ಕಾಲಿವುಡ್ ಚಿತ್ರರಂಗದ ಕಾಂಟ್ರವರ್ಸಿ ನಟಿ ಕಮ್ ಮಾಡೆಲ್ ಮೀರಾ ಮಿಥುನ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡ ವಿಡಿಯೋ ದೊಡ್ಡ ಸುದ್ದಿ ಮಾಡುತ್ತಿದೆ. ಪದೇ ಪದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೀರಾ ವಿಡಿಯೋ ಮಾಡುತ್ತಿರುವುದ್ಯಾಕೆ?

'ನನ್ನ ಖಿನ್ನತೆ ಬಗ್ಗೆ ಸೋಷಿಯಲ್ ಮೀಡಿಯಾದ ಮೂಲಕ ಹಂಚಿಕೊಳ್ಳುತ್ತಿದ್ದೀನಿ. ಈ ಹಿಂದೆಯೂ ಮಾಡಿಕೊಂಡಿದ್ದೆ. ಅದಕ್ಕೆ ಬರುತ್ತಿರುವ ಕಾಮೆಂಟ್‌ಗಳು ತುಂಬಾನೇ ಕೆಟ್ಟದಾಗಿದೆ. ನನಗೆ ಒಳ್ಳೆಯ ಕೆಲಸ ಇದೆ. ಸ್ನೇಹಿತರು, ಕುಟುಂಬದವರು ಎಲ್ಲರೂ ಇದ್ದಾರೆ. ನನ್ನನ್ನು ದ್ವೇಷ ಮಾಡುವವರು ನಾನು ಸಾಯಲಿ ಎಂದು ಬಯಸಿದ್ದಾರೆ. ಶತ್ರುಗಳಿಂದ ನನಗೆ ನೋವಾಗಿದೆ. ನೋವನ್ನು ನಾನು ಕೊನೆಗಾಣಿಸಬೇಕು. ನಾನು ಸಾಯಬೇಕು' ಎಂದು ಮೀರಾ ಟ್ಟೀಟ್ ಮಾಡಿದ್ದಾರೆ.

'ಅಡ್ಡದಾರಿ, ಅವರಿವರ ಜೊತೆ ಮಲಗಿ ಅವಕಾಶ ಪಡೆದುಕೊಂಡ ನಟಿ'; ಮಾಡಲ್ ಮೀರಾ ಆರೋಪ? 

'ಮೂರು ವರ್ಷಕ್ಕಿಂತ ಹೆಚ್ಚಿನ ಕಾಲ ನನಗೆ ಕಿರುಕುಳ ನೀಡಿದ್ದಾರೆ. ನನ್ನ ಅಭಿಮಾನಿಗಳ ಜೊತೆ ಮಾತನಾಡಬೇಕು ಎನ್ನುವ ಕಾರಣಕ್ಕೆ ಮಾತ್ರ ನಾನು ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವುದು. ನಮ್ಮ ಭಾರತದಲ್ಲಿ ಇರುವ ನೆಪೋಟಿಸಂ ನನ್ನನ್ನು ಸಾಯಿಸುತ್ತಿದೆ.  ಇದರಿಂದ ನಾನು ಸಂಪೂರ್ಣ ಖಿನ್ನತೆಗೆ ಒಳಗಾಗಿರುವೆ, ಸಾಯಲು ಬಯಸಿದ್ದೇನೆ'ಎಂದು ಮೀರಾ ಸರಣಿ ಟ್ಟೀಟ್. ಮೀರಾ ತಮ್ಮೆಲ್ಲಾ ಟ್ಟೀಟ್‌ಗೂ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿದ್ದಾರೆ.