ಟಾಕ್ಸಿಕ್​ ಚಿತ್ರದಲ್ಲಿ ನಾಯಕಿಯಾಗಿ ನಟಿಸ್ತಿರೋ ನಟಿ ನಯನತಾರಾ ಹಿಂದೊಮ್ಮೆ 100 ಕೋಟಿ ಆಫರ್​ ರಿಜೆಕ್ಟ್​  ಮಾಡಿದ್ರು. ಏನಿದು ವಿಷಯ? 

ಸದ್ಯ ನಟ ಯಶ್​ ಅಭಿನಯದ ಟಾಕ್ಸಿಕ್​ ಚಿತ್ರಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ. ಆದರೆ ಈ ಬಗ್ಗೆ ಸಾಕಷ್ಟು ಸೀಕ್ರೇಟ್​ ಮಾಡಲಾಗುತ್ತಿದೆ. ಇದರ ಕಥೆ, ಚಿತ್ರ ನಟರ ಬಗ್ಗೆ ಗುಟ್ಟು ಕಾಯ್ದುಕೊಳ್ಳಲಾಗುತ್ತಿದೆ. ಈ ಚಿತ್ರದಲ್ಲಿ ಲೇಡಿ ಸೂಪರ್‌ಸ್ಟಾರ್ ನಯನತಾರಾ, ಕಿಯಾರ ಅಡ್ವಾನಿ, ಹುಮಾ ಖುರೇಶಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಲಯಾಳಂನ ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ ನಾಟಕಿ ಎನ್ನುವುದು ಬಹುತೇಕ ಖಚಿತವಾಗಿದೆ. ಇದರ ಬೆನ್ನಲ್ಲೇ ನಟಿ ಈ ಹಿಂದೆ ನಟನೊಬ್ಬನ ಜೊತೆ 100 ಕೋಟಿ ಕೊಟ್ಟರೂ ನಟಿಸಲ್ಲ ಎಂದಿರುವ ಮಾಹಿತಿಯೊಂದು ಬಹಿರಂಗಗೊಂಡಿದೆ. 

ಅಷ್ಟಕ್ಕೂ, ನಯನತಾರಾ ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿಯಲ್ಲೂ ಅಭಿನಯಿಸಿ ಸೈಎನಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ನಯನತಾರಾ ಕೂಡ ಒಬ್ಬರು. ಶಾರುಖ್ ಖಾನ್ ಚಿತ್ರ ಜವಾನ್ ಸೂಪರ್ ಡೂಪರ್ ಯಶಸ್ಸಿನ ನಂತರ ನಯನತಾರಾಗೆ ಭಾರಿ ಬೇಡಿಕೆ ಬರುತ್ತಿದೆ. ಜವಾನ್​ ಚಿತ್ರದಲ್ಲಿ 10 ಕೋಟಿ ರೂಪಾಯಿ ಪಡೆದಿರುವ ನಯನತಾರಾ, ಇದೀಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಆದರೆ ಓರ್ವ ನಟನ ಜೊತೆ ಮಾತ್ರ ನಟಿ, 10 ಅಲ್ಲ 100 ಕೋಟಿ ಕೊಟ್ಟರೂ ಕೆಲಸ ಮಾಡದೇ ಇರುವ ವಿಷಯ ರಿವೀಲ್​ ಆಗಿದೆ. ಅಷ್ಟಕ್ಕೂ ಆ ನಟನ ಹೆಸರು ಸರವಣನ್​. ತಮಿಳು ನಟ ಇವರು. 2022ರಲ್ಲಿ ದಿ ಲೆಂಜೆಂಡ್ ಸಿನಿಮಾ ರಿಲೀಸ್ ಆಯ್ತು. ಸರವಣನ್ ನಾಯಕನಾಗಿ ನಟಿಸಿದ ಈ ಸಿನಿಮಾ ಹಿಟ್ ಆಗಲಿಲ್ಲ. ನಯನತಾರಾ ಈ ಸಿನಿಮಾ ನಟಿಯಾಗ್ಬೇಕು ಎಂದು ಸರವಣನ್ ನಾನಾ ಸರ್ಕಸ್ ಮಾಡಿದ್ದರು. ಆದರೆ ನಟಿ ಯಾವುದಕ್ಕೂ ಜಗ್ಗಿರಲಿಲ್ಲ. ನನಗೆ 10 ಅಲ್ಲ, 100 ಕೋಟಿ ಕೊಟ್ಟರೂ ಬರುವುದಿಲ್ಲ ಎಂದಿದ್ದರು. ನಯನತಾರಾ ಬದಲಿಗೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸರವಣನ್​ಗೆ ನಾಯಕಿಯಾಗಿ ನಟಿಸಿದ್ದರು.

ಮದ್ವೆ ಸೀನ್​ ಮಾಡಲ್ಲ ಎಂದು ಭಾಗ್ಯಲಕ್ಷ್ಮಿ ಶೂಟಿಂಗ್​ ಸೆಟ್​ನಲ್ಲೇ ಶ್ರೇಷ್ಠಾ ಕಣ್ಣೀರು! ಅಷ್ಟಕ್ಕೂ ಆಗಿದ್ದೇನು?

ಸಂಭಾವನೆ ವಿಚಾರದಲ್ಲಿ ಬಾಲಿವುಡ್ ತಾರೆಯರಾದ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ನೈನ್ಸ್ ಗಿಂತ ಮುಂದಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಸಂಭಾವನೆ 15 ರಿಂದ 30 ಕೋಟಿ ರೂ. ಪಡೆಯುತ್ತಾರೆ. ಆದರೆ ಸರವಣನ್​ ಅವರ ವಿಷಯದಲ್ಲಿ ನಟಿ ಹೀಗೆ ಏಕೆ ಹೇಳಿದರು ಎನ್ನುವ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಆದರೆ ನಟಿ ಇದುವರೆಗೆ ಈ ವಿಷಯದ ಬಗ್ಗೆ ಮಾತನಾಡಲಿಲ್ಲ. ಆದರೆ ತಮಿಳು ಮಾಧ್ಯಮವೊಂದರಲ್ಲಿ ಸಿನಿಮಾ ಪತ್ರಕರ್ತ ಚೆಯ್ಯರು ಬಾಲು ಈ ವಿಷಯ ರಿವೀಲ್​ ಮಾಡಿದ್ದಾರೆ. “ನಯನತಾರಾ ಅವರ ಮನೆಯ ಮುಂದೆ ಸದಾ ರೋಲ್ಸ್ ರಾಯ್ಸ್ ಕಾರೊಂದು ನಿಲ್ಲುತ್ತಿತ್ತು. ಅದನ್ನು ನೋಡಿ ಅಚ್ಚರಿಪಟ್ಟಿದ್ದೆ. ನಂತರ ಅದೇ ಕಾರು ಮದುವೆಯೊಂದರಲ್ಲಿ ಕಾಣಿಸಿಕೊಂಡಾಗ ವಿಷಯ ತಿಳಿದುಕೊಂಡೆ. ಅದು ಲೆಜೆಂಡ್ ಸರವಣನ ಕಾರಾಗಿತ್ತು. ಅವರು ತಮ್ಮ ಚಿತ್ರದಲ್ಲಿ ನಟಿಸಲು ನಯನತಾರಾ ಅವರನ್ನು ಸಾಕಷ್ಟು ಕೇಳಿಕೊಂಡಿದ್ದರು. ಹಲವು ಬಾರಿ ಅವರ ಮನೆಗೂ ಭೇಟಿ ಕೊಟ್ಟಿದ್ದ ವಿಷಯ ತಿಳಿಯಿತು. ಅಷ್ಟೇ ಅಲ್ಲದೇ, ಅವರು ತಮ್ಮ ಸಿನಿಮಾದಲ್ಲಿ ನಯನತಾರಾ ನಟಿಸಲು ದುಪ್ಪಟ್ಟು ಸಂಭಾವನೆ ನೀಡುವುದಾಗಿ ಹೇಳಿದ್ದ ವಿಷಯ ತಿಳಿಯಿತು. ಆದರೆ ಅದ್ಯಾಕೋ ಗೊತ್ತಿಲ್ಲ, 100 ಕೋಟಿ ಕೊಟ್ಟರೂ ನಾನು ನಟಿಸುವುದಿಲ್ಲ ಎಂದು ನಯನತಾರಾ ಖಡಕ್ ಆಗಿ ಹೇಳಿದ್ದರಂತೆ ಎಂದು ವಿಷಯ ಬಹಿರಂಗಗೊಳಿಸಿದ್ದಾರೆ.

ಅಷ್ಟಕ್ಕೂ ನಯನತಾರಾ, ಸಿನಿಮಾದ ಹೊರತಾಗಿ ಕೆಲವೊಂದು ಬ್ಯುಸಿನೆಸ್ ಮೂಲಕವೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದ ಬಿಡುವಿಲ್ಲದ ಸಮಯದ ನಡುವೆಯೂ ವ್ಯಾಪಾರದ ಮೇಲೆ ಗಮನ ಕೊಡುವ ನಯನತಾರಾಗೆ, ಅವರ ಪತಿ ವಿಘ್ನೇಶ್ ಶಿವನ್ ಕೂಡ ಬೆಂಬಲ ನೀಡುತ್ತಾರೆ. ಇನ್ನು ಸಿನಿಮಾ ಮತ್ತು ವ್ಯಾಪಾರದಿಂದ ನಯನತಾರಾ ಕೋಟಿಗಟ್ಟಲೆ ಆದಾಯ ಹೊಂದಿದ್ದಾರೆ.

ಶಿವಣ್ಣ ಮಾಡಿದ್ದು ಇಷ್ಟ ಆಗ್ದೇ ರೀಶೂಟ್​ ಮಾಡಿಸಿದ್ದ ಡಾ.ರಾಜ್​! 'ಗೌರಮ್ಮಾ ನಿನ್ನ ಗಂಡ' ಹಾಡಿನ ಘಟನೆ ನೆನೆದ ಸುಧಾರಾಣಿ