ಆ್ಯಕ್ಟಿಂಗ್​ ನೋಡಿ ಎಂದ್ರೆ ಮೊದ್ಲು ದೇಹ ನೋಡ್ತೇನಂತ ನಿಲ್ಲಿಸಿದ್ರು: ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ ಒನಿಮಾ

ಆರಂಭದ ದಿನಗಳಲ್ಲಿ ನಿರ್ದೇಶಕರಿಂದ ತಮಗಾಗಿರುವ ಲೈಂಗಿಕ ದೌರ್ಜನ್ಯದ ಕುರಿತು ನಟಿ ಒನಿಮಾ ಕಶ್ಯಪ್​ ಹೇಳಿದ್ದೇನು?
 

Actress Onima Kashyap Reveals Traumatic Experience With A Director about casting couch suc

ಕಾಸ್ಟಿಂಗ್​ ​ ಕೌಚ್​ (casting couch) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್​ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್​ ​ ಕೌಚ್​ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು. ಇದಾದ ಬಳಿಕ ಇತ್ತೀಚಿನ ವರ್ಷಗಳಲ್ಲಿ ಹಲವು ನಟಿಯರು ಈ ಬಗ್ಗೆ ಭಯಾನಕ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದು, ಇದೀಗ  ನಟಿ ಒನಿಮಾ ಕಶ್ಯಪ್​ ಇದರ ಬಗ್ಗೆ ಹೇಳಿಕೊಂಡಿದ್ದಾರೆ. 

ಜಾಹೀರಾತು ಕ್ಷೇತ್ರದಿಂದ  ನಟನಾ ಉದ್ಯಮದವರೆಗೆ, ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರೋ ನಟಿ ಒನಿಮಾ, ಪ್ರಸ್ತುತ  ಚಾಚಾ ವಿಧಾಯಕ್ ಹೇ ಹುಮಾರೆ 3 ನಲ್ಲಿ ಬಿಜಿಯಾಗಿದ್ದಾರೆ. ಸಿನಿಮಾ ಉದ್ಯಮದ ಕರಾಳ ಮುಖವನ್ನು ಅವರು ಬಿಚ್ಚಿಟ್ಟಿದ್ದಾರೆ.   ನನ್ನ ವೃತ್ತಿಜೀವನದ ಪ್ರಾರಂಭದಲ್ಲಿ, ಪಾತ್ರಗಳಿಗಾಗಿ ಆಡಿಷನ್ ಮಾಡುವಾಗ ಕರಾಳ ಅನುಭವ ಅನುಭವಿಸಿದ್ದೇನೆ ಎನ್ನುವ ಮೂಲಕ ಆ ದಿನಗಳನ್ನು ನಟಿ ನೆನಪಿಸಿಕೊಂಡಿದ್ದಾರೆ.

ಬೆಡ್​ರೂಮ್​ ಕಮಿಟ್​ಮೆಂಟ್​ ಇಲ್ಲದಿದ್ರೆ ಟಾಪ್​ ನಾಯಕಿಯಾಗೋದು ಕಷ್ಟ! ರಮ್ಯಾ ಕೃಷ್ಣನ್​ ಹೇಳಿಕೆ ವೈರಲ್​...

ನಿರ್ದೇಶಕರೊಬ್ಬರೊಂದಿಗೆ ನನಗೆ ತುಂಬಾ ಆಘಾತಕಾರಿ ಅನುಭವವಾಯಿತು. ಒಮ್ಮೆ ನಿರ್ದೇಶಕರು ಸಿನಿಮಾ ಕುರಿತು ಚರ್ಚೆ ಮಾಡೋಣ ಎಂದು ನನ್ನನ್ನು ಅವರ ಕಚೇರಿಗೆ ಕರೆದರು. ಅವರು ಯಾಕೆ ಕರೆದರು ಎನ್ನುವುದು ನನಗೆ ತೋಚಲೇ ಇಲ್ಲ. ಸಿನಿಮಾ ಮಾತುಕತೆಗೆ ಅಂದುಕೊಂಡಿದ್ದೆ. ಆದರೆ ಅವರ ಯೋಚನೆಯೇ ಬೇರೆಯದ್ದಾಗಿತ್ತು.  ಅಲ್ಲಿಗೆ ತಲುಪಿದ ನಂತರ, ಪ್ರಾಜೆಕ್ಟ್ ಅಥವಾ ಸ್ಕ್ರಿಪ್ಟ್ ಬಗ್ಗೆ ಮಾತನಾಡುವ ಬದಲು, ಅವರು ತಕ್ಷಣವೇ ನಿಂತುಕೊಳ್ಳಲು ಹೇಳಿದರು. ಅವರ ಮಾತು ಕೇಳಿ ವಿಚಿತ್ರ ಎನಿಸಿತು. ಏಕೆ ಎಂದು ಪ್ರಶ್ನಿಸಿದೆ. ಅವರು ನಾನು ನಿಮ್ಮ ದೇಹದ ಸೌಂದರ್ಯವನ್ನು ಮೊದಲು ನೋಡಬೇಕು.  ಆಮೇಲೆ ನಟನೆ ಎಂದರು. ನನಗೆ ಆಘಾತವಾಯಿತು. ನನ್ನ ಆ್ಯಕ್ಟಿಂಗ್​ ಬದಲು ಅವರಿಗೆ ನನ್ನ ದೇಹ ನೋಡುವ ಆಸೆಯಿಂದ ನಿಲ್ಲಿಸಿದ್ದರು ಎಂದು ನಟಿ ಹೇಳಿಕೊಂಡಿದ್ದಾರೆ.


 ನನ್ನ ಪ್ರತಿಭೆಗಿಂತ ನನ್ನ ದೈಹಿಕ ನೋಟವು ಅವರಿಗೆ ಮುಖ್ಯವಾಗಿತ್ತು. ಕೂಡಲೇ ಅವರ ಮನಸ್ಸನ್ನು ಅರಿತ ನಾನು ಅಲ್ಲಿಂದ ಹೊರಗೆ ಬಂದೆ, ಪುನಃ ಆ ವ್ಯಕ್ತಿಯನ್ನು  ಸಂಪರ್ಕಿಸಲಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಸಿನಿಮಾದಲ್ಲಿ ನಟಿಯರು ಅನುಭವಿಸುವ ಇಂಥ ಕಾಸ್ಟಿಂಗ್​ ಕೌಚ್​ ಕುರಿತೂ ಅವರು ಮಾತನಾಡಿದ್ದಾರೆ. ಉದ್ಯಮದಲ್ಲಿನ ಇಂತಹ ಘಟನೆಗಳ ಬಗ್ಗೆ ಮತ್ತು ಹೊಸಬರು ಅಂತಹ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಅವರಲ್ಲಿ ಕೇಳಿದಾಗ,  "ಕೆಲವೊಮ್ಮೆ ಈ ರೀತಿಯ ಅನುಭವ ಆಗುತ್ತದೆ. ಇದು ಹಲವರ ಮೇಲೆ ಮಾನಸಿಕ ಆಘಾತವನ್ನು ಉಂಟು ಮಾಡುತ್ತದೆ.  ಮನರಂಜನಾ ಜಗತ್ತನ್ನು ಪ್ರವೇಶಿಸಲು, ಇಲ್ಲಿಯೇ ನೆಲೆಯೂರಲು ಇಂಥ ಮನಸ್ಥಿತಿ ಅವಶ್ಯಕತೆ ಇದೆ. ಹೊಸಬರು ಇಂಥದ್ದನ್ನು ಅನುಭವಿಸಿದಾಗ ಅವರಿಗೆ ಆ ಕ್ಷಣದಲ್ಲಿ ಆಘಾತವಾಗುವುದು ಸಹಜ. ಆದ್ದರಿಂದ ಬಹಳ ಜಾಗರೂಕತೆಯಿಂದ ವರ್ತಿಸಬೇಕಾಗುತ್ತದೆ ಎಂದಿದ್ದಾರೆ.

ಅವರು ಮನೆಗೆ ಬಂದಾಗ ಮೂರೇ ಮೂರು ನಿಮಿಷ ಅಷ್ಟೇ... ಕಾಸ್ಟಿಂಗ್​ ಕೌಚ್​ ಕುರಿತು ನಟಿ ಅನಸೂಯಾ ಹೇಳಿದ್ದೇನು?
 

Latest Videos
Follow Us:
Download App:
  • android
  • ios