Asianet Suvarna News Asianet Suvarna News

ಆಲಿಯಾ ಭಟ್ ನಟನೆಗೆ 'ಶಭಾಷ್' ಅಂದ್ಬಿಟ್ರು, 'ಗಂಗೂಬಾಯಿ ಕಥಿಯಾವಾಡಿ' ಬಗ್ಗೆ ರಶ್ಮಿಕಾ ಹೇಳಿದ್ದೇನು?

ಕನ್ನಡ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಬಂದ ನಟಿ ರಶ್ಮಿಕಾ, ಇಂದು ಸೌತ್ ಹಾಗೂ ನಾರ್ತ್‌ ಎಂಬ ಭೇದಭಾವವಿಲ್ಲದೇ ಎಲ್ಲಾ ಕಡೆ ಸಲ್ಲುವ ನಟಿಯಾಗಿ ಬೆಳೆದಿದ್ದಾರೆ. 'ಕಿರಿಕ್ ಪಾರ್ಟಿ' ಮೂಲಕ ವೃತ್ತಿಜೀವನ ಶುರುಮಾಡಿದ ರಶ್ಮಿಕಾ, ವಿಜಯ್ ದೇವರಕೊಂಡ ಜತೆಗಿನ...

Actress Rashmika Mandanna talks about her regrets and future plans to act in Remake srb
Author
First Published May 5, 2024, 12:35 PM IST

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸಂದರ್ಶನವೊಂದರಲ್ಲಿ ಹಲವು ಸಂಗತಿಗಳನ್ನು ಬಹಿರಂಗಗೊಳಿಸಿದ್ದಾರೆ. ಸಂದರ್ಶಕರು ಕೇಳಿದ 'ನೀವು ನಿಮ್ಮ ಡೇಟ್ ಹೊಂದಾಣಿಕೆ ಆಗದೇ ಯಾವುದಾದರೂ ಸಿನಿಮಾ ಮಾಡಲು ಸಾಧ್ಯವಾಗದೇ ಇರುವ ಬಗ್ಗೆ ನಿಮಗೆ ರೀಗ್ರೆಟ್ ಇದೆಯಾ?' ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ ನಟಿ ರಶ್ಮಿಕಾ ಮಂದಣ್ಣ. 'ನನಗೆ ಆ ರೀತಿ ಯಾವುದೇ ಸಿನಿಮಾದಲ್ಲಿ ನಟನೆ ಮಾಡದೇ ಬಿಟ್ಟ ಬಗ್ಗೆ ಯಾವುದೇ ರೀಗ್ರೆಟ್ ಇಲ್ಲ' ಎಂದಿದ್ದಾರೆ. 

ಬಳಿಕ ಕೇಳಿದ 'ನೀವು ಯಾವುದಾದರೂ ಚಿತ್ರದ ಪಾತ್ರ ಮಾಡಬೇಕಿತ್ತು ಎಂದು ನಿಮಗೆ ಅನ್ನಿಸುತ್ತಿದೆಯಾ?' ಎಂಬ ಪ್ರಶ್ನೆಗೆ 'ಹೌದು, ನನಗೆ ಗಂಗೂಬಾಯಿ' ಪಾತ್ರ ಸಿಗಬೇಕಿತ್ತು ಎಂದು ಬಲವಾಗಿ ಅನ್ನಿಸುತ್ತಿದೆ. ನೀವ್ಯಾಕೆ ಆ ಹಿಂದಿ ಚಿತ್ರವನ್ನು ಬೇರೆ ಭಾಷೆಗೆ ರೀಮೇಕ್ ಮಾಡಬಾರದು? ನೀವು ಒಮ್ಮೆ ರೀಮೇಕ್ ಮಾಡಿದರೆ ನಾನು ಆ ಪಾತ್ರವನ್ನು ಖಂಡಿತ ಮಾಡುತ್ತೇನೆ' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಅಂದಹಾಗೆ, ಈ 'ಗಂಗೂಬಾಯಿ ಕಥಿಯಾವಾಡಿ' ಬಾಲಿವುಡ್ ಸಿನಿಮಾದಲ್ಲಿ ನಟಿ ಆಲಿಯಾ ಭಟ್ ನಟಿಸಿದ್ದು, ತುಂಬಾ ಮನೋಜ್ಞವಾಗಿ ಅಭಿನಯಿಸಿ ಮೆಚ್ಚುಗೆ ಗಳಿಸಿದ್ದಾರೆ. 

'ಕೆಂಡ' ನಿರ್ದೇಶಕ ಸಹದೇವ್‌ಗೆ ದಾದಾ ಸಾಹೇಬ್ ಫಾಲ್ಕೆ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಅವಾರ್ಡ್!

ಕನ್ನಡ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಬಂದ ನಟಿ ರಶ್ಮಿಕಾ, ಇಂದು ಸೌತ್ ಹಾಗೂ ನಾರ್ತ್‌ ಎಂಬ ಭೇದಭಾವವಿಲ್ಲದೇ ಎಲ್ಲಾ ಕಡೆ ಸಲ್ಲುವ ನಟಿಯಾಗಿ ಬೆಳೆದಿದ್ದಾರೆ. 'ಕಿರಿಕ್ ಪಾರ್ಟಿ' ಮೂಲಕ ವೃತ್ತಿಜೀವನ ಶುರುಮಾಡಿದ ರಶ್ಮಿಕಾ, ವಿಜಯ್ ದೇವರಕೊಂಡ (Vijay Deverakonda)ಜತೆಗಿನ 'ಗೀತ ಗೋವಿಂದಂ' ಚಿತ್ರದ ಮೂಲಕ ಸ್ಟಾರ್ ನಟಿಯಾಗಿ ಬೆಳೆದರು. ತಮಿಳಿನ ಪುಷ್ಪಾ, ಬಾಲಿವುಡ್‌ನ ಆನಿಮಲ್ ಹೀಗೆ ಎಲ್ಲಾ ಕಡೆಯಲ್ಲೂ ಸಕ್ಸಸ್ ದಾಖಲಿಸಿದ್ದಾರೆ. 

ಪ್ರಜ್ವಲ್‌ ರೇವಣ್ಣ ಮುಸ್ಲಿಂ ಆಗಿದಿದ್ರೆ ಸುಮ್ನೆ ಬಿಡ್ತಿದ್ರಾ? ಕೇಸ್‌ಗೆ ಸ್ವರಾ ಭಾಸ್ಕರ್ ಧರ್ಮದ ಲೇಪ!

ಇಂದು ನಟಿ ರಶ್ಮಿಕಾ ಮಂದಣ್ಣ ಭಾರತ ಸೇರಿದಂತೆ, ಜಗತ್ತಿನ ಹಲವು ದೇಶಗಳ ಜನರಿಗೆ ಚಿರಪರಿಚಿತ ಹೆಸರು. ಸದ್ಯ ಅಲ್ಲು ಅರ್ಜುನ್‌ ಜತೆಗಿನ 'ಪುಷ್ಪಾ 2' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ, ಇಂದು ಭಾರತದ ಬಹುಬೇಡಿಕೆಯ ನಟಿ. ರಶ್ಮಿಕಾ ಮತ್ತೆ ವಿಜಯ್ ದೇವರಕೊಂಡ ಜತೆ ಸಿನಿಮಾ ಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದ್ದು, ಅವರಿಬ್ಬರ ಜೋಡಿಯನ್ನು ಮತ್ತೆ ತೆರೆಯ ಮೇಲೆ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. 

ಈಗ ರಶ್ಮಿಕಾ ಮಾತನಾಡಿದ್ದು ನೋಡಿದರೆ, ಮುಂದೆ ಸದ್ಯದಲ್ಲೇ ಬಾಲಿವುಡ್‌ನ 'ಗಂಗೂಬಾಯಿ ಕಥಿಯಾವಾಡಿ' ರೀಮೇಕ್ ಆಗಿ, ಅದರಲ್ಲಿ ರಶ್ಮಿಕಾ ಮಂದಣ್ಣ ನಟಿಸಿದರೂ ಅಚ್ಚರಿಯೇನಿಲ್ಲ ಎನ್ನಬಹುದು. ಈ ಸಂಗತಿ ತಿಳಿದರೆ ಖಂಡಿತವಾಗಿಯೂ ನಟಿ ರಶ್ಮಿಕಾ ಮಂದಣ್ದ ಅಭಿಮಾನಿಗಳು ಖುಷಿಯಾಗಲಿದ್ದಾರೆ. 

'ಬಂಧನ 2' ಸಿನಿಮಾ ಶೂಟಿಂಗ್ ನಿಲ್ಲಿಸಲು ನಾನೇ ಹೇಳಿದ್ದು; ಸಂಚಲನ ಸೃಷ್ಟಿಸಿದ ಆದಿತ್ಯ ಹೇಳಿಕೆ!

 

Latest Videos
Follow Us:
Download App:
  • android
  • ios