ದಲಿತ ಸಮುದಾಯದ ಬಗ್ಗೆ ವಿವಾದ ಹುಟ್ಟಿಸಿದ ನಟಿ ಮೀರಾ ಮಿಥುನ್‌ರನ್ನು ಪೊಲೀಸರು ಬಂಧಿಸಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. 

ತಮಿಳು ಚಿತ್ರರಂಗದ ಕಾಂಟ್ರವರ್ಸಿ ಕ್ವೀನ್ ಎಂದೇ ಕರೆಸಿಕೊಂಡಿರುವ ನಟಿ ಮೀರಾ ಮಿಥುನ್ ಈಗ ಮತ್ತೆ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಇತ್ತೀಚಿಗೆ ದಲಿತ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋ ವೈರಲ್ ಆಗುತ್ತಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ. 

ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಡುತಲೈ ಚಿರುತೈಗಳ್ ಕಿಚ್ಚಿ ಸಂಘಟನೆ ನಾಯಕ ವನ್ನಿ ಅರಸು ಅವರು ದೂರು ದಾಖಲಿಸಿದ್ದಾರೆ. ಇದೀಗ, ಚೆನ್ನೈನ ಕ್ರೈಂ ವಿಭಾಗದ ಪೊಲೀಸರು ಮೀರಾರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿತ್ತು. ಆದರೆ ಮೀರಾ ತಲೆಮರೆಸಿಕೊಂಡಿದ್ದರು. ಕೇರಳದಲ್ಲಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈ ವೇಳೆ ಪೊಲೀಸರ ವಿರುದ್ಧ ಹೈಡ್ರಾಮಾ ಮಾಡಿದ್ದಾರೆ.

ನಟಿ ಮೀರಾ ಉಳಿದುಕೊಂಡಿದ್ದ ಕೋಣೆಗೆ ಪೊಲೀಸರು ನುಗ್ಗಿ ಧಮ್ಕಿ ಹಾಕಿದ್ದಾರೆ. ಚೆನ್ನೈ ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ. ಮೂರು ಜನ ಅಧಿಕಾರಿಗಳು ಬಂದಿದ್ದಾರೆ. ನನಗೆ ಕಿರುಕುಳ ಕೊಡುತ್ತಿದ್ದಾರೆ ಅಲ್ಲದೆ ಹಲ್ಲೆ ಮಾಡಿದ್ದಾರೆ ಇದರಿಂದ ನಾನು ಆತ್ಯಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ.

ಟ್ರೋಲ್ ಹೈಕ್ಳ ಕಾಟದಿಂದ ಬೇಸತ್ತು ಆತ್ಮಹತ್ಯೆಗೆ ಮುಂದಾದ ನಟಿ, ಮೋದಿಗೆ ವಿಶೇಷ ಮನವಿ!

ದಲಿತರ ಬಗ್ಗೆ ಹೇಳಿಕೆ:

'ಸಿನಿಮಾರಂಗದಲ್ಲಿ ಎಲ್ಲಾ ತಪ್ಪುಗಳನ್ನು ಮತ್ತು ದುಷ್ಟ ಪರಿಣಾಮಗಳಿಗೆ ಕಾರಣವೇ ಪರಿಶಿಷ್ಟ ಜಾತಿಯವರು. ಅವರನ್ನು ಚಿತ್ರರಂಗದಿಂದ ಹೊರ ಹಾಕಬೇಕು. ಹೆಚ್ಚಾಗಿ ಕಾನೂನುಬಾಹಿರ ಚಟುವಟಿಕೆಗಳು ಮತ್ತು ಅಪರಾಧಗಳಲ್ಲಿ ಭಾಗಿಯಾಗುವುದರಿಂದ ಸಮಸ್ಯೆಗಳು ಎದುರಿಸಬೇಕಾಗಿದೆ. ಯಾವುದೇ ಕಾರಣವಿಲ್ಲದೆ ಯಾರು ಅನಗತ್ಯವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಚಿತ್ರರಂಗದಲ್ಲಿ ದಲಿತ ನಿರ್ದೇಶಕರು ಮತ್ತು ಇತರರು ಚೀಪ್ ಕೆಲಸಗಳನ್ನು ಮಾಡುತ್ತಿದ್ದಾರೆ. ಅಂಥವರನ್ನು ಸಿನಿಮಾದಿಂದ ಮೊದಲು ಹೊರ ಹಾಕಬೇಕು, ಆ ಸಮಯ ಈಗ ಬಂದಿದೆ' ಎಂದು ಸಂದರ್ಶನದಲ್ಲಿ ಮಾತನಾಡಿದ್ದರು.

View post on Instagram