Asianet Suvarna News Asianet Suvarna News

ಸಲಿಂಗ ವಿವಾಹಕ್ಕೆ ಮಾನ್ಯತೆ ಇಲ್ಲ ಎಂದ ತೀರ್ಪು ಕೇಳಿ ಎದೆ ಒಡೆದೋಯ್ತು; ನಟಿ ಲಕ್ಷ್ಮಿ ಮಂಚು ಹೇಳಿದ್ದೇನು?

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ ಎಂದು ಸುಪ್ರೀಂಕೋರ್ಟ್   ತೀರ್ಪು ನೀಡಿದ್ದನ್ನು ಕೇಳಿ ನಟಿ ಲಕ್ಷ್ಮಿ ಮಂಚುಗೆ ಎದೆನೇ ಒಡೆದು ಹೋಯ್ತಂತೆ. ನಟಿ ಹೇಳಿದ್ದೇನು? 
 

Actress Lakshmi Manchu was heartbroken after hearing that the SC ruled that same sex marriage suc
Author
First Published Oct 20, 2023, 8:36 PM IST

ಸಲಿಂಗ ವಿವಾಹಕ್ಕೆ (Same Sex Marraige) ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಇದೇ 17ರಂದು ಸುಪ್ರೀಂ ಕೋರ್ಟ್‌ ಪಂಚಸದಸ್ಯ ಪೀಠ ತೀರ್ಪು ನೀಡಿದ್ದರ ಬಗ್ಗೆ  ಪರ-ವಿರೋಧದ ಚರ್ಚೆ ನಡೆಯುತ್ತಲೇ ಇದೆ.  ವಿವಾಹವು ಮೂಲಭೂತ ಹಕ್ಕಲ್ಲ ಎಂಬುದನ್ನು ಕೋರ್ಟ್​ ಹೇಳಿದೆ.  ಸಲಿಂಗ ವಿವಾಹವನ್ನು ಪರಿಗಣಿಸಲು ನಿರಾಕರಿಸಿರುವ ಕೋರ್ಟ್, ಅದನ್ನು ಶಾಸಕಾಂಗವೇ ಮಾಡಬೇಕು ಎಂದು ಹೇಳಿದೆ. ಸಲಿಂಗ ಜೋಡಿಗಳ ಮದುವೆಯನ್ನು ಕಾನೂನು ಪರಿಗಣಿಸುವುದಿಲ್ಲ ಅಥವಾ ಅದಕ್ಕೆ ನಾಗರಿಕ ಸಂಬಂಧವಿಲ್ಲ ಎಂದು ಹೇಳಿರುವ ನ್ಯಾಯಪೀಠ, ಇದಕ್ಕೆ ಕಾನೂನನ್ನು ಸಂಸತ್ತು ರೂಪಿಸಬೇಕು ಎಂದು ಹೇಳಿದೆ. ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದರೂ, ಸಲಿಂಗ ಸಂಬಂಧದಲ್ಲಿರುವ ವ್ಯಕ್ತಿಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು, ಅವರ ಸಂಬಂಧವ್ನು 'ಮದುವೆ' ಎಂಬ ಕಾನೂನಾತ್ಮಕ ಪರಿಗಣನೆ ಇಲ್ಲದೆಯೂ ಪರಿಶೀಲಿಸಲು ಸಮಿತಿಯೊಂದನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲು ಒಪ್ಪಿಕೊಂಡಿದೆ.

 ವಿಶೇಷ ವಿವಾಹ ಕಾಯ್ದೆಯನ್ನು ರದ್ದುಗೊಳಿಸಿದರೆ ಅದು ದೇಶವನ್ನು ಸ್ವಾತಂತ್ರ್ಯ ಪೂರ್ವ ಯುಗಕ್ಕೆ ಕೊಂಡೊಯ್ಯುತ್ತದೆ ಎಂದೂ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಒಂದು ವೇಳೆ, ನ್ಯಾಯಾಲಯವು ಎರಡನೇ ವಿಧಾನವನ್ನು ಅಮದರೆ ಸಲಿಂಗ ವಿವಾಹಕ್ಕೆ ಮಾನ್ಯತೆ ಕೊಟ್ಟಿದ್ದರೆ, ಮತ್ತು ವಿಶೇಷ ವಿವಾಹ ಕಾಯ್ದೆಯನ್ನು ತೆಗೆದುಹಾಕಿದ್ದರೆ, ನ್ಯಾಯಾಂಗ, ಶಾಸಕಾಂಗದ ಪಾತ್ರವನ್ನು ವಹಿಸಿಕೊಳ್ಳುತ್ತಿತ್ತು ಎಂದು ಕೋರ್ಟ್​ ಹೇಳಿದೆ. ಇದರ ಬಗ್ಗೆ ಇದಾಗಲೇ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೋರ್ಟ್​ ಹೇಳಿದ್ದು ಸರಿಯಾಗಿದೆ ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು ಇದು ಸರಿಯಿಲ್ಲ, ಯಾವುದೇ ವ್ಯಕ್ತಿಗೆ ಅವರ ಇಚ್ಛೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ಇದೆ ಎಂದು ಪ್ರತಿಪಾದಿಸುತ್ತಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಮದ್ವೆ, ಹೊರಗೆ ಬಂದಾಗ ಡಿವೋರ್ಸ್‌: ನಟಿ ಸಾರಾ ಮಾಜಿ ಪತಿಗೀಗ 3ನೇ ಮದ್ವೆ!

ಈ ನಡುವೆ,  ನಟಿ ಲಕ್ಷ್ಮಿ ಮಂಚು (Lakshmi Manchu) ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ನಟಿ ಲಕ್ಷ್ಮಿ,  ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಲು ಸುಪ್ರೀಂ ಕೋರ್ಟ್ ತೀರ್ಪು ನನಗೆ ನಿರಾಸೆಗೊಳಿಸಿದೆ. ನನ್ನ ಹೃದಯ ಒಡೆದಿದೆ. ಎಲ್ಲಾ ರೀತಿಯ ಪ್ರೀತಿಯನ್ನು ಸ್ವೀಕರಿಸುವ, ಪ್ರಪಂಚದಲ್ಲಿನ ಪ್ರೀತಿಯ ಬಗ್ಗೆ ಬೋಧಿಸಿದ ದೇಶಕ್ಕೆ ಇದು ನಿಜವಾಗಿಯೂ ಅವಮಾನ ಎಂದಿದ್ದಾರೆ. ಎಲ್ಲಾ ರೀತಿಯ ಪ್ರೀತಿಯನ್ನು ಸ್ವೀಕರಿಸಿದ ಮತ್ತು ಪ್ರಪಂಚದ ಇತರ ಭಾಗಗಳಿಗೆ ಪ್ರೀತಿಯ ಬಗ್ಗೆ ಕಲಿಸಿದ ದೇಶಕ್ಕೆ ಇದು ನಿಜವಾದ ಅವಮಾನವಾಗಿದೆ, ಆದರೆ ತನ್ನದೇ ದೇಶದಲ್ಲಿ ಇದನ್ನು ನಿರಾಕರಿಸಲಾಗಿದೆ. ಅವರು ಬೇರೆ ದೇಶಗಳಲ್ಲಿ ಸ್ವತಂತ್ರವಾಗಿ ಬದುಕುತ್ತಾರೆ. ನಮ್ಮ ದೇಶದಲ್ಲಿ ಅವರ ಮದುವೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೇ? ಎಂದು ಬರೆದುಕೊಂಡಿದ್ದಾರೆ. ನಟಿಯ ಈ ಟ್ವೀಟ್ ಸಖತ್ ವೈರಲ್ ಆಗುತ್ತಿದೆ. 

ಅಂದಹಾಗೆ, ನಟ ಮೋಹನ್ ಬಾಬು ಮತ್ತು ವಿದ್ಯಾ ದೇವಿ ಅವರ  ಪುತ್ರಿ ಲಕ್ಷ್ಮಿ ಮಂಚು ಅವರಿಗೆ ಈಗ 53 ವರ್ಷ ವಯಸ್ಸು. ಆದರೂ ಗ್ಲಾಮರಸ್​ ಲುಕ್​ ಹಾಗೆಯೇ ಉಳಿಸಿಕೊಂಡವರು. ಕೆಲವೇ ಸಿನಿಮಾ ಮಾಡಿದ್ದರೂ ಇವರಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳು ಮತ್ತು ಫಾಲೋವರ್ಸ್ ಇದ್ದಾರೆ. ಇವರು ಹೆಚ್ಚು ಸುದ್ದಿಯಾದದ್ದು ತಮಿಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದವರು ಎಂದು. ಹೆಚ್ಚು ಚಿತ್ರ ಮಾಡಿಲ್ಲವಾದರೂ ವಯಸ್ಸು 50 ದಾಟಿದರೂ ಇನ್ನೂ ಅವರು ತಮ್ಮ ಆಯ್ಕೆಯ ಚಿತ್ರವನ್ನಷ್ಟೇ ಮಾಡುತ್ತಾರೆ. ಸದ್ಯ ಮಂಚು ಲಕ್ಷ್ಮಿ 'ಅಗ್ನಿ ನಕ್ಷತ್ರ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಂಚು ಎಂಟರ್‌ಟೈನ್‌ಮೆಂಟ್ ಮತ್ತು ಶ್ರೀ ಲಕ್ಷ್ಮಿ ಪ್ರಸನ್ನ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮೋಹನ್ ಬಾಬು ಮತ್ತು ಮಂಚು ಲಕ್ಷ್ಮಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದರಲ್ಲಿ ಲಕ್ಷ್ಮಿ ಪವರ್ ಫುಲ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮೋಹನ್ ಬಾಬು ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಐಶ್ವರ್ಯಾರನ್ನು ಜಯಾ ಹೊಗಳ್ತಿದ್ದಂತೆಯೇ ನಾದಿನಿ ಶ್ವೇತಾ ಬಚ್ಚನ್‌ಗೆ ಇದೇನಾಯ್ತು? ಹಳೆಯ ವಿಡಿಯೋ ವೈರಲ್‌!

Follow Us:
Download App:
  • android
  • ios