ ಚಿತ್ರದಲ್ಲಿ ಏನಿದೆ? ಹೇಗೆಲ್ಲ ಇದು ಸಾಧ್ಯ ಆಗುತ್ತದೆ ಅನ್ನೋ ಕಲ್ಪನೆ ಕೂಡ ಇಲ್ವೇ ಇಲ್ಲ. ಈ ಕಾರಣಕ್ಕೇನೆ ನಮ್ಮ ಫೈಟರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಚೆನ್ನಾಗಿ ಮಾಡಿಲ್ಲ ಎಂದಿದ್ದಾರೆ. ಆದರೆ ದೇಶಭಕ್ತಿ ಮೆರೆವ ಚಿತ್ರದಲ್ಲಿ ನಗ್ನ ದೃಶ್ಯ ಉದ್ದೇಶಪೂರ್ವಕವಾಗಿ ತುರುಕಿದ್ದು ಯಾಕೆ ಎಂಬ ಬಗ್ಗೆ ನಿರ್ದೇಶಕರು ಸ್ಪಷ್ಟನೆ ಕೊಟ್ಟಿಲ್ಲ. ಅಂದಹಾಗೆ ಫೈಟರ್​ ಚಿತ್ರ 250 ಕೋಟಿ ರೂಪಾಯಿಗಳಲ್ಲಿ ಮಾಡಿದ್ದು, ಭಾರತದಲ್ಲಿ ಈವರೆಗೆ ಕಲೆಕ್ಷನ್​ ಆಗಿದ್ದು, 5.75 ಕೋಟಿ ರೂಪಾಯಿಗಳು ಮಾತ್ರ.

ನಟರಾದ ಅನುಷ್ಕಾಶೆಟ್ಟಿ- ಪ್ರಭಾಸ್​ ಮದ್ವೆ ಫೋಟೋಗಳು ವೈರಲ್​: ದೂರು ದಾಖಲಿಸಿದ ಪೋಷಕರು!
 

Follow Us:
Download App:
  • android
  • ios